Pick me girl ಏನಿದು ಟ್ರೆಂಡ್ ತಿಳಿಯಿರಿ

First Published | Apr 26, 2023, 5:59 PM IST

ಇತ್ತೀಚಿನ ದಿನಗಳಲ್ಲಿ ‘pick me girl ‘ ಕಾನ್ಸೆಪ್ಟ್ ತುಂಬಾನೆ ಟ್ರೆಂಡಿಂಗ್ ನಲ್ಲಿದೆ. ಈ ಬಗ್ಗೆ ನಿಮಗೆ ಗೊತ್ತಿದೆಯೇ? ಈ ಪರಿಕಲ್ಪನೆಯ ಪ್ರಕಾರ, ಹುಡುಗಿಯರು ಇತರ ಹುಡುಗರನ್ನು ಮೆಚ್ಚಿಸಲು ಇತರ ಹುಡುಗಿಯರಿಗಿಂತ ತಮ್ಮನ್ನು ತುಂಬಾ ವಿಭಿನ್ನವಾಗಿ ತೋರಿಸುವುದು, ಡ್ರೆಸ್ ಮಾಡೋದು, ಫ್ಲರ್ಟ್ ಮಾಡೋದನ್ನು ಪಿಕ್ ಮಿ ಗರ್ಲ್ ಎನ್ನುತ್ತಾರೆ. 

ಕಳೆದ ಕೆಲವು ವರ್ಷಗಳಲ್ಲಿ, ಪಿಕ್ ಮಿ ಗರ್ಲ್ (pick me girl) ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಟ್ರೆಂಡ್ ಟಿಕ್ ಟಾಕ್ ನಲ್ಲಿ ತೀವ್ರವಾಗಿ ವೈರಲ್ ಆಗಿತ್ತು. ಕೂಲ್ ಗರ್ಲ್ ಎಂಬ ಹೆಸರಿನಿಂದ ಪಿಕ್ ಮಿ ಗರ್ಲ್ ಟ್ರೆಂಡ್ ಕೂಡ ತುಂಬಾ ವೈರಲ್ ಆಗಿತ್ತು. ಪಿಕ್-ಮಿ ಗರ್ಲ್ ನ ಮುಖ್ಯ ಉದ್ದೇಶ ಪುರುಷರ ಗಮನವನ್ನು ಸೆಳೆಯುವುದು ಮಾತ್ರ. ಈ ಟ್ರೆಂಡ್ ವಿಶೇಷವಾಗಿ 2000 ರ ಆರಂಭದಲ್ಲಿ ರೊಮ್ಯಾಂಟಿಕ್ ಕಾಮಿಡಿಗಳಂತಹ ಸೀರೀಸ್ ಗಳಲ್ಲಿ ಕಂಡುಬಂದಿತು. ಸರಳವಾಗಿ ಹೇಳುವುದಾದರೆ, ಈ ಪರಿಕಲ್ಪನೆಯ ಪ್ರಕಾರ, ಹುಡುಗರನ್ನು ಮೆಚ್ಚಿಸಲು ಹುಡುಗಿಯರು ಇತರ ಹುಡುಗಿಯರಿಗಿಂತ ತಮ್ಮನ್ನು ತುಂಬಾ ಭಿನ್ನವಾಗಿ ತೋರಿಸುತ್ತಾರೆ..

ಈ ಟ್ರೆಂಡ್ ಮೊದಲು ಟ್ವಿಟರಿನಲ್ಲಿ #TweeLikeAPickMe ಮೂಲಕ ಪ್ರಾರಂಭವಾಯಿತು, ಇದನ್ನು ವಿಶೇಷವಾಗಿ ತಮ್ಮನ್ನು ಹೆಂಡತಿಯರೆಂದು ಭಾವಿಸುವ ಮಹಿಳೆಯರನ್ನು ಗೇಲಿ ಮಾಡಲು ಬಳಸಲಾಗುತ್ತಿತ್ತು. 2022 ರಲ್ಲಿ #PickMeGirl, ಈ ಟ್ರೆಂಡ್ ಮತ್ತೆ ಜನರಲ್ಲಿ ಬಹಳ ಜನಪ್ರಿಯವಾಯಿತು. 

Tap to resize

ಇದರಿಂದ ಏನಾದ್ರೂ ಸಮಸ್ಯೆ ಇದೆಯೇ? 
ರಿಲೇಶನ್’ಶಿಪ್ ಎಕ್ಸ್’ಪರ್ಟ್ ಪ್ರಕಾರ, ಹುಡುಗಿಯರು ಪಿಕ್ ಮಿ ನಡವಳಿಕೆಯೊಂದಿಗೆ ಇತರರಿಗಿಂತ ಉತ್ತಮವಾಗಿ ತಮ್ಮನ್ನು ತಾವು ತೋರಿಸಿಕೊಳ್ಳುತ್ತಾರೆ. ಹುಡುಗರು ತನ್ನಂತಹ ಇನ್ನೊಬ್ಬ ಹುಡುಗಿಯನ್ನು ಪಡೆಯಲು ಸಾಧ್ಯವೇ ಇಲ್ಲ ಎನ್ನುವಂತೆ ಮಾಡುತ್ತಾರೆ. ಪಿಕ್ ಮಿ ಬಿಹೇವಿಯರ್ ನ ಹುಡುಗಿಯರು ಡ್ರೆಸ್ಸಿಂಗ್ ಕೂಡ ತುಂಬಾನೆ ಅಪೀಲಿಂಗ್ ಆಗಿರುವಂತೆ ಇರುತ್ತೆ. ಆದರೆ ಈ ಟ್ರೆಂಡ್ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. 

ಈ ಪಿಕ್ ಮಿ ಗರ್ಲ್ ಟ್ರೆಂಡ್ ನ್ನು ಮಹಿಳೆಯರಿಗೆ ಬೀಸುವಂತಹ ಬಲೆ ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ಇತರ ಮಹಿಳೆಯರಂತೆ ಇರಲು ಬಯಸದ ಯಾವುದೇ ಮಹಿಳೆ ಪಿಕ್ ಮಿ ಗರ್ಲ್ ಎಂದು ಕರೆಯಲ್ಪಡುವ ಮೂಲಕ ಇತರ ಮಹಿಳೆಯರನ್ನು ಕೆಟ್ಟದಾಗಿ ಕಾಣುತ್ತಾರೆ.ಇದರಿಂದ ಸ್ಪರ್ಧೆಯೂ ಬೆಳೆಯುತ್ತೆ. 

ಪಿಕ್-ಮಿ ನಡವಳಿಕೆಯು ಪುರುಷರ ಸಮ್ಮುಖದಲ್ಲಿ ಹೆಚ್ಚು sexy dress ಧರಿಸುವುದು, ಹೆಚ್ಚು ಫ್ಲರ್ಟಿಂಗ್ ಮತ್ತು ತಮಾಷೆಯಾಗಿ ವರ್ತಿಸುವುದು, ಸಂಪತ್ತು ಮತ್ತು ಸ್ಥಾನಮಾನದ ಬಗ್ಗೆ ಹೆಮ್ಮೆಪಡುವುದು ಮತ್ತು ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವುದು - ಇವೆಲ್ಲವೂ ಪುರುಷ ಗಮನವನ್ನು ಸೆಳೆಯಲು ಮಾಡಲಾಗುತ್ತೆ. ಈ ಟ್ರೆಂಡ್ ವಿದೇಶದಲ್ಲಿ ಹೆಚ್ಚಾಗಿದೆ. 

ಈ ಹುಡುಗಿಯರು ಹೆಚ್ಚಾಗಿ ಮೇಕಪ್ ಮಾಡೋದಿಲ್ಲ, ಯಾಕೆಂದ್ರೆ ನಾನು ಮತ್ತೊಬ್ಬ ಹುಡುಗಿ ತರ ಅಲ್ಲ ಅನ್ನೋದನ್ನು ತೋರಿಸಲು ಈ ರೀತಿ ಮಾಡ್ತಾರೆ. ಇನ್ನೂ ಕೆಲವರು ತಮಗೆ ಈ ಗರ್ಲ್ ಡ್ರಾಮ (girls drama) ಇಷ್ಟಾನೆ ಆಗಲ್ಲ ಎಂದು ಯಾವಾಗಲೂ ಹುಡುಗರ ಜೊತೆಗೆನೆ ಇರುತ್ತಾರೆ. 

ಅದೇ ಸಮಯದಲ್ಲಿ, ಪಿಕ್-ಮಿ ನಡವಳಿಕೆ ಹುಡುಗಿಯರು ಪುರುಷರ ಕೆಲವು ನಡವಳಿಕೆಗಳು ಮತ್ತು ಚಟುವಟಿಕೆಗಳಲ್ಲಿ ತಾವು ತೊಡಗಿಕೊಳ್ಳುತ್ತಾರೆ. ಉದಾಹರಣೆಗೆ ಕ್ರೀಡೆಗಳನ್ನು ಇಷ್ಟಪಡುವುದು ಅಥವಾ ಬಿಯರ್ ಕುಡಿಯುವುದು, ಗಾಡಿ ರಿಪೇರಿ ಕೆಲಸ ಮೊದಲಾದವುಗಳನ್ನು ತಾವೇ ಮಾಡುತ್ತಾರೆ. ಹೆಚ್ಚಾಗಿ ಇಂತಹ ಅಭ್ಯಾಸದಿಂದ ಲಾಭಕ್ಕಿಂತ ಹೆಚ್ಚಾಗಿ ನಷ್ಟವೇ ಆಗುತ್ತದೆ. 

Latest Videos

click me!