ಕುಳ್ಳಿಯಾಗಿದ್ರೆ ಚಿಂತೆ ಬೇಡ, ಹುಡುಗರು ಇಷ್ಟಪಡೋದು ನಿಮ್ಮನ್ನೇ..! ಇಲ್ಲಿದೆ ನೋಡಿ ಕಾರಣ

First Published | Nov 19, 2024, 9:29 PM IST

ಉದ್ದ ಇರುವ ಹುಡುಗಿಯರಿಗಿಂತ ಪುರುಷರು ಕುಳ್ಳಗಿನ ಯುವತಿಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಕುಳ್ಳಗಿನ ಹುಡುಗಿಯರು ರೊಮ್ಯಾಂಟಿಕ್, ಸಂಬಂಧಗಳಲ್ಲಿ ಗಂಭೀರ ಹಾಗೂ ತೀಕ್ಷ್ಣ ಮತಿಗಳು ಎಂದು ಸಂಶೋಧನೆ ಹೇಳಿದೆ.

ನಾನು ಕುಳ್ಳಿ ನನ್ನನ್ನು ಯಾವ ಹುಡುಗ ಕೂಡ ಇಷ್ಟಪಡೋದಿಲ್ಲ ಅನ್ನೋ ಚಿಂತೆ ಹುಡುಗಿಯರಲ್ಲಿದ್ರೆ ತಕ್ಷಣವೇ ಬಿಟ್ಟುಬಿಡಿ. ಯಾಕೆಂದರೆ, ಇತ್ತೀಚಿನ ಅಧ್ಯಯನವೊಂದು ಸತ್ಯವೊಂದನ್ನು ಬಹಿರಂಗಪಡಿಸಿದೆ. ಉದ್ದ ಇರೋ ಹುಡುಗಿಯರಿಗಿಂತ ಪುರುಷರು, ಕುಳ್ಳಗಿನ ಯುವತಿಯರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರಂತೆ.

ಹಾಗಂತ ಇದು ಸುಖಾಸುಮ್ಮನೆ ಅಧ್ಯಯನವಲ್ಲ. ಇದಕ್ಕೆ ವೈಜ್ಞಾನಿಕ ಕಾರಣವನ್ನೂ ಸಂಶೋಧನೆ ನೀಡಿದ್ದು. ಅಷ್ಟಕ್ಕೂ ಈ ಅಧ್ಯಯನ ಮಾಡಿರುವುದು ಯೂನಿವರ್ಸಿಟಿ ಆಫ್ ನಾರ್ತ್ ಟೆಕ್ಸಾಸ್. ಇದರ ವಿವರಗಳನ್ನು ಇತ್ತೀಚಿಗೆ ಬಹಿರಂಗಪಡಿಸಿದೆ.
 

Tap to resize

ಯುವಕರು ತಮ್ಮಷ್ಟೇ ಎತ್ತರವಿರುವ ಅಥವಾ ತಮಗಿಂತ ಎತ್ತರವಾಗಿರುವ ಮಹಿಳೆಯರಿಗಿಂತ ಕುಳ್ಳಗಿನ ಯುವತಿಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಇದಲ್ಲದೆ, ಈ ಆಕರ್ಷಣೆಗೆ ಕೆಲವು ಕಾರಣಗಳನ್ನು ಕೂಡ ನೀಡಿದೆ.
 

ತಬ್ಬಿಕೊಳ್ಳೋಕೆ ಬೆಸ್ಟ್‌: ಸಾಮಾನ್ಯವಾಗಿ ಕುಳ್ಳಗಿನ ಮಹಿಳೆಯರು ಪುರುಷರ ಎದೆ ಮಟ್ಟಕ್ಕೆ ಬರುತ್ತಾರೆ. ಇಂಥ ಸಮಯದಲ್ಲಿ ತಮ್ಮ ಎದೆ ಮಟ್ಟಕ್ಕೆ ಬರುವ ಸಂಗಾತಿಯನ್ನು ತಬ್ಬಿಕೊಳ್ಳಲು ಪುರುಷರು ಬಹಳ ಇಷ್ಟಪಡುತ್ತಾರೆ. ತಮ್ಮ ಎದೆಬಡಿತ ಆಕೆಯ ಕಿವಿಗೆ ಕೇಳಬೇಕೆಂದು ಅವರು ಬಯಸುತ್ತಾರೆ.
 

