36ರ ಮಹಿಳೆ - 19ರ ಯುವಕ, ಪ್ರೀತಿಗಾಗಿ 2 ಬಾರಿ ಮತಾಂತರಗೊಂಡ 5 ಮಕ್ಕಳ ತಾಯಿ !

Published : Jun 11, 2026, 01:05 PM IST

ಬಿಹಾರದಲ್ಲಿ ನಡೆದ ಮದುವೆಯೊಂದು ಎಲ್ಲರು ಹುಬ್ಬೇರಿಸುವಂತೆ ಮಾಡಿದೆ. ಮಿಸ್ಡ್ ಕಾಲ್ ನಿಂದ ಶುರುವಾದ ಸ್ನೇಹ, ಪ್ರೀತಿಗೆ ತಿರುಗಿದೆ. ಮದುವೆಗಾಗಿ ಮತಾಂತರ ಕೂಡ ನಡೆದಿದ್ದು, ಇಬ್ಬರ ಮಧ್ಯೆ 26 ವರ್ಷಗಳ ಅಂತರ ಇರೋದು ಮತ್ತೊಂದು ಶಾಕ್. 

PREV
14
ಐದು ಮಕ್ಕಳ ತಾಯಿಯ ಲವ್ ಕಹಾನಿ

ಬಿಹಾರದ ಜಮುಯಿಯಲ್ಲಿ ನಡೆದ ಈ ಮದುವೆ ಗಮನ ಸೆಳೆದಿದೆ. 36 ವರ್ಷದ ಸೀಮಾ ಪರ್ವಿನ್ ಅಲಿಯಾಸ್ ಬಿಂದು ದೇವಿ 19 ವರ್ಷದ ಯುವಕನ ಕೈ ಹಿಡಿದಿದ್ದಾಳೆ. ಸೀಮಾ ಪರ್ವಿನ್ ಐದು ಮಕ್ಕಳ ತಾಯಿ. ವರದಿಗಳ ಪ್ರಕಾರ, ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾದುಯಿ ಬರಿಯಾರ್ಪುರ ಗ್ರಾಮದ ಸೀಮಾ ಪರ್ವಿನ್, ಮಹಾವೀರ್ ಠಾಕೂರ್ ಮದುವೆ ಆಗಿದ್ದಾಳೆ.

24
ಪ್ರೀತಿಗೆ ದಾರಿಯಾಯ್ತು ಮಿಸ್ಡ್ ಕಾಲ್

ಐದು ಮಕ್ಕಳ ತಾಯಿಯಾಗಿರುವ ಸೀಮಾ ಪರ್ವೀನ್ ಹಾಗೂ ಮಹಾವೀರ್ ಮಿಸ್ಡ್ ಕಾಲ್ ನಿಂದ ಪರಿಚಿತರಾದ್ರು. ಇಬ್ಬರೂ ಫೋನ್ ನಲ್ಲಿ ಮಾತನಾಡಲು ಶುರು ಮಾಡಿದ್ರು. ಸ್ನೇಹ ಪ್ರೇಮಕ್ಕೆ ತಿರುಗಿತು. ಮಹಾವೀರ್ ಠಾಕೂರ್ ಪ್ರೀತಿಯಲ್ಲಿ ಸೀಮಾ ಎಲ್ಲರನ್ನು ಮರೆತಿದ್ದಾಳೆ. ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಕೋಲ್ಕತ್ತಾಗೆ ಹೋದ ಆಕೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ. ನಂತ್ರ ಇಬ್ಬರೂ ಒಟ್ಟಿಗೆ ಇರುವ ವಿಡಿಯೋ ಪೋಸ್ಟ್ ಮಾಡಿದ್ದಾಳೆ.

34
ಇದು ಸಿನಿಮಾ ಅಲ್ಲ

ಸೀಮಾ ಪರ್ವಿನ್ ಕಥೆ ಸಿನಿಮಾಗಿಂತ ಭಿನ್ನವಾಗಿಲ್ಲ. ಹತ್ತು ವರ್ಷಗಳ ಹಿಂದೆ, ಸೀಮಾ ಪರ್ವಿನ್ ಹೆಸರು ಬಿಂದು ಎಂದಾಗಿತ್ತು. ಅವಳು ಮನನ್ ಆಲಂ ಅವರನ್ನು ಪ್ರೀತಿಸಿ ಮದುವೆ ಆಗಿದ್ದಳು. ಈ ಸಂದರ್ಭದಲ್ಲಿ ಮತಾಂತರಗೊಂಡಿದ್ದಳು. ಮುಸ್ಲೀಂ ಧರ್ಮಕ್ಕೆ ಮತಾಂತರಗೊಂಡಿದ್ದ ಬಿಂದು, ಸೀಮಾ ಪರ್ವಿನ್ ಆಗಿದ್ದಳು. ಮನನ್ ನ ಐದು ಮಕ್ಕಳಿಗೆ ತಾಯಿಯಾದ ಬಿಂದು ಈಗ ಮತ್ತೆ ಮಹಾವೀರ್ ಠಾಕೂರ್ ಗಾಗಿ ಮತಾಂತರಗೊಂಡಿದ್ದಾಳೆ.

44
ಪರಸ್ಪರ ಆರೋಪ

ಮೊದಲ ಮದುವೆಯಲ್ಲಿ ಸಂತೋಷವಾಗಿರಲಿಲ್ಲ. ಚಿತ್ರಹಿಂಸೆ ಅನುಭಿಸುತ್ತಿದ್ದೆ. ಈಗ ಖುಷಿಯಾಗಿದ್ದೇನೆ ಎಂದು ಬಿಂದು ಹೇಳಿದ್ದಾಳೆ. ಮಹಾವೀರ್ ಕೂಡ ಈ ಮದುವೆ ನನ್ನಿಷ್ಟದಂತೆ ಆಗಿದೆ ಎಂದಿದ್ದಾನೆ. ಇತ್ತ ಬಿಂದು ಮೊದಲ ಪತಿ, ಆಕೆ ನಡೆತೆ ಸರಿಯಿರಲಿಲ್ಲ ಎಂದು ಆರೋಪಿಸಿದ್ದು, ಮಕ್ಕಳನ್ನು ತನ್ನ ಜೊತೆ ಇಟ್ಟುಕೊಳ್ಳುವ ಹೇಳಿಕೆ ನೀಡಿದ್ದಾನೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories