ಗಂಡ-ಹೆಂಡತಿ ಜಗಳವಾಡುತ್ತಿದ್ದರೆ ಯೋಚಿಸೋದು ಬೇಡ, ಸಂಬಂಧಕ್ಕೆ ಇದು ಒಳ್ಳೇದಂತೆ!

First Published | Mar 29, 2024, 4:48 PM IST

ಪದೇ ಪದೇ ಜಗಳ ಆಗೋದು, ವಾದಗಳು ನಡೆಯೋದು ಸಂಬಂಧದ ಅಂತ್ಯವನ್ನು ಸೂಚಿಸುವುದಿಲ್ಲ. ಆರೋಗ್ಯಕರ ವಾದಗಳು ಮತ್ತು ಸಂಘರ್ಷವು ಸಂಬಂಧದಲ್ಲಿನ ಸಮಸ್ಯೆಯನ್ನು ತಿಳಿಯಲು ಮತ್ತು ಅವುಗಳಿಗೆ ಪರಿಹಾರ ಕಂಡು ಹಿಡಿಯೋದಕ್ಕೆ ಸಹಾಯ ಮಾಡುತ್ತೆ. ಸಂಬಂಧದಲ್ಲಿ ಸಂಘರ್ಷಗಳು ಏಕೆ ಒಳ್ಳೆಯದು ಅನ್ನೋದಕ್ಕೆ ಇಲ್ಲಿ ಒಂದಿಷ್ಟು ಕಾರಣಗಳಿವೆ.
 

ನೀವು ರಿಲೇಶನ್ ಶಿಪ್ (relationship)ನಲ್ಲಿದ್ರೆ, ಅಥವಾ ಮದ್ವೆ ಆಗಿದ್ರೆ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳ ನಡೆಯೋದು ಸಾಮಾನ್ಯ. ಆದರೆ ಈ ಜಗಳಗಳು, ವಾದಗಳು ಸಂಬಂಧವನ್ನು ಅಂತ್ಯ ಮಾಡುತ್ತೆ ಎನ್ನಲಾಗೋದಿಲ್ಲ. ಯಾಕಂದ್ರೆ ಇದರಿಂದ ಸಂಬಂಧ ಗಟ್ಟಿಯಾಗುವ ಸಾಧ್ಯತೆ ಕೂಡ ಇದೆ. ಸಂಬಂಧದಲ್ಲಿ ಸಣ್ಣ ಪುಟ್ಟ ಸಂಘರ್ಷಗಳು ಇರಬೇಕು ಅನ್ನೋದು ಯಾಕೆ ಅನ್ನೋದನ್ನು ತಿಳಿಯಿರಿ… 
 

ಜಗಳ ತಪ್ಪನ್ನು ಸರಿಪಡಿಸಲು ಅವಕಾಶ ನೀಡುತ್ತೆ
ಸಂಘರ್ಷ ಸಂಬಂಧದಲ್ಲಿ ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತದೆ. ವಾದಗಳಲ್ಲಿ ತೊಡಗುವ ಮೂಲಕ, ವ್ಯಕ್ತಿಗಳು ಸಂಬಂಧಗಳ (relationship) ಸಂಕೀರ್ಣತೆಗಳನ್ನು ಪರಿಹರಿಸಬಹುದು ಮತ್ತು ನಿವಾರಿಸಬಹುದು.

Tap to resize

ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ
ಸಂಘರ್ಷವು ವೈಯಕ್ತಿಕ ಆಯ್ಕೆಗಳು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸಲು ಅವಕಾಶವನ್ನು ನೀಡುತ್ತದೆ. ಇದು ಸಂಗಾತಿ ಯಾವ ರೀತಿ ಆಲೋಚನೆ ಮಾಡುತ್ತಾರೆ ಅನ್ನೋದನ್ನು ಸೂಚಿಸುತ್ತೆ ಮತ್ತು ಸಂಬಂಧದಲ್ಲಿ ಇಬ್ಬರೂ ವ್ಯಕ್ತಿಗಳ ವ್ಯಕ್ತಿತ್ವವನ್ನು(character) ಎತ್ತಿ ತೋರಿಸುತ್ತದೆ.

ಬೆಳವಣಿಗೆಗೆ ಅವಕಾಶ ನೀಡುತ್ತೆ
ಪರಸ್ಪರರ ದೃಷ್ಟಿಕೋನಗಳು ಮತ್ತು ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಸಂಬಂಧವು ಹೆಚ್ಚು ಹೊಂದಾಣಿಕೆ ಮತ್ತು ಹೊಂದಿಕೊಳ್ಳುತ್ತದೆ. ಇದರಿಂದ ಸಂಬಂಧದ ಬೆಳವಣಿಗೆಗೆ ಅವಕಾಶ ಸಿಗುತ್ತೆ. 

ಬದಲಾವಣೆಯ ಅಗತ್ಯವನ್ನು ಸೂಚಿಸುತ್ತದೆ
ಕಲವು ಸಂಬಂಧದಲ್ಲಿ ಬದಲಾವಣೆಯ ಅಗತ್ಯವನ್ನು ಸೂಚಿಸುತ್ತದೆ. ಇಬ್ಬರೂ ವ್ಯಕ್ತಿಗಳು ಸಂಬಂಧದಲ್ಲಿ ತಮ್ಮ ದ್ವೇಷ, ಕುಂದುಕೊರತೆಗಳು ಅಥವಾ ಅತೃಪ್ತಿಯನ್ನು ವ್ಯಕ್ತಪಡಿಸಿದಾಗ, ಅದು ನಾವು ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಬೇಕು ಅನ್ನೋದನ್ನು ಸೂಚಿಸುತ್ತೆ.

ಕಪಲ್ಸ್ ಪರಸ್ಪರ ಚೆನ್ನಾಗಿ ತಿಳಿದುಕೊಳ್ಳುತ್ತಾರೆ
ಸಂಬಂಧದಲ್ಲಿ ದಂಪತಿ (couples) ಪರಸ್ಪರ ಅರ್ಥಮಾಡಿಕೊಳ್ಳಲು ಸಂಘರ್ಷ ಸಹಾಯ ಮಾಡುತ್ತದೆ. ಪರಸ್ಪರರ ಆಯ್ಕೆಗಳನ್ನು ಗುರುತಿಸುವುದು ಮತ್ತು ಅರ್ಥಮಾಡಿಕೊಳ್ಳುವುದು, ಮತ್ತು ವಾದಗಳ ಮೂಲಕ ದೃಷ್ಟಿಕೋನಗಳನ್ನು ಗುರುತಿಸುವುದು ಸುಲಭವಾಗುತ್ತೆ. 
 

ಭಾವನಾತ್ಮಕವಾಗಿ ಕನೆಕ್ಟ್ ಆಗಲು ಸಹಾಯ ಮಾಡುತ್ತೆ
ಜಗಳ ಮಾಡುವಾಗ ಕೆಲವೊಮ್ಮೆ ನಾವು ತುಂಬಾ ಇಮೋಷನಲ್ ಆಗ್ತೀವಿ. ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ಕನೆಕ್ಟ್ (emotionally connect) ಆಗೋದು ಎಷ್ಟು ಮುಖ್ಯ ಅನ್ನೋದನ್ನು ತಿಳಿಯಲು ಸಾಧ್ಯವಾಗುತ್ತೆ. 

ಉತ್ತಮ ಬಂಧಕ್ಕೆ ಅವಕಾಶವನ್ನು ಸೃಷ್ಟಿಸುತ್ತದೆ
ವಾದ ಮಾಡುವಾಗ ಅಥವಾ ಜಗಳ ಮಾಡುವಾಗ, ಇಬ್ಬರಲ್ಲಿ ಏನೆಲ್ಲಾ ತಪ್ಪುಗಳಿವೆ ಅನ್ನೋದು ತಿಳಿದು ಬರುತ್ತೆ, ಹಾಗಾಗಿ ನೀವು ನಿಮ್ಮ ತಪ್ಪನ್ನು ಸರಿಪಡಿಸುವ ಮೂಲಕ ಉತ್ತಮ ಭಾಂದವ್ಯವನ್ನು ರೂಪಿಸಬೇಕು. 

ಇದ್ದಂತೆ ಸ್ವೀಕರಿಸೋಕೆ ಸಾಧ್ಯವಾಗುತ್ತೆ
ಭಿನ್ನಾಭಿಪ್ರಾಯ ಮತ್ತು ವಾದಗಳು ದಂಪತಿ ಹೆಚ್ಚು ಹೊಂದಿಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವಂತೆ ಮಾಡುತ್ತೆ. ಇದರಿಂದ ಒಬ್ಬರನ್ನು ಇದ್ದಂತೆ ಸ್ವೀಕರಿಸೋದಕ್ಕೆ,(acceptance) ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಕ್ಕೆ ಸಾಧ್ಯವಾಗುತ್ತೆ. 

Latest Videos

click me!