ಡಿಯರ್ ಗಂಡಸ್ರೆ…. Housewife ಅಲ್ಲ…. Househusband ನೀವಾಗಬಲ್ಲಿರಾ?

First Published | Apr 19, 2023, 7:12 PM IST

ಲಿಂಗ ಸಮಾನತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಈ ಸಮಯದಲ್ಲಿ  ಮನೆಯ ಗಂಡಂದಿರು ಅಂದ್ರೆ ಹೌಸ್ ಹಸ್ಪೆಂಡ್ ಟ್ರೆಂಡ್ ಹಿಂದೆಂದಿಗಿಂತಲೂ ಹೆಚ್ಚು ಸಾಮಾನ್ಯವಾಗಿದೆ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್ನಲ್ಲಿ, ಮನೆಯಲ್ಲಿಯೇ ಇರುವ ಗಂಡಸರನ್ನು ಹೊಂದಿರುವ ಕುಟುಂಬಗಳ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಪುರುಷರು ಮನೆಯನ್ನು ಸಂಭಾಳಿಸಿದ್ರೆ, ಮಹಿಳೆಯರು ಮನೆಯ ಆರ್ಥಿಕ ಸಪೋರ್ಟರ್ ಆಗಿ ಕಾರ್ಯ ನಿರ್ವಹಿಸುತ್ತಾರೆ.

Househusband ಆಗಲು ಕಾರಣವೇನು?: Househusband ಆಗಲು ಮುಖ್ಯ ಕಾರಣ ಏನೆಂದರೆ, ಹೆಚ್ಚಾಗಿ ಪುರುಷರು ಕಚೇರಿಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ವರ್ಷ ಪೂರ್ತಿ ಕೆಲಸ ಮಾಡಿ, ಮಾಡಿ ದಣಿದಿರುತ್ತಾರೆ, ಅಲ್ಲದೇ ಬೆಳಗ್ಗೆ ಬೇಗ ಎದ್ದು ಆಫೀಸ್ ಗೆ ಹೋಗೋದೆ ತಲೆಬಿಸಿಯಾಗಿರುತ್ತೆ. ಇದೆಲ್ಲದರಿಂದ ಮುಕ್ತಿ ಪಡೆಯಲು Househusband ಆಗಿರೋದು ಬೆಸ್ಟ್ ಆಗಿದೆ. Househusband ಹೇಗಿರುತ್ತಾರೆ ನೋಡೋಣ.  

ಮನೆಗೂ ಆಫೀಸ್ ಕೆಲಸ ತರಬೇಕಾಗಿರೋದಿಲ್ಲ: ಮರುದಿನ ಆಫೀಸ್ ನಲ್ಲಿ ನಡೆಯುವ ಕಾರ್ಪೊರೇಟ್ ಮೀಟಿಂಗ್ ಗಾಗಿ (corporate meeting) ವ್ಯವಹಾರ ವರದಿಗಳನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದ್ದ ಆ ತಡರಾತ್ರಿ ಟೆನ್ಶನ್ ಇನ್ನು ಮುಂದೆ ಇರೋದಿಲ್ಲ. ಒಂದು ದೊಡ್ಡ ಜವಾಬ್ಧಾರಿ ತಲೆಯಿಂದ ಇಳಿದಂತೆ ಭಾಸವಾಗುತ್ತೆ. 

Tap to resize

ಹೋಮ್ ವರ್ಕ್ ಮಾಡಲು ಸಹಾಯ ಮಾಡಿ: ಮಕ್ಕಳಿಗೆ ಎಲ್ಲವನ್ನೂ ಅಮ್ಮನೇ ಹೇಳಿಕೊಡಬೇಕೆಂದೇನೂ ಇಲ್ಲ. ನಿಮ್ಮ ಮಕ್ಕಳಿಗಾಗಿ ಅಲ್ಲಿರುವುದು ಎಂದರೆ ಅವರ ಹೋಮ್ ವರ್ಕ್ ಗೆ ಸಹಾಯ ಮಾಡುವುದು ಎಂದರ್ಥ. ಮಕ್ಕಳ ಜೊತೆ ಸಮಯ ಕಳೆಯುತ್ತಾ, ನೀವು ಹೊಸ ಹೊಸ ವಿಷಯಗಳನ್ನು ತಿಳಿಯುವಿರಿ. 

