ವರ್ಷಗಳಾದ್ರೂ ಮಕ್ಕಳಾಗ್ಲಿಲ್ಲ, ಸೆಕ್ಸ್‌ ಮಾಡ್ಬೇಕೆಂದು ಈ ದಂಪತಿಗೆ ಗೊತ್ತೇ ಇರ್ಲಿಲ್ಲ!

First Published | Jun 17, 2020, 6:34 PM IST

ಭಾರತದಲ್ಲಿ ಮಾತ್ರ ಸೆಕ್ಸ್ ಎಜುಕೇಷನ್ ಕೊರತೆ ಇದೆ ಅಂತಂದುಕೊಂಡರೆ, ನಿಮ್ಮ ಅನಿಸಿಕೆ ತಪ್ಪು. ವಿಶ್ವದಲ್ಲಿರುವ ಅನೇಕ ಪೋಷಕರಿಗೆ ತಮ್ಮ ಮಕ್ಕಳಿಗೆ ಸೆಕ್ಸ್ ಎಜುಕೇಶ್ ನೀಡುವುದು ಎಷ್ಟು ಮಹತ್ವದ್ದು ಎಂಬುವುದೇ ತಿಳಿದಿಲ್ಲ. ಸೆಕ್ಸ್ ಎಜುಕೇಶನ್ ಕೊರತೆಯಿಂದ ಮಕ್ಕಳು ತಮ್ಮ ಭವಿಷ್ಯದಲ್ಲಿ ಹಲವಾರು ಬಗೆಯ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ನ್ಯೂಯಾರ್ಕ್‌ನ ನರ್ಸ್‌ ಒಬ್ಬಳು ಪುಸ್ತಕವೊಂದನ್ನು ಬರೆದಿದ್ದಾರೆ. ಇದರಲ್ಲಿ ಅವರು ತಮ್ಮ ವೈದ್ಯಕೀಯ ವೃತ್ತಿಯ ನಲ್ವತ್ತು ವರ್ಷಗಳ ಅನುಭವ ಹಂಚಿಕೊಂಡಿದ್ದಾರೆ. ಈ ಪುಸ್ತಕದಲ್ಲಿ ಅವರು ಕೆಲ ಶಾಕಿಂಗ್ ವಿಚಾರಗಳನ್ನು ಕೂಡಾ ಬಹಿರಂಗಪಡಿಸಿದ್ದು, ನಿಜಕ್ಕೂ ಅಚ್ಚರಿಗೀಡು ಮಾಡುತ್ತವೆ. ಇದನ್ನು ಓದಿ, ಕೇಳಿ ನಗು ತರಿಸುವುದರೊಂದಿಗೆ ಸೆಕ್ಸ್ ಎಜುಕೇಶನ್ ಯಾಕೆ ಮುಖ್ಯ ಎಂಬುವುದೂ ತಿಳಿಸುತ್ತದೆ.

59 ವರ್ಷದ ರೇಚಲ್ ಹೈರ್‌ಸನ್ ಕಳೆದ 40 ವರ್ಷಗಳಿಂದ ನ್ಯೂಯಾರ್ಕ್‌ನ ಒಂದು ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ಅವರು ತಮ್ಮದೇ ಒಂದು ಪುಸ್ತಕ ಬರೆದಿದ್ದು, ಇದಕ್ಕೆ ಹ್ಯಾಂಡಲ್ ವಿದ್ ಕೇರ್ ಎಂಬ ಹೆಸರು ಕೊಟ್ಟಿದ್ದಾರೆ.
undefined
ಈ ಪುಸ್ತಕದಲ್ಲಿ ರೇಚಲ್ ತಮ್ಮ ನಲ್ವತ್ತು ವರ್ಷದ ವೈದ್ಯಕೀಯ ಜೀವನದ ಅನುಭವ ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಅವರು ಅಚ್ಚರಿಗೀಡು ಮಾಡುವ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
undefined
Tap to resize

