ಮುಕೇಶ್ ಅಂಬಾನಿ ಮದುವೆಯಾಗಲು ನೀತಾ ಅಂಬಾನಿ ಒಪ್ಪಿಕೊಂಡಿದ್ದು ಇದೇ ಕಾರಣಕ್ಕಂತೆ!

First Published | Oct 27, 2023, 12:14 PM IST

ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ 2023ನೇ ಸಾಲಿನ ಟಾಪ್‌ 100 ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಯಾವತ್ತಿನಂತೆ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಈ ಸಂದರ್ಭದಲ್ಲಿ ನೀತಾ ಅಂಬಾನಿ, ತಾವು ಮದುವೆಯಾಗಲು ಮುಕೇಶ್ ಅಂಬಾನಿಯನ್ನು ಆಯ್ಕೆ ಮಾಡಿಕೊಂಡಿದ್ಯಾಕೆ ಎಂಬುದನ್ನು ವಿವರಿಸಿದ್ದಾರೆ. ಮಕ್ಕಳನ್ನು ಹೇಗೆ ಬೆಳೆಸಿದ್ದೇನೆ ಎಂಬ ಬಗ್ಗೆ ಮಾತನಾಡಿದ್ದಾರೆ.

ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ 2023ನೇ ಸಾಲಿನ ಟಾಪ್‌ 100 ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಯಾವತ್ತಿನಂತೆ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಬಿಸಿನೆಸ್‌ ಎಂಪೈರ್‌ನ ಮಾಲೀಕ ಮುಕೇಶ್ ಅಂಬಾನಿ ಲೈಫ್‌ಸ್ಟೈಲ್ ತುಂಬಾ ಐಷಾರಾಮದಿಂದ ಕೂಡಿದೆ. ಲಕ್ಸುರಿಯಸ್ ಬಂಗಲೆ, ಕಾರುಗಳು, ಹಲವು ಇತರ ವಸ್ತುಗಳನ್ನು ಮುಕೇಶ್ ಅಂಬಾನಿ ಹೊಂದಿದ್ದಾರೆ.

ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಸಹ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಕಾಸ್ಟ್ಲೀ ಬಟ್ಟೆ, ಆಸೆಸರೀಸ್ ಧರಿಸಿಕೊಂಡು ಯಾವಾಗಲೂ ಎಲ್ಲರ ಗಮನ ಸೆಳೆಯುತ್ತಾರೆ.

Tap to resize

ಹೀಗಿರುವ ನೀತಾ ಅಂಬಾನಿ, ತಾವು ಮದುವೆಯಾಗಲು ಮುಕೇಶ್ ಅಂಬಾನಿಯನ್ನು ಆಯ್ಕೆ ಮಾಡಿಕೊಂಡಿದ್ಯಾಕೆ? ಮಕ್ಕಳೊಂದಿಗೆ ತಮ್ಮ ಸಂಬಂಧ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ.

ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸಮಾನರು ಎಂದು ಅರ್ಥ ಮಾಡಿಸಲು, ಅವರನ್ನು ತಮ್ಮ ಮನೆಯಲ್ಲಿ ಸಹ ಅದೇ ರೀತಿ ನೋಡಿಕೊಳ್ಬೇಕು ಎಂದು ನೀತಾ ಅಂಬಾನಿ ಹೇಳುತ್ತಾರೆ. ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ರಿಲಯನ್ಸ್ ಸಾಮ್ರಾಜ್ಯದ ಒಡೆತನವನ್ನು ಮೂರೂ ಮಕ್ಕಳಿಗೆ ಸಮಾನವಾಗಿ ನೀಡಲಾಗಿದೆ.

ಮುಕೇಶ್ ಮತ್ತು ನೀತಾ ಅಂಬಾನಿಯ ಮೂವರು ಮಕ್ಕಳಾದ ಇಶಾ ಮತ್ತು ಆಕಾಶ್, ಮತ್ತು ಅನಂತ್.  ಈ ಮೂವರನ್ನು ಇತ್ತೀಚೆಗೆ ಅಂಬಾನಿಯ ಬಿಲಿಯನೇರ್‌ ಕಂಪನಿಯ ಮಂಡಳಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಮೂವರಿಗೂ ಕಂಪೆನಿಯಲ್ಲಿ ಸರಿ ಸಮಾನವಾದ ಅವಕಾಶವನ್ನು ನೀಡಲಾಗಿದೆ.

