ಪುರುಷರ ಈ ಗುಣಗಳು ಮಹಿಳೆಯರ ಮೂಡ್ ಆನ್ ಮಾಡತ್ತೆ, ಯಾವುದು ಆ ಗುಣಗಳು?

First Published | Jun 29, 2022, 10:21 AM IST

ಎಲ್ಲಾ ಕಪಲ್ಸ್ ಪರಸ್ಪರರನ್ನು ಮೆಚ್ಚಿಸೋ ಬಗ್ಗೆ ಯೋಚ್ನೆ ಮಾಡ್ತಿರ್ತಾರೆ. ಹೇಗಪ್ಪಾ ಅವರನ್ನು ಇಂಪ್ರೆಸ್ ಮಾಡೋದು, ನಾನು ಏನು ಮಾಡಿದ್ರೆ ಅವರು ಇಷ್ಟ ಪಡ್ತಾರೆ ಅನ್ನೋದ್ರ ಬಗ್ಗೆ ಎಲ್ಲಾ ಯೋಚ್ನೆ ಮಾಡ್ತಾರೆ. ಕೇವಲ ಇಂಟಿಮೇಟ್ (intimacy) ಆಗೋ ಮೂಲಕ ಮಾತ್ರ ಅವರನ್ನು ನಿಮ್ಮತ್ತ ಸೆಳೆಯಬಹುದು ಅನ್ನೋದು ಸುಳ್ಳು. ಹಾಗಿದ್ರೆ ಬೇರೆ ಯಾವೆಲ್ಲಾ ರೀತಿಯಲ್ಲಿ ಅವರನ್ನು ಸೆಳೆಯಬಹುದು ನೋಡೋಣ. 

ರಿಲೇಶನ್ ಶಿಪ್ ಗೆ ಬರುವ ಮೊದಲು, ಕೆಲವು ವಿಷಯಗಳು ಮತ್ತು ನಡವಳಿಕೆಯಿಂದಾಗಿ ನೀವು ನಿಮ್ಮ ಸಂಗಾತಿಯನ್ನು ಇಷ್ಟಪಡಲು ಪ್ರಾರಂಭಿಸುತ್ತೀರಿ. ಮಹಿಳೆಯರು ಮಾತ್ರವಲ್ಲ, ಪುರುಷರು ಸಹ ತಮ್ಮ ಸಂಗಾತಿಯನ್ನು ತಮ್ಮತ್ತ ಸೆಳೆಯಲು ಬಯಸುತ್ತಾರೆ. ನಿಮ್ಮ ಸಂಗಾತಿಯನ್ನು ಸೆಳೆಯಲು ಬಯಸಿದ್ರೆ ಇಂಟಿಮೇಟ್ ಆಗಬೇಕೆಂದೇನೂ ಇಲ್ಲ. ಬದಲಾಗಿ ಈ ಕೆಲ್ಸ ಮಾಡಿದ್ರೆ, ಹುಡುಗಿಯರ ಮೂಡ್ ಆನ್ (mood on)ಆಗೋದು ಖಂಡಿತಾ. 

ತಮ್ಮಲ್ಲಿಯೇ ವಿಶ್ವಾಸವಿಡುವವರು:
ಮಹಿಳೆಯರು ತಮ್ಮನ್ನು ತಾವು ನಂಬುವ ಪುರುಷರನ್ನು ಇಷ್ಟಪಡುತ್ತಾರೆ. ತಮ್ಮ ಮೇಲೆ ಆತ್ಮವಿಶ್ವಾಸ (confidence) ಹೊಂದಿರುವ ಪುರುಷರ ಆತ್ಮವಿಶ್ವಾಸವು ಅವರ ಮಾತು ಮತ್ತು ಕೆಲಸದಲ್ಲಿ ಪ್ರತಿಬಿಂಬಿತವಾಗುತ್ತೆ. ಇಂತಹ ಪುರುಷರು ಮಹಿಳೆಯರಿಗೆ ಇಷ್ಟವಾಗ್ತಾರೆ. 

Tap to resize

ತಮ್ಮ ಜೀವನದ ಬಗ್ಗೆ ಹೆಚ್ಚಿನ ನಂಬಿಕೆ ಹೊಂದಿರುವ ಪುರುಷರು, ಜೀವನದಲ್ಲಿ ತುಂಬಾ ಮುಂದೆ ಸಾಗುತ್ತಾರೆ (succeed in life). ಇಂತಹ ಪುರುಷರು ಏನು ಮಾಡದೇ ಇದ್ದರೂ ಸಹ ಮಹಿಳೆಯರಿಗೆ ಇಷ್ಟವಾಗುತ್ತಾರೆ. ಇದು ನಿಜಾ. 

ಗೌರವಿಸುವ ವ್ಯಕ್ತಿ:
ಎದುರಿಗಿರುವ ವ್ಯಕ್ತಿಗೆ ಹೇಗೆ ಗೌರವ (respect everyone) ನೀಡಬೇಕೆಂದು ತಿಳಿದಿರುವ ಪುರುಷರನ್ನು ಮಹಿಳೆಯರು ಯಾವಾಗಲೂ ಇಷ್ಟಪಡುತ್ತಾರೆ. ಪುರುಷರ ಈ ಗುಣವು ಸ್ತ್ರೀಯರನ್ನು ಅವರತ್ತ ಆಕರ್ಷಿತರಾಗುವಂತೆ ಮಾಡುತ್ತೆ. 

ಸುಗಂಧ ದ್ರವ್ಯ ಅಥವಾ ಡಿಯೋಡರೆಂಟ್‌:
ಟಿವಿ ಜಾಹಿರಾತುಗಳಲ್ಲಿ ನೀವು ನೋಡಿದಂತೆ ಡೀಯೋಡ್ರಂಟ್ (deodrant) ಹಾಕಿದ ಹುಡುಗರ ಹಿಂದೆ ಹುಡುಗಿಯರು ಓಡಿ ಹೋಗಲ್ಲ ನಿಜ.  ಆದರೆ ಅವರತ್ತ ಆಕರ್ಷಿತರಾಗೋದು ಖಂಡಿತಾ. ಒಳ್ಳೆಯ ಪರ್ಫ್ಯೂಮ್ ಆ ವ್ಯಕ್ತಿಯ ಕಡೆಗೆ ಒಲವನ್ನು ಹೆಚ್ಚಿಸುತ್ತದೆ. ಇದರಿಂದಾ ಮೂಡ್ ಕೂಡ ಬದಲಾಗುತ್ತೆ.
 

flirting

ಫ್ಯಾಷನ್ ಸೆನ್ಸ್:
ಫ್ಯಾಷನ್ ಮತ್ತು ಟ್ರೆಂಡ್ ಬಗ್ಗೆ ಉತ್ತಮ ಸೆನ್ಸ್  (fashion sense) ಹೊಂದಿರುವ ಹುಡುಗರು ತಮ್ಮ ಕೆಲಸದ ಸ್ಥಳದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಉತ್ತಮ ಇಮೇಜ್ ಕಾಪಾಡಿಕೊಳ್ಳುತ್ತಾರೆ. ಯಾವ ರೀತಿಯ ಸಮಾರಂಭದಲ್ಲಿ ಯಾವ ರೀತಿಯ ಡ್ರೆಸ್ಸಿಂಗ್ ಮಾಡಬೇಕು ಎಂದು ತಿಳಿದಿರುವ ಹುಡುಗರು ತುಂಬಾನೆ ಇಷ್ಟ ಆಗ್ತಾರೆ.

ಕುಕ್ಕಿಂಗ್ ಸ್ಕಿಲ್:
ಇಂದಿನ ಕಾಲದಲ್ಲಿ, ಕುಕ್ಕಿಂಗ್ ಸ್ಕಿಲ್ (cooking skill) ಕೇವಲ ಮಹಿಳೆಯರಿಗೆ ಮಾತ್ರವಲ್ಲ. ಈಗ ಅನೇಕ ಪುರುಷರು ಸಹ ಕುಕ್ಕಿಂಗ್ ಸ್ಕಿಲ್ ಕಲಿಯುತ್ತಿದ್ದಾರೆ. ಚೆನ್ನಾಗಿ ಕುಕ್ಕಿಂಗ್ ಮಾಡೋ ಹುಡುಗರತ್ತ ಮಹಿಳೆಯರು ಬೇಗನೆ ಇಂಪ್ರೆಸ್ ಆಗ್ತಾರೆ. 

ಮಹಿಳೆಯರು ಸಾಮಾನ್ಯವಾಗಿ ಚೆನ್ನಾಗಿ ಅಡುಗೆ ಮಾಡ್ತಾರೆ. ಅದನ್ನೇ  ಪುರುಷರು ಮಾಡಿದ್ರೆ ಹುಡುಗಿಯರು ಬೇಗನೆ ಇಂಪ್ರೆಸ್‌ ಆಗ್ತಾರೆ. ಹುಡುಗರು ಉತ್ತಮ ಕುಕ್ಕಿಂಗ್ ಸ್ಕಿಲ್ ಹೊಂದಿದ್ರೆ, ಅವರು ತುಂಬಾನೆ ಅಟ್ರಾಕ್ಟಿವ್ ಆಗಿ ಕಾಣುತ್ತಾರೆ. ಈ ಗುಣವು ಹುಡುಗೀರ ಮೂಡ್ ಆನ್ ಮಾಡುತ್ತೆ.

Latest Videos

click me!