ಗಂಡ-ಹೆಂಡ್ತಿ ಮಧ್ಯೆ ಸಿಕ್ಕಾಪಟ್ಟೆ ಲವ್ವಿದೆ, ಆದ್ರೂ ಮ್ಯಾರೀಡ್ ಲೈಫ್‌ ಚೆನ್ನಾಗಿಲ್ಲ ಅನ್ನೋರು ಇದನ್ನೋದಿ

First Published | Feb 29, 2024, 3:53 PM IST

ದಾಂಪತ್ಯ ಜೀವನ ಚೆನ್ನಾಗಿರಲು ಪ್ರೀತಿಯಿದ್ದರಷ್ಟೇ ಸಾಲದು. ಇಬ್ಬರ ನಡುವೆ ಇನ್ನೂ ಹಲವು ವಿಷಯಗಳಿರಬೇಕು. ಎರಡು ಜನರನ್ನು ಒಟ್ಟಿಗೆ ಇರಿಸುವ ಅನೇಕ ವಿಷಯಗಳಿವೆ. ಮತ್ತು ಈ ವೈವಾಹಿಕ ಜೀವನದಲ್ಲಿ ಪ್ರೀತಿಯ ಹೊರತಾಗಿ ಮತ್ತೇನು ಅಗತ್ಯ ಎಂಬುದನ್ನು ತಿಳಿಯೋಣ.

ದೀರ್ಘಕಾಲ ಒಟ್ಟಿಗೆ ವಾಸಿಸುತ್ತಿದ್ದರೂ, ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗುತ್ತಿದೆ ಎಂದು ಹಲವರಿಗೆ ಅನಿಸುತ್ತಿರುತ್ತದೆ. ದಾಂಪತ್ಯ ಜೀವನದಲ್ಲಿ ನೀವು ಅತೃಪ್ತರಾಗಿದ್ದರೆ, ಜೀವನ ಮತ್ತು ಸಂಬಂಧವನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ಆದರೆ ಸಂಬಂಧವನ್ನು ಉಳಿಸಿಕೊಳ್ಳಲು ಪ್ರೀತಿಯೊಂದೇ ಸಾಕೆ? ಖಂಡಿತವಾಗಿಯೂ ಇಲ್ಲ.

ದಾಂಪತ್ಯ ಜೀವನ ಚೆನ್ನಾಗಿರಲು ಪ್ರೀತಿಯಿದ್ದರಷ್ಟೇ ಸಾಲದು. ಇಬ್ಬರ ನಡುವೆ ಇನ್ನೂ ಹಲವು ವಿಷಯಗಳಿರಬೇಕು. ಎರಡು ಜನರನ್ನು ಒಟ್ಟಿಗೆ ಇರಿಸುವ ಅನೇಕ ವಿಷಯಗಳಿವೆ. ಮತ್ತು ಈ ವೈವಾಹಿಕ ಜೀವನದಲ್ಲಿ ಪ್ರೀತಿಯ ಹೊರತಾಗಿ ಮತ್ತೇನು ಅಗತ್ಯ ಎಂಬುದನ್ನು ತಿಳಿಯೋಣ.

Latest Videos


ಗೌರವ
ದಂಪತಿಗಳು ದೀರ್ಘಕಾಲ ಒಟ್ಟಿಗೆ ವಾಸಿಸುವುದರಿಂದ ಆಗಾಗ ಜಗಳವಾಡುತ್ತಾರೆ. ಇಬ್ಬರೂ ಕೆಟ್ಟ ಪದಗಳಿಂದ ಪರಸ್ಪರ ನಿಂದಿಸಿಕೊಳ್ಳುತ್ತಾರೆ. ಈ ಜಗಳದ ಮಧ್ಯೆಯೂ ಪರಸ್ಪರ ಗೌರವ ಇಟ್ಟುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಸಂಬಂಧ ಸುಲಭವಾಗಿ ಕೊನೆಗೊಳ್ಳಬಹುದು. ಅದಕ್ಕಾಗಿ ಒಬ್ಬರನ್ನೊಬ್ಬರು ಗೌರವಿಸುವುದು ಮುಖ್ಯ.

