ಮಹಿಳೆಯರು Orgasm ಸಮಸ್ಯೆಯಿಂದ ಬಳಲೇನು ಕಾರಣ?

Published : Oct 19, 2023, 05:50 PM IST

ಮಹಿಳೆಯರಿಗೆ ಅನೇಕ ಲೈಂಗಿಕ ಸಮಸ್ಯೆಗಳು ಕಾಡುತ್ತವೆ, ಅದರ ಬಗ್ಗೆ ಅವರು ಹೆಚ್ಚಿನ ಜನರೊಂದಿಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಅವರು ತಮ್ಮದೇ ಆದ ಸಮಸ್ಯೆಗಳ ಬಗ್ಗೆ ತಿಳಿದಿರುವುದು ಮುಖ್ಯ. ಅದಕ್ಕಾಗಿ ನಿವು ಈ ಲೇಖನವನ್ನು ಓದಲೇಬೇಕು…   

PREV
19
ಮಹಿಳೆಯರು Orgasm ಸಮಸ್ಯೆಯಿಂದ ಬಳಲೇನು ಕಾರಣ?

ಲೈಂಗಿಕ ಸಂಬಂಧ (sexual relationship) ಅನ್ನೋದು ಪ್ರತಿಯೊಬ್ಬ ಜೀವಿಗೂ ಅಗತ್ಯವಿರುವಂತಹ ಜೀವನದ ಒಂದು ಪ್ರಮುಖ ಭಾಗ. ಪ್ರತಿಯೊಬ್ಬರೂ ಸಂತಾನೋತ್ಪತ್ತಿ ಮತ್ತು ಸಂತೋಷಕ್ಕಾಗಿ ಲೈಂಗಿಕ ಸಂಬಂಧ ಹೊಂದುತ್ತಾರೆ, ಆದರೆ ಅದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಇನ್ನೂ ಹಿಂಜರಿಯುತ್ತಾರೆ. ನಮ್ಮ ದೇಶದಲ್ಲಿ, ಇದನ್ನು ಬಹಿರಂಗವಾಗಿ ಮಾತನಾಡುವುದು ಬಿಡಿ, ಅದರ ಬಗ್ಗೆ ಯೋಚಿಸೋದನ್ನು ಸಹ ತಪ್ಪಾಗಿ ಅರ್ಥೈಸಲಾಗಿದೆ. ಮಹಿಳೆಯರಂತೂ ತಮ್ಮ ಲೈಂಗಿಕ ಸಮಸ್ಯೆಗಳ ಬಗ್ಗೆ ಮಾತನಾಡೋದು ಇಲ್ಲ. 
 

29

ಸುಮಾರು 43% ಭಾರತೀಯ ಮಹಿಳೆಯರು ಒಂದಲ್ಲ ಒಂದು ರೀತಿಯ ಲೈಂಗಿಕ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಲೈಂಗಿಕ ಆರೋಗ್ಯದ (sexual health) ಬಗ್ಗೆ ಮಾತನಾಡುವುದು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸುವುದು ಬಹಳ ಮುಖ್ಯ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಲೈಂಗಿಕ ಜೀವನದ ಬಗ್ಗೆ ಚಿಂತಿತರಾಗಿದ್ದಾರೆ, ಹಾಗಾಗಿ ಅದರ ಬಗ್ಗೆ ಮಾಹಿತಿ ಪಡೆಯುವುದು ಬಹಳ ಮುಖ್ಯ. 
 

39

ಸಾಮಾನ್ಯ ಲೈಂಗಿಕ ಸಮಸ್ಯೆ
ಕಡಿಮೆ ಮಾಹಿತಿಯಿಂದಾಗಿ ಅನೇಕ ಲೈಂಗಿಕ ಕಾಯಿಲೆಗಳು (sex problem) ಉಂಟಾಗಬಹುದಾದರೂ, ಮಹಿಳೆಯರು ಹೆಚ್ಚಾಗಿ ಅನುಭವಿಸುವ ಸಾಮಾನ್ಯ ಲೈಂಗಿಕ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಸಹ ಮುಖ್ಯ. ಇಲ್ಲಿದೆ ನೋಡಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಸಮಸ್ಯೆಗಳು. 
 

