ಲೈಂಗಿಕ ಸಮಸ್ಯೆಗಳು ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಕಾಡುತ್ತೆ

First Published | Oct 30, 2021, 1:15 AM IST

ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಉಂಟಾಗುವ ಕೆಲವು ಲೈಂಗಿಕ ರೋಗಗಳು (sexual problem) ಇವೆ. ಆದರೆ ಪುರುಷರಲ್ಲಿ ಮಾತ್ರ ಕೆಲವು ಲೈಂಗಿಕ ಸಮಸ್ಯೆಗಳು ಸಂಭವಿಸುತ್ತವೆ ಎಂದು ನಂಬಲಾಗಿದೆ. ಆದರೆ ಇತ್ತೀಚೆಗೆ ಪುರುಷರಲ್ಲಿ ಕಾಣಿಸಿಕೊಳ್ಳುವ ಅನೇಕ ಲೈಂಗಿಕ ರೋಗಗಳು ಮಹಿಳೆಯರಲ್ಲಿಯೂ ಬರಬಹುದು ಎಂದು ತಿಳಿದುಬಂದಿದೆ.

ಸಂಬಂಧವನ್ನು ಕಾಪಾಡಿಕೊಳ್ಳಲು ಭಾವನಾತ್ಮಕ ಸಂಬಂಧವು  (emotional relationship) ಅಗತ್ಯವಾಗಿದ್ದರೂ, ದೈಹಿಕ ಅನ್ಯೋನ್ಯತೆಯು (physical relation) ಅಷ್ಟೇ ಮುಖ್ಯ. ದಂಪತಿ ನಡುವಿನ ಹೇಳಲಾಗದ ಲೈಂಗಿಕ ಸಮಸ್ಯೆಗಳು ಸಂಬಂಧಗಳನ್ನು ಹದಗೆಡಿಸುತ್ತದೆ, ಎಂದು ಅನೇಕ ಸಂಶೋಧನೆಗಳು ತೋರಿಸುತ್ತವೆ. ಇದರಿಂದಾಗಿ ವೈವಾಹಿಕ ಜೀವನವೇ ಮುಗಿದು ಹೋಗಬಹುದು. 

ಲೈಂಗಿಕ ಜೀವನವು (sexual life) ರೋಮಾಂಚನಕಾರಿ ಮತ್ತು ಆನಂದದಾಯಕವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ, ಆದರೆ ಕೆಲವೊಮ್ಮೆ ಲೈಂಗಿಕ ಜೀವನವನ್ನು ಅಡ್ಡಿಪಡಿಸುವ ಕೆಲವು ಲೈಂಗಿಕ ರೋಗಗಳು ಇರುತ್ತವೆ. ಇಂದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅಂತಹ ಕೆಲವು ರೋಗಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. 

Tap to resize

ಲೈಂಗಿಕ ಸಮಸ್ಯೆಗಳು. 
ಲೈಂಗಿಕ ಬಯಕೆಯ ಕೊರತೆ, ಸಂಭೋಗದ ಸಮಯದಲ್ಲಿ ಅಥವಾ ನಂತರ ನೋವು ಅನುಭವಿಸುವುದು, ಲೈಂಗಿಕ ಪ್ರಚೋದನೆ ಕಡಿಮೆಯಾಗುವುದು, ಲೈಂಗಿಕ ಸಂಬಂಧಗಳ ಸಮಯದಲ್ಲಿ ಚಂಚಲತೆ ಮುಂತಾದ ಕೆಲವು ಲೈಂಗಿಕ ಸಮಸ್ಯೆಗಳನ್ನು ಪುರುಷರು ಮತ್ತು ಮಹಿಳೆಯರು ಹೊಂದಿರುತ್ತಾರೆ. 

ಲೈಂಗಿಕ ಸಮಸ್ಯೆಗಳು ಪ್ರಚೋದನೆಯನ್ನು ಕಡಿಮೆ ಮಾಡಬಹುದು, ಇದರ ಪರಿಣಾಮವಾಗಿ ನೀವು ಲೈಂಗಿಕ ಜೀವನದ (sexual life) ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳನ್ನು ಹೊಂದಬಹುದು. ಇಂತಹ ಸಮಸ್ಯೆ ಕಾಣಿಸಿಕೊಂಡಾಗ ಅದನ್ನು ಕಡೆಗಣಿಸುವ ಬದಲಾಗಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಹೆಚ್ಚು ಒಲವು ತೋರಬೇಕು. ಇದರಿಂದ ಸಂಬಂಧ ಸುಧಾರಣೆಯಾಗಬಹುದು. 

ಮಹಿಳೆಯರಿಗೆ ಅಂತಹ ಲೈಂಗಿಕ ಸಮಸ್ಯೆಗಳು ಕಡಿಮೆ ಎಂದು ಈ ಹಿಂದೆ ನಂಬಲಾಗುತ್ತಿತ್ತು, ಆದರೆ ಸಂಶೋಧನೆಗಳು (researches) ಲೈಂಗಿಕ ಸಮಸ್ಯೆಗಳು ಮಹಿಳೆಯರನ್ನು ಸಹ ಕಾಡುತ್ತವೆ ಎಂದು ತಿಳಿಸಿವೆ. ಹೌದು, ಮಹಿಳೆಯರನ್ನು ಲೈಂಗಿಕ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಅವುಗಳ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ. ಸಂಪೂರ್ಣ ಮಾಹಿತಿ ಇಲ್ಲಿದೆ. 

