ಪ್ರೀತಿ ಒಂದೇ ಅಲ್ಲ, ಸಂಬಂಧದಲ್ಲಿ ಈ ವಿಷ್ಯಗಳೂ ತುಂಬಾ ಮುಖ್ಯ

First Published | Feb 27, 2024, 3:36 PM IST

ಸಂಬಂಧದಲ್ಲಿ ಪ್ರೀತಿ ಮಾತ್ರವಲ್ಲ, ಈ 5 ವಿಷಯಗಳನ್ನು ಹೊಂದಿರುವುದು ಸಹ ಬಹಳ ಮುಖ್ಯ. ಇವುಗಳನ್ನು ನೀವು ಪಾಲಿಸದೇ ಇದ್ದರೆ, ಅದರಿಂದ ಮುಂದೆ ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹಾಗಿದ್ರೆ ಯಾವ ಐದು ಅಂಶಗಳು ಮುಖ್ಯ ಅನ್ನೋದನ್ನು ತಿಳಿಯೋಣ. 
 

ಸಂಬಂಧ ಎಷ್ಟೇ ಹಳೆಯದಾಗಿದ್ದರೂ, ಸಣ್ಣ ತಪ್ಪುಗಳಿಂದಾಗಿ ಅದರಲ್ಲಿ ಕೆಲವೊಮ್ಮೆ ಬಿರುಕು ಮೂಡಲು ಪ್ರಾರಂಭಿಸುತ್ತದೆ, ಅಷ್ಟೇ ಅಲ್ಲ ಈ ಸಂಬಂಧವು (relationship) ಮುರಿಯುವ ಅಂಚಿಗೂ ಬಂದು ನಿಲ್ಲುತ್ತದೆ.ಪರಿಸ್ಥಿತಿ ಹೀಗಿರೋವಾಗ ನೀವು ಮಾಡಿರೋ ತಪ್ಪುಗಳು ಯಾವುವು ಅನ್ನೋದನ್ನು ನೀವು ಮನವರಿಕೆ ಮಾಡಿಕೊಂಡು ಅದನ್ನು ಸುಧಾರಿಸಲು ಪ್ರಯತ್ನಿಸಬೇಕು. ಹಾಗಿದ್ರೆ ಮಾತ್ರ ಸಂಬಂಧ ಗಟ್ಟಿಯಾಗಿರುತ್ತೆ. 
 

ದೀರ್ಘ ಕಾಲದವರೆಗೆ ಒಟ್ಟಿಗೆ ವಾಸಿಸಿದ ನಂತರವೂ, ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗುತ್ತಿದೆ ಎಂದು ಅನೇಕ ಬಾರಿ ಅನಿಸೋಕೆ ಶುರುವಾಗುತ್ತೆ. ನಿಮ್ಮ ಸಂಬಂಧದಲ್ಲಿ ನೀವು ತೃಪ್ತರಾಗದಿದ್ದರೆ, ಜೀವನವನ್ನು ಮತ್ತು ಸಂಬಂಧವನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಕೊಳ್ಳೋದು ಮುಖ್ಯ. ಅಷ್ಟೇ ಅಲ್ಲ, ಸಂಗಾತಿ (partner) ಜೊತೆ ಉಂಟಾಗಿರುವ ಬಿರುಕನ್ನು ಸರಿಪಡಿಸಲು ಪ್ರಯತ್ನಿಸುವಿರಿ. ಆದರೆ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರೀತಿಯೊಂದೇ ಸಾಕಾ? ಖಂಡಿತಾ ಇಲ್ಲ. 
 

Tap to resize

ಸಂಬಂಧ ಚೆನ್ನಾಗಿರಬೇಕು, ದಾಂಪತ್ಯ ಜೀವನ (married life) ಚೆನ್ನಾಗಿರಬೇಕು ಅಂದ್ರೆ, ಪ್ರೀತಿ ಒಂದೇ ಸಾಕಾಗೋದಿಲ್ಲ. ಇಬ್ಬರ ಮಧ್ಯೆ ಇನ್ನೂ ಹಲವು ವಿಷಯಗಳು ಇರಲೇಬೇಕು. ಇಬ್ಬರು ಜನರನ್ನು ಒಟ್ಟಿಗೆ ಇರಿಸುವ ಅನೇಕ ವಿಷಯಗಳಿವೆ. ಹಾಗಿದ್ರೆ ಈ ದಾಂಪತ್ಯ ಜೀವನದಲ್ಲಿ ಪ್ರೀತಿ ಹೊರತು ಬೇರೆ ಏನೆಲ್ಲಾ ವಿಷಯಗಳು ಇರಬೇಕು ಅನ್ನೋದನ್ನು ತಿಳಿಯೋಣ. 
 

ಸಂಬಂಧಗಳಿಗೆ ಅಗತ್ಯವಾದ ಅಂಶಗಳು
ಗೌರವ (Respect)

ದೀರ್ಘಕಾಲದವರೆಗೆ ಒಟ್ಟಿಗೆ ವಾಸಿಸುವುದರಿಂದ, ದಂಪತಿ ಪರಸ್ಪರರರಿಗೆ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಗೌರವ ಕಡಿಮೆಯಾಗೋದಕ್ಕೆ ಆರಂಭಿಸುತ್ತೆ. ಇಬ್ಬರೂ ಕೆಟ್ಟ ಶಬ್ಧಗಳಿಂದ ನಿಂದಿಸಿಕೊಳ್ತಾರೆ. ಹೀಗೆ ಮಾಡೋದರಿಂದ ಸಂಬಂಧದಲ್ಲಿ ಅಂತರ ಕಡಿಮೆಯಾಗುತ್ತೆ, ಅಲ್ಲದೇ ಸಂಬಂಧದಲ್ಲಿ ಬಿರುಕು ಕೂಡ ಮೂಡುತ್ತೆ. ಅದಕ್ಕಾಗಿ ಮುಖ್ಯವಾಗಿ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಗೌರವ (respect) ಇರೋದು ಮುಖ್ಯ.