49

ಕಾಮಾಸಕ್ತಿಯಲ್ಲಿ ಇಳಿಕೆ (less libido)
ಕಡಿಮೆ ಕಾಮಾಸಕ್ತಿಯ ಕೊರತೆಯು ಜನರಿಗೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಅನೇಕ ಬಾರಿ ಮಹಿಳೆಯರು ಲೈಂಗಿಕ ಸಂಬಂಧವನ್ನು ಹೊಂದಲು ಬಯಸುವುದಿಲ್ಲ. ಇದು ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವು ರೀತಿಯ ಔಷಧಿಗೆ ಪ್ರತಿಕ್ರಿಯೆಯಿಂದಾಗಿ ಹೀಗಾಗುತ್ತದೆ ಅಥವಾ ಇತರ ಕೆಲವು ಕಾಯಿಲೆಗಳು ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅತಿಯಾದ ಒತ್ತಡದಿಂದಾಗಿಯೂ ಇದು ಸಂಭವಿಸಬಹುದು. 

59

ಲೈಂಗಿಕ ಉತ್ತೇಜನ
ಇಲ್ಲಿ ಅರೌಜಲ್ (arousal)ಬಗ್ಗೆ ಮಾತನಾಡಲಾಗುತ್ತದೆ. ಇದು ಕಾಮಾಸಕ್ತಿಗೆ ಬಹಳ ಹತ್ತಿರದಲ್ಲಿದೆ, ಆದರೆ ಅರೌಜಲ್ ನ ನಿಜವಾದ ಅರ್ಥವೆಂದರೆ ಜನನಾಂಗದ ಪ್ರದೇಶದಲ್ಲಿ ರಕ್ತದ ಹರಿವು.  ಕೆಲವು ಕಾರಣಗಳಿಂದಾಗಿ ಜನನಾಂಗದ ಪ್ರದೇಶದಲ್ಲಿ ರಕ್ತದ ಹರಿವು ಬರದಿದ್ದರೆ, ಅದು ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ದೈಹಿಕ ಚಟುವಟಿಕೆಯೂ ಕಡಿಮೆಯಾಗುವ ಸಾಧ್ಯತೆಯಿದೆ. ಇದು ಒತ್ತಡ ಮತ್ತು ಮಾನಸಿಕ ಅಸ್ವಸ್ಥತೆಯಿಂದಲೂ ಉಂಟಾಗಬಹುದು. ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡಿದ್ದರೂ ಕೂಡ, ಈ ಸಮಸ್ಯೆ ಕಾಡುತ್ತೆ.

69

ಪರಾಕಾಷ್ಠೆಯ ಕೊರತೆ 
ಇದನ್ನು ವೈದ್ಯಕೀಯ ಭಾಷೆಯಲ್ಲಿ ಪರಾಕಾಷ್ಠೆಯ (orgasm) ಅಪಸಾಮಾನ್ಯ ಕ್ರಿಯೆ ಎಂದು ಕರೆಯಲಾಗುತ್ತದೆ, ಇದನ್ನು ಅನೋರೆಗಾಸ್ಮಿಯಾ ಎಂದೂ ಸಹ ಕರೆಯಲಾಗುತ್ತದೆ. ಇದು ಮಹಿಳೆಯರಿಗೆ ಸರಿಯಾಗಿ ಪರಾಕಾಷ್ಠೆ ಹೊಂದಲು ಸಾಧ್ಯವಾಗದ ಸ್ಥಿತಿಯಾಗಿದೆ. ಈ ಸಮಯದಲ್ಲಿ, ಅವರು ಅದನ್ನು ಯಾವುದೇ ರೀತಿಯಲ್ಲಿ ಪಡೆಯುವುದಿಲ್ಲಕೆಲವು ಮಹಿಳೆಯರು ಪರಾಕಾಷ್ಠೆ ಹೊಂದದೇ ಇರೋದಕ್ಕೆ ಹಲವು ಕಾರಣಗಳಿವೆ. ಇದಕ್ಕೆ ಅನೇಕ ಮಾನಸಿಕ, ದೈಹಿಕ, ಭಾವನಾತ್ಮಕ ಕಾರಣಗಳಿರಬಹುದು. ಅಲ್ಲದೇ, ಮಹಿಳೆ ತನ್ನ ಲೈಂಗಿಕ ಸಂಗಾತಿಯೊಂದಿಗೆ ಹೆಚ್ಚು ಆರಾಮದಾಯಕವಾಗಿಲ್ಲದಿದ್ದಾಗ ಸಹ ಇದು ಸಂಭವಿಸುತ್ತದೆ.  

