Published : Aug 10, 2021, 10:16 PM ISTUpdated : Aug 10, 2021, 10:24 PM IST
ಮುಂಬೈ(ಆ. 10) ಇತ್ತೀಚಿಗಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿ ಪುತ್ರನಿಗೆ ಜಹಾಂಗೀರ್ ಅಂಥ ಹೆಸರಿಟ್ಟ ಕರೀನಾ-ಸೈಫ್ ದಂಪತಿ ಟ್ರೋಲ್ ಆಗುತ್ತಿದ್ದಾರೆ. ಈ ನಡುವೆ ಕರೀನಾ ಮತ್ತೊಂದು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಗರ್ಭಿಣಿಯಾಗಿದ್ದ ಸಂದರ್ಭ ಸೆಕ್ಸ್ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡಿದ್ದೇನೆ ಎಂದಿದ್ದಾರೆ.
27
ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯ ಪರಿಸ್ಥಿತಿ ಬಹುತೇಕ ಮಂದಿಗೆ ಅರ್ಥ ಆಗುವುದೇ ಇಲ್ಲ. ಆಕೆಯ ತಳಮಳ, ಭಾವನೆಗಳು, ಮಾನಸಿಕ ಉದ್ವೇಗ, ಮೂಡ್ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಲೇ ಇರುತ್ತವೆ ಎಂದು ವ್ಯಾಖ್ಯಾನ ನೀಡಿದ್ದಾರೆ.
37
ಮಹಿಳೆ ಮನಸ್ಸಿನಲ್ಲಿ ದುಗುಡ ಅನುಭವಿಸುತ್ತಿರುವಾಗ ಆಕೆಯ ಪತಿ ಅರ್ಥ ಮಾಡಿಕೊಂಡು ನಡೆಯಬೇಕು. ಈ ವಿಚಾರದಲ್ಲಿ ಸೈಫ್ ಗೆ ಫುಲ್ ಮಾರ್ಕ್ ನೀಡುತ್ತೇನೆ ಎಂದು ಹೇಳಿದ್ದಾರೆ.
47
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ದಂಪತಿಯಲ್ಲಿ ಒಬ್ಬರಿಗೆ ಸೆಕ್ಸ್ ನಲ್ಲಿ ಆಸಕ್ತಿ ಇಲ್ಲವಾದರೆ ಮತ್ತೊಬ್ಬರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ದಾಂಪತ್ಯ ಅರ್ಥ ಪೂರ್ಣ ಎಂದು ತಿಳಿಸಿದ್ದಾರೆ.
57
ಬಾಣಂತನ ಕುರಿತಾಗಿ ಕರೀನಾ ತಾವೇ ಬರೆದ 'ಪ್ರೆಗ್ನೆನ್ಸಿ ಬೈಬಲ್' ಪುಸ್ತಕದ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
67
ಮೊದಲನೆ ಪುತ್ರನಿಗೆ ತೈಮೂರ್ ಎರಡನೇ ಪುತ್ರನಿಗೆ ಜಹಾಂಗೀರ್ ಎಂದು ಹೆಸರಿಟ್ಟಿರುವ ಕಾರಣ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ.