ಬ್ರೇಕ್ ಅಪ್ ಆದ ಬಳಿಕ ಮುಂದೇನು ? ಚಿಂತಿಸಬೇಡಿ, ಇಲ್ಲಿದೆ ಟಿಪ್ಸ್

First Published | May 18, 2022, 4:40 PM IST

ಪ್ರೀತಿ (Love) ಮಾಡಿರೋರು ಮತ್ತು ಮಾಡ್ತಾ ಇರೋರು ಪ್ರೀತಿ ಬಗ್ಗೆ ಏನೆನೋ ಹೇಳ್ತಾರೆ. ಈ ಪ್ರೀತಿಯಲ್ಲಿ ಬಿದ್ದ ಜನರು ಏನೇನೋ ಹೇಳ್ತಾರೆ ಅಲ್ವ? ಪ್ರೀತಿಸೋರು ಪರಸ್ಪರ ಜೊತೆಯಾಗಿ ಬದುಕಲು ಮತ್ತು ಸಾಯವ ಪ್ರಾಮಿಸ್ (Promise)  ಮಾಡ್ತಾರೆ. ಸಾಯುವವರೆಗೂ ಈ ರಿಲೇಷನ್ಶಿಪ್ (Relationship) ಹೀಗೆಯೇ ಅಮರವಾಗಿರುತ್ತೆ ಎಂದು ಒಬ್ಬರಿಗೊಬ್ಬರು ಭರವಸೆ ನೀಡುತ್ತಾರೆ. ಆದರೆ ಇಷ್ಟೇಲ್ಲಾ ಆದ ಬಳಿ ಅನೇಕ ಬಾರಿ  ಸಂಗಾತಿಯೇ ಮೋಸ ಮಾಡುತ್ತಾರೆ. ಅನೇಕ ಬಾರಿ, ಜಗತ್ತಿಗೆ ಪರ್ಫೆಕ್ಟ್ ಆಗಿ ಕಾಣೋ ಜೋಡಿಗಳು ಪರಸ್ಪರ ಮೋಸ ಮಾಡುತ್ತಿರುತ್ತಾರೆ. 

ಅದು ಬಾಯ್‌ಫ್ರೆಂಡ್ ಆಗಿರಲಿ-ಗರ್ಲ್‌ಫ್ರೆಂಡ್ ಆಗಿರಲಿ ಅಥವಾ ಗಂಡ ಮತ್ತು ಹೆಂಡತಿಯಾಗಿರಲಿ, ಒಂದು ಸಮಯದಲ್ಲಿ ಪ್ರೀತಿಸಿದ ಅನೇಕ ಜೋಡಿಗಳು ಸಮಯ ಮತ್ತು ಸಂದರ್ಭಗಳ ಬದಲಾದ ಹಾಗೇ  ಅವರು ಬೇರೊಬ್ಬರನ್ನು ಬಯಸಲು ಪ್ರಾರಂಭಿಸುತ್ತಾರೆ. ಅಂದ್ರೆ ಅವರು ಬೇರೊಬ್ಬರನ್ನು ಇಷ್ಟಪಡಲು ಪ್ರಾರಂಭಿಸುತ್ತಾರೆ, ಇದು ಬ್ರೇಕ್ ಅಪ್(Breakup) ಅಥವಾ ಡಿವೋರ್ಸ್ ಗೆ ಕಾರಣವಾಗುತ್ತೆ.

ಆದರೆ, ಪ್ರೀತಿಯಲ್ಲಿ ಮೋಸ ಹೋದವರು ಈ ಆಘಾತದಿಂದ ಬೇಗನೆ ಚೇತರಿಸಿಕೊಳ್ಳುವುದಿಲ್ಲ. ಅನೇಕ ಬಾರಿ ತಾವೇ ಅದಕ್ಕೆ ಜವಾಬ್ದಾರರೆಂದು ಭಾವಿಸುತ್ತೀರಿ. ಇದು ಆತ್ಮಗೌರವಕ್ಕೆ(Self respect) ಧಕ್ಕೆ ತರುತ್ತದೆ. ನಿಮ್ಮದು ತಪ್ಪೇ ಇಲ್ಲ, ಅಂದ ಮೇಲೆ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

Tap to resize

ಬ್ರೇಕ್ ಅಪ್ ನ ಆಘಾತದಿಂದ ನೀವು ಹೊರ ಬರೋದು ಮುಖ್ಯ. ಅದಕ್ಕಾಗಿ ನೀವು ಮೋಸ ಹೋದಾಗ ನೀವು ಮೋಸ ಮಾಡಿಲ್ಲ, ನಿಮ್ಮ ಸಂಗಾತಿಯೇ ಮೋಸ ಮಾಡಿರುವುದು ಎಂದು ಯೋಚಿಸುವ ಮೂಲಕ ಆಘಾತದಿಂದ ಹೊರಬರಬೇಕು. ಜೀವನವು ಯಾವತ್ತೂ ಒಂದು ಸಂಬಂಧದೊಂದಿಗೆ (Relationship) ಕೊನೆಗೊಳ್ಳುವುದಿಲ್ಲ. ಇದು ನಿಮ್ಮ ಜೀವನ ಅದನ್ನು ಸುಂದರವಾಗಿಸೋದು ನಿಮ್ಮ ಕೈಯಲ್ಲೇ ಇದೆ ಅನ್ನೋದನ್ನು ನೀವು ತಿಳಿದುಕೊಂಡರೆ ಉತ್ತಮ. .