79

Vaginismus ಸಮಸ್ಯೆ 
ಇದು ಮಹಿಳೆಯ ಯೋನಿ ತೆರೆಯುವಿಕೆ ಕುಗ್ಗಲು ಪ್ರಾರಂಭಿಸುವ ಅಥವಾ ಕೆಲವು ಕಾರಣಗಳಿಂದಾಗಿ ಬಿಗಿಯಾಗುವ ಸ್ಥಿತಿಯಾಗಿದೆ. ಇದು ಲೈಂಗಿಕ ಸಂಭೋಗದ ಸಮಯದಲ್ಲಿ ಸಂಭವಿಸುತ್ತದೆ ಮತ್ತು ಸಂಭೋಗದ ಸಮಯದಲ್ಲಿ ಮಹಿಳೆಯರಿಗೆ ಸಾಕಷ್ಟು ನೋವನ್ನುಂಟು ಮಾಡುತ್ತದೆ. ಈ ಸಮಸ್ಯೆಯಲ್ಲಿ ಕೆಲವೊಮ್ಮೆ ಯೋನಿಯೊಳಗೆ ನುಸುಳಲು ಸಾಧ್ಯವಾಗದಂತಹ ಸ್ಥಿತಿ ಉಂಟಾಗುತ್ತದೆ. ಈ ಸಮಸ್ಯೆ ಇದ್ದರೆ, ವೈದ್ಯರಲ್ಲಿ ಭೇಟಿ ನೀಡಿ ಪರೀಕ್ಷಿಸುವುದು ಉತ್ತಮ. 

89

ಡಿಸ್ಪರೇನಿಯಾದ ಸಮಸ್ಯೆ  
ಡಿಸ್ಪರೇನಿಯಾ ಎಂದರೆ ಮಹಿಳೆಯರ ಸಂಭೋಗವು ತುಂಬಾ ನೋವಿನಿಂದ ಕೂಡಿರುತ್ತದೆ. ಮಹಿಳೆಯರಿಗೆ ಮೂತ್ರನಾಳದಲ್ಲಿ ಒಂದು ರೀತಿಯ ಸೋಂಕು ಬಂದಾಗ ಇದು ಸಂಭವಿಸುತ್ತದೆ. ಇದರೊಂದಿಗೆ, ಯೋನಿಸ್ಮಸ್ ಮತ್ತು ಎಂಡೊಮೆಟ್ರಿಯೋಸಿಸ್ ಅಪಾಯವೂ ಇದೆ. ಯೋನಿ ಶುಷ್ಕತೆ, ಆತಂಕ ಅಥವಾ ಗರ್ಭಕಂಠಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯೂ ಇದಕ್ಕೆ ಕಾರಣವಾಗಬಹುದು.  
 

99

ನೀವು ಈ ಯಾವುದೇ ಸಮಸ್ಯೆಗಳನ್ನು ಹೊಂದಿದ್ದರೆ, ಏನು ಮಾಡಬೇಕು? 
ಈ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ.
ನಿಮ್ಮ ಆರೋಗ್ಯ ಇತಿಹಾಸದ ಆಧಾರದ ಮೇಲೆ ವೈದ್ಯರು ನಿಮಗೆ ಸರಿಯಾದ ಚಿಕಿತ್ಸೆಯನ್ನು ಹೇಳಬಹುದು, ಆದ್ದರಿಂದ ವೈದ್ಯಕೀಯ ಸಲಹೆಯಿಲ್ಲದೆ ಯಾವುದೇ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಡಿ
ನಿಮ್ಮ ರೋಗಲಕ್ಷಣಗಳ ಬಗ್ಗೆ ವೈದ್ಯರೊಂದಿಗೆ ಮುಕ್ತವಾಗಿ ಮಾಹಿತಿ ಪಡೆಯಿರಿ.

Read more Photos on
click me!

Recommended Stories