ಮೊದಲ ನೋಟದಲ್ಲೇ ಲವ್ ಆಗಿದ್ಯಾ ಅಂತ ಕಂಡು ಕೊಳ್ಳುವುದು ಹೇಗೆ?

First Published | Oct 19, 2023, 4:38 PM IST

ಮೊದಲ ನೋಟದಲ್ಲೆಲ್ಲಾ ಲವ್ ಆಗೋದು ನಿಜಾನ? ಅದೆಲ್ಲಾ ಸಿನಿಮಾದಲ್ಲಿ ನಡೆಯುವ ಕಟ್ಟುಕತೆ ಅಷ್ಟೇ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಇದು ನಿಜ ಜೀವನದಲ್ಲೂ ನಡೆಯುತ್ತೆ. ನಿಮಗೂ ಲವ್ ಅಟ್ ಫಸ್ಟ್ ಸೈಟ್ ಆದ್ರೆ ಕೆಲವೊಂದು ಬದಲಾವಣೆಗಳು ಕಾಣಿಸುತ್ತೆ. 
 

ನಾವು ಸಿನಿಮಾ ನೋಡಿದಾಗಲೆಲ್ಲಾ, ಹೆಚ್ಚಿನ ಸಿನಿಮಾಗಳಲ್ಲಿ ನಾಯಕಿಯನ್ನು ಮೊದಲ ಬಾರಿ ನೋಡಿದ ನಂತರ ನಾಯಕನು ಪ್ರೀತಿಯಲ್ಲಿ ಬೀಳೋದನ್ನು ಕಾಣಬಹುದು. ಜೊತೆಗೆ ಆಕೆಯನ್ನು ನೋಡಿದ ಕ್ಷಣದಲ್ಲೇ ಅವನು ಅವಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ, ನಂತರ ಚಿತ್ರದ ಕಥೆ ಮುಂದುವರಿಯುತ್ತದೆ, ಆದರೆ ಮೊದಲ ನೋಟದಲ್ಲೇ ಪ್ರೀತಿ (love at first sight) ನಿಜ ಜೀವನದಲ್ಲಿಯೂ ಸಂಭವಿಸುತ್ತದೆಯೇ?
 

ಮೊದಲ ನೋಟದಲ್ಲೇ ಲವ್ ಆಗುತ್ತಾ? ನಿಮಗೂ ಈ ಪ್ರಶ್ನೆ ಕಾಡಿರಬಹುದು ಅಲ್ವಾ? ಇತರ ವ್ಯಕ್ತಿಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲದಿದ್ದಾಗ, ಅವನ ಒಂದು ಸಣ್ಣ ನೋಟವೂ ನಿಮ್ಮನ್ನು ಹುಚ್ಚರನ್ನಾಗಿ ಮಾಡಿದರೆ, ಅವರನ್ನೇ ನೆನೆಯುವಂತೆ ಮಾಡಿದ್ರೆ ನಿಮಗೆ ಲವ್ ಆಗಿದೆ ಎಂದರ್ಥ. 
 

Tap to resize

ಪ್ರೀತಿಯು ಮೊದಲ ನೋಟದಲ್ಲೇ ಆಗೋದಕ್ಕೆ ಚಾನ್ಸೇ ಇಲ್ಲ ಎಂದು ಕೆಲವರು ಹೇಳುತ್ತಾರೆ,  ಆದರೆ ಲವ್ ಅಟ್ ಫಸ್ಟ್ ಸೈಟ್ ಆಗೋದು ನಿಜ. ಯಾಕಂದ್ರೆ ನಮಗೆ ಲವ್ ಆಗಿದೆಯೇ ಇಲ್ವೇ ಅನ್ನೋದರ ಬಗ್ಗೆ ನಮಗೆ ತಿಳಿದಿಲ್ಲದಿದ್ದಾಗ, ನಾವು ಪ್ರೀತಿಯಲ್ಲಿ (falling in love) ಬಿದ್ದಿದ್ದೇವೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದಾದ್ರೂ ಹೇಗೆ? ಆದರೆ, ಮೊದಲ ನೋಟದಲ್ಲಿ ಪ್ರೀತಿ ಇದೆ ಎಂಬುದು ನಿಜ, ಹೀಗೆ ಆದಾಗ ನಮ್ಮಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ನೋಡೋಣ. 
 

ಹೃದಯ ಬಡಿತ ಹೆಚ್ಚುತ್ತೆ
ನೀವು ಮೊದಲ ನೋಟದಲ್ಲೇ ಪ್ರೀಯಲ್ಲಿ ಬಿದ್ದಿದ್ರೆ, ನಿಮ್ಮ, ಹೃದಯ ಬಡಿತ (heart beat increses)  ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ಒಂಥರಾ ತಳಮಳ ಇರುತ್ತದೆ. ಇದು ನಿಮ್ಮ ಆಕರ್ಷಣೆಯೂ ಆಗಿರಬಹುದು. ಲವ್ ಕೂಡ ಆಗಿರಬಹುದು.

ಸದಾ ಅವರದೇ ಗುಂಗು
ನಿಮಗೆ ಲವ್ ಅಟ್ ಫಸ್ಟ್ ಸೈಟ್ ಆಗಿದ್ರೆ, ಆ ವ್ಯಕ್ತಿಯು ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಇರ್ತಾರೆ. ಪ್ರತಿಯೊಂದು ಆಲೋಚನೆಯಲ್ಲೂ ನೀವು ಅವರನ್ನೇ ಕಾಣುವಿರಿ. ದಿನವಿಡೀ ಅವರ ಬಗ್ಗೆಯೇ ಯೋಚನೆ ಮಾಡುವಿರಿ. 
 

ನೆನಪಾದಾಗಲೆಲ್ಲಾ ಸಣ್ಣ ಕಿರುನಗೆ
ನೀವು ಅವರ ಬಗ್ಗೆ ಯೋಚಿಸಿದಾಗಲೆಲ್ಲಾ, ಸಣ್ಣ ಕಿರುನಗೆ ತುಟಿಯಂಚಲ್ಲಿ ಮೂಡುತ್ತೆ. ಇವು ನೀವು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂಬುದರ ಸಂಕೇತಗಳಾಗಿವೆ. ನೀವು ಅವರ ಬಗ್ಗೆ ಮಾತ್ರ ಯೋಚಿಸಲು ಇಷ್ಟಪಡುತ್ತೀರಿ. ಅವರ ನೆನಪಲ್ಲೇ ನೀವು ಕಲ್ಪನಾ ಲೋಕದಲ್ಲಿ ವಿಹರಿಸಲು ಆರಂಭಿಸುವಿರಿ. 

ಅವರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ 
ಆ ವ್ಯಕ್ತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಲು ಉತ್ಸುಕರಾಗುತ್ತೀರಿ. ನೀವು ಅವರನ್ನು ಆದಷ್ಟು ಬೇಗ ಭೇಟಿಯಾಗಲು ಬಯಸುತ್ತೀರಿ ಮತ್ತು ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತೀರಿ. ಅವರು ಯಾರು, ಎಲ್ಲಿ ವಾಸಿಸುತ್ತಾರೆ,  ಏನು ಮಾಡುತ್ತಾರೆ, ಎಲ್ಲವನ್ನೂ ತಿಳಿಯಲು ಪ್ರಯತ್ನಿಸುವಿರಿ..

Latest Videos

click me!