ಶಾರ್ಟ್‌ ಗರ್ಲ್ಸ್‌ ರೊಮ್ಯಾಂಟಿಕ್‌: ಸ್ವಭಾವತಃ ಕುಳ್ಳಗಿನ ಯುವತಿಯರು, ಉದ್ದ ಇರುವ ಯುವತಿಯರಿಗಿಂತ ರೊಮ್ಯಾಂಟಿಕ್‌ ಆಗಿರುತ್ತಾರೆ. ಇದರ ಪ್ರಕಾರ, ಕುಳ್ಳಗಿನ ಮಹಿಳೆಯರು ಯಾವಾಗಲೂ ತಮ್ಮ ಸಂಗಾತಿಯನ್ನು ಸಖತ್‌ ಖುಷಿಯಾಗಿ ಇರಿಸಿಕೊಳ್ಳುತ್ತಾರಂತೆ. ಪ್ರೀತಿಯನ್ನು ಅತ್ಯಂತ ಮುಕ್ತವಾಗಿ ತಿಳಿಸುತ್ತಾರೆ.
 

ವಿವಾಹ ಬಂಧ ಬಲಿಷ್ಠ: ಕುಳ್ಳನೆಯ ಹುಡುಗಿ ಹಾಗೂ ಉದ್ದನೆಯ ಹುಡುಗನ ನಡುವಿನ ವಿವಾಹ ಬಂಧ ಸಂತೋಷ, ಬಲಿಷ್ಠವಾಗಿರುತ್ತದೆ. ಪತ್ನಿ ಎತ್ತರವಿದ್ದರೆ ಆಕೆಗೆ ಹೆಚ್ಚು ಆತ್ಮವಿಶ್ವಾಸ ಹಾಗೂ ಸ್ವಲ್ಪ ಕೋಪಿಷ್ಠೆ ಆಗಿರುತ್ತಾಳೆ ಎನ್ನುವ ಅಸುರಕ್ಷಿತ ಭಾವನೆಯು ಪುರುಷರಲ್ಲಿ ಇರುತ್ತದೆ.
 

ಸಂಬಂಧಗಳಲ್ಲಿ ಗಂಭೀರ: ಕುಳ್ಳನೆಯ ಯುವತಿಯರು ಗಂಡ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಯುವಕರು ನಂಬುತ್ತಾರೆ. ಎತ್ತರದ ಮಹಿಳೆಯರಿಗೆ ಹೋಲಿಸಿದರೆ, ಕುಳ್ಳಗಿನ ಮಹಿಳೆಯರು ಸಂಬಂಧಗಳಲ್ಲಿ ಹೆಚ್ಚು ಗಂಭೀರವಾಗಿರುತ್ತಾರೆ.
 

ಮೆದುಳು ತೀಕ್ಷ್ಣ: ಯುವಕರು ಕುಳ್ಳಗಿದ್ದರೂ ಉದ್ದ ಕೂದಲು ಮತ್ತು ಉತ್ತಮ ಆಕಾರವನ್ನು ಹೊಂದಿರುವ ಮಹಿಳೆಯರನ್ನು ಬಯಸುತ್ತಾರೆ. ವರದಿಯ ಪ್ರಕಾರ, ಕುಳ್ಳಗಿರುವ ಮಹಿಳೆಯರ ಮಿದುಳು ಎತ್ತರದ ಮಹಿಳೆಯರಿಗಿಂತ ತೀಕ್ಷ್ಣವಾಗಿರುತ್ತದೆ ಎಂದು ಬ್ರೂನೆಲ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.
 

ಸರಸವಾಡಲು ಸಲೀಸು: ಪುರುಷ ತನಗಿಂತ ಕುಳ್ಳಗಿರುವ ಯುವತಿಯನ್ನು ತೋಳುಗಳಲ್ಲಿ ಹಿಡಿದಿರೆ, ಅವಳು ಆತನಲ್ಲಿ ಸಂಪೂರ್ಣವಾಗಿ ಲೀನವಾಗುತ್ತಾಳೆ. ಆ ವ್ಯಕ್ತಿ ಅವಳನ್ನು ತಬ್ಬಿಕೊಂಡು ಆನಂದಿಸುತ್ತಾನೆ. ಇದು ಅವರ ಬಂಧಕ್ಕೆ ಸಂತೋಷದ ಕ್ಷಣವನ್ನು ಸೇರಿಸುತ್ತದೆ.  ಮತ್ತೊಂದೆಡೆ, ಪುರುಷರು ಸಮಾನ ಅಥವಾ ಹೆಚ್ಚಿನ ಎತ್ತರವಿರುವ ಮಹಿಳೆಯರೊಂದಿಗೆ ಸರಸವಾಡಲು ಕಷ್ಟಪಡುತ್ತಾರೆ.

Latest Videos

click me!