ಹೇಗಿದ್ರೂ ರಜೆ ಅಲ್ವಾ, ಚೆನ್ನಾಗಿ ಮಲಗಲಿ ಅಂತ ಬಹಳ ಹೊತ್ತು ಮಕ್ಕಳನ್ನು ಮಲಗಲು ಬಿಡುತ್ತಾರೆ.
ಇದರಿಂದ ಜಡವಾಗಿಯೇ ಇಡೀ ದಿನ ಇರುತ್ತಾರೆ. ಬೆಳಗ್ಗೆ ಬೇಗ ಎದ್ದರೆ ಮನಸ್ಸು ಫ್ರೆಶ್ ಇರುತ್ತೆ.
ಸ್ವತಂತ್ರವಾಗಿ ಕೆಲಸ ಮಾಡಲಿ.
ಪಾತ್ರೆ ತೊಳೆಯುವುದು, ಅಡುಗೆ, ಮನೆ ಕ್ಲೀನಿಂಗ್ ಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ. ಹಣದ ಲೆಕ್ಕಾಚಾರವನ್ನು ಕಲಿಸಿಕೊಡಿ.
ಹೊಸ ಆಟಗಳನ್ನು ಕಲಿಸಿ
ಆನ್‌ಲೈನ್‌ನಲ್ಲಿ ಸಾಕಷ್ಟುಆಟಗಳು ಸಿಗುತ್ತವೆ. ನೀವು ಬಾಲ್ಯದಲ್ಲಿ ಆಡಿದ ಆಟಗಳೂ ಇರುತ್ತವೆ. ಮಕ್ಕಳಿಗೆ ದಿನಕ್ಕೊಂದು ಹೊಸ ಆಟ ಕಲಿಸಿ.
ಪಾಟ್ ತಂದು ಅದರಲ್ಲಿ ಪೇಂಟಿಂಗ್ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಬಹುದು.
ಹೊಸ ಹೊಸ ಹಾಡು ಕಲಿಸಬಹುದು. ಡ್ಯಾನ್ಸ್ ಮಾಡಲು ಪ್ರೋತ್ಸಾಹ ನೀಡಬಹುದು. ಡ್ರಾ
ಯಿಂಗ್ ಮಾಡಲು ಎನ್‌ಕರೇಜ್ ಮಾಡಬಹುದು. ಇವೆಲ್ಲ ಮಕ್ಕಳ ಕ್ರಿಯಾಶೀಲತೆ ಹೆಚ್ಚಲು ಸಹಕಾರಿ.
ಮಣ್ಣು ಅಂದ್ರೆ ಮಕ್ಕಳಿಗೆ ಇಷ್ಟ. ಗಿಡ ನೆಡೋದೂ ಇಷ್ಟ. ನರ್ಸರಿಗಳು ಎಲ್ಲೆಡೆ ತೆರೆದಿವೆ. ಮಣ್ಣಲ್ಲಿ ಆಡುತ್ತಲೇ ಗಿಡ ಬೆಳೆಸೋದನ್ನು ಮಕ್ಕಳಿಗೆ ಕಲಿಸಿ.
Suvarna News