ಲವ್ ಸೈಕಾಲಜಿ : ಹುಡುಗಿಯರು ಹುಡುಗರಿಂದ ಬಯಸೋದು ಇದನ್ನೇ ನೋಡಿ! ಲವ್ ಮಾಡೋ ಹುಡುಗರಿಗಿದು ಗೊತ್ತಿರಲೇಬೇಕು

Published : Feb 20, 2026, 06:30 PM IST

ಪ್ರೀತಿ ಅನ್ನೋದು ನೋಡೋಕೆ ಸಿಂಪಲ್ ಅನಿಸಿದ್ರೂ, ಅದರೊಳಗೊಂದು ಬೇರೆಯೇ ಪ್ರಪಂಚ ಇರುತ್ತೆ. ಅದರಲ್ಲೂ ಹುಡುಗಿಯರು, ಹುಡುಗರಿಂದ ನಿಜವಾಗ್ಲೂ ಏನು ಬಯಸುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇರುತ್ತೆ. ಮನಶಾಸ್ತ್ರದ ಪ್ರಕಾರ, ಹುಡುಗರಲ್ಲಿರುವ ಯಾವ ಗುಣಗಳು ಹುಡುಗಿಯರ ಮನಸ್ಸಲ್ಲಿ ವಿಶೇಷ ಸ್ಥಾನವಿರುತ್ತೆ ನೋಡೋಣ.

PREV
16
ಲವ್ ಸೈಕಾಲಜಿ

ಸಾಮಾನ್ಯವಾಗಿ ಹುಡುಗಿಯರು, ಹುಡುಗರಿಂದ ನಿಜವಾಗ್ಲೂ ಏನು ಬಯಸುತ್ತಾರೆ ಅನ್ನೋ ಅನುಮಾನ ಎಲ್ಲರಲ್ಲೂ ಇರುತ್ತೆ. ಕೆಲವು ಸಿನಿಮಾಗಳು, ಸೋಶಿಯಲ್ ಮೀಡಿಯಾ, ಸ್ನೇಹಿತರ ಮಾತುಗಳು ಪ್ರೀತಿಯನ್ನು ಕಾಂಪ್ಲಿಕೇಟೆಡ್ ಆಗಿ ತೋರಿಸಿದ್ರೂ, ಮನಶಾಸ್ತ್ರ ಮಾತ್ರ ತುಂಬಾ ಸರಳ ವಿಷಯಗಳನ್ನು ಹೇಳುತ್ತೆ. ಅದೇನು ಅಂತ ಇಲ್ಲಿ ವಿವರವಾಗಿ ನೋಡೋಣ.

26
ಭಾವನಾತ್ಮಕ ಸಂಪರ್ಕ

ಮನಶಾಸ್ತ್ರದ ಪ್ರಕಾರ, ಮಹಿಳೆಯರಿಗೆ ಭಾವನಾತ್ಮಕ ಸಂಪರ್ಕ ಬಹಳ ಮುಖ್ಯ. ಹುಡುಗ ತನ್ನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡರೆ, ಅದು ಹುಡುಗಿಗೆ ಭದ್ರತೆಯ ಭಾವನೆ ನೀಡುತ್ತೆ. 'ಸ್ಟ್ರಾಂಗ್ ಆಗಿ ಇರಬೇಕು' ಅನ್ನೋ ಕಾರಣಕ್ಕೆ ಹುಡುಗರು ತಮ್ಮ ದೌರ್ಬಲ್ಯಗಳನ್ನು ಮುಚ್ಚಿಡುತ್ತಾರೆ. ಆದರೆ, ಸರಿಯಾದ ಸಮಯದಲ್ಲಿ ಭಾವನೆ ಹಂಚಿಕೊಳ್ಳುವ ಹುಡುಗನೇ ಹುಡುಗಿಯರಿಗೆ ಹೆಚ್ಚು ನಂಬಿಕಸ್ಥನಾಗಿ ಕಾಣಿಸುತ್ತಾನೆ. ಅವರ ಅಭಿಪ್ರಾಯಗಳನ್ನು ಗೌರವಿಸುವುದು, ಪರ್ಸನಲ್ ಸ್ಪೇಸ್ ಅರ್ಥಮಾಡಿಕೊಳ್ಳುವುದು, ನಿರ್ಧಾರಗಳಲ್ಲಿ ಅವರನ್ನು ಭಾಗಿಯಾಗಿಸುವುದು ಹುಡುಗಿಯರ ಮನಸ್ಸಲ್ಲಿ ಸ್ಥಾನ ಗಳಿಸಲು ಸಹಾಯ ಮಾಡುತ್ತೆ.