ಸಂದರ್ಶನದಲ್ಲಿ, ನೀತಾ ಅಂಬಾನಿ ತಮ್ಮ ಪತಿ ಮುಖೇಶ್ ಅವರೊಂದಿಗಿನ ಸಂಬಂಧ ಸೇರಿದಂತೆ ತಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡಿದರು. 'ನಾವು ಒಬ್ಬರಿಗೊಬ್ಬರು ತುಂಬಾ ಕಲಿತಿದ್ದೇವೆ. ಮುಕೇಶ್‌, ಜೀವನದಲ್ಲಿ ಹಲವಾರು ಕಷ್ಟದ ಸಮಯವನ್ನು ನೋಡಿದ್ದಾನೆ. ಹೀಗಾಗಿ ನಾವಿಬ್ಬರೂ ತುಂಬಾ ಹೊಂದಾಣಿಕೆಯಿಂದ ಮುಂದೆ ಸಾಗಲು ಸಾಧ್ಯವಾಗುತ್ತದೆ' ಎಂದರು.

'ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯವಾದ ನಿರ್ಧಾರ ಎಂದು ನಾನು ಯಾವಾಗಲೂ ನನ್ನ ಮಕ್ಕಳಿಗೆ ಹೇಳುತ್ತೇನೆ. ಮುಕೇಶ್‌ ನಂಥಾ ಜೀವನ ಸಂಗಾತಿಯನ್ನು ಪಡೆಯಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನಾವು ಎಲ್ಲಾ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಂಡು ಖುಷಿಯಿಂದ ಇದ್ದೇವೆ. ಜೀವನದ ಪ್ರಯಾಣವನ್ನು ಆನಂದಿಸಿದ್ದೇವೆ. ಮಕ್ಕಳು ಮತ್ತು ನಮ್ಮ ಮೊಮ್ಮಕ್ಕಳನ್ನು ಬೆಳೆಸುತ್ತಿದ್ದೇವೆ' ಎಂದು ನೀತಾ ಅಂಬಾನಿ ಹೇಳಿದರು.

'ನಾವಿಬ್ಬರೂ ಲಾಂಗ್‌ಡ್ರೈವ್‌ಗೆ ಹೋಗುತ್ತೇವೆ. ಹಿಂದಿ ಹಾಡುಗಳನ್ನು ಕೇಳಲು ಇಷ್ಟಪಡುತ್ತೇವೆ. ಸ್ಟ್ರೀಟ್ ಫುಡ್ ತಿನ್ನುತ್ತೇವೆ. ಮುಕೇಶ್‌ ಭೇಲ್ ತಿನ್ನಲು ಇಷ್ಟಪಡುತ್ತಾರೆ. ನಾನು ದೋಸೆ ಇಡ್ಲಿಯನ್ನು ಸವಿಯಲು ಇಷ್ಟಪಡುತ್ತೇನೆ' ಎಂದರು. 'ನಾವು ನಮ್ಮ ಕುಟುಂಬವನ್ನು ಪ್ರೀತಿಸುವ, ನಮ್ಮ ಹಿರಿಯರನ್ನು ಗೌರವಿಸುವ, ಪ್ರಾಮಾಣಿಕವಾಗಿ, ವಿನಮ್ರರಾಗಿ ಪ್ರತಿದಿನ ಬದುಕುವ ಮೌಲ್ಯಗಳು ಇವುಗಳಾಗಿವೆ, ನಾನು ಹೆಚ್ಚು ಬದಲಾಗಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ನೀತಾ ಅಂಬಾನಿ ಹೇಳಿದರು.

'ಹುಡುಗಿಯರು ತಾವು ಸಮಾನರು ಎಂದು ಕಲಿಯಲು ನಾನು ಭಾವಿಸುತ್ತೇನೆ, ಅವರು ಹುಡುಗರಿಗಿಂತ ಕಡಿಮೆಯಿಲ್ಲ. ನಾನು ಇಶಾ, ಆಕಾಶ್ ಮತ್ತು ಅನಂತ್ ನಡುವೆ ಎಂದಿಗೂ ವ್ಯತ್ಯಾಸವನ್ನು ಮಾಡಿಲ್ಲ' ಎಂದರು.

ಆಕಾಶ್ ಜಿಯೋ ಮೂಲಕ ಡಿಜಿಟಲ್ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ. ಇಶಾ ರಿಲಯನ್ಸ್ ಫೌಂಡೇಶನ್‌ನಲ್ಲಿ ಸಕ್ರಿಯ ಆಸಕ್ತಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಚಿಲ್ಲರೆ ವ್ಯಾಪಾರವನ್ನು ಮುನ್ನಡೆಸುತ್ತಿದ್ದಾರೆ. ಮೂವರೂ ರಿಲಯನ್ಸ್‌ನಲ್ಲಿ ಕೆಲಸ ಮಾಡಲು ತುಂಬಾ ಬದ್ಧರಾಗಿದ್ದಾರೆ. ಅವರಿಗೆ ತಮ್ಮದೇ ಆದ ಸಾಮರ್ಥ್ಯವಿದೆ' ಎಂದು ನೀತಾ ಅಂಬಾನಿ ತಿಳಿಸಿದರು.

Latest Videos

click me!