ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕನನ್ನು ಮದುವೆಯಾದ ಬಳಿಕ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ತಮ್ಮ ಪ್ರೀತಿಯನ್ನು ಸಮರ್ಥಿಸಿಕೊಳ್ಳಲು ರಾಧಾ-ಕೃಷ್ಣರ ಉದಾಹರಣೆ ನೀಡಿ ವಿವಾದಕ್ಕೆ ಕಾರಣವಾಗಿದ್ದು, ರಕ್ಷಣೆಗಾಗಿ ಮನವಿ ಮಾಡಿದ್ದಾರೆ.
ಮುಸ್ಲಿಂ ಯುವಕನನ್ನು ಲವ್ ಮಾಡಿ ಮದುವೆಯಾಗಿರುವ ಕುಂಭಮೇಳದಲ್ಲಿ ರುದ್ರಾಕ್ಷಿ ಯುವತಿ, ಕಣ್ಣುಗಳಿಂದಲೇ ಮೋಡಿ ಮಾಡಿದ್ದ ವೈರಲ್ ಗರ್ಲ್ ಮೊನಾಲಿಸಾ (Kumbhamala Monalisa) ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ತಮ್ಮದು ಹಿಂದೂ-ಮುಸ್ಲಿಂ ಮದುವೆಯಾಗಿರುವ ಕಾರಣ, ಸೋಷಿಯಲ್ ಮೀಡಿಯಾಗಳಲ್ಲಿ, ಮೊಬೈಲ್ ಮೂಲಕ ನಮ್ಮನ್ನು ಸಾ*ಯಿಸುವುದಾಗಿ, ಕ*ತ್ತರಿಸುವುದಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಪೊಲೀಸರು, ಮಾಧ್ಯದವರ ಗಮನಕ್ಕೆ ತಂದಿದ್ದೇವೆ. ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಕೋರಿಕೊಂಡಿದ್ದಾಳೆ ಮೊನಾಲಿಸಾ.
26
ಲವ್ ಜಿಹಾದ್, ಮತಾಂತರ ಸದ್ದು
ಇದಾಗಲೇ ಇವರ ಮದುವೆಯ ಬಗ್ಗೆ ಲವ್ ಜಿಹಾದ್, ಮತಾಂತರ ಎಂದೆಲ್ಲಾ ಸುದ್ದಿ ಸದ್ದು ಮಾಡುತ್ತಿದೆ. ಆದರೆ ಇದಾಗಲೇ ಪತಿ ಫರ್ಮಾನ್ ಖಾನ್ (Farman Khan) ಈ ಬಗ್ಗೆ ಸ್ಪಷ್ಟಪಡಿಸಿದ್ದು, ನಾನು ಇವಳನ್ನು ಮತಾಂತರ ಮಾಡುವುದಿಲ್ಲ. ಅವಳೇ ಒತ್ತಾಯ ಮಾಡಿದ್ದಕ್ಕೆ ಮದುವೆಯಾದೆ. ಇದೇನೂ ಲವ್ ಜಿಹಾದ್ ಅಲ್ಲ ಎಂದಿದ್ದಾರೆ.
36
ರಾಧಾ-ಕೃಷ್ಣರ ಉದಾಹರಣೆ
ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿರೋ ಮೊನಾಲಿಸಾ, ನಾವು ಪ್ರೀತಿ ಮಾಡಿದ್ದೇವೆ. ಇಲ್ಲಿ ಧರ್ಮ ಎಲ್ಲಾ ಮಧ್ಯೆ ಬರುವುದಿಲ್ಲ ಎಂದು ಹೇಳುವುದಕ್ಕಾಗಿ ರಾಧಾ-ಕೃಷ್ಣರ ಉದಾಹರಣೆ ಕೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ರಾಧಾ, ಕೃಷ್ಣನನ್ನು ಲವ್ ಮಾಡುವಾಗ ಆತ ಮುಸ್ಲಿಮೋ, ಹಿಂದೂನೋ ಕೇಳಿ ಲವ್ ಮಾಡಿದ್ಲಾ? ಅವರಿಗೆ ಇಲ್ಲದ ರಿಸ್ಟ್ರಿಕ್ಷನ್ ನಮಗೇಕೆ ಎಂದು ಪ್ರಶ್ನಿಸಿದ್ದಾಳೆ.
56
ಸೋನಾಕ್ಷಿ ಸಿನ್ಹಾ ಆಗಿಲ್ವಾ?
ಇದೇ ವೇಳೆ ಮುಸ್ಲಿಂ ಯುವಕರನ್ನು ಮದುವೆಯಾಗಿರುವ ಸೋನಾಕ್ಷಿ ಸಿನ್ಹಾ ಸೇರಿದಂತೆ ವಿವಿಧ ನಟಿಯರ ಹೆಸರನ್ನೂ ಹೇಳುವ ಮೂಲಕ, ನಾನೇನೂ ತಪ್ಪು ಮಾಡಲಿಲ್ಲ. ಸುಮ್ಮನೇ ವಿನಾ ಕಾರಣ ನಮಗೆ ತೊಂದರೆ ಕೊಡಲಾಗುತ್ತಿದೆ ಎಂದಿದ್ದಾಳೆ.
66
ನಿರ್ದೇಶಕನ ವಿರುದ್ಧ ದೂರು
ಇದಾಗಲೇ ಮೊನಾಲಿಸಾ, ನಿರ್ದೇಶಕ ಸನೋಜ್ ಮಿಶ್ರಾ ಬಗ್ಗೆ ಮಾತನಾಡಿದ್ದಾಳೆ. ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಿ ಇದೇ ರೀತಿ ಅನುಚಿತವಾಗಿ ನಡೆಸಿಕೊಳ್ಳುತ್ತಾರೆ ಅವರು. ನನಗೂ ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಂಡರು. ಎಲ್ಲೆಲ್ಲೋ ಮುಟ್ಟಿದರು. ನಾನು ಸಿನಿಮಾಕ್ಕೆ ಹೋಗಲ್ಲ, ಅದರಿಂದ ಮತ್ತಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಮೊನಾಲಿಸಾ ಕಣ್ಣೀರು ಹಾಕಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.