36
ಸ್ಥಿರತೆ ಮುಖ್ಯ

ಸಂಬಂಧದಲ್ಲಿ ಸ್ಥಿರತೆ ಬಹಳ ಮುಖ್ಯ. ಒಂದು ದಿನ ತುಂಬಾ ಪ್ರೀತಿ ತೋರಿಸಿ, ಮರುದಿನವೇ ದೂರವಾಗುವ ನಡವಳಿಕೆ ಹುಡುಗಿಯರಲ್ಲಿ ಗೊಂದಲ ಸೃಷ್ಟಿಸುತ್ತೆ. ಮನಶಾಸ್ತ್ರದ ಪ್ರಕಾರ, ಹುಡುಗಿಯರು ಸ್ಥಿರವಾದ ನಡವಳಿಕೆ ಇರುವವರನ್ನು ಹೆಚ್ಚು ನಂಬುತ್ತಾರೆ. ಒಂದು ಚಿಕ್ಕ ಮೆಸೇಜ್ ಕೂಡ ನೀವು ಕೇರ್ ಮಾಡ್ತಿದ್ದೀರಿ ಅನ್ನೋ ಭಾವನೆ ನೀಡುತ್ತೆ. ಆದರೆ, ಅತಿಯಾಗಿ ಕಂಟ್ರೋಲ್ ಮಾಡುವುದು, ಅನಗತ್ಯ ಅನುಮಾನ ಪಡುವುದು ಸಂಬಂಧವನ್ನು ಹಾಳುಮಾಡುತ್ತೆ.

46
ಭವಿಷ್ಯದ ಬಗ್ಗೆ ಗುರಿ ಇರುವ ವ್ಯಕ್ತಿ

ಹೆಚ್ಚಿನ ಹುಡುಗಿಯರು ತಮ್ಮನ್ನು ತಾವು ಗೌರವಿಸುವ ವ್ಯಕ್ತಿಯನ್ನು ಇಷ್ಟಪಡುತ್ತಾರೆ. ಜೀವನದ ಮೇಲೆ ಗಮನ, ಗುರಿಗಳು, ಮತ್ತು ಬೆಳೆಯಬೇಕೆಂಬ ಹಂಬಲ ಇರುವ ಹುಡುಗರು ಸಹಜವಾಗಿಯೇ ಆಕರ್ಷಕವಾಗಿ ಕಾಣುತ್ತಾರೆ. ಆದರೆ, ಅಹಂಕಾರ ಅಥವಾ ಸ್ವಾರ್ಥದ ನಡವಳಿಕೆ ಸಂಬಂಧದಲ್ಲಿ ಅಂತರವನ್ನು ಹೆಚ್ಚಿಸುತ್ತೆ. ನಗಿಸುವ ವ್ಯಕ್ತಿಯೊಂದಿಗೆ ಇರುವುದನ್ನು ಕೂಡ ಹುಡುಗಿಯರು ಇಷ್ಟಪಡುತ್ತಾರೆ. ಆದರೆ, ಅವಮಾನಕಾರಿ ಜೋಕ್‌ಗಳು, ಇತರರನ್ನು ಕೀಳಾಗಿ ಮಾತನಾಡುವುದು ನೆಗೆಟಿವ್ ಪರಿಣಾಮ ಬೀರುತ್ತೆ.

56
ಹುಡುಗಿಯರು ತಮ್ಮನ್ನು ಹುಡುಗ ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ

ಹುಡುಗಿಯರು ಹೆಚ್ಚಾಗಿ, ಪ್ರೀತಿಸಿದ ವ್ಯಕ್ತಿ ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಅಂದರೆ, ಪ್ರತಿ ಸಮಸ್ಯೆಯನ್ನು ಕೇಳಿದ ತಕ್ಷಣ ಪರಿಹಾರ ನೀಡಬೇಕೆಂದಲ್ಲ. ಅವಳ ನೋವನ್ನು ಕೇಳಿಸಿಕೊಳ್ಳುವುದು, ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಚಿಕ್ಕ ವಿಷಯಗಳಿಗೆ ಧನ್ಯವಾದ ಹೇಳುವುದು, ಅವಳು ಮಾಡಿದ ಕೆಲಸವನ್ನು ಗುರುತಿಸಿ ಹೊಗಳುವುದು ಕೂಡ ಸಂಬಂಧವನ್ನು ಗಟ್ಟಿಗೊಳಿಸುತ್ತೆ.

66
ಗೌರವ ಮುಖ್ಯ

ಮನಶಾಸ್ತ್ರದ ಪ್ರಕಾರ, ಪ್ರೀತಿಯಲ್ಲಿ ಪರಸ್ಪರ ಗೌರವ ಮತ್ತು ಸಮಾನತೆ ಬಹಳ ಮುಖ್ಯ. ಪ್ರಾಬಲ್ಯ ತೋರಿಸುವುದು ಅಥವಾ ಸಂಪೂರ್ಣವಾಗಿ ಅವಲಂಬಿತರಾಗುವುದು, ಎರಡೂ ಆರೋಗ್ಯಕರವಲ್ಲ. ಆರೋಗ್ಯಕರ ಸಂಬಂಧ ಅಂದರೆ ಇಬ್ಬರೂ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು, ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಅಂತ ಮನಶಾಸ್ತ್ರಜ್ಞರು ಹೇಳುತ್ತಾರೆ. ಇದೇ ಕಾರಣಕ್ಕೆ, ಹೆಚ್ಚಿನ ಹುಡುಗಿಯರು ಹುಡುಗರಿಂದ ಪ್ರಾಮಾಣಿಕತೆ, ಗೌರವ, ಸ್ಥಿರತೆ ಮತ್ತು ಕಾಳಜಿಯನ್ನು ಬಯಸುತ್ತಾರೆ ಎಂದು ತಜ್ಞರು ವಿವರಿಸುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories