ಶ್ರೀದೇವಿ ನನ್ನ ಸಂಬಂಧ ತಿಳಿದ ಅಮ್ಮ ಆಕೆಗೆ ರಾಕಿ ಕಟ್ಟುವಂತೆ ಹೇಳಿದ್ದರು: ಬೋನಿ ಕಪೂರ್

Published : Apr 02, 2024, 01:09 PM ISTUpdated : Apr 02, 2024, 02:07 PM IST

ಬಾಲಿವುಡ್ ನಿರ್ಮಾಪಕ ಹಾಗೂ ಬಾಲಿವುಡ್‌ನ ದಿವಂಗತ ನಟಿ ಶ್ರೀದೇವಿ ಪತಿ ಬೋನಿ ಕಪೂರ್ ಅವರು ಪ್ರಸ್ತುತ ತಮ್ಮ ನಿರ್ಮಾಣದ ಮೈದಾನ್ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರದ ಭಾಗವಾಗಿ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಈ ನಿರ್ಮಾಪಕ ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 

PREV
110
 ಶ್ರೀದೇವಿ ನನ್ನ ಸಂಬಂಧ ತಿಳಿದ ಅಮ್ಮ ಆಕೆಗೆ ರಾಕಿ ಕಟ್ಟುವಂತೆ ಹೇಳಿದ್ದರು: ಬೋನಿ ಕಪೂರ್

ಬೋನಿ ಕಪೂರ್ ಅವರು ತಮ್ಮ ಮೊದಲ ಪತ್ನಿ ಮೋನಾ ಶೌರಿ ಕಪೂರ್ ಅವರನ್ನು 1983ರಲ್ಲಿ ಮದ್ವೆಯಾಗಿದ್ದರು. 1996ರವರೆಗೂ ಜೊತೆಗಿದ್ದ ಈ ಜೋಡಿಗೆ ನಟ ಅರ್ಜುನ್ ಕಪೂರ್ ಹಾಗೂ ಅನ್ಸೂಲಾ ಕಪೂರ್ ಎಂಬ ಇಬ್ಬರು ಮಕ್ಕಳಿದ್ದಾರೆ.  

210

ಮೊದಲ ಪತ್ನಿ ಜೊತೆಯಲ್ಲಿದ್ದಾಗಲೇ ಬೋನಿ ಕಪೂರ್ ಅವರು ಬಾಲಿವುಡ್ ನಟಿ ಶ್ರೀದೇವಿ ಜೊತೆ ಪ್ರೀತಿಯಲ್ಲಿ ಬಿದ್ದು ಅವರನ್ನು ಮದುವೆಯೂ ಆಗಿದ್ದರು. ಇವರ ದಾಂಪತ್ಯದ ಫಲವಾಗಿ ನಟಿ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಜನಿಸಿದ್ದರು. 

310

ಶ್ರೀದೇವಿ ಜೊತೆಗಿನ ತಮ್ಮ ಈ ಪ್ರೇಮ ಸಂಬಂಧ ತಮ್ಮ ಮೊದಲ ಪತ್ನಿ ಮೋನಾ ಶೌರಿ ಅವರಿಗೆ ತಿಳಿದಿತ್ತು. ಮೊದಲ ಪತ್ನಿ ಜೊತೆ ಇದನ್ನು ಬೋನಿ ಕಪೂರ್ ಹೇಳಿಕೊಂಡಿದ್ದರು. ಆದರೆ ಪುತ್ರ ಅರ್ಜುನ್ ಕಪೂರ್ ಮಾತ್ರ ತನ್ನ ತಂದೆಯ ಈ ನಿರ್ಧಾರದಿಂದ ಬಹಳ ಬೇಸರಗೊಂಡಿದ್ದ ಎಂಬುದನ್ನು ಸ್ವತಃ ಬೋನಿ ಕಪೂರ್ ಹೇಳಿಕೊಂಡಿದ್ದಾರೆ. 

410
sridevi and boney kapoor

ಬೋನಿ ಕಪೂರ್ ಶ್ರೀದೇವಿಯನ್ನು ಮದ್ವೆಯಾಗಿದ್ದರೂ ಮೊದಲ ಪತ್ನಿ ಮೋನಾ ಶೌರಿಯಿಂದ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿರಲಿಲ್ಲ. ಆದರೂ 1996ರಲ್ಲಿ ತನ್ನ ಅಮ್ಮ ಮೋನಾ ಶೌರಿಯನ್ನು ಬಿಟ್ಟು ಅಪ್ಪ ಬೋನಿ ಕಪೂರ್ ನಟಿ ಶ್ರೀದೇವಿ ಜೊತೆ ಹೊರಟು ಹೋಗಿದ್ದು, ಅರ್ಜುನ್ ಕಪೂರ್ ಹೃದಯದಲ್ಲಿ ಆಳವಾದ ನೋವನ್ನು ಮೂಡಿಸಿತ್ತು. 

510

ಅಂಗ್ಲ ಮಾಧ್ಯಮ ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಆತ ಹಗೆ ಮುಂದುವರೆಸಿದ ಆದರೆ ಆತ ಯಾರು ಎಂಬುದು ನನಗೆ ತಿಳಿದಿದ್ದರಿಂದ ನಾನು ಪ್ರತೀಕಾರ ಮಾಡಲಿಲ್ಲ, ಆತನ ಬಗ್ಗೆ ನನಗೆ ಎಂದಿಗೂ ದ್ವೇಷವಿಲ್ಲ, ಆದರೆ ಅವನಿಗೆ ನನ್ನ ಮೇಲೆ ಸಿಟ್ಟಿದೆ ಎಂದು ಬೋನಿ ಹೇಳಿಕೊಂಡಿದ್ದಾರೆ. 

610

ಆದರೆ ಮೊದಲ ಪತ್ನಿ ಮೋನಾ ಶ್ರೀದೇವಿ ಬಗ್ಗೆ ನನ್ನ ಭಾವನೆಗಳನ್ನು ಚೆನ್ನಾಗಿ ತಿಳಿದಿದ್ದಳು. ನಿಜ ಹೇಳಬೇಕೆಂದರೆ ಮದುವೆಗೂ ಮೊದಲೇ ಶ್ರೀದೇವಿ ನಮ್ಮ ಮನೆಯಲ್ಲೇ(ಮೋನಾ ಮನೆಯಲ್ಲಿ) ಇದ್ದಳು. 

710
sridevi and boney kapoor

ಆದರೆ ನಂತರದಲ್ಲಿ ನಾನು ಮನೆಯಿಂದ ಹೊರ ಬಂದೆ ಹೀಗಾಗಿ ಮೋನಾಗೆ ಎಲ್ಲವೂ ತಿಳಿದಿತ್ತು. ಮತ್ತು ನಾನು ಅದನ್ನು ನಿರಾಕರಿಸಿಯೂ ಇರಲಿಲ್ಲ ಎಂದು ಬೋನಿ ಕಪೂರ್ ಹೇಳಿಕೊಂಡಿದ್ದಾರೆ.  

810
sridevi and boney kapoor

ಇದರ ಜೊತೆಗೆ ನನ್ನ ತಾಯಿಗೂ ನನ್ನ ಹಾಗೂ ಶ್ರೀದೇವಿ ನಡುವಿನ ಸಂಬಂಧದ ಬಗ್ಗೆ ತಿಳಿದಿತ್ತು. ಇದೇ ಹಿನ್ನೆಲೆಯಲ್ಲಿ ಒಂದು ದಿನ ಆಕೆ ಶ್ರೀದೇವಿ ಬಳಿ ಹೋಗಿ ನನ್ನ ಮಗನಿಗೆ ರಾಕಿ ಕಟ್ಟು ಎಂದು ಆಕೆಗೆ ಹೇಳಿದ್ದರು ಎಂಬ ಕುತೂಹಲಕಾರಿ ವಿಚಾರವನ್ನು ಬೋನಿ ಹೇಳಿಕೊಂಡಿದ್ದಾರೆ.

910
sridevi and boney kapoor

ಅಲ್ಲದೇ ಶ್ರೀದೇವಿ ಅವರು ಕೆಲ ಸಂಪ್ರದಾಯಗಳನ್ನು ಮುರಿದ ವಿಚಾರಗಳ ಬಗ್ಗೆಯೂ ಬೋನಿ ಮಾತನಾಡಿದ್ದು, ಶ್ರೀದೇವಿ ಅವರ ತಾಯಿ ತೀರಿಕೊಂಡಾಗ ಹೆಣ್ಣು ಮಕ್ಕಳು ಚಿತೆಗೆ ಬೆಂಕಿ ಹಚ್ಚುವಂತಿಲ್ಲ ಎಂಬ ಸಂಪ್ರದಾಯವಿದ್ದರೂ ಅದನ್ನು ಮುರಿದು ಶ್ರೀದೇವಿ ಅವರ ತಾಯಿಯ ಚಿತೆಗೆ ಬೆಂಕಿ ಇಟ್ಟಿದ್ದಳು. ಆಕೆ ನನಗಿಂತ ಹೆಚ್ಚು ಆಧ್ಯಾತ್ಮಿಕವಾಗಿದ್ದಳು. ಆಕೆಯಿಂದಲೇ ನನಗೆ ಆಧ್ಯಾತ್ಮದ ಬಗ್ಗೆ ಆಸಕ್ತಿ ಬಂತು ಎಂದು ಬೋನಿ ಕಪೂರ್ ಹೇಳಿಕೊಂಡಿದ್ದಾರೆ. 

1010
sridevi and boney kapoor

ಇದರ ಜೊತೆಗೆ ಬೋನಿ ಕಪೂರ್ ತಮ್ಮ ಮಕ್ಕಳ ಡೇಟಿಂಗ್ ಬಗ್ಗೆಯೂ ಮಾತನಾಡಿದ ಬೋನಿ ಇದು ಅವರ ವೈಯಕ್ತಿಕ ವಿಚಾರ ನಾನು ಕೇವಲ ಒಮ್ಮೆ ಅಥವಾ ಎರಡು ಬಾರಿಯಷ್ಟೇ ಅವರೊಂದಿಗೆ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಮಾತನಾಡುವೆ. ಆದರೆ ನಮ್ಮ ಜಮಾನಕ್ಕೆ ಹೋಲಿಸಿದರೆ ಇಂದಿನ ಮಕ್ಕಳು ತುಂಬಾ ಫಾಸ್ಟ್ ಇದ್ದಾರೆ.  ನಿಮ್ಮ ಯೋಚನೆಯಂತೆ ನಿಮ್ಮ ಹಾದಿಗೆ ಅವರನ್ನು ತರಲು ಸಾಧ್ಯವಿಲ್ಲ ಎಂದು ಬೋನಿ ಸಂದರ್ಶನದಲ್ಲಿ ಹೇಳಿದ್ದಾರೆ. 

Read more Photos on
click me!

Recommended Stories