ನಿದ್ರೆ ಕೊರತೆಯಿಂದಾಗಿ ಪುರುಷರಲ್ಲಿ ಈ ಲೈಂಗಿಕ ಸಮಸ್ಯೆ ಕಾಡಬಹುದು

First Published | Aug 24, 2021, 5:42 PM IST

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿ ಬೇಕಾಗಿರುವುದು ಉತ್ತಮ ನಿದ್ರೆ. ನಿದ್ರೆಯ ಕೊರತೆಯಿಂದಾಗಿ, ಹಲವು ಸಮಸ್ಯೆಗಳು ಮನುಷ್ಯನಿಗೆ ಕಾಡುತ್ತದೆ. ಇದರಿಂದ ಪುರುಷರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರಬಹುದು.
 

ಸಾಕಷ್ಟು ನಿದ್ರೆ ಪಡೆಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಸಾಕಷ್ಟು ನಿದ್ರೆ ಪಡೆಯದ ಜನರು (ಸ್ಲೀಪ್ ಅಪ್ನಿಯಾ ಅಥವಾ ನಿದ್ರಾಹೀನತೆ) ಸಮಸ್ಯೆಯಿಂದ ಬಳಲುತ್ತಾರೆ. ಅವರಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉದ್ಭವಿಸುತ್ತವೆ. ಇದು ಮಾತ್ರವಲ್ಲ, ನಿದ್ರೆಯ ಕೊರತೆಯಿಂದಾಗಿ, ಪುರುಷರ ಲೈಂಗಿಕ ಜೀವನವು ಹಾಳಾಗುತ್ತದೆ ಮತ್ತು ಅವರು ಅನೇಕ ಗಂಭೀರ ಲೈಂಗಿಕ ಸಮಸ್ಯೆಗಳನ್ನು ಅನುಭವಿಸಬಹುದು. ಪುರುಷರಲ್ಲಿ ಈ ಲೈಂಗಿಕ ಸಮಸ್ಯೆಗಳಿಂದಾಗಿ, ವೈವಾಹಿಕ ಜೀವನವೇ ಹಾಳಾಗಬಹುದು.

ನಿದ್ರೆಯ ಕೊರತೆಯಿಂದಾಗಿ ಪುರುಷರು ಎದುರಿಸುತ್ತಿರುವ ಲೈಂಗಿಕ ಸಮಸ್ಯೆಗಳ ಬಗ್ಗೆ ತಿಳಿಯೋಣ.

ನಿದ್ರೆಯ ಕೊರತೆಯಿಂದಾಗಿ ಲೈಂಗಿಕ ಸಮಸ್ಯೆ
ಕಡಿಮೆ ನಿದ್ರೆ ಮಾಡುವ ಪುರುಷರು ಈ ಕೆಳಗಿನ ಲೈಂಗಿಕ ಸಮಸ್ಯೆ ಎದುರಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂದು ಅನೇಕ ವಿಭಿನ್ನ ಸಂಶೋಧನೆಗಳಲ್ಲಿ ಬಹಿರಂಗಗೊಂಡಿದೆ. ಅವುಗಳ ಬಗ್ಗೆ ತಿಳಿದುಕೊಂಡರೆ ಮತ್ತೆ ನಿದ್ರೆ ಮಾಡದೇ ಇರುವಂತಹ ತಪ್ಪನ್ನು ನೀವು ಮಾಡಲಾರಿರಿ. 

Tap to resize

ಒಬ್ಬ ವ್ಯಕ್ತಿಯು ನಿದ್ರೆಯ ಕೊರತೆ ಮತ್ತು ಈ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅವನು ನಿದ್ರೆ ಪಡೆಯಲು ಸಹಾಯಕವಾದ ಸಲಹೆ ಅಳವಡಿಸಿಕೊಳ್ಳಬೇಕು. ಮಲಗುವ 2 ಗಂಟೆಗಳ ಮೊದಲು ಗ್ಯಾಜೆಟ್‌ ಬಳಕೆ ನಿಲ್ಲಿಸುವುದು, ಮಲಗುವೆ ಕೋಣೆಯನ್ನು ಕತ್ತಲೆ ಮತ್ತು ಶಾಂತವಾಗಿ ಇಟ್ಟುಕೊಳ್ಳುವುದು, ವ್ಯಾಯಾಮ ಮಾಡುವುದು ಇತ್ಯಾದಿ.

ನಿದ್ರೆಯ ಕೊರತೆಯಿಂದ ಲೈಂಗಿಕ ಬಯಕೆ ಕಡಿಮೆ 
ಪುರುಷರಲ್ಲಿ ಸಮತೋಲಿತ ಮತ್ತು ಆರೋಗ್ಯಕರ ಲೈಂಗಿಕ ಬಯಕೆಯನ್ನು ಹೊಂದಿರುವುದು ಅಂದರೆ ಕಾಮ ಪ್ರಚೋದಕ ಜೀವನಕ್ಕೆ ಕಾಮಾಸಕ್ತಿ ಬಹಳ ಮುಖ್ಯ. ಕಾಮಾಸಕ್ತಿ ಹೆಚ್ಚಾಗಲು ಆರೋಗ್ಯ ಉತ್ತಮವಾಗಿರಬೇಕು. ಅದಕ್ಕಾಗಿ ಉತ್ತಮ ನಿದ್ರೆ ನಿಮಗೆ ಅಗತ್ಯ. ಚೆನ್ನಾಗಿ ನಿದ್ರೆ ಮಾಡಿದರೆ ಲೈಂಗಿಕ ಬಯಕೆಯೂ ಹೆಚ್ಚುತ್ತೆ. 

ಜರ್ನಲ್ ಆಫ್ ಸೆಕ್ಸುವಲ್ ಮೆಡಿಸಿನ್‌ನಲ್ಲಿ ಪ್ರಕಟವಾದ 2015ರ ಅಧ್ಯಯನದ ಪ್ರಕಾರ, ಪ್ರತಿ ರಾತ್ರಿ ಒಂದು ಗಂಟೆ ಹೆಚ್ಚು ನಿದ್ದೆ ಮಾಡುವ ಪುರುಷರು ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಸಾಧ್ಯತೆ 14 % ಹೆಚ್ಚಾಗಿದೆ. ಸಾಕಷ್ಟು ನಿದ್ರೆ ಪಡೆಯಲು ಸಾಧ್ಯವಾಗದ ಜನರು, ಅವರ ಭಾವನಾತ್ಮಕ ಏರಿಳಿತದಿಂದಾಗಿ ಅವರ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ.
 

ನಿದ್ರೆಯ ಕೊರತೆಯಿಂದಾಗಿ ಕಡಿಮೆ ಟೆಸ್ಟೋಸ್ಟೆರಾನ್
ಪುರುಷರ ಲೈಂಗಿಕ ಜೀವನವು ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಅವಲಂಬಿಸಿರುತ್ತದೆ. ಈ ಹಾರ್ಮೋನ್ ಪುರುಷರ ಫಲವತ್ತತೆಗೆ ಕಾರಣವಾಗಿದೆ. ಅಸಮರ್ಪಕ ನಿದ್ರೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು 10 ರಿಂದ 15 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ವಯಸ್ಕ ಪುರುಷರ ಮೇಲೆ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ.

ನಿದ್ರೆಯ ಸಮಸ್ಯೆಯಿಂದಾಗಿ ಕಡಿಮೆ ವೀರ್ಯಾಣುಗಳ ಸಂಖ್ಯೆ
ನಿದ್ರೆಯ ಸಮಸ್ಯೆಗಳು ಕೇವಲ ಸೆಕ್ಸ್ ಡ್ರೈವ್, ಟೆಸ್ಟೋಸ್ಟೆರಾನ್ ಅಥವಾ ಶಿಶ್ನದ ಒತ್ತಡದ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಾಗಿ ಇದು ಪುರುಷರ ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡಬಹುದು. ಪುರುಷರ ಫಲವತ್ತತೆ ವೀರ್ಯಾಣು ಮತ್ತು ಗುಣಮಟ್ಟವನ್ನು ಅವಲಂಬಿಸಿರುತ್ತದೆ. 

ಅಮೇರಿಕನ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ನಿದ್ರೆಯ ಕೊರತೆಯು ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಸಂಶೋಧನೆಯಲ್ಲಿ, ಕಡಿಮೆ ನಿದ್ರಿಸುತ್ತಿರುವ ಜನರು ತಮ್ಮ ವೀರ್ಯದ ಗುಣಮಟ್ಟದಲ್ಲಿ ಇಳಿಕೆ ಕಂಡರು.

ಸಾಕಷ್ಟು ನಿದ್ರೆಯಿಂದಾಗಿ ನಿಮಿರುವಿಕೆಯ ಕೊರತೆ
ಸಂಗಾತಿಯೊಂದಿಗೆ ದೈಹಿಕ ಸಂಬಂಧ ಹೊಂದಲು, ಪುರುಷರಿಗೆ ಶಿಶ್ನದಲ್ಲಿ ಸಾಕಷ್ಟು ಉದ್ವೇಗ (ನಿಮಿರುವಿಕೆ) ಅಗತ್ಯವಿದೆ. ಆದರೆ ನಿದ್ರೆಯ ಕೊರತೆಯಿಂದಾಗಿ, ಟೆಸ್ಟೋಸ್ಟೆರಾನ್ ಮತ್ತು ಆಮ್ಲಜನಕದ ಇಳಿಕೆಯು ಪುರುಷರ ಶಿಶ್ನದಲ್ಲಿ ಸಾಕಷ್ಟು ಒತ್ತಡವನ್ನು ತರುವುದಿಲ್ಲ. 

ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಎಂದೂ ಕರೆಯುತ್ತಾರೆ. ದೇಹದ ಟೆಸ್ಟೋಸ್ಟೆರಾನ್ ಮಟ್ಟ ಮತ್ತು ಆಮ್ಲಜನಕದ ಹರಿವು ಶಿಶ್ನದ ಒತ್ತಡಕ್ಕೆ ಬಹಳ ಮುಖ್ಯ. ಆದುದರಿಂದ ಇಂದಿನಿಂದಲೇ ಸರಿಯಾಗಿ ನಿದ್ರೆ ಮಾಡುವ ಅಭ್ಯಾಸವನ್ನು ಬೆಳೆಸಿ. ಇಲ್ಲವಾದರೆ ವೈವಾಹಿಕ ಜೀವನದ ಮೇಲೆ ಭಾರಿ ಪರಿಣಾಮ ಬೀರುವುದು. 

Latest Videos

click me!