ಇಂಟೆಲಿಜೆಂಟ್ ವ್ಯಕ್ತಿ : ಮಾತಿನಲ್ಲಿ ತನ್ನ ಚತುರತೆಯನ್ನು ತೋರಿಸುವ ಜೀನಿಯಸ್ ವ್ಯಕ್ತಿ ಹುಡುಗಿಯರಿಗೆ ಇಷ್ಟವಾಗುತ್ತಾನೆ. ಯಾವ ಹುಡುಗ ಆಕೆಯನ್ನು ತನ್ನ ಮಾತುಗಳ ಮೋಡಿಯಿಂದ ನಗಿಸುತ್ತಾನೋ ಅಥವಾ ರಾಜಕೀಯದ ಬಗ್ಗೆ ಪಟಾಪಟ್ ಎಂದು ಮಾತನಾಡುತ್ತಾನೋ ಅಂತಹ ಹುಡುಗನಿಗೆ ಆಕೆ ಬೋಲ್ಡ್ ಆಗುತ್ತಾಳೆ.
ಕಾನ್ಫಿಡೆಂಟ್ ವ್ಯಕ್ತಿತ್ವ : ಸಾಧಾರಣವಾಗಿ ಹುಡುಗಿಯರು ಕಾನ್ಫಿಡೆಂಟ್ ಹುಡುಗರಿಗೆ ಫಿದಾ ಆಗುತ್ತಾರೆ. ಯಾಕೆಂದರೆ ಆತನಿಗೆ ತಾನು ಏನು ಎಂಬುದು ಗೊತ್ತಿರುತ್ತದೆ. ಆತ ಯಾವತ್ತೂ ಆಕೆಯ ಮೇಲೆ ಜೆಲಸಿ ಫೀಲ್ ಮಾಡುವುದಿಲ್ಲ ಅಷ್ಟೇ ಅಲ್ಲಾ ಆಕೆಯ ಇತರ ಪುರುಷ ಸ್ನೇಹಿತರ ಮೇಲೆ ಕೋಪ ಮಾಡಿಕೊಳ್ಳುವುದಿಲ್ಲ. ಈ ಗುಣ ಆಕೆಗೆ ಇಷ್ಟವಾಗುತ್ತದೆ.
ಕಲಾವಿದ: ಆರ್ಟಿಸ್ಟ್ ತನ್ನ ಕ್ರಿಯೇಟಿವ್ ಗುಣಗಳಿಂದ ಹುಡುಗಿಯರನ್ನು ಗೆಲ್ಲುತ್ತಾನೆ. ಚಿತ್ರ ಕಲಾವಿದ ಕುಂಚದಲ್ಲಿ ಅರಳುವ ಕಲೆ, ಲೇಖಕನ ಕೈಯಲ್ಲಿ ಅರಳಿದ ಕವಿತೆ ಎಲ್ಲವೂ ಆಕೆಯನ್ನು ಹೊಸ ಲೋಕಕ್ಕೆ ತೆರಳುವಂತೆ ಮಾಡುತ್ತದೆ.
ವಿಚಿತ್ರ ಗುಣದ ಹುಡುಗ :ಎಲ್ಲೋ ದೂರದ ದೇಶದಿಂದ ಬಂದಂತಹ ಹ್ಯಾಂಡ್‌ಸಮ್ ಬಾಯ್ ತನ್ನ ವಿಚಿತ್ರ ಗುಣಗಳಿಂದ ಹುಡುಗಿಯರ ಮನಗೆಲ್ಲುತ್ತಾನೆ. ಆತನ ಮಾತನಾಡುವ ಶೈಲಿ, ಸುತ್ತಲಿನ ಲೋಕವನ್ನು ನೋಡುವ ಆತನ ಶೈಲಿ ವಿಭಿನ್ನವಾಗಿರುತ್ತದೆ. ಇಂತಹ ಹುಡುಗನನ್ನು ನೋಡಿದರೆ ಯಾವ ಹುಡುಗಿಯೂ ತಾನೆ ಬೇಡಾ ಎನ್ನಬಹುದು.
ರೊಮ್ಯಾಂಟಿಕ್ ವ್ಯಕ್ತಿತ್ವ: ಕ್ಲಾಸಿಕ್ ರೊಮ್ಯಾನ್ಸ್ ಇಷ್ಟಪಡುವ ಹುಡುಗ. ಆಕೆಗಾಗಿ ಚಾಕ್‌ಲೆಟ್, ಗುಲಾಬಿ ಹೂವು, ಕ್ಯಾಂಡಲ್‌ಲೈಟ್ ಡಿನ್ನರ್ ಹೀಗೆ ರೊಮ್ಯಾಂಟಿಕ್ ಆಗಿ ಆಕೆಯನ್ನು ಇಂಪ್ರೆಸ್ ಮಾಡುವ ಹುಡುಗನನ್ನು ಆಕೆ ಮನಸಾರೆ ಒಪ್ಪಿ ಬಿಡುತ್ತಾಳೆ.
ಮೃದು ಸ್ವಭಾವದ ವ್ಯಕ್ತಿ : ಆಕೆ ಕಾರಿನಿಂದ ಇಳಿಯುವಾಗ ಬಾಗಿಲು ತೆಗೆಯುವ, ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ನಂತರ ಬಿಲ್ ಪಾವತಿಸುವ, ಆಕೆಯ ಮನೆ ತನಕ ಸುರಕ್ಷಿತವಾಗಿ ಬಿಡುವ ಆ ಗುಣ ಯಾವ ಹುಡುಗಿಯರನ್ನೂ ಸಹ ಮೋಡಿ ಮಾಡದೇ ಬಿಡದು.
ಬ್ಯಾಡ್ ಬಾಯ್ : ಯೆಸ್ ಈ ವಿಷ್ಯ ಎಲ್ಲರಿಗೂ ತಿಳಿದಿರುವುದೇ.. ರಫ್ ಆ್ಯಂಡ್ ಟಫ್ ಆಗಿರುವ ಬ್ಯಾಡ್ ಬಾಯ್‌ಗಳನ್ನು ಹೆಚ್ಚಿನ ಎಲ್ಲಾ ಹುಡುಗಿಯರು ಇಷ್ಟಪಡುತ್ತಾರೆ. ಸಾಹಸವನ್ನು ಇಷ್ಟಪಡುವ, ಏನೇ ಬಂದರು ಎದುರಿಸಿ ನಿಲ್ಲುವ ಆತನ ಗುಣ ಎಲ್ಲವೂ ಆಕೆಯನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