ಮನೆಕೆಲಸಗಳು: ಮನೆಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡುವುದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಕೆಲಸದಲ್ಲಿ ಬಿಡುವಿಲ್ಲದ ದಿನದ ನಂತರ ಅವಳು ಮನೆಗೆ ಬಂದಾಗ, ಮನೆಯು ಕ್ಲೀನ್ ಆಗಿದ್ದರೆ, ಆಕೆಯೂ ಸಂತಸಪಡುತ್ತಾಳೆ. ಈ ಕೆಲಸವನ್ನು ನೀವು ಮಾಡಬಹುದು. 

ಗೃಹಿಣಿ ಎಂದರೇನು?: ಒಬ್ಬ ಗೃಹಿಣಿ ಎಂದರೆ ಮನೆಯನ್ನು ತನ್ನ ಮುಖ್ಯ ಉದ್ಯೋಗವಾಗಿ ನಿರ್ವಹಿಸುವ ವ್ಯಕ್ತಿ, ಆದರೆ ಅವರ ಸಂಗಾತಿ ಕುಟುಂಬದ ಆದಾಯವನ್ನು ಗಳಿಸುತ್ತಾರೆ. ಮನೆಯ ಜವಾಬ್ಧಾರಿಯನ್ನು ಹೊರುವ ವ್ಯಕ್ತಿ ಗೃಹಿಣಿ. 

ಮನೆಯಿಂದ ಕೆಲಸ: ಗೃಹಿಣಿಯಾಗಿರುವುದು ಎಂದರೆ ಕೆಲಸವನ್ನು ಬಿಟ್ಟು ಮನೆ ಕೆಲಸ ಮಾತ್ರ ಮಾಡೊದು ಎಂದು ಅರ್ಥ ಅಲ್ಲ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ, ಜಗತ್ತಿನ ಮೂಲೆ ಮೂಲೆಯಲ್ಲಿರುವ ಕೆಲಸಗಳನ್ನು ನೀವು ಮನೆಯಲ್ಲಿ ಕುಳಿತು ಮಾಡುತ್ತಾ ಸಂಪಾದನೆ ಮಾಡಬಹುದು. 

Househusband ಆಗೋ ಮತ್ತೊಂದು ಪ್ರಯೋಜನ: Househusband ಅನುಕೂಲಗಳು ಯಾವುವು? ಎಂದು ನೀವು ಕೇಳಬಹುದು. ನೀವು ಈ ಸಮಯದಲ್ಲಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬಹುದು. ಹೆಚ್ಚಿನ ಗಂಡಸರು ತಮ್ಮ ಬ್ಯುಸಿ ಶೆಡ್ಯೂಲ್ ನಿಂದಾಗಿ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆದಿರೋದಿಲ್ಲ. ಹಾಗಾಗಿ ಈ ಸಮಯದಲ್ಲಿ ಮಕ್ಕಳೊಂದಿಗೆ ಅಥವಾ ನಿಮ್ಮ ಹಿರಿಯರೊಂದಿಗೆ ಸಮಯ ಕಳೆಯಬಹುದು. 

ನೀವು ದ್ವೇಷಿಸುವ ಕೆಲಸವನ್ನು ಬಿಟ್ಟುಬಿಡಬಹುದು: ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಬೇಕು, ನೆಮ್ಮದಿ ಇಲ್ಲದ ಕೆಲಸಕ್ಕೆ ಪ್ರತಿದಿನ ಹೋಗಿ ಬರೋದು ಎಂದರೆ, ಅದಕ್ಕಿಂತ ಕೆಟ್ಟದು ಇರಲಾರದು. ಈ ಎಲ್ಲಾ ಒತ್ತಡವನ್ನು ತಲೆಯಿಂದ ತೆಗೆದು ಹಾಕಲು ಮೊದಲಿಗೆ ನೀವು ದ್ವೇಷಿಸುವ ಕೆಲಸವನ್ನೇ ಬಿಡಬೇಕು (quit job). 

ಮಲಗುವ ಸಮಯ ಕತೆ ಹೇಳಿ: ನಿಮ್ಮ ಹೆಂಡತಿ ಅಥವಾ ಸಂಗಾತಿ ಕೆಲಸದ ನಂತರ ದಣಿದಿರುವುದರಿಂದ, ಮಕ್ಕಳಿಗೆ ಮಲಗುವ ಸಮಯ ಕತೆ ಹೇಳಲು ಹೆಂಡತಿಯನ್ನು ಕಾಯುವ ಬದಲು ನೀವೆ ಕತೆ ಪುಸ್ತಕ ಹಿಡಿದು, ಮಕ್ಕಳಿಗೆ ಕಥೆ ಹೇಳಿ. ಇದರಿಂದ ಖಂಡಿತವಾಗಿಯೂ ಹೊಸ ಅನುಭವ ಸಿಗುತ್ತೆ.

Latest Videos

click me!