ಸೇಡು (Revenge)ತೀರಿಸಿಕೊಳ್ಳಲು ಹೋಗಬೇಡಿ
ನೀವು ಮೋಸ ಹೋದರೂ, ಸೇಡಿನ ಭಾವನೆಯನ್ನು ಯಾವತ್ತೂ ಹೊಂದಿರಬೇಡಿ. ಹೃದಯವು ಮುರಿದರೆ ಅದು ತುಂಬಾ ನೋವುಂಟು ಮಾಡುತ್ತೆ, ತನಗೆ ಮೋಸ ಮಾಡಿದವರಿಗೆ ಒಂದು ಗತಿ ಕಾಣಿಸ್ಲೇ ಬೇಕು ಎಂದು ಮನಸ್ಸು ಸಾರಿ ಸಾರಿ ಹೇಳುತ್ತೆ, ಆದರೆ ನೀವು ಈ ತಪ್ಪನ್ನು ಮಾಡ್ಬೇಡಿ. 

ಸೇಡು ತೀರಿಸುವ ಸಲುವಾಗಿ ಅನೇಕ ಜನರು ಎಲ್ಲರಿಗೂ ತಿಳಿಯುವಂತೆ ನೇರ ಆರೋಪಗಳನ್ನು ಅಥವಾ ಅಪಪ್ರಚಾರವನ್ನು(Degradation) ಮಾಡುತ್ತಾರೆ. ಇದು ನಿಮ್ಮಿಬ್ಬರಿಗೂ ಅವಮಾನವನ್ನು ತರುತ್ತದೆ ಅನ್ನೋದನ್ನು ಮರೆಯಬೇಡಿ. ಅಂತಹ ಪರಿಸ್ಥಿತಿಯಲ್ಲಿ, ಬುದ್ಧಿವಂತಿಕೆಯಿಂದ ವರ್ತಿಸಿ ಮತ್ತು ನಿಮ್ಮನ್ನು ನೀವು ಬಲಪಡಿಸಿಕೊಳ್ಳಿ. 

ಓಪನ್ ಆಗಿ ಮಾತನಾಡಿ
ಅನೇಕ ಬಾರಿ ಸಂಬಂಧದಲ್ಲಿ ಮೋಸ ಹೋದ ಬಳಿಕವೂ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಓಪನ್ ಆಗಿ ಮಾತನಾಡಲು(Talk) ಹಿಂಜರಿಯುತ್ತಾರೆ. ಮದುವೆಯ ನಂತರ, ಹೆಚ್ಚಿನ ಜನರು ಅಂತಹ ವಿಷಯದ ಬಗ್ಗೆ ತಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಮಾತನಾಡುವುದಿಲ್ಲ. ಇದರಿಂದ ಸಂಬಂಧ ಹದಗೆಡುವ ಸಾಧ್ಯತೆ ಇದೆ. 

ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ
ನೀವು ಪ್ರೀತಿಯಲ್ಲಿ(Love) ಮೋಸಹೋದಾಗ ನಿಮ್ಮ ಭಾವನೆಗಳು ಸಂಪೂರ್ಣವಾಗಿ ಮುರಿಯುತ್ತವೆ. ಈ ಪರಿಸ್ಥಿತಿಯಲ್ಲಿ, ಕಣ್ಣೀರು ಬರುವುದು ಮಾತ್ರವಲ್ಲ, ಇಡೀ ಜೀವನವನ್ನು ಕೊನೆಗೊಳಿಸುವ ಯೋಚನೆ ಕೂಡ ಬರುತ್ತದೆ, ಆದರೆ ನೀವು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳೋಕೆ ಟ್ರೈ ಮಾಡಿ,  ಇದು ನಿಮ್ಮ ಸಂಬಂಧದ ಬಗ್ಗೆ ನಿಮಗೆ ಸ್ಪಷ್ಟತೆಯನ್ನು ನೀಡುತ್ತದೆ. 

<

ಭವಿಷ್ಯದ ಬಗ್ಗೆ ಆಲೋಚಿಸಿ
ನಿಮ್ಮ ಸಂಗಾತಿಯು ವಿವಾಹೇತರ ಸಂಬಂಧ ಹೊಂದಿದ್ದರೆ, ಅದು ನಿಮಗೆ ತುಂಬ ಹರ್ಟ್(Hurt) ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಎಲ್ಲವನ್ನೂ ಕೊನೆಗೊಳಿಸಬೇಕೆಂದು ಭಾವಿಸುತ್ತೀರಿ. ಆದರೆ ಈ ತಪ್ಪನ್ನು ನೀವು ಎಂದಿಗೂ ಮಾಡಬೇಡಿ.

ಈ ಸಮಯದಲ್ಲಿ, ನೀವು ಅದರಿಂದ ಬೇಸರಗೊಳ್ಳದೇ ಮತ್ತು ನಿಮ್ಮ ಜೀವನವನ್ನು ಉತ್ತಮಗೊಳಿಸಲು ಹೆಚ್ಚು ಒತ್ತು ನೀಡಬೇಕು. ನೀವು ಬಯಸಿದರೆ, ನೀವು ನಿಮ್ಮ ಸಂಗಾತಿಗೆ ಮತ್ತೊಂದು ಅವಕಾಶವನ್ನು ನೀಡಬಹುದು. ಅಥವಾ ಸಂಬಂಧವನ್ನು ಕೊನೆಗೊಳಿಸಿ ಮತ್ತು ನಿಮ್ಮ ಭವಿಷ್ಯದ(Future) ಬಗ್ಗೆ ಯೋಚಿಸಿ.ಹೊಸ ಹೆಜ್ಜೆಯನ್ನು ಸಹ ಇಡಬಹುದು. 

Latest Videos

click me!