ಇಬ್ಬರು ಸಂಗಾತಿಗಳ ಸಂಬಂಧಕ್ಕೆ ಬಂದಾಗ, ಅವರು ಕ್ರಮೇಣ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಈ ಸಮಯದಲ್ಲಿಯೇ ಅದು ತಮಗೆ ಸೂಕ್ತವಲ್ಲದ ಸಂಬಂಧ ಎಂಬುವುದು ಅರಿವಿಗೆ ಬರುತ್ತದೆ. ಇಂತಹ ಸಂದರ್ಭಗಳಲ್ಲಿ, ಹೆಚ್ಚಿನ ಜೋಡಿಗಳು ಬೇರೆಯಾಗಲು ಬಯಸುತ್ತಾರೆ. ಆದಾಗ್ಯೂ, ಈ ಸಂದರ್ಭದಲ್ಲಿ ಹುಡುಗಿಯರು ತುಂಬಾ ಭಿನ್ನರಾಗಿದ್ದಾರೆ. ಸಂಗಾತಿಯೊಂದಿಗೆ ಸಂಬಂಧ ಕಡಿದುಕೊಂಡ ನಂತರ ಅವರ ಹಾವಭಾವಗಳು ಸಂಪೂರ್ಣವಾಗಿ ಬದಲಾಗುತ್ತವೆ. ಅವರು ತಮ್ಮ ಎಕ್ಸ್ ಅಸೂಯೆಪಡುವಂತೆ ಮಾಡುವ ವಿಷಯಗಳ ಮೇಲೆ ಗಮನ ಹರಿಸಲು ಪ್ರಾರಂಭಿಸುತ್ತಾರೆ.
ರಹಸ್ಯವಾಗಿ ಒಂದು ಕಣ್ಣಿಡುತ್ತಾರೆಆಕೆ ತನ್ನ ಸಂಗಾತಿಯಿಂದ ಬೇರ್ಪಟ್ಟಿದ್ದರೂ, ಸಂಗಾತಿ ಮೇಲೆ ರಹಸ್ಯ ಕಣ್ಣಿಡುವುದನ್ನು ನಿಲ್ಲಿಸುವುದಿಲ್ಲ. ಅವರಿಂದ ಬೇರ್ಪಟ್ಟ ನಂತರ ಸಂಗಾತಿ ತಮ್ಮ ಜೀವನವನ್ನು ಹೇಗೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಆಕೆ ಗಮನ ಹರಿಸುತ್ತಾಳೆ.
ಸಂಗಾತಿ ಜೀವನದಲ್ಲಿ ಯಾವುದೇ ಹುಡುಗಿ ಇಲ್ಲ ಅಥವಾ ಅವರಿಂದ ದೂರವಾಗುವ ನೋವು ಸಂಗಾತಿಗೆ ಇಲ್ಲವೇ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಹುಡುಗಿಯರು ತುಂಬಾ ಸೂಕ್ಷ್ಮರಾಗಿದ್ದರೆ, ಬ್ರೇಕ್ ಅಪ್ ನಂತರವೂ, ಸಂಗಾತಿ ಅವರಿಲ್ಲದೆ ಜೀವನವನ್ನು ಹೇಗೆ ನಡೆಸುತ್ತಾರೆ ಎಂದು ತಿಳಿಯಲು ಅವರು ಆಸಕ್ತಿ ಹೊಂದಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದುಸಂಬಂಧ ಮುರಿದು ಬಿದ್ದ ನಂತರ ಹುಡುಗಿಯರು ಸಂಪೂರ್ಣವಾಗಿ ಕುಗ್ಗಿ ಹೋಗಬಹುದು, ಆದರೆ ಅವರು ಹೊರಗಿನಿಂದ ತಮ್ಮನ್ನು ತುಂಬಾ ಸ್ಟ್ರಾಂಗ್ ಆಗಿದ್ದೇವೆ ಎಂಬುದನ್ನು ತೋರಿಸಲು ಇಷ್ಟ ಪಡುತ್ತಾರೆ. ಮಹಿಳೆಯರು ತಾವು ತುಂಬಾ ಸಂತೋಷವಾಗಿದ್ದೇವೆ ಮತ್ತು ಬ್ರೇಕ್ ಅಪ್ ಹೆಚ್ಚಿನ ವ್ಯತ್ಯಾಸವನ್ನು ಮಾಡಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ತೋರಿಸಲು ಪ್ರಯತ್ನಿಸುತ್ತಾರೆ.
ಬ್ರೇಕ್ ಅಪ್ ಆಗಿರುವ ಸಮಯದಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿ ಕಾಣುತ್ತಾರೆ ಮತ್ತು ವಿಭಿನ್ನ ಶೈಲಿಗಳಲ್ಲಿ ಅನೇಕ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಕೆಲವೊಮ್ಮೆ ಅವರು ನಾವು ಎಷ್ಟು ಸ್ಟ್ರಾಂಗ್ ಆಗಿದ್ದೇವೆ ಎನ್ನುವುದನ್ನು ಹೇಳಿ ಸಹ ಪೋಸ್ಟ್ ಮಾಡುತ್ತಾರೆ.
ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆಒಬ್ಬ ನಿರ್ದಿಷ್ಟ ವ್ಯಕ್ತಿ ಹುಡುಗಿಯ ಜೀವನವನ್ನು ಪ್ರವೇಶಿಸಿದಾಗ, ಅವರು ಕ್ರಮೇಣ ತಮ್ಮ ಸಂಬಂಧದಲ್ಲಿ ಎಷ್ಟು ಕಾರ್ಯನಿರತರಾಗುತ್ತಾರೆ ಎಂದರೆ, ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾರೆ. ಬ್ರೇಕ್ ಅಪ್ ನಂತರ ಅವರು ಮೊದಲು ಈ ವಿಷಯವನ್ನು ತಮ್ಮ ಸ್ನೇಹಿತರಿಗೆ ತಿಳಿಸುತ್ತಾರೆ.
ಹುಡುಗಿಯರು ತಮ್ಮ ಪ್ರೇಮಿಯೊಂದಿಗೆ ಬ್ರೇಕ್ ಅಪ್ ಆದ ನಂತರ ತಮ್ಮ ಹೃದಯ ವೇದನೆಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ಅದರಿಂದ ಹೊರಬರಲು ಸ್ನೇಹಿತರೊಂದಿಗೆ ಹೆಚ್ಚು ಸಮಯ ಉಳಿಯುತ್ತಾರೆ.
ಅನ್ ಬ್ಲಾಕ್ ಮಾಡಿ ಸ್ಟೇಟಸ್ ನೋಡುತ್ತಾರೆಬ್ರೇಕ್ ಅಪ್ ನಂತರವೂ ಹುಡುಗಿಯರು ಸಂಗಾತಿಯ ಸೋಶಿಯಲ್ ಮೀಡಿಯಾ ಸ್ಟೇಟಸ್ ನೋಡುತ್ತಾರೆ. ಅವರು ಸಂಗಾತಿ ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ಅವರ ಪ್ರೊಫೈಲ್ ಅನ್ನು ಬೇಕಾದಾಗ ಅನ್ ಬ್ಲಾಕ್ ಮಾಡುವ ಮೂಲಕ ಪರಿಶೀಲಿಸುತ್ತಾಳೆ.
ಮಾಜಿ ಸಂಗಾತಿ ಜೀವನದಲ್ಲಿ ಏನು ನಡೆಯುತ್ತಿದೆ ಮತ್ತು ಅವರು ಯಾರೊಂದಿಗೆ ಸಮಯ ಕಳೆಯುತ್ತಿದ್ದಾರೆ ಎಂಬುದನ್ನು ಕಂಡು ಹಿಡಿಯಲು ಅವಳು ಯಾವಾಗಲೂ ಸಂಗಾತಿಯ ಸ್ಟೇಟಸ್ ಮೇಲೆ ಕಣ್ಣಿಡುತ್ತಾಳೆ. ಪರಿಶೀಲಿಸಿದ ನಂತರ ಮತ್ತೆ ಬ್ಲಾಕ್ ಮಾಡುತ್ತಾರೆ.