ತಮ್ಮ ಈ ಪುಸ್ತಕದ ಬಗ್ಗೆ ಕುರಿತು ಪ್ರತಿಕ್ರಿಯಿಸಿರುವ ರೇಚಲ್ ಒಂದು ಪ್ರಕರಣ ಜೀವನ ಪರ್ಯಂತ ತನಗೆ ನೆನಪಿರಲಿದೆ ಎಂದಿದ್ದಾರೆ. ಅವರನ್ನು ಒಂದು ದಂಪತಿ ಸಂಪರ್ಕಿಸಿದ್ದು, ಆ ದಂಪತಿ ಮದುವೆಯಾಗಿ ಹಲವಾರು ವರ್ಷಗಳಾಗಿದ್ದವು. ಆದರೆ ಅವರಿಗೆ ಮಕ್ಕಳಾಗಿರಲಿಲ್ಲ.
undefined
ಇನ್ನು ಈ ದಂಪತಿಯ ಎಲ್ಲಾ ರಿಪೋರ್ಟ್‌ಗಳು ನಾರ್ಮಲ್ ಆಗಿದ್ದವು. ಹೀಗಿದ್ದರೂ ಮಕ್ಕಳಾಗಿರಲಿಲ್ಲ.
undefined
ಹೀಗಿರುವಾಗ ರೇಚ್ ದಂಪತಿ ಬಳಿ ಸೆಕ್ಸ್‌ ಲೈಫ್‌ ಬಗ್ಗೆ ಕೇಳಿದಾಗ ಅವರು ಅಚ್ಚರಿಗೀಡಾಗಿದ್ದಾರೆ. ವಾಸ್ತವವಾಗಿ ಆ ದಂಪತಿಗೆ ಮದುವೆಯಾದ ಬಳಿಕ ಮಕ್ಕಳಾಗಲು ಸೆಕ್ಸ್ ಮಾಡಬೇಕೆಂಬ ವಿಚಾರವೇ ತಿಳಿದಿರಲಿಲ್ಲ. ಇದಾದ ಬಳಿಕವೇ ಮಕ್ಕಳಾಗುತ್ತವೆ ಎಂದು ತಿಳಿದಿರಲಿಲ್ಲ.
undefined
ಇನ್ನು ಚಿಕ್ಕಂದಿನಿಂದ ಈ ದಂಪತಿಗೆ ಕತೆಗಳಲ್ಲಿ ಮಕ್ಕಳನ್ನು ತಾಯಿ ಮಡಿಲಲ್ಲಿ ದೇವಲೋಕದ ಕನ್ಯೆಯರು ತಂದಿಡುತ್ತಾರೆನ್ನಲಾಗಿತ್ತು. ಸೆಕ್ಸ್ ಬಗ್ಗೆ ಯಾರೂ ಮಾಹಿತಿ ನೀಡಿರಲಿಲ್ಲ.
undefined
ಹೀಗಿರುವಾಗ ಇಬಬ್ಬರಿಗೂ ಮದುವೆಯಾದಾಗ ಮದುವೆ ಬಳಿಕ ಸೆಕ್ಸ್ ಮಾಡಬೇಕೆಂದು ತಿಳಿದಿರಲೇ ಇಲ್ಲ. ಈ ದಂಪತಿ ಚಿಕಿತ್ಸೆಗೆ ಹಣವನ್ನು ನೀರಿನಂತೆ ಸುರಿದರು ಆದರೂ ಮಕ್ಕಳಾಗಿರಲಿಲ್ಲ.
undefined
ಈ ಘಟನೆ ಬಳಿಕ ಸೆಕ್ಸ್ ಎಜುಕೇಶನ್ ಎಷ್ಟು ಮುಖ್ಯ ಎಂದು ತಿಳಿಯಿತು ಎಂದಿದ್ದಾರೆ ನರ್ಸ್
undefined

Latest Videos

click me!