35 ಲಕ್ಷ ರೂಪಾಯಿ ಸಂಬಳ ತ್ಯಜಿಸಿ ಆಧ್ಯಾತ್ಮದ ಹಾದಿ ಹಿಡಿದು ವೈರಲ್ ಆಗಿದ್ದ ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಬೆಂಗಳೂರಿನ ಇಂಜಿನಿಯರ್ ಪ್ರತೀಕಾ ಅವರನ್ನು ವಿವಾಹವಾಗಿದ್ದಾರೆ. ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್
ಕಳೆದ ವರ್ಷ ನಡೆದಿದ್ದ ಮಹಾಕುಂಭ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈಚೆಗೆ ವೈರಲ್ ಲೇಡಿ ಮೊನಾಲಿಸಾ ಮುಸ್ಲಿಂ ಯುವಕನನ್ನು ಮದುವೆಯಾಗಿ ಭಾರಿ ಸುದ್ದಿ ಮಾಡಿದ್ದರೆ, ಇದೀಗ 35 ಲಕ್ಷ ರೂಪಾಯಿ ಸಂಬಳ ಬಿಟ್ಟು ಅಧ್ಯಾತ್ಮದ ಹಾದಿ ಹಿಡಿದಿದ್ದ, ವೈರಲ್ ಐಐಟಿ ಬಾಬಾ ಬೆಂಗಳೂರು ಯುವತಿಯನ್ನು ಮದುವೆಯಾಗಿದ್ದು, ಅದೀಗ ಭಾರಿ ಸದ್ದು ಮಾಡುತ್ತಿದೆ. ಐಐಟಿ ಬಾಂಬೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ, ಹರಿಯಾಣದ ಝಜ್ಜರ್ ನಿವಾಸಿಯಾಗಿರುವ ಐಐಟಿ ಬಾಬಾ ಅಭಯ್ ಸಿಂಗ್ ಅವರ ಆಧ್ಯಾತ್ಮಿಕ ಜೀವನದತ್ತ ಆಕರ್ಷಿತರಾಗಿದ್ದರು. ಮಹಾಕುಂಭಕ್ಕೆ ಆಗಮಿಸಿದ್ದ ಅಭಯ್ ಸಿಂಗ್ ಅವರನ್ನು ಮಾಧ್ಯಮವೊಂದು ಮಾತನಾಡಿಸಿತ್ತು. ಈ ವೇಳೆ ತಾನೋರ್ವ ಐಐಟಿ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದರು. ನಂತರ ಅಭಯ್ ಸಿಂಗ್ ಸಂದರ್ಶನದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್ ಆಗಿತ್ತು. ಭೌತಿಕ ಜಗತ್ತು ತ್ಯಜಿಸಿರುವ ಅಭಯ್ ಸಿಂಗ್, ಆಂತರಿಕ, ಆತ್ಮಾವಲೋಕನದ ಜೀವನದಲ್ಲಿ ಆಧ್ಯಾತ್ಮಿಕತೆಯಲ್ಲಿ ಮುಂದುವರಿದಿದ್ದರು. ಅಭಯ್ ಸಿಂಗ್ ಉರ್ಫ್ ಬಾಬಾ ಅವರ ಜೀವನ ಜನರ ಗಮನ ಸೆಳೆದಿತ್ತು.
26
Rank ವಿದ್ಯಾರ್ಥಿ, ಅಬ್ಬಬ್ಬಾ ಎನ್ನುವ ಅಂಕ
ಇದೇ ವೇಳೆ ಅಭಯ್ ಸಿಂಗ್ ಅವರು 10 ಮತ್ತು 12ನೇ ಕ್ಲಾಸ್‌ನಲ್ಲಿ ತೆಗೆದುಕೊಂಡ ಅಂಕ ವೈರಲ್ ಆಗಿತ್ತು. ಅವರು 10ನೇ ಕ್ಲಾಸ್ ಬೋರ್ಡ್ ಎಕ್ಸಾಂನಲ್ಲಿ ಶೇ.93 ಮತ್ತು 12ನೇ ಕ್ಲಾಸ್‌ನಲ್ಲಿ ಶೇ.92.4ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಈ ಅಂಕಗಳು ಅಭಯ್ ಸಿಂಗ್ ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು ಎಂಬುದನ್ನು ತಿಳಿಸಿದ್ದಾರೆ. ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಬಾಂಬೆ ಐಐಟಿಯಲ್ಲಿ ಅಭಯ್ ಸಿಂಗ್ ಸೀಟ್ ಪಡೆದುಕೊಂಡಿದ್ದರು. 2008ರ ಐಐಟಿ ಪ್ರವೇಶ ಪರೀಕ್ಷೆ IIT-JEEಯಲ್ಲಿ 731ನೇ (All India Rank -AIR) ಸ್ಥಾನ ಪಡೆದುಕೊಂಡಿದ್ದರು. ಏರೋಸ್ಪೇಸ್ ವಿಭಾಗದಲ್ಲಿ ಇಂಜಿನೀಯರಿಂಗ್ ಪದವಿ ಪಡೆದುಕೊಂಡಿದ್ದ ಅಭಯ್ ಸಿಂಗ್, ಮೂರು ವರ್ಷ ಕೆನಾಡದಲ್ಲಿ ಕೆಲಸ ಮಾಡಿದ್ದರು. ಈ ವೇಳೆ ಅಭಯ್ ಸಿಂಗ್ ವಾರ್ಷಿಕವಾಗಿ 36 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದರು. ಆದರೆ ಅವರು ಅಧ್ಯಾತ್ಮದ ಕಡೆಗೆ ಒಲಿದಿದ್ದರು.
36
ಭೌತಿಕ ಸುಖ ಮುಖ್ಯವಲ್ಲ ಎಂದಿದ್ದ ಬಾಬಾ
ಮೂರು ವರ್ಷ ಕೆಲಸ ಮಾಡಿದ ಬಳಿಕ ಅಜಯ್ ಸಿಂಗ್, ಆಧ್ಯಾತ್ಮದತ್ತ ಆಕರ್ಷಿತರಾಗಿದ್ದರು. ಬಾಹ್ಯ ಅಥವಾ ಭೌತಿಕ ಸುಖ, ಸಂಪತ್ತು ಆಂತರಿಕ ತೃಪ್ತಿಯನ್ನು ನೀಡಲ್ಲ. ಹಾಗಾಗಿ ಎಲ್ಲವನ್ನು ತೊರೆದು ಆಂತರಿಕ ನೆಮ್ಮದಿಯನ್ನು ಕಂಡುಕೊಳ್ಳುವ ಕೆಲಸವನ್ನು ಮಾಡುತ್ತಿರೋದಾಗಿ ಆಭಯ್ ಸಿಂಗ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಆದರೆ, ಇದೀಗ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಬೆಂಗಳೂರಿನ ನಿವಾಸಿ ಪ್ರತೀಕಾ ಎನ್ನುವ ಎಂಜಿನಿಯರ್ ಅವರನ್ನು ಮದುವೆಯಾಗಿದ್ದಾರೆ. ಹಾಗಿದ್ದರೆ ಇವರು ಭೇಟಿಯಾದದ್ದು ಎಲ್ಲಿ, ಲವ್ ಶುರುವಾಗಿದ್ದು ಹೇಗೆ ಎನ್ನುವ ಕುತೂಹಲ ಹಲವರದ್ದು. ಈ ಕುರಿತು ಜೋಡಿಯೇ ಈಗ ಉತ್ತರ ಕೊಟ್ಟಿದೆ. ಇವರಿಬ್ಬರ ಭೇಟಿಯಾದದ್ದು ಕಳೆದ ವರ್ಷ. ಅಂದರೆ 2025 ರ ಆರಂಭದಲ್ಲಿ ಕೊಯಮತ್ತೂರಿನ ಸದ್ಗುರುಗಳ ಆದಿಯೋಗಿ ಆಶ್ರಮದಲ್ಲಿ ಭೇಟಿಯಾದರು. ಆಧ್ಯಾತ್ಮಿಕ ದೃಷ್ಟಿಕೋನವನ್ನು ಹೊಂದಿರುವ ಇವರು ಆರಂಭದಲ್ಲಿ ಸ್ನೇಹಿತರಾಗಿದ್ದರು. ನಂತರ ಪ್ರೀತಿಯಲ್ಲಿ ಸಿಲುಕಿದರು.
