ಹೆಣ್ಮಕ್ಕಳೇ ಕೇಳಿ… ತಪ್ಪಿಯೂ ಈ 3 ವಿಷ್ಯಗಳನ್ನು ಬಾಯ್ ಫ್ರೆಂಡ್ ಜೊತೆ ಶೇರ್ ಮಾಡ್ಬೇಡಿ

First Published | Apr 21, 2023, 7:11 PM IST

ಹೆಚ್ಚಿನ ಜನರು ತಮ್ಮ ಬಾಯ್ ಫ್ರೆಂಡ್ ಬಳಿ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಹಂಚಿಕೊಳ್ಳೋದು ತಪ್ಪೇನಲ್ಲ ಬಿಡಿ, ಆದರೆ ಕೆಲವೊಂದು ವಿಷಗಳನ್ನು ಹಂಚಿಕೊಳ್ಳೋದು ಸರಿಯಲ್ಲ. ನೀವು ನಿಮ್ಮ ಬಾಯ್ ಫ್ರೆಂಡ್ ಜೊತೆ ಹಂಚಿಕೊಳ್ಳಬಾರದ ವಿಷಯಗಳು ಯಾವುವು ಎಂದು ನೀವು ತಿಳಿದುಕೊಳ್ಳಬೇಕು.  

ರಿಲೇಶನ್ ಶಿಪ್ (relationship)ನಲ್ಲಿ ಕಪಲ್ಸ್ ಪರಸ್ಪರ ತುಂಬಾ ಬೆರೆಯುತ್ತಾರೆ ಮತ್ತು ಒಬ್ಬರನ್ನೊಬ್ಬರು ಬಹಳಷ್ಟು ನಂಬುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಬಾರಿ ಜನರು ತಮ್ಮ ಸಂಗಾತಿಯೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ಅನೇಕ ಬಾರಿ ಅವರು ಇಮೋಶನಲ್ ಆಗಿ ಅಂತಹ ವಿಷಯಗಳನ್ನು ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ, ಇದು ಭವಿಷ್ಯದಲ್ಲಿ ಹಾನಿಯನ್ನುಂಟು ಮಾಡಬಹುದು. 

ಬಾಯ್ ಫ್ರೆಂಡ್ (boyfriend) ಜೊತೆ ನೀವು ಎಷ್ಟೇ ಕ್ಲೋಸ್ ಆಗಿದ್ದರೂ ಸಹ ಕೆಲವೊಂದು ವಿಷಯಗಳನ್ನು ಸೀಕ್ರೆಟ್ ಆಗಿ ಇಟ್ಟರೇನೆ ಉತ್ತಮ. ಇದರಿಂದ ಮುಂದೊಂದು ದಿನ ಸಮಸ್ಯೆ ಆಗೋದು ತಪ್ಪುತ್ತದೆ. ಈಗ ನೀವು ಯೋಚನೆ ಮಾಡುತ್ತಿರಬಹುದು ಅಲ್ವಾ? ಅಂತಹ ಯಾವ ವಿಷಯಗಳನ್ನು ಬಾಯ್ ಫ್ರೆಂಡ್ ನಿಂದ ಮುಚ್ಚಿಡಬೇಕು ಮತ್ತು ಯಾಕೆ ಅವರೊಂದಿಗೆ ಹಂಚಿಕೊಳ್ಳಬಾರದು ಅನ್ನೋದನ್ನು ನೋಡೋಣ. 

Latest Videos


ಐಡಿ ಮತ್ತು ಪಾಸ್ ವರ್ಡ್ (ID and Password)
ನಿಮ್ಮ ಸಂಗಾತಿಗೆ ಸೋಶಿಯಲ್ ಮೀಡಿಯಾ ಪಾಸ್ ವರ್ಡ್ ಮತ್ತು ಐಡಿಯನ್ನು ನೀಡುವುದು ಒಂದು ದೊಡ್ಡ ಹೆಜ್ಜೆಯಾಗಿದೆ. ನೀವು ಜಿಮೇಲ್, ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನ ಐಡಿ ಮತ್ತು ಪಾಸ್ ವರ್ಡ್ ಅನ್ನು ನಿಮ್ಮ ಗೆಳೆಯ ಅಥವಾ ಯಾರೊಂದಿಗೂ ಹಂಚಿಕೊಳ್ಳಬಾರದು. ಇದರೊಂದಿಗೆ, ಅವರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಹ ಪಡೆಯಬಹುದು.

