ವೈವಾಹಿಕ ಜೀವನವನ್ನು (Married Life) ಯಶಸ್ವಿಗೊಳಿಸಲು, ಲೈಂಗಿಕ ಜೀವನದಲ್ಲಿ (Sex life)ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ವಯಸ್ಸಾದಂತೆ, ದೇಹದಲ್ಲಿನ ಬದಲಾವಣೆಗಳು ಲೈಂಗಿಕ ಜೀವನವನ್ನು ಅಸಮತೋಲನಗೊಳಿಸಲು ಪ್ರಾರಂಭಿಸುತ್ತವೆ. ಇದರ ಪರಿಣಾಮವು ದೈಹಿಕ ಮತ್ತು ಮಾನಸಿಕ ಬಂಧಗಳ ಮೇಲೆ ಗೋಚರಿಸುತ್ತದೆ. ಈ ಲೈಂಗಿಕ ಬದಲಾವಣೆಗಳಲ್ಲಿ ಒಂದು ಸ್ತ್ರೀ ಲೈಂಗಿಕ ಪ್ರಚೋದನೆ ಅಸ್ವಸ್ಥತೆ ಕೂಡ ಒಂದು, ಇದರಲ್ಲಿ ಮಹಿಳೆಯರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸ್ತ್ರೀ ಲೈಂಗಿಕ ಪ್ರಚೋದನೆಯ ಅಸ್ವಸ್ಥತೆಯ ರೋಗಲಕ್ಷಣಗಳು ಮತ್ತು ಕಾರಣಗಳಿಂದ ಹಿಡಿದು ಚಿಕಿತ್ಸೆಯವರೆಗೆ ಎಲ್ಲವನ್ನೂ ತಿಳಿಯಿರಿ.
ಸ್ತ್ರೀ ಲೈಂಗಿಕ ಪ್ರಚೋದನೆ ಅಸ್ವಸ್ಥತೆ (sex arousal disorder) ಎಂದರೇನು?: ಸ್ತ್ರೀ ಲೈಂಗಿಕ ಪ್ರಚೋದನೆಯ ಅಸ್ವಸ್ಥತೆ ಅಂದರೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ, ಕಾಮೋತ್ತೇಜನೆ ಕಡಿಮೆಯಾಗೋದು. ಇದರಲ್ಲಿ, ಮಹಿಳೆಯರು ಲೈಂಗಿಕವಾಗಿ ಪ್ರಚೋದಿಸಲು ಸಾಧ್ಯವಾಗುವುದಿಲ್ಲ ಮತ್ತು ಲೈಂಗಿಕ ಬಯಕೆಯ ಕೊರತೆಯನ್ನು ಎದುರಿಸಬೇಕಾಗುತ್ತದೆ. ಇದನ್ನು ಹೈಪೋಆಕ್ಟಿವ್ ಸೆಕ್ಸ್ ಅರೌಸಲ್ ಡಿಸಾರ್ಡರ್ ಎಂದೂ ಕರೆಯಲಾಗುತ್ತದೆ. ಈ ಸಮಸ್ಯೆಯಿಂದಾಗಿ, ಮಹಿಳೆಯರು ಪರಾಕಾಷ್ಠೆಯ ಕೊರತೆ ಮತ್ತು ನೋವಿನ ಸಂಭೋಗವನ್ನು ಎದುರಿಸಬೇಕಾಗುತ್ತದೆ.
ಮಹಿಳೆಯರಲ್ಲಿ ಲೈಂಗಿಕ ಪ್ರಚೋದನೆಯ ಅಸ್ವಸ್ಥತೆ ಏಕೆ ಹೆಚ್ಚಾಗುತ್ತಿದೆ?: ಸ್ತ್ರೀರೋಗತಜ್ಞರ ಪ್ರಕಾರ ಲೈಂಗಿಕ ಪ್ರಚೋದನೆಯ ಇಳಿಕೆಯು ಮಹಿಳೆಯ ವಯಸ್ಸು, ಆಹಾರ, ಮಾನಸಿಕ ಆರೋಗ್ಯ ಮತ್ತು ಸಂಬಂಧದ ಅವಧಿಯನ್ನು ಅವಲಂಬಿಸಿರುತ್ತದೆ. ಅಂದರೆ, ಜೀವನಶೈಲಿ ಅನಿಯಮಿತ ಮತ್ತು ಲೈಂಗಿಕ ಜೀವನವು (Sex life)ಆರೋಗ್ಯಕರವಾಗಿಲ್ಲದ ಮಹಿಳೆಯರಲ್ಲಿ, ಲೈಂಗಿಕ ಆಸಕ್ತಿ ಮತ್ತು ಪ್ರಚೋದನೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ವಿಶೇಷವಾಗಿ ಋತುಬಂಧದ ಸಮಯದಲ್ಲಿ, ಮಹಿಳೆಯರು ಸ್ತ್ರೀ ಲೈಂಗಿಕ ಪ್ರಚೋದನೆಯ ಅಸ್ವಸ್ಥತೆ ಕಂಡು ಬರುತ್ತದೆ.
ಸ್ತ್ರೀ ಲೈಂಗಿಕ ಪ್ರಚೋದನೆ ಅಸ್ವಸ್ಥತೆಯ ಲಕ್ಷಣಗಳನ್ನು ತಿಳಿಯಿರಿ
ಲೈಂಗಿಕ ಬಯಕೆ ಕಡಿಮೆಯಾಗುವುದು: ಸ್ತ್ರೀ ಲೈಂಗಿಕ ಪ್ರಚೋದನೆ ಅಸ್ವಸ್ಥತೆಯ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಕಾಮಾಸಕ್ತಿ (sexual desire) ಕಡಿಮೆಯಾಗುತ್ತದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಪ್ರಚೋದನೆಯ ಕೊರತೆಯಿಂದಾಗಿ, ಅವರು ಒತ್ತಡ ಮತ್ತು ಆತಂಕವನ್ನು ಎದುರಿಸಬೇಕಾಗುತ್ತದೆ. ವಯಸ್ಸಾದಂತೆ, ಈ ಸಮಸ್ಯೆ ಗಂಭೀರವಾಗಲು ಪ್ರಾರಂಭಿಸುತ್ತದೆ.
ಲೈಂಗಿಕ ಚಟುವಟಿಕೆಯಲ್ಲಿ ಉಪಕ್ರಮ ತೆಗೆದುಕೊಳ್ಳದಿರುವುದು: ಕಡಿಮೆ ಲೈಂಗಿಕ ಬಯಕೆಯಿಂದಾಗಿ (low sex desire), ಮಹಿಳೆಯರಿಗೆ ಲೈಂಗಿಕ ಜೀವನದ ಬಗ್ಗೆ ಯೋಚಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಸಂಗಾತಿಯೊಂದಿಗೆ ಸೆಕ್ಸ್ ಮಾಡಲು ಅಥವಾ ಅದನ್ನು ಎಂಜಾಯ್ ಮಾಡೋದನ್ನು ಸಹ ಇಷ್ಟಪಡುವುದಿಲ್ಲ. ಅವರೊಳಗೆ ಲೈಂಗಿಕ ಪ್ರಚೋದನೆ ಕಡಿಮೆಯಾಗುತ್ತದೆ. ಇದರ ಪರಿಣಾಮವು ದಂಪತಿಗಳ ವೈವಾಹಿಕ ಜೀವನದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಜನನಾಂಗ ಮತ್ತು ಜನನಾಂಗೇತರ ಸಂವೇದನೆಯಲ್ಲಿ ಇಳಿಕೆ: ಸ್ತ್ರೀ ಲೈಂಗಿಕ ಪ್ರಚೋದನೆಯ ಅಸ್ವಸ್ಥತೆಗೆ ಬಲಿಯಾದ ಮಹಿಳೆಯರು ಲೈಂಗಿಕತೆಯ ಸಮಯದಲ್ಲಿ ಜನನಾಂಗಗಳು ಮತ್ತು ಎರೋಜೆನಸ್ ವಲಯಗಳಲ್ಲಿ ಯಾವುದೇ ಸಂವೇದನೆಯನ್ನು ಅನುಭವಿಸುವುದಿಲ್ಲ. ದೀರ್ಘಕಾಲದವರೆಗೆ ಪ್ರಚೋದನೆಯ ಕೊರತೆಯಿಂದಾಗಿ, ಸಂಭೋಗವು ನೋವಿನಿಂದ ಕೂಡಿರುತ್ತದೆ.
ಈ ಸಮಸ್ಯೆಯ ಲಕ್ಷಣಗಳು ಯಾವುವು?
ಹಾರ್ಮೋನ್ ಅಸಮತೋಲನ (Hormonal Imbalance): ಹಾರ್ಮೋನ್ ಅಸಮತೋಲನವು ಲೈಂಗಿಕ ಬಯಕೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ. ವಿಶೇಷವಾಗಿ ಋತುಬಂಧ, ಗರ್ಭಧಾರಣೆ ಮತ್ತು ಗರ್ಭನಿರೋಧಕ ಮಾತ್ರೆಗಳ ಬಳಕೆ ಈ ಸಮಸ್ಯೆಗೆ ಮುಖ್ಯ ಕಾರಣ. ಇದು ಪ್ರಚೋದನೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ ಮತ್ತು ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.
ಲ್ಯೂಬ್ ಕೊರತೆ: ಯೋನಿಯಲ್ಲಿ ಲ್ಯೂಬ್ ಕೊರತೆಯು ನೋವಿನ ಸೆಕ್ಸ್ ಗೆ (painful sex)ಕಾರಣವಾಗುತ್ತದೆ, ಇದು ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತದೆ. ಜರ್ನಲ್ ಆಫ್ ಸೆಕ್ಸ್ ಅಂಡ್ ಮ್ಯಾರಿಟಲ್ ಥೆರಪಿ ಪ್ರಕಾರ, ಲೂಬ್ರಿಕೇಟ್ ಗಳನ್ನು ಬಳಸುವುದರಿಂದ ಫೆಂಟೋಲಮೈನ್ ಹೆಚ್ಚಾಗುತ್ತದೆ. ಇದು ಲೈಂಗಿಕ ಸಂವೇದನೆಯನ್ನು ಸುಧಾರಿಸುತ್ತದೆ, ಇದು ಲೈಂಗಿಕ ಜೀವನವನ್ನು ಸುಗಮಗೊಳಿಸುತ್ತದೆ.
ಔಷಧಿಗಳು: ಅನೇಕ ರೀತಿಯ ಔಷಧಿಗಳ (medicine) ಸೇವನೆಯು ದೇಹದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದರ ಪರಿಣಾಮವು ಲೈಂಗಿಕ ಆರೋಗ್ಯದ ಮೇಲೂ ಕಂಡುಬರುತ್ತದೆ. ಈ ಕಾರಣದಿಂದಾಗಿ, ಮಹಿಳೆಯರು ಲೈಂಗಿಕ ಪ್ರಚೋದನೆಯ ಅಸ್ವಸ್ಥತೆಯನ್ನು ಎದುರಿಸಬೇಕಾಗುತ್ತದೆ.
ಮಾನಸಿಕ ಉದ್ವೇಗ: ಸಂಬಂಧಗಳಲ್ಲಿ ಹೆಚ್ಚುತ್ತಿರುವ ಒತ್ತಡವು ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಸಂಗಾತಿಯೊಂದಿಗಿನ ಭಾವನಾತ್ಮಕ ಸಂಬಂಧವನ್ನು ಕಡಿಮೆ ಮಾಡುತ್ತದೆ, ಇದು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಖಿನ್ನತೆ, ಮನಸ್ಥಾಪ ಇವೆಲ್ಲರೂ ಲೈಂಗಿಕ ಆಸಕ್ತಿ ಕಡಿಮೆಗೆ ಕಾರಣವಾಗುತ್ತದೆ.
ಈ ಸಮಸ್ಯೆಯಿಂದ ಹೊರಬರುವುದು ಹೇಗೆ?: ಈ ಸಮಸ್ಯೆಯಿಂದ ಹೊರಬರಲು ಹಾರ್ಮೋನುಗಳ ಚಿಕಿತ್ಸೆಯನ್ನು (hormonal treatment) ತೆಗೆದುಕೊಳ್ಳಬಹುದು. ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನುಗಳ ಮಟ್ಟದಲ್ಲಿ ಕುಸಿತವು ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ವೈದ್ಯಕೀಯ ಪರೀಕ್ಷೆ ಮತ್ತು ಸಲಹೆಯ ನಂತರ ಹಾರ್ಮೋನು ಚಿಕಿತ್ಸೆ ಪಡೆಯೋದು ಉತ್ತಮ. ಇದಲ್ಲದೆ, ಮಾನಸಿಕ ಚಿಕಿತ್ಸೆಗಳು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ.