ಪುರುಷರು ಮಹಿಳೆಯರಿಗೆ ಯಾವತ್ತೂ ಈ ವಿಷ್ಯಗಳನ್ನ ಹೇಳೋದೆ ಇಲ್ಲ!

First Published | Oct 22, 2023, 12:01 PM IST

ಪುರುಷರು ಸಾಮಾನ್ಯವಾಗಿ ತಮ್ಮ ಹೃದಯವನ್ನು ಯಾರೊಂದಿಗೂ ಬಹಿರಂಗವಾಗಿ ಹಂಚಿಕೊಳ್ಳುವುದಿಲ್ಲ, ವಿಶೇಷವಾಗಿ ಮಹಿಳೆಯರ ಬಳಿ ಅವರು ಹೆಚ್ಚಾಗಿ ಹೇಳೋದೇ ಇಲ್ಲ. ಅಂತಹ ವಿಷಯಗಳು ಯಾವುವು ಅನ್ನೋದನ್ನು ತಿಳಿಯೋಣ. 
 

ಯಾವುದೇ ಸಂಬಂಧದಲ್ಲಿ, (Relationhsip) ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಅದು ಇಬ್ಬರು ಜನರನ್ನು ಹತ್ತಿರ ತರುತ್ತದೆ. ಆದರೆ ಅನೇಕ ಬಾರಿ ಪುರುಷರು ತಮ್ಮ ಭಾವನೆಗಳನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹೆಂಗಸರ ಬಳಿ ಅವರು ಕೆಲವು ವಿಷಯಗಳನ್ನು ಹೇಳೋದೆ ಇಲ್ಲ. ಅಂತಹ ವಿಷಯಗಳು ಯಾವುವು ಅಂತ ನೋಡೋಣ. 
 

ಅಸುರಕ್ಷಿತ ಭಾವ (Insecurity Feel): ಪುರುಷರು ಮಹಿಳೆಯರಂತೆ ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಅವರು ಇದನ್ನು ಎಂದಿಗೂ ಒಪ್ಪದೇ ಇರಬಹುದು, ಆದರೆ ಅವರು ವೃತ್ತಿಜೀವನ, ಲುಕ್ ಮತ್ತು ಸಂಬಂಧಗಳ ಬಗ್ಗೆ ಅಸುರಕ್ಷಿತ ಭಾವ ಹೊಂದಿರುತ್ತಾರೆ. 

Tap to resize

ಭಾವನಾತ್ಮಕ ಬೆಂಬಲದ ಅಗತ್ಯದ ಬಗ್ಗೆ (Emotional Support): ಪುರುಷರು ಸಹ ಭಾವನಾತ್ಮಕ ಬೆಂಬಲವನ್ನು ಬಯಸುತ್ತಾರೆ, ಆದರೆ ಅವರು ಅದನ್ನು ವ್ಯಕ್ತ ಪಡಿಸೋದಿಲ್ಲ, ಆದರೆ ಕಷ್ಟದ ಸಮಯದಲ್ಲಿ ನೀವು ಅವರೊಂದಿಗೆ ನಿಲ್ಲುವುದು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. 
 

ಅಭದ್ರತೆಯ ಭಯ: ನಮ್ಮ ಸಮಾಜವು ಪುರುಷರು ಬಲಶಾಲಿಯಾಗಿರಬೇಕು ಎಂದು ನಿರೀಕ್ಷಿಸುತ್ತದೆ, ಇದು ಅವರ ಮನಸ್ಸಿನಲ್ಲಿ ದುರ್ಬಲರೆಂದು ಪರಿಗಣಿಸಲ್ಪಡುವ ಭಯವನ್ನು ಸೃಷ್ಟಿಸುತ್ತದೆ ಮತ್ತು ಅವರು ಬಯಸಿದರೂ ತಮ್ಮ ಮನಸ್ಸನ್ನು ಹಗುರಗೊಳಿಸಲು ಸಾಧ್ಯವಾಗುವುದಿಲ್ಲ. 

ಲಾಂಗ್ ಟರ್ಮ್ ಕಮೀಟ್ ಮೆಂಟ್ (Long Term Commitement) : ಪುರುಷರು ಕೆಲವೊಮ್ಮೆ ದೀರ್ಘಕಾಲೀನ ಕಮೀಟ್ ಮೆಂಟ್ ಗಳನ್ನು ತಪ್ಪಿಸುತ್ತಾರೆ.ಅವರಿಗೆ ಅದನ್ನು ಮಾಡೋದಕ್ಕೆ ಇಷ್ಟ ಇಲ್ಲ ಅಂತ ಏನು ಇಲ್ಲ. ಆದರೆ ಸರಿಯಾಗಿ ಯೋಚಿಸದೇ ಅವಸರದಲ್ಲಿ ಏನೂ ನಿರ್ಧಾರ ತೆಗೆದುಕೊಳ್ಳಲು ಅವರು ಇಷ್ಟಪಡೋದಿಲ್ಲ. 
 

ನೆಗ್ಲೆಕ್ಟ್ ಮಾಡ್ತಿದ್ದಾರೆ ಎಂದೆನಿಸುತ್ತೆ (Feeling Neglected): ಮಹಿಳೆಯರಿಗೆ ತೋರುವಂತೆ ಪುರುಷರು ಸಹ ಸಂಬಂಧದಲ್ಲಿ ನನ್ನನ್ನು ನೆಗ್ಲೆಕ್ಟ್ ಮಾಡಲಾಗುತ್ತದೆ ಎಂದು ಭಾವಿಸಬಹುದು. ಹೌದು, ಆದರೆ ಅವರು ಈ ಬಗ್ಗೆ ದೂರು ನೀಡುವುದಿಲ್ಲ, ಅವರು ಸುಮ್ಮನಿದ್ದು ಬಿಡುತ್ತಾರೆ. ಹಾಗಾಗಿ ಅವರಿಗೂ ಪ್ರಶಂಶೆಯ ಅಗತ್ಯ ಇದೆ. 
 

ಪರ್ಸನಲ್ ಸ್ಪೇಸ್ (Personal Space): ಪ್ರತಿಯೊಬ್ಬರಿಗೂ ತಮ್ಮದೇ ಆದ ಪರ್ಸನಲ್ ಸ್ಪೇಸ್ ಬೇಕು.  ಇದಕ್ಕಾಗಿ ಪುರುಷರು ಮಹಿಳೆಯರಂತೆ ಜೋರಾಗಿ ಏನನ್ನೂ ಹೇಳೋದಿಲ್ಲ. ಹಾಗಾಗಿ ಅವರ ಬಳಿ ನೀವಾಗಿಯೇ ಅದನ್ನು ಕೇಳಿ ಸ್ವಲ್ಪ ಸಮಯ ಅವರನ್ನು ಅವರಷ್ಟಕ್ಕೆ ಬಿಡೋದು ಉತ್ತಮ. 

ಒತ್ತಡ ಬಗ್ಗೆ (Stress): ಪುರುಷರಿಗೆ ಮನೆಯಲ್ಲಿ ಮತ್ತು ಹೊರಗೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ ಮತ್ತು ಹೆಚ್ಚಾಗಿ ಅವರು ಮಾತನಾಡದೆ ಅವುಗಳನ್ನು ನಿರ್ವಹಿಸುತ್ತಾರೆ. ಅವರ ಕೆಲಸದ ಹೊರೆಯಿಂದ ಅವರು ಒತ್ತಡದಲ್ಲಿರುತ್ತಾರೆ. ಹಾಗಾಗಿ ಅವರಿಗೆ ಬೆಂಬಲ ನೀಡೋದು ತುಂಬಾನೆ ಮುಖ್ಯ. 

ಹೊಗಳೋದನ್ನು ಪುರುಷರು ಸಹ ಇಷ್ಟಪಡ್ತಾರೆ: ಪುರುಷರು ಮಹಿಳೆಯರಂತೆಯೇ ಹೊಗಳಿಕೆಯನ್ನು ಇಷ್ಟಪಡುತ್ತಾರೆ. ಅವರ ಯಶಸ್ಸು, ಲುಕ್ ಮತ್ತು ಅವರು ನಿಮಗಾಗಿ ಮಾಡುವ ಎಲ್ಲದಕ್ಕೂ ಅವರನ್ನು ಪ್ರಶಂಸಿಸಿ. ಇದರಿಂದ ಅವರಿಗೂ ತುಂಬಾನೆ ಖುಷಿಯಾಗುತ್ತೆ. 

Latest Videos

click me!