ಸಂಶೋಧನೆ ಏನು ಹೇಳುತ್ತದೆ?
ಸಂಶೋಧನೆಗಳ (research) ಪ್ರಕಾರ, ಸುಮಾರು 43% ಮಹಿಳೆಯರು ಲೈಂಗಿಕ ಕಿರುಕುಳದಿಂದ ಬಳಲುತ್ತಿದ್ದಾರೆ, ಆದರೆ 31% ಪುರುಷರು ಲೈಂಗಿಕ ಸಮಸ್ಯೆಗಳನ್ನು ಹೊಂದಿದ್ದಾರೆ. ಈಗ ಲೈಂಗಿಕ ಅಪಸಾಮಾನ್ಯ ಕ್ರಿಯೆಗೆ ಕಾರಣವೇನು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಾಮಾನ್ಯವಾಗಿ ಹಾರ್ಮೋನುಗಳು ಅಸಮತೋಲನವಾದಾಗ ಅಂತಹ ಸಮಸ್ಯೆಗಳು ಉದ್ಭವಿಸುತ್ತವೆ.

ಗರ್ಭಧಾರಣೆ (pregnancy) ಮತ್ತು ಋತುಬಂಧವೂ ಇದಕ್ಕೆ ಒಂದು ಕಾರಣವಾಗಿದೆ. ಕೆಲವೊಮ್ಮೆ ಮಾನಸಿಕ ಅಥವಾ ದೈಹಿಕ ಸಮಸ್ಯೆಗಳಿಂದಾಗಿ ಮಹಿಳೆಯರು ಲೈಂಗಿಕ ಅಪಸಾಮಾನ್ಯ ಕ್ರಿಯೆಯನ್ನು ಸಹ ಹೊಂದಿರಬಹುದು. ಅಥವಾ ಯಾವುದೇ ದೈಹಿಕ ಸಮಸ್ಯೆಯಿಂದಾಗಿ ಲೈಂಗಿಕ ಆಸಕ್ತಿ ಕುಂಟಿತವಾಗಿ, ಲೈಂಗಿಕ ಸಮಸ್ಯೆ ಉಂಟಾಗುತ್ತದೆ. 

ದೈಹಿಕ ಕಾರಣಗಳು ಕ್ಯಾನ್ಸರ್, ಮಧುಮೇಹ, ಮೂತ್ರಪಿಂಡ ವೈಫಲ್ಯ, ಮೂತ್ರನಾಳದ ಸೋಂಕು (urinary infection) ಅಥವಾ ಯಾವುದೇ ಹೃದಯ ಸಂಬಂಧಿತ ಕಾಯಿಲೆಗೆ ಕಾರಣವಾಗಬಹುದು. ಈ ಎಲ್ಲಾ ದೈಹಿಕ ಸಮಸ್ಯೆಗಳು ಲೈಂಗಿಕ ಬಯಕೆಗಳು, ಲೈಂಗಿಕ ಸಂಭೋಗವನ್ನು ಅನುಭವಿಸುವ ನಿಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಆದುದರಿಂದ ಎಚ್ಚರಿಕೆ ಅಗತ್ಯ.

ವೈದ್ಯರನ್ನು ಯಾವಾಗ ನೋಡಬೇಕು?
ಸಮಯಕ್ಕೆ ಸರಿಯಾಗಿ ಲೈಂಗಿಕ ಚಿಕಿತ್ಸೆ (sexual treatment) ಪಡೆದರೆ  ಸಂತೋಷದ ಲೈಂಗಿಕ ಜೀವನವನ್ನು ನಡೆಸಬಹುದು. ನೀವು ಮತ್ತು ನಿಮ್ಮ ಸಂಗಾತಿ ಲೈಂಗಿಕ ಸಮಸ್ಯೆಗಳ ಬಗ್ಗೆ ವಾದಮಾಡಲು ಪ್ರಾರಂಭಿಸಿದಾಗ,  ತಕ್ಷಣವೇ ವೈದ್ಯರನ್ನು ಪರೀಕ್ಷಿಸಬೇಕು ಎಂಬುದರ ಸಂಕೇತವಾಗಿದೆ. ಸಹಜವಾಗಿ,  ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ನಿಮಗೆ ಮುಜುಗರವಾಗಬಹುದು, ಆದರೆ ನಾಚಿಕೆಪಡಲು ಏನೂ ಇಲ್ಲ. ನಿಮ್ಮ ಸಮಸ್ಯೆಯ ಬಗ್ಗೆ  ವೈದ್ಯರ ಬಳಿ ಪರೀಕ್ಷೆ ಮಾಡಿಸೋದನ್ನು ಮಿಸ್ ಮಾಡಬೇಡಿ. 

Latest Videos

click me!