ಯಾರೂ ಕೆಟ್ಟವರಲ್ಲ, ಆದರೆ ಅವರ ಪರಿಸ್ಥಿತಿಗಳು ಅವರನ್ನು ಕೆಟ್ಟವರನ್ನಾಗಿ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಂತ ತಪ್ಪು ಮಾಡಿದೋರಿಗೆ ಎಲ್ಲರಿಗೂ ಹೀಗೆ ಹೇಳೋದಿಕ್ಕೆ ಸಾಧ್ಯ ಇಲ್ಲ. ಈ ರೂಲ್ಸ್ ಯಾವುದೇ ಒಂದು ಲಿಂಗಕ್ಕೆ ಅನ್ವಯಿಸುವುದಿಲ್ಲ ಆದರೆ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಅನ್ವಯಿಸುತ್ತದೆ.
ಮಹಿಳೆಯರು ಎಂದ ಭಾವನಾ ಜೀವಿ (emotinal person) ಎಂದು ಹೇಳೋರೆ ಹೆಚ್ಚು. ಆದರೆ ಅನೇಕ ಮಹಿಳೆಯರು ಪುರುಷರು ಮಾತ್ರವಲ್ಲದೆ ಇತರ ಮಹಿಳೆಯರು ಕೋಪಗೊಳ್ಳುವ ರೀತಿಯಲ್ಲಿ ವರ್ತಿಸುತ್ತಾರೆ. ಕೆಲವೊಮ್ಮೆ ಅಪರಿಚಿತ ಮಹಿಳೆಯರು, ಕೆಲವೊಮ್ಮೆ ನೆರೆಹೊರೆಯ ಆಂಟಿ ಮತ್ತು ಕೆಲವೊಮ್ಮೆ ಸಂಬಂಧಿಕರು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಾರೆ. ಇದನ್ನು ಯಾರೂ ಕೂಡ ಇಷ್ಟ ಪಡೋದಿಲ್ಲ
ಅದು ಹುಡುಗ ಆಗಿರಲಿ, ಹುಡುಗಿಯರೇ ಆಗಿರಲಿ ಇಂತಹ ಒಂದು ಹುಡುಗಿ ನಮ್ಮ ಜೀವನದಲ್ಲೇ ಬರೋದು ಬೇಡಪ್ಪ ಎಂದು ಅಂದುಕೊಳ್ಳುತ್ತಾರೆ. ಯಾವ ಕೆಟ್ಟ ಗುಣಗಳುಳ್ಳ ಹುಡುಗಿಯರನ್ನೂ (bad woman)ಯಾರು ಸಹ ಇಷ್ಟ ಪಡೋದಿಲ್ಲ.
ಇನ್ನೊಬ್ಬರ ಸಂಗಾತಿ ಮೇಲೆ ಕಣ್ಣು ಹಾಕೋರು
ಅನೇಕ ಮಹಿಳೆಯರು ಇತರರ ಮನೆಗಳನ್ನು ನಾಶಮಾಡಲು ಯಾವಾಗಲೂ ರೆಡಿಯಾಗಿರ್ತಾರೆ. ನಿಮ್ಮ ಸುತ್ತಲೂ ಇಂತಹ ಅನೇಕ ಮಹಿಳೆಯರು ಇರಬೇಕು ಅಲ್ವಾ? ಅಂದ್ರೆ ತನ್ನ ಮುಂದೆ ಇರುವ ಪುರುಷನು ರಿಲೇಶನ್ ಶಿಪ್ ನಲ್ಲಿದ್ದಾನೆ (flirting with married man) ಎಂದು ತಿಳಿದಿದ್ದರೂ, ಅವನನ್ನು ಆಕರ್ಷಿಸಲು, ಬುಟ್ಟಿಗೆ ಹಾಕಲು ಪ್ರಯತ್ನಿಸೋ ಹುಡುಗಿಯರು. ಅಂತಹ ಮಹಿಳೆಯರನ್ನು ಯಾರೂ ಸಹ ಇಷ್ಟಪಡೋದೇ ಇಲ್ಲ.
ಚರ್ಮದ ಬಣ್ಣದ ಬಗ್ಗೆ ಕೆಟ್ಟದಾಗಿ ಹೇಳೋದು
ಓಹ್, ನಿನ್ನ ಕಲರ್ ತುಂಬಾ ಡಾರ್ಕ್ ಆಗಿದೆ, ನೀವು ಸುಂದರವಾಗಿಲ್ಲ, ಸೂರ್ಯನ ಬೆಳಕಿನಲ್ಲಿ ಹೋಗಿ...ಬೆಳಕಲ್ಲಿ ಮಾತ್ರ ನೀವು ಕಾಣಿಸ್ತೀರಿ… ಈ ರೀತಿಯ ಚರ್ಮದ ಬಣ್ಣವನ್ನು (skin color discrimination) ನಿರ್ಣಯಿಸುವ ಕಾಮೆಂಟ್ ಗಳು ಮಹಿಳೆಯರ ವಲಯಗಳಲ್ಲಿ ತುಂಬಾ ಸಾಮಾನ್ಯ. ಅವುಗಳನ್ನು ಎಷ್ಟು ಸರಳವಾಗಿ ಮಾತನಾಡಲಾಗುತ್ತದೆ ಎಂದರೆ ಮಾತನಾಡುವ ಮಹಿಳೆಗೆ ತಾನು ಮಾಡುತ್ತಿರುವ ಕೆಲಸದಿಂದ ಎದುರಿರುವ ಹುಡುಗಿಗೆ ಎಷ್ಟು ನೋವಾಗುತ್ತೆ ಎಂದು ಹೇಳೋದಕ್ಕೂ ಸಾಧ್ಯವಿರೋದಿಲ್ಲ.
ಬಾಡಿ ಶೇಮಿಂಗ್ (Body shaming)
ಕೆಲವು ಹುಡುಗಿಯರಿಗೆ ಬಾಡಿ ಶೇಮಿಂಗ್ ಮಾಡೋ ಕೆಟ್ಟ ಅಭ್ಯಾಸ ಇರುತ್ತೆ. ಹೇಯ್ ನಿಮ್ಮ ಹೊಟ್ಟೆ ಹೊರಬರುತ್ತಿದೆ,ಎಷ್ಟು ಸಣ್ಣ ಇದ್ಯಾ? ತೂಕ ಹೆಚ್ಚಿಸಿ, ಏನನ್ನಾದರೂ ತಿನ್ನಿ, ನೀವು ಎಷ್ಟು ತೆಳ್ಳಗಿದ್ದೀರಿ... ಅನೇಕ ಕಾಮೆಂಟ್ ಗಳನ್ನು ಮಾಡುತ್ತಲೇ ಇರುತ್ತಾರೆ. ಇಂತಹ ಮಹಿಳೆಯರನ್ನು ಯಾರೂ ಸಹ ಇಷ್ಟಪಡೋದೆ ಇಲ್ಲ.
ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್
ನೀವು ಇನ್ನೂ ಮದುವೆಯಾಗಿಲ್ಲವೇ? ಯಾವಾಗ ಮಗು ಮಾಡೋ ಪ್ಲ್ಯಾನ್? ನಿಮ್ಮ ವೃತ್ತಿಜೀವನದಲ್ಲಿ ನೀವು ಎಷ್ಟೇ ಪ್ರಗತಿ ಸಾಧಿಸಿದರೂ, ಕುಟುಂಬದ ಬಗ್ಗೆ ಗಮನ ಹರಿಸಿ, ನಿಮಗೆ ಅಡುಗೆ ಮಾಡಲು ಬರೋದೆ ಇಲ್ವಾ? ಈ ರೀತಿಯಾಗಿ ಇನ್ನೊಬ್ಬ ಮಹಿಳೆಯ ವೈಯಕ್ತಿಕ ಜೀವನ (personal life) ಮತ್ತು ಆಯ್ಕೆಗಳನ್ನು ನಿರ್ಣಯಿಸುತ್ತಾ ಮಾಡುವ ಕಾಮೆಂಟ್ ಗಳು ಎದುರಿನವರಿಗೆ ನೋವನ್ನು ಉಂಟು ಮಾಡಬಹುದು. ಜೊತೆಗೆ ಅಂತವರಿಂದ ದೂರನೇ ಉಳಿಯಲು ಮಹಿಳೆಯರು ಇಷ್ಟ ಪಡ್ತಾರೆ.
ಅವಮಾನಿಸುವವರು
ಅವಳು ಹೇಗೆ ಡ್ರೆಸ್ ಧರಿಸಿದ್ದಾಳೆ ನೋಡಿ? ನೀವು ಇದನ್ನು ಲೋಕಲ್ ಮಾರ್ಕೆಟ್ ನಿಂದ ತಂದಿದ್ದೀರಾ? ಈ ಬಣ್ಣವು ನಿಮಗೆ ಚೆನ್ನಾಗಿ ಕಾಣುತ್ತಿಲ್ಲ, ಮತ್ತೆ ಅದೇ ಡ್ರೆಸ್ ಹಾಕ್ಕೋಂಡು ಬಂದ್ಯಾ? ಅನೇಕ ಮಹಿಳೆಯರು ಇದೆಲ್ಲವನ್ನೂ ಹೇಳುವುದು ತಮ್ಮ ಹಕ್ಕು ಎಂಬಂತೆ ಇಂತಹ ಕೀಳುಮಟ್ಟದ ವಿಷಯಗಳನ್ನು ಸುಲಭವಾಗಿ ಹೇಳುತ್ತಾರೆ. ಈ ರೀತಿ ಮಾತನಾಡುವ ಮಹಿಳೆಯರನ್ನು ಯಾರೂ ಇಷ್ಟಪಡುವುದಿಲ್ಲ.