ಬಿಗ್ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಜೋಡಿಯ ಹವಾ ಜೋರಾಗಿದೆ. ತಮಗೆ ಗಿಲ್ಲಿಯಂತಹ ಹುಡುಗ ಬೇಕು ಎಂದಿದ್ದ ರಕ್ಷಿತಾ, ಇದೀಗ ಗಿಲ್ಲಿಯಿಂದ ತಮಗೆ ಬೇಕಾದ ಉಡುಗೊರೆ ಏನು ಎಂಬುದನ್ನು ಬಹಿರಂಗಪಡಿಸಿದ್ದು, ಅವರಿಂದ ಲೈಫ್ಲಾಂಗ್ ಫ್ರೆಂಡ್ಷಿಪ್ ಸಿಕ್ಕರೆ ಸಾಕು ಎಂದಿದ್ದಾರೆ.
ಬಿಗ್ಬಾಸ್ ಮೂಲಕ ಫೇಮಸ್ ಆಗಿರೋ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿಯ ಹವಾ ಇನ್ನೂ ನಿಂತಿಲ್ಲ. ಇಬ್ಬರಿಗೂ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಗಿಲ್ಲಿ ನಟ ಸಿನಿಮಾ ಸ್ಟಾರ್ ಕೂಡ ಆದರೆ, ರಕ್ಷಿತಾ ಶೆಟ್ಟಿಗೆ ರಿಯಾಲಿಟಿ ಷೋಗಳಲ್ಲಿ ಸಕತ್ ಡಿಮಾಂಡ್ ಇದೆ.
26
ಗಿಲ್ಲಿಯಂಥ ಹುಡುಗ ಬೇಕು
ಅಷ್ಟಕ್ಕೂ, ರಕ್ಷಿತಾ ಶೆಟ್ಟಿ ತಮಗೆ ಗಿಲ್ಲಿ ನಟನಂಥದ್ದೇ ಹುಡುಗ ಬೇಕು ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅವರು ಇಷ್ಟು ಹೇಳುತ್ತಿದ್ದಂತೆಯೇ ಅವರಿಬ್ಬರ ಫ್ಯಾನ್ಸ್ ಇಬ್ಬರ ಜೋಡಿ ಮಾಡಿಯೇ ಬಿಟ್ಟಿದ್ದರು. ಎಐ ಮೂಲಕ ಮದುವೆಯನ್ನೂ ಮಾಡಿಸಿದ್ದರು!
36
ಲೈಫ್ಲಾಂಗ್ ಉಡುಗೊರೆ
ಇದೀಗ ರಕ್ಷಿತಾ ಶೆಟ್ಟಿ ಅವರಿಗೆ ಗಿಲ್ಲಿ ನಟನಿಂದ ನೀವು ಬಯಸೋ ಉಡುಗೊರೆ ಏನು ಎನ್ನುವ ಪ್ರಶ್ನೆ ಎದುರಾಗಿದೆ. ಯಶುಗೌಡ ಚಾನೆಲ್ನಲ್ಲಿ ನಟಿಗೆ ಈ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ರಕ್ಷಿತಾ ಶೆಟ್ಟಿ, ನನಗೆ, ಗಿಲ್ಲಿ ನಟನಿಂದ ಲೈಫ್ಲಾಂಗ್ ಫ್ರೆಂಡ್ಷಿಪ್ ಸಿಕ್ಕರೆ ಸಾಕು ಎಂದಿದ್ದಾರೆ. ಈ ಮೂಲಕ ಗಿಲ್ಲಿಯ ಜೊತೆಗೆ ಸದಾ ಸ್ನೇಹದಿಂದ ಇರುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ ರಕ್ಷಿತಾ ಶೆಟ್ಟಿ (Rakshitha Shetty)
ಕೆಲ ದಿನಗಳ ಹಿಂದೆ ಜಾಲತಾಣದಲ್ಲಿ, ಗಿಲ್ಲಿ ಮತ್ತು ರಕ್ಷಿತಾ ಜೋಡಿ ಹವಾ ಸೃಷ್ಟಿಸ್ತಿದೆ. ಇದಕ್ಕೆ ಕಾರಣ, ರಕ್ಷಿತಾ ಶೆಟ್ಟಿ ಸದ್ಯ ಕ್ವಾಟ್ಲೆ ಕಿಚನ್ ರಿಯಾಲಿಟಿ ಷೋನಲ್ಲಿ ಭಾಗಿಯಾಗಿದ್ದು, ಅದಕ್ಕೀಗ ಗಿಲ್ಲಿ ನಟನ ಎಂಟ್ರಿಯಾಗಿದೆ. ರಕ್ಷಿತಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಗಿಲ್ಲಿ ನಟನ ಜೊತೆಗಿನ ಫೋಟೋ ಶೇರ್ ಮಾಡಿದ್ದೇ ತಡ, ಮತ್ತ ಅವರ ಫ್ಯಾನ್ಸ್ ಎದ್ದು ಬಿಟ್ಟಿದ್ದಾರೆ.
56
ಮತ್ತೆ ಮುನ್ನೆಲೆಗೆ
ಥರಹೇವಾರಿ ಮ್ಯೂಸಿಕ್ ಹಿನ್ನೆಲೆಯಲ್ಲಿ ಈ ಜೋಡಿ ಒಂದಾಗಬೇಕು ಎಂದು ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲ ಸಮಯದಿಂದ ಸೈಲಾಂಟಿದ್ದ ಜೋಡಿಯ ವಿಷ್ಯ ಮತ್ತೆ ಮುನ್ನೆಲೆಗೆ ಬರುತ್ತಿದೆ.
66
ಸಿನಿಮಾ ಆಫರ್ಸ್
ಅಂದಹಾಗೆ ಇತ್ತ ಗಿಲ್ಲಿ ನಟ ಸಿನಿಮಾಗಳಲ್ಲಿಯೂ ಬಿಜಿ ಇದ್ದರೆ, ರಕ್ಷಿತಾ ಶೆಟ್ಟಿ ಬಂದಿರುವ ಸಿನಿಮಾ ಆಫರ್ಸ್ ರಿಜೆಕ್ಟ್ ಮಾಡಿರುವುದಾಗಿ ತಿಳಿಸಿದ್ದಾರೆ. ತಮಗೆ ಸದ್ಯ ಸಿನಿಮಾ ಇಷ್ಟ ಇಲ್ಲ. ನಾನು ಒಪ್ಪುವ ಪಾತ್ರ ಸಿಕ್ಕರೆ ಮುಂದೆ ನೋಡುವೆ ಎಂದಿದ್ದಾರೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.