ಮಾತುಕತೆ ಕೊರತೆ ಇರಲೇಬಾರದು
ಸಂಬಂಧದ ಆರಂಭದಲ್ಲಿ ಇಬ್ಬರೂ ತುಂಬಾನೆ ಮಾತುಕತೆ ನಡೆಸುತ್ತಲೇ ಇರುತ್ತಾರೆ. ಆದರೆ ಸಮಯ ಕಳೆದಂತೆ ಇಬ್ಬರ ನಡುವೆ ಮಾತುಕತೆ (communication gap) ಕಡಿಮೆಯಾಗುತ್ತಲೇ ಬರುತ್ತದೆ. ಇಬ್ಬರೂ ತಮ್ಮ ತಮ್ಮ ಮೊಬೈಲ್‌ನಲ್ಲಿ ಏನೋ ವಿಡಿಯೋ ನೋಡೋದ್ರಲ್ಲಿ ಬ್ಯುಸಿಯಾಗ್ತಾರೆ. ಹತ್ತಿರವೇ ಇದ್ದರೂ ಮಾತನಾಡಲು ಸಮಯ ಸಿಗೋದಿಲ್ಲ. ಇದರಿಂದ ಸಂಬಂಧ ಹಾಳಾಗುತ್ತದೆ. 

ಭಾವನಾತ್ಮಕ ಕನೆಕ್ಟ್ ಆಗಿರದೇ ಇರೋದು
ವರ್ಷಗಳು ಕಳೆದಂತೆ ಇಬ್ಬರ ನಡುವೆ ಭಾವನಾತ್ಮಕ ಸಂಬಂಧದ (emotional relationship) ಕೊರತೆ ಕಂಡು ಬರುತ್ತೆ. ಸಂಗಾತಿಗೆ ಸ್ಪೆಷಲ್ ಫೀಲ್ ಮಾಡಿಸೋದು, ಪ್ರೀತಿ ತೋರಿಸೋದು, ಸರ್‌ಪ್ರೈಸ್ ನೀಡೋದು ಇವೆಲ್ಲವೂ ಕಡಿಮೆಯಾಗುತ್ತೆ, ಒಂದು ದಿನ ಎಲ್ಲವೂ ನಿಂತು ಬಿಡುತ್ತೆ. ಇದೆಲ್ಲಾ ಮಾಡದೇ ಇದ್ದರೆ, ಸಂಗಾತಿ ಮನಸ್ಸಿನಲ್ಲಿ ಅನುಮಾನ, ಭಯ ಕಾಡಲು ಶುರುವಾಗುತ್ತೆ. ಇದುವೇ ಸಂಬಂಧ ಬೇರ್ಪಡಲು ಕಾರಣವಾಗುತ್ತೆ. 
 

ನಂಬಿಕೆ ಮುಖ್ಯ
ಸಂಬಂಧದಲ್ಲಿ ನಂಬಿಕೆ (believe) ತುಂಬಾ ಮುಖ್ಯ. ಇದು ಪ್ರೀತಿಯಷ್ಟೇ ಮುಖ್ಯ ಅನ್ನೋದು ನಿಜ. ಸಂಬಂಧದಲ್ಲಿ ನಂಬಿಕೆಯೇ ಇರದಿದ್ದರೆ ಅದರಿಂದ ಸಮಸ್ಯೆ ಹೆಚ್ಚು ಸಾಧ್ಯತೆಯೇ ಜಾಸ್ತಿ. ಹಾಗಾಗಿ ನಿಮ್ಮ ಸಂಗಾತಿಯಲ್ಲಿ ನಂಬಿಕೆ ಇಡಿ. ಅವರಿಗೂ ನಿಮ್ಮ ಮೇಲೆ ನಂಬಿಕೆ ಇರುವಂತೆ ನೀವು ಇರಿ.

ಕಷ್ಟದ ಸಮಯದಲ್ಲಿ ಬೆಂಬಲ
ಸಂಬಂಧದ ಆರಂಭಿಕ ಹಂತಗಳಲ್ಲಿ, ದಂಪತಿ ಪರಸ್ಪರ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಆದರೆ ಸಮಯದ ನಂತರ, ಅವರ ಅಗತ್ಯಗಳು ವಿಭಿನ್ನವಾಗಲು ಪ್ರಾರಂಭಿಸುತ್ತವೆ ಮತ್ತು ಅವರು ಪರಸ್ಪರರ ಸಮಸ್ಯೆಗಳ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಇದು ಇಬ್ಬರ ಮನಸ್ಸಿನಲ್ಲಿ ನೋವನ್ನುಂಟು ಮಾಡುತ್ತೆ. ಹಾಗೆ ಕೆಟ್ಟ ಸಮಯದಲ್ಲಿ ಪರಸ್ಪರ ಬೆಂಬಲಿಸುವುದು (support your partner) ಮುಖ್ಯ.

Latest Videos

click me!