ಸಂಬಂಧದಲ್ಲಿ ವಿಶ್ವಾಸ ಉಳಿಸಿಕೊಳ್ಳಲು ಅನೇಕ ಜನರು ಸೋಶಿಯಲ್ ಮೀಡಿಯಾ (social media) ಐಡಿ ಮತ್ತು ಪಾಸ್ವರ್ಡ್ ಹಂಚಿಕೊಳ್ಳುತ್ತಾರೆ ಮತ್ತು ನಂತರ ಅವರು ವಿಷಾದಿಸುತ್ತಾರೆ. ನಿಮ್ಮ ಸಂಬಂಧದಲ್ಲಿ ಕೆಲವು ಸೀಕ್ರೆಟ್ಸ್ ಹೊಂದಿರುವುದು ಸಹ ಅವಶ್ಯಕ ಎಂದು ನೀವು ಅರ್ಥಮಾಡಿಕೊಳ್ಳಬೇಕು ಇದರಿಂದ ನೀವು ನಂತರ ಯಾವುದೇ ರೀತಿಯ ತೊಂದರೆಯನ್ನು ಎದುರಿಸಬೇಕಾಗಿಲ್ಲ. 

ಬ್ಯಾಂಕಿಗೆ ಸಂಬಂಧಿಸಿದ ಮಾಹಿತಿ (bank related information)
ಆಗಾಗ್ಗೆ ಬ್ಯಾಂಕಿಗೆ ಸಂಬಂಧಿಸಿದ ಕೆಲಸವನ್ನು ನಾವೇ ಮಾಡುತ್ತೇವೆ, ಆದರೆ ಕೆಲವೊಮ್ಮೆ ಜನರು ತಮ್ಮ ಸಂಗಾತಿ ಬಳಿ ಸಹ ಬ್ಯಾಂಕಿನ ಕೆಲಸವನ್ನು ಮಾಡಲು ಕೇಳುತ್ತಾರೆ ಮತ್ತು ತಿಳಿಯದೆ ಅವರ ಬ್ಯಾಂಕಿನ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. ಇದು ಅವರಿಗೆ ಬ್ಯಾಂಕ್ ಖಾತೆಗೆ ಪ್ರವೇಶವನ್ನು ಸಹ ನೀಡುತ್ತದೆ. 

ನೀವು ಬ್ಯಾಂಕ್ ಮಾಹಿತಿಯನ್ನು ಯಾರೊಂದಿಗಾದರೂ ಹಂಚಿಕೊಂಡರೆ, ವಂಚನೆಯ ಸಾಧ್ಯತೆಗಳು ಹೆಚ್ಚಾಗುತ್ತವೆ ಮತ್ತು ನಿಮ್ಮ ಬ್ಯಾಂಕ್ ಖಾತೆಯಿಂದ ಯಾರು ಬೇಕಾದರೂ ಹಣವನ್ನು ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಬೇಕು. ಆದ್ದರಿಂದ, ನೀವು ನಿಮ್ಮ ಗೆಳೆಯನೊಂದಿಗೆ ಬ್ಯಾಂಕಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳದಿರುವುದು ಉತ್ತಮ. 

ಮನೆಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿ (personal information of family)
ಆರ್ಥಿಕ ಸ್ಥಿತಿ ಅಥವಾ ನಿಮ್ಮ ಮತ್ತು ನಿಮ್ಮ ಕುಟುಂಬದ ಉಳಿತಾಯದ ಬಗ್ಗೆ ಮಾಹಿತಿಯನ್ನು ಬಾಯ್ ಫ್ರೆಂಡ್ ಬಳಿ ಹಂಚಿಕೊಳ್ಳಬಾರದು. ನೀವು ಈ ವಿಷಯಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಂಡರೆ, ಅವರು ಸಹ ಈ ವಿಷಯಗಳ ಲಾಭವನ್ನು ಪಡೆಯಬಹುದು. ಆದ್ದರಿಂದ, ನಿಮ್ಮ ಗೆಳೆಯನೊಂದಿಗೆ ಮನೆಗೆ ಸಂಬಂಧಿಸಿದ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ನೀವು ಹಂಚಿಕೊಳ್ಳದಿರುವುದು ಬಹಳ ಮುಖ್ಯ. 

click me!