ಇಂಥಾ ಹುಡುಗೀರ ಸಹವಾಸ ಬೇಡವೇ ಬೇಡ ಅಂತಾರೆ ಹುಡುಗರು

Published : Jun 25, 2024, 02:45 PM IST

ಹುಡುಗರಿಗೆ ಯಾವ ಹುಡುಗಿಯರು ಸಿಕ್ರೂ ಆಗುತ್ತೆ, ಲವ್ ಮಾಡೋಕೆ ಒಂದು ಹುಡುಗಿ ಸಿಕ್ರೆ ಸಾಕು ಎಂದು ಎಲ್ಲರೂ ಹೇಳ್ತಾರೆ. ಆದ್ರೆ ನಿಜವಾಗ್ಲೂ ಹಾಗೇನಾ? ಖಂಡಿತಾ ಇಲ್ಲ. ಕೆಲವು ಹುಡುಗೀರನ್ನು ಕಂಡ್ರೆ ಸಾಕು ಹುಡುಗರು ದೂರ ಓಡ್ತಾರೆ.   

PREV
19
ಇಂಥಾ ಹುಡುಗೀರ ಸಹವಾಸ ಬೇಡವೇ ಬೇಡ ಅಂತಾರೆ ಹುಡುಗರು

ಹುಡುಗರು ಸುಮ್ ಸುಮ್ನೆ ಹುಡುಗೀನ ಇಷ್ಟ ಪಡೋದಿಲ್ಲ. ಅವರು ಸಹ ಹುಡುಗಿಯರ ಕೆಲವು ಅಭ್ಯಾಸಗಳನ್ನು ಗಮನಿಸುತ್ತಾರೆ ಮತ್ತು ಆ ಸ್ವಭಾವಗಳು ಹುಡುಗರಿಗೆ ವಿರುದ್ಧವಾಗಿದ್ರೆ, ಅಂತಹ ಹುಡುಗಿಯರಿಂದ ದೂರಾನೆ ಉಳಿಯೋದಿಕ್ಕೆ ಪ್ರಯತ್ನಿಸ್ತಾರೆ ಹುಡುಗರು.  ಹಾಗಿದ್ರೆ ಎಂತಹ ಹುಡುಗೀರನ್ನು ಕಂಡ್ರೆ ಹುಡುಗೀರು ದೂರ ಓಡ್ತಾರೆ ನೋಡೊಣ. 
 

29

ಪುರುಷರು ಯಾವ ಮಹಿಳೆಯರಿಂದ ದೂರ ಇರ್ತಾರೆ? 
ಪ್ರತಿಯೊಬ್ಬ ಹುಡುಗಿಗೆ ತನ್ನದೇ ಆದ ಕೆಲವೊಂದು ಅಭ್ಯಾಸಗಳಿವೆ, ಆದರೆ ಹುಡುಗರು ಇಷ್ಟಪಡದ ಕೆಲವು ಸಾಮಾನ್ಯ ಅಭ್ಯಾಸಗಳೂ ಅವರಿಗೆ ಇರುತ್ತೆ. ಪುರುಷರು ಮಹಿಳೆಯರ ಯಾವ ಅಭ್ಯಾಸಗಳಿಂದ ದೂರವಿರುತ್ತಾರೆ ಅನ್ನೋದನ್ನು ಇಲ್ಲಿ ಹೇಳಿದ್ದೀವಿ. ನಿಮಗೂ ಆ ಅಭ್ಯಾಸ ಇದ್ರೆ ಈವಾಗ್ಲೇ ಬದಲಾಯಿಸಿ. ಇಲ್ಲಾಂದ್ರೆ ಹುಡುಗ್ರು ನಿಮ್ ಹತ್ರ ಮಾತನಾಡೋದೆ ಇಲ್ಲ.

39
Image: Getty

ಆಟಿಟ್ಯೂಡ್ (Attitude)
ಹೆಚ್ಚು ಆಟಿಟ್ಯೂಡ್ ತೋರಿಸುವ ಮಹಿಳೆಯರನ್ನು ಹುಡುಗರು ಕಡಿಮೆ ಇಷ್ಟಪಡುತ್ತಾರೆ. ಹುಡುಗರಿಗೆ ಯಾವಾಗ್ಲೂ ಸಿಂಪಲ್ ಆಗಿ, ಎಲ್ಲರೊಂದಿಗೆ ಬೆರೆಯುವ ಹುಡುಗಿ ಅಂದ್ರೆ ಇಷ್ಟ. 
 

49

ಅಳುವ ಹುಡುಗಿಯರು (Crying women)
ಯಾವ ಹುಡುಗಿ ಮಾತು ಮಾತಿಗೆ ಅಳೋದಕ್ಕೆ ಶುರು ಮಾಡ್ತಾಳೆ, ಅಂತಹ ಹುಡುಗಿಯಿಂದ ದೂರ ಇರೋದಕ್ಕೆ ಹುಡುಗರು ಇಷ್ಟಪಡ್ತಾರೆ. ಹುಡುಗರಿಗೆ ಧೈರ್ಯವಾಗಿರೋ ಹುಡುಗೀರು ಅಂದ್ರೆ ಇಷ್ಟ. 

59

ಕೊಂಕು ನುಡಿಯುವ ಹುಡುಗಿ
ತಪ್ಪು ಎಲ್ಲರಿಂದಲೂ ಆಗೋದು ಸಾಮಾನ್ಯ. ಆದರೆ ಪ್ರತಿ ಮಾತು ಮಾತಿಗೂ ಕುಂದು ಕೊರತೆಗಳನ್ನು ಹೇಳುತ್ತಾ ಕೊಂಕು ನುಡಿಯುವ ಮಹಿಳೆಯರು ಅಂದ್ರೆ ಹುಡುಗರು ದೂರ ಓಡ್ತಾರೆ. 

69

ಡಿಮಾಂಡ್ 
ಯಾವ ಮಹಿಳೆಯರು ಪ್ರತಿಯೊಂದು ವಿಷ್ಯಕ್ಕೂ ಡಿಮಾಂಡ್ (demand) ಮಾಡ್ತಾರೆ, ಎಲ್ಲದಕ್ಕೂ ದೂರು ಹೇಳ್ತಾರೆ ಅಂತಹ ಹುಡುಗಿಯರು ಅಂದ್ರೆ ಇಷ್ಟಾನೆ ಆಗಲ್ಲ. 
 

79

ಜಂಭದ ಹುಡುಗಿ 
ಹುಡುಗರಿಗೆ ಹೊರಗಡೆ ತಿರುಗಾಡೋದು, ಮೋಜು ಮಸ್ತಿ ಮಾಡೋದು ಅಂದ್ರೆ ತುಂಬಾನೆ ಇಷ್ಟ. ಆದರೆ ಅವರಿಗೆ ಯಾವತ್ತೂ ತಮ್ಮ ಹಣ, ಅಂತಸ್ತಿನ ಬಗ್ಗೆ ಅಹಂ ಹೊಂದಿರುವ ಹುಡುಗಿಯನ್ನು ಕಂಡ್ರೆ ಇಷ್ಟ ಆಗೋದೆ ಇಲ್ಲ. 

89

ಮೇಕಪ್
ಲಿಪ್ ಸ್ಟಿಕ್, ಐಲೈನರ್… ಹೀಗೆ ಲೈಟ್ ಆಗಿ ಮೇಕಪ್ ಮಾಡಿದ್ರೆ ಓಕೆ. ಆದ್ರೆ ಪ್ರತಿದಿನ ಹೆವಿ ಮೇಕಪ್ (heavy makeup)  ಮಾಡಿ ತಿರುಗಾಡೋ ಹುಡುಗಿ ಅಂದ್ರೆ ಹುಡುಗರಿಗೆ ಅಲರ್ಜಿ. 

99
Image: Getty

ಇಂಟರ್ ಫಿಯರ್ ಆಗುವವರು
ಹುಡುಗರಿಗೆ ಯಾವಾಗ್ಲೂ ಸ್ವತಂತ್ರ್ಯರಾಗಿರೋದು ಇಷ್ಟ. ಹುಡುಗಿ ಪದೇ ಪದೇ ಎಲ್ಲಾ ವಿಷ್ಯಗಳಿಗೂ ಹುಡುಗನ ಜೀವನದಲ್ಲಿ ಮೂಗು ತೂರಿಸಿಕೊಂಡು ಬಂದ್ರೆ ಅದು ಅವರಿಗೆ ಇಷ್ಟವಾಗೋದಿಲ್ಲ. 

Read more Photos on
click me!

Recommended Stories