ತಾನು ಇಷ್ಟಪಟ್ಟಿದ್ದ ಸಹಪಾಠಿಗೆ 12 ಲಕ್ಷದ ಉಡುಗೊರೆ ಕೊಟ್ಟ ನರ್ಸರಿ ಬಾಲಕ!

First Published | Jan 5, 2024, 5:41 PM IST

ನರ್ಸರಿಯ ಬಾಲಕನೊಬ್ಬ ತನ್ನ ಸಹಪಾಠಿಯನ್ನು ಲವ್ ಮಾಡಿ, ಆಕೆಗೆ ಬರೋಬ್ಬರಿ 12.49ಲಕ್ಷ ಮೌಲ್ಯದ ಉಡುಗೊರೆ ಕೊಟ್ಟಿದ್ದಾನೆ. ಬಾಲಕಿ ಮನೆಯವರಿಗೆ ಅದನ್ನು ತೋರಿಸಿದಾಗ ಶಾಕ್ ಆಗೋ ಸರದಿ ಪೋಷಕರದ್ದಾಗಿತ್ತು. 
 

ಲವ್ ಯಾವಾಗ ಬೇಕಾದರೂ ಆಗಬಹುದು ಅಂತಾರೆ. ಆದರೆ ನರ್ಸರಿಯಲ್ಲಿ ಲವ್ ಮಾಡೋದಂದ್ರೆ ಏನು? ನರ್ಸರಿಯ ಪುಟ್ಟ ಬಾಲಕನೊಬ್ಬ ತನ್ನ ಸಹಪಾಠಿಯನ್ನು ಪ್ರೀತಿಸಿದ್ದು, ಆಕೆಗೆ ಕೊಟ್ಟ ಉಡುಗೊರೆ (expensive gift) ಈಗ ಭಾರಿ ಸುದ್ದಿಯಾಗಿದೆ. ಈ ಉಡುಗೊರೆಯ ಮೌಲ್ಯ ಬರೋಬ್ಬರಿ 12.49 ಲಕ್ಷ ರೂ. ಬಾಲಕಿ ಈ ಉಡುಗೊರೆಯನ್ನು ತನ್ನ ಹೆತ್ತವರಿಗೆ ತೋರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.  
 

ಚೀನಾದ ಕ್ಸಿನ್ಚುವಾ ಪ್ರಾಂತ್ಯದಲ್ಲಿ ಒಂದು ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ. ಕಿಂಡರ್ ಗಾರ್ಡನ್ ನಲ್ಲಿ(Kindergarden) ಓದುತ್ತಿರುವ ಸಣ್ಣ ಮಗುವೊಂದು ತನ್ನ ಸಹಪಾಠಿಗೆ ನೀಡಿದ ಉಡುಗೊರೆಯ ಬಗ್ಗೆ ತಿಳಿದು ಎಲ್ಲರೂ ಆಶ್ಚರ್ಯಚಕಿತರಾದರು. ಬಾಲಕಿ ಈ ಉಡುಗೊರೆಯನ್ನು ತನ್ನ ಹೆತ್ತವರಿಗೆ ತೋರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. 
 

Tap to resize

ಆ ಪುಟಾಣಿ ಬಾಲಕ, ತನ್ನ ಗೆಳತಿಗೆ ಭಾರಿ ಮೌಲ್ಯದ ಉಡುಗೊರೆ ನೀಡಿದ್ದ. ಇವು ತಲಾ 15,000 ಯುಎಸ್ ಡಾಲರ್ (12.49 ಲಕ್ಷ ರೂ.) ಮೌಲ್ಯದ 100 ಗ್ರಾಂ ಚಿನ್ನದ ಬಿಸ್ಕತ್ತುಗಳಾಗಿತ್ತು (gold biscuit). ಈ ಪ್ರಕರಣಕ್ಕೆ ಸಂಬಂಧಿಸಿದ ಸೋಶಿಯಲ್ ಮೀಡಿಯಾದಲ್ಲಿ (Social Media) ಸುದ್ದಿಗಳು ಹರಿದಾಡುತ್ತಿವೆ. 

ಬಾಲಕಿಗೆ, ತನ್ನ ಸಹಪಾಠಿ ನೀಡಿದ್ದ ಉಡುಗೊರೆಯನ್ನು ಆಕೆ ಮನೆಗೆ ಬಂದ ನಂತರ ತನ್ನ ಪೋಷಕರಿಗೆ ತೋರಿಸಿದ್ದಾಳೆ. ಮಗುವಿನ ತಾಯಿ ಆಕೆ ಬಳಿ ಅದು ಏನು ಎಂದು ಕೇಳಿದಾಗ, ಅವಳು ಮುಗ್ಧವಾಗಿ 'ನನಗೆ ಗೊತ್ತಿಲ್ಲ' ಎಂದು ಉತ್ತರಿಸುತ್ತಾಳೆ. ಚಿನ್ನದ ಬಿಸ್ಕಟ್ ನೋಡಿದ ಪೋಷಕರು ಮರುದಿನ ಹುಡುಗನಿಗೆ ಅದನ್ನು ಹಿಂದಿರುಗಿಸಬೇಕೆಂದು ಹೇಳಿ, ಹುಡುಗನ ಪೋಷಕರನ್ನು ಸಂಪರ್ಕಿಸಿದ್ದಾರೆ. 
 

ಈ ಚಿನ್ನ ನಿನ್ನ ಹೆಂಡತಿಗಾಗಿ
ಬಾಲಕನ ಹೆತ್ತವರ ಪ್ರಕಾರ, ಮನೆಯಲ್ಲಿ ಇರಿಸಲಾದ ಚಿನ್ನವು ಅವನ ಭಾವಿ ಪತ್ನಿಗೆ ಎಂದು ಅವರು ಬಾಲಕನ ಬಳಿ ಹೇಳಿದ್ದರು ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ. ಭಾವಿ ಪತ್ನಿಗಾಗಿ ಎಂದು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡ ಬಾಲಕ ಅದನ್ನು ನನ್ನ ಮಗಳಿಗೆ ಉಡುಗೊರೆಯಾಗಿ ನೀಡಿದ್ದಾನೆ, ಅದು ಏನು ಅದರ ಮೌಲ್ಯ ಏನು ಎಂಬುದು ಬಾಲಕನಿಗೆ ತಿಳಿದಿಲ್ಲ ಎಂದು ತಾಯಿ ಹೇಳಿದ್ದಾರೆ. 

ಹೇಗೂ ಅಮ್ಮ ಮಗನ ಭಾವಿ ಪತ್ನಿಗೆ ಆ ಚಿನ್ನ ಅಂತ ಹೇಳಿದ್ದಳಲ್ಲ, ಅದಕ್ಕೆ ತಾನಿಷ್ಟ ಪಟ್ಟ ಹುಡುಗಿಗೆ ಅದನ್ನು ತೆಗೆದುಕೊಂಡು ಹೋಗಿ ಉಡುಗೊರೆ ಕೊಟ್ಟಿದ್ದಾನೆ. ಇದೀಗ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಪ್ರಕರಣವು ತಮಾಷೆಯಾಗಿ ಜೊತೆಗೆ, ಮಕ್ಕಳ ಮನಸ್ಸು ಯಾವ ರೀತಿ ಯೋಚನೆ ಮಾಡುತ್ತದೆ ಎನ್ನುವ ಆತಂಕದಿಂದಲೂ ಸದ್ದು ಮಾಡುತ್ತಿದೆ. 
 

ಈ ಬಗ್ಗೆ ಎಚ್ಚರಿಕೆ ನೀಡಿದ ಪೋಷಕರು ತಮ್ಮ ಮಕ್ಕಳೊಂದಿಗೆ ಈ ರೀತಿಯ ಘಟನೆಗಳು ನಡೆಯದಂತೆ ಇತರ ಪೋಷಕರು ಜಾಗರೂಕರಾಗಿರಬೇಕು ಎಂದು ಹೇಳಿದರು. ಈ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಜನರು ಅದರ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
 

ಒಬ್ಬ ಮಹಿಳೆ ಹೀಗೆ ಬರೆದಿದ್ದು, 'ನನ್ನ ಅತ್ತೆ ನನಗೆ ಬ್ರೇಸ್ಲೆಟ್ ಉಡೂಗೊರೆಯಾಗಿ ನೀಡಿದ್ದರು. ನನ್ನ ಮಗ ಅದನ್ನು ನೋಡಿ, ಅದನ್ನು ತನ್ನ ಸಹಪಾಠಿಗೆ ನೀಡಬಹುದೇ, ಅವಳ ಕೈಗೆ ಅದು ಚೆನ್ನಾಗಿ ಕಾಣುತ್ತದೆ ಎಂದು ಹೇಳಿರೋದನ್ನು ನೆನಪಿಸಿಕೊಂಡಿದ್ದಾರೆ. 
 

 ಕಳೆದ ವರ್ಷ ಮೇ ತಿಂಗಳಲ್ಲಿ ಶಾಂಘೈನ ಶಿಶುವಿಹಾರದ ಹುಡುಗನೊಬ್ಬ ಹುಡುಗಿಯೊಬ್ಬಳಿಗೆ 19,000 ಯುವಾನ್ (2,700-2 ಲಕ್ಷ ಯುಎಸ್ ಡಾಲರ್) ಮೌಲ್ಯದ ಬಲ್ಗೇರಿ ಉಂಗುರವನ್ನು ಮದುವೆಯ ಉಡುಗೊರೆಯಾಗಿ ನೀಡಿದ್ದೂ ಸುದ್ದಿಯಾಗಿತ್ತು. 
 

Latest Videos

click me!