ಪ್ರೀತಿಯಲ್ಲಿ ವಯಸ್ಸಿನ ಮಿತಿಯಿಲ್ಲ ಎಂದು ಹೇಳಲಾಗುತ್ತದೆ. ಈಗ ಅದು ಸಮಾಜದಲ್ಲಿ ಸ್ವಲ್ಪ ಮಟ್ಟಿಗೆ ಸಾಮಾನ್ಯ. ಆದರೆ, ಡೇಟಿಂಗ್ ವಿಷಯಕ್ಕೆ ಬಂದಾಗ, ಬೇರೆ ಬೇರೆ ವಿಷ್ಯಗಳನ್ನು ನಾವು ತಿಳಿದುಕೊಳ್ಳಬಹುದು. ಅದರಲ್ಲೂ ನಾವು ಪುರುಷರ ಬಗ್ಗೆ ಮಾತನಾಡಿದರೆ, ಅವರು ಹೆಚ್ಚಾಗಿ ಸಣ್ಣ ವಯಸ್ಸಿನ ಹುಡುಗೀರ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ.
ವಯಸ್ಸಾದಂತೆ, ಪುರುಷರು ತಮಗಿಂತ ಚಿಕ್ಕ ವಯಸ್ಸಿನ ಮಹಿಳೆಯರೊಂದಿಗೆ ಡೇಟಿಂಗ್ ಮಾಡಲು ಇಷ್ಟಪಡ್ತಾರೆ. ಯಾಕಂದ್ರೆ ಇದು ಅವರ ಹಳೆಯ ದಿನಗಳನ್ನು ನೆನಪಿಸುತ್ತದೆ. ವಯಸ್ಸಾದ ನಂತರ, ಪುರುಷರು ಯುವತಿಯರೊಂದಿಗೆ ಡೇಟಿಂಗ್ (dating) ಮಾಡಲು ಹೆಚ್ಚು ಆಸಕ್ತಿ ವಹಿಸುತ್ತಾರೆ. ತಮ್ಮ ಲೈಫಲ್ಲಿ ಇರೋ ಸಮಸ್ಯೆಗಳನ್ನು ಮರೆಯೋದು ಸುಲಭವಾಗುತ್ತೆ ಅಂತೆ. ಇದಲ್ಲದೇ ಇನ್ನೂ ಹಲವು ಕಾರಣಗಳಿಗಾಗಿ ಪುರುಷರು ತಮಗಿಂತ ಸಣ್ಣ ವಯಸ್ಸಿನ ಮಹಿಳೆಯರೊಂದಿಗೆ ಡೇಟ್ ಮಾಡಲು ಇಷ್ಟ ಪಡ್ತಾರೆ. ಅವುಗಳ ಬಗ್ಗೆ ನೋಡೋಣ.
ಟೆನ್ಶನ್ ದೂರವಾಗುತ್ತೆ
ವಯಸ್ಸಾದಂತೆ, ಪುರುಷರು ಕಿರಿಯ ಮಹಿಳೆಯರೊಂದಿಗೆ ಇರಲು ಬಯಸ್ತಾರೆ, ಯಾಕಂದ್ರೆ ಅವರು ಜೀವನದ ಬಗ್ಗೆ ಹೊಸ ದೃಷ್ಟಿಕೋನ ಹೊಂದಿರುತ್ತಾರೆ, ಅದರಲ್ಲಿ ಅವರು ಫ್ರೆಶ್ ನೆಸ್ ಅನುಭವಿಸುತ್ತಾರೆ. ಅಂತಹ ಮಹಿಳೆಯರನ್ನು ಹೊಂದಿರುವ ಪುರುಷರು ಯಾವುದೇ ಟೆನ್ಶನ್ ಇಲ್ಲದೇ ಆರಾಮಾಗಿರುತ್ತಾರೆ ಎನ್ನಲಾಗುತ್ತೆ.
ಜಗಳದಿಂದ ಮುಕ್ತಿ ಸಿಗುತ್ತೆ
ಸಣ್ಣ ವಯಸ್ಸಿನ ಹುಡುಗೀರ ಜೊತೆ ಡೇಟ್ ಮಾಡೊದ್ರಿಂದ ಹೆಚ್ಚು ಜಗಳ ಆಗೋದಿಲ್ಲ ಎಂದು ಪುರುಷರು ಭಾವಿಸ್ತಾರೆ. ವಯಸ್ಸಾದಂತೆ, ಜನರು ಹೆಚ್ಚು ವಯಸ್ಸಾದಂತೆ ಕೋಪ, ಜಗಳ ಎಲ್ಲವೂ ಜಾಸ್ತಿಯಾಗುತ್ತೆ, ಹಾಗಾಗಿ ವಯಸ್ಸಾದ ಪುರುಷರು ತಮಗಿಂತ ಚಿಕ್ಕ ವಯಸ್ಸಿನ ಮಹಿಳೆಯರೊಂದಿಗೆ ಡೇಟಿಂಗ್ ಮಾಡ್ತಾರೆ, ಇದರಿಂದ ಸಂತೋಷದಿಂದ ಇರಬಹುದು ಅನ್ನೋದು ಅವರ ಅಭಿಪ್ರಾಯ.
ಹಳೆಯ ದಿನಗಳು ಮರುಕಳಿಸುತ್ತವೆ
ಪ್ರತಿಯೊಬ್ಬರೂ ಯೌವನವನ್ನು ಅನುಭವಿಸಲು ಬಯಸುತ್ತಾರೆ. ನಿಮ್ಮ ವಯಸ್ಸು ಹೆಚ್ಚಾಗುವುದು ಗೊತ್ತಿದ್ದರೂ, ಇನ್ನೂ ಯಂಗ್ ಆಗಿರಬೇಕು ಮತ್ತು ಆ ದಿನಗಳನ್ನು ಎಂಜಾಯ್ ಮಾಡಬೇಕು ಎಂದು ಬಯಸುತ್ತಾರೆ. ಈ ಕಾರಣಕ್ಕಾಗಿಯೇ ಪುರುಷರು ಸಣ್ಣ ವಯಸ್ಸಿನ ಹುಡುಗಿಯರನ್ನು (young women) ಹೆಚ್ಚು ಇಷ್ಟಪಡುತ್ತಾರೆ, ಏಕೆಂದರೆ ಅವರು ಆ ಸಮಯದಲ್ಲಿ ತಮ್ಮ ಲೈಫ್ ನ್ನು ಎಂಜಾಯ್ ಮಾಡ್ತಾರೆ.
ರೊಮ್ಯಾನ್ಸ್ ಹೆಚ್ಚಾಗುತ್ತೆ
ತಮಗಿಂತ ಚಿಕ್ಕ ವಯಸ್ಸಿನ ಹುಡುಗಿಯರು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರೆ ಎಂದು ಪುರುಷರು ಭಾವಿಸುತ್ತಾರೆ. ರೊಮ್ಯಾಂಟಿಕ್ (romantic) ಆಗಿರೋವಾಗ ಇಬ್ಬರ ನಡುವಿನ ಅನ್ಯೋನ್ಯತೆ ಕೂಡ ಹೆಚ್ಚಿರುತ್ತೆ. ಯುವತಿಯರು ಲೈಂಗಿಕ ಜೀವನವನ್ನು ಚೆನ್ನಾಗಿ ಆನಂದಿಸುತ್ತಾರೆ ಎಂದು ಪುರುಷರು ಅಂದುಕೊಳ್ತಾರೆ. ಇದನ್ನು ಪುರುಷರು ಎಂಜಾಯ್ ಮಾಡ್ತಾರೆ.