ನಿಮ್ಮ ಗಂಡ ಹೀಗೆಲ್ಲಾ ಮಾಡ್ತಿದ್ರೆ ಅಲರ್ಟ್ ಆಗಿರಿ; ವಿವಾಹೇತರ ಸಂಬಂಧ ಹೊಂದಿರಬಹುದು!

First Published | Jan 3, 2024, 5:20 PM IST

ಅದು ಲವ್ ಆಗಿರಲಿ ಅಥವಾ ಮದುವೆಯೇ ಆಗಿರಲಿ, ಯಾರೊಂದಿಗಾದರೂ ರಿಲೇಶನ್ ಶಿಪ್ ನಲ್ಲಿದ್ರೆ, ಅವರು ನಿಮಗೆ ಸಂಪೂರ್ಣವಾಗಿ ನಿಷ್ಠರಾಗಿರಬೇಕೆಂದು ನೀವು ಅಂದುಕೊಳ್ತೀರಿ ಅಲ್ವಾ?. ಆದರೆ ಆ ವ್ಯಕ್ತಿ ನಿಮ್ಮ ಪ್ರೀತಿಯನ್ನು ಕಡೆಗಣಿಸಿ, ಇನ್ನೊಬ್ಬರೊಂದಿಗೆ ಸಂಬಂಧ ಬೆಳೆಸಿದ್ರೆ ಮುಂದೇನು?
 

ಪ್ರೀತಿ ಆಗಿರಲಿ ಮದುವೆ ಆಗಿರಲಿ, ಈ ಎಲ್ಲಾ ಸಂಬಂಧಗಳಲ್ಲಿ ಪ್ರಾಮಾಣಿಕತೆಯನ್ನು ಎರಡೂ ಕಡೆಯಿಂದ ನಿರೀಕ್ಷಿಸಲಾಗುತ್ತದೆ ಅನ್ನೋದು ನಿಜಾ. ಆದರೆ ಪ್ರೀತಿ ಇದೆ ಅಂತ ಅನಿಸಿದ್ರೂ ಕೆಲವೊಂದು ಜನ ಒಂಟಿ ತನ ಅನುಭವಿಸ್ತಾರೆ. ಸಂಗಾತಿಗೆ ಸಂಪೂರ್ಣವಾಗಿ ಪ್ರೀತಿಯ ಧಾರೆ ಎರೆದು, ನಿಮ್ಮನ್ನು ನೀವು ಸಮರ್ಪಿಸಿಕೊಂಡರೂ ಸಹ ಸಂಗಾತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಒಂಟಿತನ (lonliness) ಕಾಡುತ್ತದೆ. ಹೀಗಾದಾಗ ವ್ಯಕ್ತಿಯ ಹೃದಯ ಒಡೆದು ಹೋಗುತ್ತೆ, ತನ್ನ ಸಂಬಂಧದಲ್ಲಿ ಎಲ್ಲಿ ತಪ್ಪಾಗುತ್ತಿದೆ ಅನ್ನೋದು ತಿಳಿಯೋದಿಲ್ಲ.

ನೀವು ಎಲ್ಲಾ ಪ್ರೀತಿ ಧಾರೆ ಎರೆದರೂ, ಆ ಕಡೆಯಿಂದ ಸರಿಯಾದ ಸ್ಪಂದನೆ ಬರ್ತಾ ಇಲ್ಲ ಅಂದ್ರೆ ಅದಕ್ಕೆ ಮುಖ್ಯ ಕಾರಣ ವಿವಾಹೇತರ ಸಂಬಂಧ (extra marital affair) ಆಗಿರುತ್ತೆ. ಅನೇಕ ಸಂದರ್ಭಗಳಲ್ಲಿ, ಭಾವನಾತ್ಮಕ ಮೋಸ ಮಾಡೋದು ತಿಳಿದು ಬಂದಿದೆ. ವಿವಾಹಿತ ವ್ಯಕ್ತಿಯು ತನ್ನ ಸಂಗಾತಿಯನ್ನು ಬಿಟ್ಟು ಮೂರನೇ ವ್ಯಕ್ತಿಯೊಂದಿಗೆ ನಿಕಟವಾದಾಗ ಸಂಬಂಧ ಹೊಂದಿದ್ರೆ, ಅದನ್ನು ಭಾವನಾತ್ಮಕ ದಾಂಪತ್ಯ ದ್ರೋಹ ಎನ್ನುತ್ತಾರೆ. 