ಸಂವಹನ ಸರಿಯಾಗಿರಬೇಕು
ಪತಿ-ಪತ್ನಿ ಸಂಬಂಧದ ಆರಂಭದಲ್ಲಿ ತುಂಬಾ ಮಾತನಾಡುತ್ತಾರೆ. ಆದರೆ ಕಾಲ ಕಳೆದಂತೆ ಇಬ್ಬರ ನಡುವಿನ ಸಂವಹನ ಕಡಿಮೆಯಾಗುತ್ತಾ ಹೋಗುತ್ತದೆ. ಇಬ್ಬರೂ ತಮ್ಮ ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ನೋಡುವುದರಲ್ಲಿ ನಿರತರಾಗಿ ಬಿಡುತ್ತಾರೆ. ಇದು ಇಬ್ಬರ ನಡುವೆ ಅಂತರವನ್ನು ಹುಟ್ಟು ಹಾಕುತ್ತದೆ ಮತ್ತು ದಾಂಪತ್ಯ ಹಾಳಾಗಲು ಕಾರಣವಾಗುತ್ತದೆ.

ಭಾವನಾತ್ಮಕ ಸಂಬಂಧ 
ಗಂಡ-ಹೆಂಡತಿ ಮಧ್ಯೆ ಭಾವನಾತ್ಮಕ ಸಂಬಂಧ ಇರಬೇಕಾದುದು ಮುಖ್ಯ. ಸಂಗಾತಿಗೆ ವಿಶೇಷ ಭಾವನೆ ಮೂಡಿಸುವುದು, ಪ್ರೀತಿ ತೋರಿಸುವುದು, ಸರ್ಪ್ರೈಸ್ ನೀಡುವುದು ಎಲ್ಲವೂ ಸಂಬಂಧಕ್ಕೆ ಹೆಚ್ಚು ಖುಷಿಯನ್ನು ತುಂಬುತ್ತದೆ. ಇದನ್ನೆಲ್ಲಾ ಮಾಡದೇ ಇದ್ದರೆ ಸಂಗಾತಿಯ ಮನದಲ್ಲಿ ಅನುಮಾನ, ಭಯ ಶುರುವಾಗುತ್ತದೆ. ಇದೇ ಸಂಬಂಧ ಮುರಿದು ಬೀಳಲು ಕಾರಣ.

ನಂಬಿಕೆ ಮುಖ್ಯ
ಸಂಬಂಧದಲ್ಲಿ ನಂಬಿಕೆ ಬಹಳ ಮುಖ್ಯ. ನಂಬಿಕೆ ಇಲ್ಲದಿದ್ದರೆ, ಸಮಸ್ಯೆಗಳು ಹೆಚ್ಚಾಗುತ್ತವೆ. ಆದ್ದರಿಂದ ಸಂಗಾತಿಯನ್ನು ನಂಬಿರಿ. ಅವರಿಗೂ ನಿಮ್ಮ ಮೇಲೆ ನಂಬಿಕೆ ಬರುವಂತೆ ಮಾಡಿ.

ಕಷ್ಟದ ಸಮಯದಲ್ಲಿ ಸಹಕಾರ
ದಂಪತಿಗಳು ಒಬ್ಬರನ್ನೊಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ಕಾಲಾನಂತರದಲ್ಲಿ, ಅವರ ಅಗತ್ಯತೆಗಳು ಭಿನ್ನವಾಗಲು ಪ್ರಾರಂಭಿಸುತ್ತವೆ. ಅವರು ಪರಸ್ಪರರ ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿಲ್ಲ. ಇದು ಎರಡೂ ಹೃದಯಗಳನ್ನು ನೋಯಿಸುತ್ತದೆ. ಅಂತಹ ಕೆಟ್ಟ ಸಮಯದಲ್ಲಿ ಸಂಗಾತಿಯನ್ನು ಬೆಂಬಲಿಸುವುದು ಬಹಳ ಮುಖ್ಯ.

click me!