56
ಮದುವೆಯಾಗಿ ಎರಡು ತಿಂಗಳು
ಕಳೆದ ಫೆಬ್ರವರಿ 15ರಂದು ಹಿಮಾಚಲ ಪ್ರದೇಶದಲ್ಲಿ ಮಹಾಶಿವರಾತ್ರಿಯಂದು ಮದುವೆಯಾಗಿದೆ ಜೋಡಿ. ಎಂಟು ತಿಂಗಳ ತಮ್ಮ ಲವ್ಸ್ಟೋರಿಯನ್ನು ಮದುವೆಯವರೆಗೂ ಕರೆತಂದಿರೋ ಜೋಡಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅಭಯ್ ಸಿಂಗ್ ಅವರ ಪತ್ನಿ ಪ್ರತೀಕಾ, ಅಭಯ್ ತುಂಬಾ ಸರಳ ಸ್ವಭಾವದವರು ಎಂದು ಹೇಳಿದರು. ಅವರು ತುಂಬಾ ಪ್ರಾಮಾಣಿಕ ಮತ್ತು ಸತ್ಯವಂತ ವ್ಯಕ್ತಿ. ಈಗ, ನಾವು ಸನಾತನ ಧರ್ಮವನ್ನು ಪ್ರಚಾರ ಮಾಡಲು ಕೆಲಸ ಮಾಡುತ್ತೇವೆ. ಭವಿಷ್ಯದಲ್ಲಿ, ನಾವು ಸನಾತನ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಶ್ರೀ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಪ್ರತೀಕಾ ಹೇಳಿದ್ದಾರೆ.
66
ವಿಶ್ವವಿದ್ಯಾಲಯದ ಸ್ಥಾಪನೆ ಗುರಿ
ಈ ವಿಶ್ವವಿದ್ಯಾಲಯವು ಲೌಕಿಕ ಜ್ಞಾನವನ್ನು ಆಧ್ಯಾತ್ಮಿಕ ಅಭ್ಯಾಸ ಮತ್ತು ವಿವಿಧ ರೀತಿಯ ಆಧ್ಯಾತ್ಮಿಕ ಅಭ್ಯಾಸಗಳೊಂದಿಗೆ ಸಂಯೋಜಿಸುತ್ತದೆ. ಜ್ಞಾನವನ್ನು ಸಂಪೂರ್ಣವಾಗಿ ಸಂಯೋಜಿಸಲಾಗುವುದು ಎಂದು ಅವರು ಹೇಳಿದರು. ಬೋಧನೆಯ ಜ್ಞಾನ ಮತ್ತು ಆಧ್ಯಾತ್ಮಿಕ ಅಭ್ಯಾಸದ ಜ್ಞಾನ ಎರಡನ್ನೂ ಇಲ್ಲಿ ಕೆಲಸ ಮಾಡಲಾಗುತ್ತದೆ. ಮದುವೆಯಾದ ನಂತರ, ಐಐಟಿ ಬಾಬಾ ತಮ್ಮ ಪತ್ನಿ ಪ್ರತೀಕ ಅವರೊಂದಿಗೆ ಜಜ್ಜರ್‌ನಲ್ಲಿರುವ ತಮ್ಮ ಮನೆಗೆ ಮರಳುತ್ತಾರೆ. ನಂತರ, ಅವರ ತಾಯಿ ಸೊಸೆಗೆ ಸಿಹಿತಿಂಡಿಗಳನ್ನು ತಿನ್ನಿಸಿ ಆರತಿ ಮಾಡಿದರು. ಮನೆ ಜನರಿಂದ ತುಂಬಿತ್ತು, ಅವರನ್ನು ನೋಡಲು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಹಲವಾರು ಜನರು ಬರುತ್ತಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.