Tap to resize

ಇಮೋಶನಲ್ ಚೀಟಿಂಗ್ (emotional cheating) ಅಂದ್ರೆ ದೈಹಿಕ ಸಂಬಂಧ ಮಾತ್ರ ಅಲ್ಲ, ಕೆಲವೊಮ್ಮೆ ಸಂಗಾತಿಯನ್ನು ಬಿಟ್ಟು ಮೂರನೇ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ಮತ್ತು ಇಂಟಿಮೇಟ್ ಆಗಿ ವಿಷಯಗಳನ್ನು ಶೇರ್ ಮಾಡಿಕೊಳ್ಳೋದು ಸಹ ಇಮೋಶನಲ್ ಚೀಟಿಂಗ್ ಆಗಿರುತ್ತೆ. ನಿಮ್ಮ ಸಂಗಾತಿ ನಿಮಗೆ ಚೀಟಿಂಗ್ ಮಾಡ್ತಿದ್ದಾರೆ ಅನ್ನೋದನ್ನು ತಿಳಿಯೋದು ಹೇಗೆ? 

ನಿಮಗೆ ಪ್ರಾಮುಖ್ಯತೆ ನೀಡದೇ ಇರೋದು: ನಿಮ್ಮ ಸಂಗಾತಿ ನಿಮಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ ಎಂದು ನೀವು ಭಾವಿಸಲು ಪ್ರಾರಂಭಿಸಿದಾಗ, ನಿಮ್ಮ ಸಂಬಂಧದಲ್ಲಿ ಮೊದಲಿನಂತೆ ಏನೂ ಉಳಿದಿಲ್ಲ ಎಂದು ಅರ್ಥಮಾಡಿಕೊಳ್ಳಿ.ಅವರು ದಿನದಿಂದ ದಿನಕ್ಕೆ ಬದಲಾಗುತ್ತಿದ್ದಾರೆ ಅಂದ್ರೆ ಇನ್ನೊಬ್ಬ ವ್ಯಕ್ತಿಯ ಸಾಂಗತ್ಯ ಅವರಿಗೆ ಇಷ್ಟವಾಗಿದೆ ಅನ್ನೋದನ್ನು ಸೂಚಿಸುತ್ತೆ. 
 

ಮೊದಲು ಎಲ್ಲಾ ವಿಷಯಗಳಲ್ಲೂ ನಿಮಗೆ ಪ್ರಾಮುಖ್ಯತೆ ನೀಡುತ್ತಿದ್ದ ಸಂಗಾತಿ, ಈಗ ಯಾವುದಕ್ಕೂ ನಿಮಗೆ ಪ್ರಾಮುಖ್ಯತೆ ನೀಡದೇ ಇದ್ದಾಗ, ಅವರು ಚೀಟ್ ಮಾಡುತ್ತಿದ್ದಾರೆ ಅನ್ನೋದನ್ನ ಅರ್ಥ ಮಾಡಿ. ನಿಮ್ಮ ಅಸಮಾಧಾನ ಅವರಿಗೆ ಮುಖ್ಯವಲ್ಲ. ಈ ಸಮಯದಲ್ಲಿ ನೀವು ನಿಮ್ಮ ಬಗ್ಗೆ ಕೆಟ್ಟದಾಗಿ ಯೋಚಿಸಲು ಪ್ರಾರಂಭಿಸುತ್ತೀರಿ. ನಿಮ್ಮ ಸಂಗಾತಿಗೆ (partner) ನೀವು ಸರಿಯಾದ ವ್ಯಕ್ತಿ ಅಲ್ಲ ಎಂದು ನೀವು ಭಾವಿಸುತ್ತೀರಿ.ಅಂತಹ ಆಲೋಚನೆ ಬಂದ ಕೂಡಲೇ ಧೈರ್ಯವಾಗಿರೋದು ಮುಖ್ಯ.
 

ವಿಷಯಗಳನ್ನು ಮರೆಮಾಡಲು ಪ್ರಾರಂಭಿಸುತ್ತಾರೆ: ನಿಮ್ಮ ಸಂಗಾತಿಯು ನಿಮ್ಮಿಂದ ವಿಷಯಗಳನ್ನು ಮರೆಮಾಚಲು ಪ್ರಾರಂಭಿಸಿದಾಗ, ನೀವು ನಿಮ್ಮ ಸಂಬಂಧದಲ್ಲಿ ಜಾಗರೂಕರಾಗಿರಬೇಕು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ನಿಮ್ಮ ಅಸಮಾಧಾನವು ಅವರ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಈ ಸಂದರ್ಭದಲ್ಲಿ ನೀವು ಅಲರ್ಟ್ ಆಗಿರಿ.

ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಸಂಗಾತಿಯೂ ಮೂರನೇ ವ್ಯಕ್ತಿಯೊಂದಿಗಿನ ಸ್ನೇಹವನ್ನು ಕೊನೆಗೊಳಿಸಲು ಸಿದ್ಧನಿಲ್ಲದೇ ಇದ್ದರೆ ಅವನು ಅದನ್ನು ಮುಂದುವರಿಸಲು ಬಯಸುತ್ತಾನೆ ಎಂದರ್ಥ. ಸಂಗಾತಿ ನಿಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದರೂ ಈ ಸಂದರ್ಭದಲ್ಲಿ ನೀವು ಹೆಚ್ಚು ಜಾಗರೂಕರಾಗಿರೋದು ಮುಖ್ಯ. 
 

ಹಠಾತ್ ಬದಲಾವಣೆಗಳು: ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ಬದಲಾಗುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ, ನೀವು ಅವರ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಅವರ ಮನಸ್ಸು ಈಗ ಮೂರನೇ ವ್ಯಕ್ತಿ ಕಡೆಗೆ ವಾಲಿರಬಹುದು. ಇಲ್ಲಿವರೆಗೆ ಸರಿಯಾಗಿದ್ದ ನಿಮ್ಮ ಸಂಗಾತಿ ಸಡನ್ ಆಗಿ ತೂಕ ಇಳಿಸಿಕೊಳ್ಳುವುದು, ವ್ಯಾಯಾಮ ಮಾಡಲು ಬಯಸುವುದು, ತಮ್ಮ ವಾರ್ಡ್ರೋಬ್ ಮತ್ತು ಕೇಶವಿನ್ಯಾಸವನ್ನು (changing style) ಬದಲಾಯಿಸುವುದು, ತಮ್ಮನ್ನು ತಾವು ಅಲಂಕರಿಸಿಕೊಳ್ಳಲು ಹೆಚ್ಚಿನ ಸಮಯ ಕಳೆಯುವುದು, ಅವರು ಹಿಂದೆಂದೂ ಆಸಕ್ತಿ ತೋರಿಸದ ಹವ್ಯಾಸವನ್ನು ಇದೀಗ ಮಾಡ್ತಿದ್ದಾರೆ ಅಂದ್ರೆ, ಅವರಿಗೆ ವಿವಾಹೇತರ ಸಂಬಂಧ ಇದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. 

ಸ್ನೇಹಿತರು ಮತ್ತು ಕುಟುಂಬದಿಂದ ದೂರ ಇರೋದು: ಇಮೋಶನಲ್ ಚೀಟ್ (emotional cheat) ಮಾಡುವ ವ್ಯಕ್ತಿಯು ಉದ್ದೇಶಪೂರ್ವಕವಾಗಿ ತಮ್ಮ ಸಂಗಾತಿಯನ್ನು ಸ್ನೇಹಿತರು ಮತ್ತು ಕುಟುಂಬದಿಂದ ದೂರ ಇರಿಸಬಹುದು. ಅಷ್ಟೇ ಅಲ್ಲ ತಾನು ಮಾತನಾಡುವ ಎಲ್ಲ ಜನರ ನಡುವೆ ನಿಮ್ಮ ಇಮೇಜ್ ಹಾಳು ಮಾಡುವ ಪ್ರಯತ್ನ ಮಾಡ್ತಾರೆ. 

ಸಂಗಾತಿಯು ತನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಅವರು ತನ್ನ ಸ್ನೇಹಿತರು ಮತ್ತು ಕುಟುಂಬಕ್ಕೆ ಪದೇ ಪದೇ ಹೇಳುತ್ತಿರುತ್ತಾರೆ. ಇದು ನಿಮ್ಮಿಬ್ಬರ ನಡುವೆ ನಡೆಯುತ್ತಿರುವ ಸಣ್ಣ ವಾದವನ್ನು ಬಹಳ ದೊಡ್ಡದಾಗಿಸುತ್ತದೆ. ನಿಮ್ಮ ಮೇಲೆ ಪದೇ ಪದೇ ದಬ್ಬಾಳಿಕೆ ಮಾಡೋದು ಇದೆಲ್ಲವೂ ಸಂಗಾತಿ ನಿಮಗೆ ಚೀಟ್ ಮಾಡುತ್ತಿರೋದನ್ನು ಸೂಚಿಸುತ್ತೆ.

Latest Videos

click me!