ನಾನು ಮದ್ವೆಯಾಗಿದ್ದು ನಿಜ ಎನ್ನುತ್ತಲೇ ಪತಿಯ ಗುಟ್ಟನ್ನೂ ರಿವೀಲ್​ ಮಾಡಿದ Kangana Ranaut

Published : May 22, 2026, 06:03 PM IST

ಸಂಸದೆ ಕಂಗನಾ ರಣಾವತ್ ಮಂಗಳಸೂತ್ರ ಮತ್ತು ಹಸಿರು ಬಳೆ ಧರಿಸಿ ಕಾಣಿಸಿಕೊಂಡಿದ್ದು, ಅವರ ರಹಸ್ಯ ವಿವಾಹದ ಬಗ್ಗೆ ವದಂತಿಗಳನ್ನು ಹುಟ್ಟುಹಾಕಿದೆ. ಆದರೆ, ಇದು ತಮ್ಮ ಮುಂಬರುವ ಸಿನಿಮಾದ ಗೃಹಿಣಿಯ ಪಾತ್ರದ ಗೆಟಪ್ ಎಂದು ಕಂಗನಾ ಸ್ಪಷ್ಟಪಡಿಸಿದ್ದು, ತಾನು ಮದುವೆಯಾದರೆ ತಿಳಿಸಿಯೇ ಆಗುವುದಾಗಿ ಹೇಳಿದ್ದಾರೆ.

PREV
16
ಕಂಗನಾ ರಣಾವತ್​ ಮದುವೆ?

ಕಂಗನಾ ರಣಾವತ್​ ಸದ್ಯ ಬಿ-ಟೌನ್​ನಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಸಂಸದೆಯಾಗಿಯೂ ಮಿಂಚುತ್ತಿರುವ ಕಂಗನಾ ಅವರ ಮದುವೆಯ ಬಗ್ಗೆ ಅವರಿಗಿಂತಲೂ ಅಭಿಮಾನಿಗಳು ಹೆಚ್ಚಿಗೆ ತಲೆ ಕೆಡಿಸಿಕೊಂಡಿದ್ದಾರೆ. ಕಂಗನಾ ಹೋದಲ್ಲೆಲ್ಲಾ ಮದುವೆ ಯಾವಾಗ ಎನ್ನುವ ಪ್ರಶ್ನೆಗಳೇ ಬರುತ್ತವೆ.

26
ಮಂಗಳಸೂತ್ರ, ಹಸಿರು ಬಳೆ

ಇದೀಗ ಕಂಗನಾ ಅವರು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಕಂಡುಬಿಟ್ಟರು. ಆಗ ಮಂಗಳಸೂತ್ರ, ಹಸಿರು ಬಳೆ ಕಂಡಿವೆ. ಕಂಗನಾ ಹೇಳದೇ ಕೇಳದೇ ಗುಟ್ಟಾಗಿ ಮದುವೆಯಾಗಿಬಿಟ್ರಾ ಎಂದು ಭಾರಿ ಸದ್ದು ಮಾಡುತ್ತಿದೆ. ಇದಾಗಲೇ ಕೆಲವು ಬ್ರೇಕಪ್​ ಮಾಡಿಕೊಂಡಿರುವ ಕಂಗನಾ ಕೊನೆಗೂ ಮದುವೆಯಾಗಿಬಿಟ್ಟರು, ಪತಿ ಯಾರು ಎಂದೆಲ್ಲಾ ಚರ್ಚೆ ಶುರುವಾಗಿತ್ತು.

36
ಚಿರಾಗ್ ಪಾಸ್ವಾನ್ ಜೊತೆ ಲವ್​ ಗಾಸಿಪ್​

ಸಂಸದ ಚಿರಾಗ್ ಪಾಸ್ವಾನ್ ಅವರೊಂದಿಗಿನ ಪ್ರಣಯದ ವರದಿಗಳನ್ನು ಅವರು ತಳ್ಳಿಹಾಕಿದ ಕೆಲವು ದಿನಗಳ ನಂತರ ಕಂಗನಾ ಅವರ ರಹಸ್ಯ ವಿವಾಹದ ವದಂತಿ ಹುಟ್ಟುಹಾಕಿದವು. ಅದಕ್ಕೆ ಈಗ ನಟಿ ಖುದ್ದು ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಮದುವೆಯಾಗಿದ್ದು ನಿಜ. ಆದರೆ ನೀವಂದುಕೊಂಡಂತೆ ಅಲ್ಲ ಎಂದು ಹೇಳಿದ್ದಾರೆ.

46
ನನ್ನ ಗಂಡ ಇವರೇ

ಇದು ನನ್ನ ಮುಂದಿನ ಸಿನಿಮಾದ ಗೆಟಪ್​. ಮುಂಬರುವ ಸಿನಿಮಾದಲ್ಲಿ ನನ್ನದು ಗೃಹಿಣಿಯ ಪಾತ್ರ. ಆದ್ದರಿಂದ ಸದ್ಯ ನೀವಂದುಕೊಂಡ ಮದುವೆಯಾಗಿದ್ದರೆ ನನ್ನ ಗಂಡ ಈ ಸಿನಿಮಾದ ನಾಯಕ ಎಂದು ನಟಿ ಹಾಸ್ಯ ಮಾಡಿದ್ದಾರೆ.

56
ಫೋಟೋ ಹಿಂದಿನ ಗುಟ್ಟು

ನಾನು ಪ್ರತಿದಿನ ನಗರದಲ್ಲಿ ಮತ್ತು ಸುತ್ತಮುತ್ತ ಚಿತ್ರೀಕರಣ ಮಾಡುತ್ತಿದ್ದೇನೆ. ಯಾರೋ ನನ್ನ ಪಾತ್ರದ ಮೇಕಪ್‌ನಲ್ಲಿರುವ ಈ ಫೋಟೋ ಕ್ಲಿಕ್ಕಿಸಿದರು, ಮತ್ತು ಈಗ ನನಗೆ ತುಂಬಾ ಫೋನ್ ಕರೆಗಳು ಬರುತ್ತಿವೆ, ಕಾಲ್​ ರಿಸೀಲ್ ಮಾಡಿ ಸುಸ್ತಾಗಿದ್ದೇನೆ ಎಂದ ನಟಿ, ವಿವಾಹಿತ ಮಹಿಳೆಯ ಲುಕ್‌ ಕಂಡ್ರೆ ಅದರಲ್ಲಿ ಅಂಥದ್ದೇನು ವಿಶೇಷತೆ ಇದೆ ಎಂದು ಪ್ರಶ್ನಿಸಿದ್ದಾರೆ.

66
ನಿಮಗೆ ಹೇಳೇ ಮದ್ವೆಯಾಗ್ತೇನೆ

ಇದೇ ವೇಳೆ ನಾನು ಮದುವೆಯಾಗುವುದಾದರೆ ಗುಟ್ಟಾಗಿ ಆಗುವುದಿಲ್ಲ. ಖಂಡಿತ ನಿಮಗೆ ತಿಳಿಸುತ್ತೇನೆ ಎಂದು ಲಾಫಿಂಗ್​ ಇಮೋಜಿ ಹಾಕಿದ್ದಾರೆ ಕಂಗನಾ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories