ಬಂಗಾರ, ಬೆಳ್ಳಿ, ಬಟ್ಟೆ, ದಿನಸಿ.. 52 ಬಡ ಜೋಡಿಗೆ ಸಾಮೂಹಿಕ ವಿವಾಹ ಮಾಡಿಸಿದ ಅಂಬಾನಿ ಕುಟುಂಬ ಕೊಟ್ಟ ಉಡುಗೊರೆಗಳೇನು?

Published : Jul 03, 2024, 12:34 PM IST

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಮೊದಲು, ನೀತಾ ಮತ್ತು ಮುಖೇಶ್ ಅಂಬಾನಿ ಮಂಗಳವಾರ 50ಕ್ಕಿಂತ ಹೆಚ್ಚು ಬಡ ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದರು. 

PREV
111
ಬಂಗಾರ, ಬೆಳ್ಳಿ, ಬಟ್ಟೆ, ದಿನಸಿ.. 52 ಬಡ ಜೋಡಿಗೆ ಸಾಮೂಹಿಕ ವಿವಾಹ ಮಾಡಿಸಿದ ಅಂಬಾನಿ ಕುಟುಂಬ ಕೊಟ್ಟ ಉಡುಗೊರೆಗಳೇನು?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಮೊದಲು, ನೀತಾ ಮತ್ತು ಮುಖೇಶ್ ಅಂಬಾನಿ ಮಂಗಳವಾರ 50ಕ್ಕಿಂತ ಹೆಚ್ಚು ಬಡ ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದರು. 

211

ಥಾಣೆಯ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ಸಾಮೂಹಿಕ ವಿವಾಹ ನಡೆದಿದ್ದು, ದಂಪತಿಗಳ ಕುಟುಂಬವನ್ನು ಪ್ರತಿನಿಧಿಸುವ 800ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.

311

ನೀತಾ ಮತ್ತು ಮುಖೇಶ್ ಅಂಬಾನಿ, ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಜೊತೆಗೆ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ತಮ್ಮ ಉಪಸ್ಥಿತಿಯೊಂದಿಗೆ ಕಾರ್ಯಕ್ರಮವನ್ನು ಅಲಂಕರಿಸಿದರು.

411

ಅಂಬಾನಿ ಕುಟುಂಬವು ಪ್ರತಿ ಮಹತ್ವದ ಕುಟುಂಬದ ಸಂದರ್ಭವನ್ನು ಇತರರನ್ನು ಬೆಂಬಲಿಸುವ ಮತ್ತು ಸೇವೆ ಮಾಡುವ ಮೂಲಕ ಪ್ರಾರಂಭಿಸುವ ಸಂಪ್ರದಾಯವನ್ನು ಎತ್ತಿ ಹಿಡಿಯುತ್ತದೆ.

511

ಈ ಸಂದರ್ಭದಲ್ಲಿ ಎಲ್ಲ ವಧುವೂ ಕೆಂಪು ಸೀರೆ ಧರಿಸಿದ್ದರೆ, ವರ ಬಿಳಿ ಮತ್ತು ಚಿನ್ನದ ಬಣ್ಣದ ಧೋತಿ ಶರ್ಟ್ ಧರಿಸಿದ್ದರು. ಜೋಡಿಯ ವಿವಾಹದ ಬಟ್ಟೆಗಳನ್ನು ಅಂಬಾನಿ ಕುಟುಂಬವೇ ನೀಡಿದೆ. 

611

ಇದಲ್ಲದೆ, ಪ್ರತಿ ಜೋಡಿಗೆ ಹೂವಿನ ಹಾರಗಳು, ಬಂಗಾರದ ಮಂಗಳಸೂತ್ರಗಳು, ಮದುವೆಯ ಉಂಗುರಗಳು ಮತ್ತು ಮೂಗುತಿಗಳು ಸೇರಿದಂತೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಲಾಯಿತು.
 
711

ಜೊತೆಗೆ ಕಾಲ್ಗೆಜ್ಜೆ ಮತ್ತು ಕಾಲುಂಗುರಗಳಂತಹ ಬೆಳ್ಳಿಯ ಆಭರಣಗಳನ್ನು ಎಲ್ಲ ವಧುವಿಗೆ ನೀಡಲಾಯಿತು. ಹೆಚ್ಚುವರಿಯಾಗಿ, ಪ್ರತಿ ವಧುವಿಗೆ ಸ್ವತಃ ನೀತಾ ಅಂಬಾನಿ ಮತ್ತು ಶ್ಲೋಕಾ ಅಂಬಾನಿ 1,00,001 ಲಕ್ಷ ರೂ.ಗಳ ಚೆಕ್ ಅನ್ನು ತನ್ನ ‘ಸ್ತ್ರೀಧನ್’ ಎಂದು ವಿತರಿಸಿದರು. 

811

ದಂಪತಿಗೆ ಒಂದು ವರ್ಷಕ್ಕಾಗುವಷ್ಟು ದಿನಸಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕೂಡಾ ಒದಗಿಸಲಾಯಿತು. ಇದರಲ್ಲಿ 36 ಅಗತ್ಯ ವಸ್ತುಗಳು, ಪಾತ್ರೆಗಳು, ಗ್ಯಾಸ್ ಸ್ಟೌವ್, ಮಿಕ್ಸರ್ ಮತ್ತು ಫ್ಯಾನ್‌ನಂತಹ ಉಪಕರಣಗಳು ಮತ್ತು ಹಾಸಿಗೆ ಮತ್ತು ದಿಂಬುಗಳು ಸೇರಿವೆ.

911

ವರದಿಗಳ ಪ್ರಕಾರ, ಭವ್ಯ ಭೋಜನವನ್ನು ಆಯೋಜಿಸಲಾಗಿತ್ತು ಮತ್ತು ಅತಿಥಿಗಳು ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ವೀಕ್ಷಿಸಿದರು.

1011

ವಿವಾಹದ ಬಳಿಕ ಪ್ರತಿ ಜೋಡಿಗೂ ಆಶೀರ್ವಾದ ಮಾಡಿದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ, ಅವರೊಂದಿಗೆ ಫೋಟೋ ತೆಗೆಸಿಕೊಂಡರು. 

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12 ರಂದು ನಡೆಯಲಿದೆ. 'ಶುಭ್ ಆಶೀರ್ವಾದ' ಜುಲೈ 13ರಂದು ಮತ್ತು 'ಮಂಗಲ್ ಉತ್ಸವ' ಜುಲೈ 14ರಂದು ನಡೆಯಲಿದೆ.

1111

click me!

Recommended Stories