ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಒಂದು ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೊ ಪ್ರಕಾರ ಯಾವ ಪುರುಷರು ತಮ್ಮ ಪತ್ನಿಯ ಮಾತನ್ನು ಕೇಳುತ್ತಾರೋ? ಆಧ್ಯಾತ್ಮಿಕವಾಗಿ ಜೊತೆಯಾಗಿರುತ್ತಾರೋ ಅವರಿಗೆ ಯಶಸ್ಸು ಗ್ಯಾರಂಟಿ ಅಂತೆ. ನಿಮಗೂ ಹಾಗೆ ಅನಿಸುತ್ತಾ?
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳ ಹವಾ ಜೋರಾಗಿಯೇ ಇದೆ. ಸಣ್ಣ ವಿಷಯದಿಂದ ಹಿಡಿದು ದೊಡ್ಡ ವಿಷಯಗಳವರೆಗೆ ಈ ಟ್ರೋಲ್ ಪೇಜ್ ಗಳು ಸಿಕ್ಕಾಪಟ್ಟೆ ಹವಾ ಸೃಷ್ಟಿಸಿವೆ. ಅದು ಸಿನಿಮಾ ಆಗಿರಬಹುದು, ಸೀರಿಯಲ್, ರಿಯಾಲಿಟಿ ಶೋ, ರಾಜಕೀಯ ಎಲ್ಲಾ ವಿಷಯಗಳನ್ನು ಒಳ್ಳೆ ರೀತಿಯಲ್ಲೂ ಕೆಟ್ಟ ರೀತಿಯಲ್ಲೂ ಟ್ರೋಲ್ ಮಾಡುವ ಮೂಲಕ ಯುವ ಜನಾಂಗವನ್ನು ತಲುಪುತ್ತಿದೆ ಈ ಪೇಜ್ ಗಳು.
25
ವೈರಲ್ ಅಗ್ತಿವೆ ಪೋಸ್ಟ್
ಈಗಂತೂ ಇದೊಂದು ಪೋಸ್ಟ್ ವೈರಲ್ ಆಗ್ತಿದೆ. ಗಂಡ ಹೆಂಡತಿ ಮಾತನ್ನು ಕೇಳಿದ್ರೆ, ಹಾಗೂ ಹೆಮ್ಡ್ತಿ ಜೊತೆ ಆಧ್ಯಾತ್ಮಿಕ ಪಯಣ ಮಾಡುತ್ತಿದ್ದರೆ ಅವರಿಗೆ ಯಶಸ್ಸು ಖಚಿತ ಅಂತಿದ್ದಾರೆ. ಅದಕ್ಕೆ ಉದಾಹರಣೆಯಾಗಿ ರಿಷಬ್ ಶೆಟ್ಟಿ -ಪ್ರಗತಿ ಶೆಟ್ಟಿ, ವಿರಾಟ್ ಕೊಹ್ಲಿ -ಅನುಷ್ಕಾ ಶರ್ಮ, ಯಶ್ ಮತ್ತು ರಾಧಿಕಾ ಪಂಡಿತ್ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
35
ರಿಷಬ್ ಶೆಟ್ಟಿ -ಪ್ರಗತಿ ಶೆಟ್ಟಿ
ಇವರಿಬ್ಬರು ಸದ್ಯದಲ್ಲಿ ಟ್ರೆಂಡಿಂಗ್ ನಲ್ಲಿರುವ ಜೋಡಿಗಳು. ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಈ ಐದು ವರ್ಷಗಳ ಕಾಂತಾರ ಜರ್ನಿಯಲ್ಲಿ ಪ್ರಗತಿ ಶೆಟ್ಟಿ ಪಾಲು ಕೂಡ ದೊಡ್ಡದಾಗಿದೆ. ಇಬ್ಬರು ತುಂಬಾನೆ ಆಧ್ಯಾತ್ಮಿಕವಾಗಿ ಕೂಡ ಕನೆಕ್ಟ್ ಆಗಿದ್ದು, ಯಾವುದೇ ಸಂದರ್ಭದಲ್ಲೂ ಈ ಜೋಡಿ ದೇವಸ್ಥಾನಗಳಿಗೆ ಹೋಗಿ ದೇವರ ಆಶೀರ್ವಾದ ಪಡೆದುಕೊಂಡೇ ಮುಂದಿನ ಕೆಲಸ ಮಾಡುತ್ತಾರೆ.
ವಿರಾಟ್ ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ್ರೆ, ಅನುಷ್ಕಾ ಶರ್ಮಾ ಸಿನಿಮಾದಲ್ಲಿ ಸಾಧನೆ ಮಾಡಿದ್ದಾರೆ. ಮದುವೆಯಾಗಿ ಮಕ್ಕಳಾದ ಬಳಿಕ ಅನುಷ್ಕಾ ನಟನೆಯಿಂದ ದೂರ ಉಳಿದು, ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಕ್ರಿಕೆಟ್ ಸಂದರ್ಭದಲ್ಲಿ ಈ ಜೋಡಿಯ ಪ್ರೀತಿಯನ್ನು ಕಾಣಬಹುದು. ಇಬ್ಬರು ಸ್ಪಿರಿಚುವಲ್ ಆಗಿಯೂ ತುಂಬಾನೆ ಕನೆಕ್ಟ್ ಆಗಿದ್ದಾರೆ. ಈ ಜೋಡಿ ಮಿಸ್ ಮಾಡದೇ ಪ್ರತಿವರ್ಷ ವೃಂದಾವನಕ್ಕೆ ತೆರಳಿ, ಗುರುಗಳ ಆಶೀರ್ವಾದ ಪಡೆದು ಬರುತ್ತಾರೆ. ಈ ಜೋಡಿ ನೋಡಿದ್ರೆ ಮೇಡ್ ಫಾರ್ ಈಚ್ ಅದರ್ ಅನಿಸುತ್ತೆ. ಹಾಗಾಗಿಯೇ ಜನರು ಇವರನ್ನ ನೋಡಿ ಹೆಂಡ್ತಿ ಮಾತು ಕೇಳೋವ ಗಂಡನ ಯಶಸ್ಸು ಖಚಿತಾ ಎನ್ನುತ್ತಿದ್ದಾರೆ.
55
ಯಶ್ ಮತ್ತು ರಾಧಿಕಾ ಪಂಡಿತ್
ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ಇವರು. ಸದ್ಯಕ್ಕಂತೂ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ರಾಧಿಕಾ ತಮ್ಮ ಸಿನಿಮಾ ಕರಿಯರ್ ಗೆ ಬ್ರೇಕ್ ಕೊಟ್ಟು, ಸದ್ಯ ಮಕ್ಕಳ ಲಾಲನೆ ಪಾಲನೆ ಮಾಡ್ತಿದ್ದಾರೆ. ಈ ಜೋಡಿ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸುತ್ತಾರೆ, ಮನೆಯಲ್ಲಿ ಪ್ರತಿ ಹಬ್ಬಕ್ಕೂ ಜೊತೆಯಾಗಿ ಪೂಜೆಗೆ ಕುಳಿತುಕೊಂಡು ಸಂರ್ಪದಾಯಬದ್ಧವಾಗಿ ಪೂಜೆ ಮಾಡ್ತಾರೆ. ಗಂಡನ ಹಿಂದೆ ಇಂತಹ ಒಬ್ಬ ಹೆಂಡತಿ ಇದ್ದರೆ, ಗಂಡ ಖಂಡಿತವಾಗಿ ಯಶಸ್ಸು ಸಾಧಿಸಿಯೇ ಸಾಧಿಸುತ್ತಾನೆ ಏನಂತೀರಾ?