ಕಾಮಸೂತ್ರದ ಹೆಸರನ್ನು ಕೇಳಿದ ತಕ್ಷಣ ನೆನಪಿಗೆ ಬರುವ ಮೊದಲ ವಿಷಯವೆಂದರೆ ಲೈಂಗಿಕತೆ ಅಥವಾ ಲೈಂಗಿಕ ಸಂಬಂಧಗಳಿಗೆ ಸಂಬಂಧಿಸಿದ ಮಾಹಿತಿ. ಆದರೆ ಕಾಮಸೂತ್ರದ ಅರ್ಥ ನಿಮಗೆ ತಿಳಿದಿದೆಯೇ? ಇದರರ್ಥ ಸಂತೋಷ (Happiness). ಕಾಮಸೂತ್ರ ಅಂದರೆ ಯಾವ ಕೆಲಸದಿಂದ ನಮಗೆ ಸಂತೋಷ ಸಿಗುವುದೋ ಅದೇ ಕಾಮಸೂತ್ರ.
ಕಾಮಸೂತ್ರ (Kamasutra) ನಮ್ಮ ಸಂಬಂಧಗಳನ್ನು ಸುಧಾರಿಸುವ ಜ್ಞಾನವನ್ನು ಸಹ ನೀಡುತ್ತದೆ, ಅದನ್ನು ಲೈಂಗಿಕತೆಗೆ ಮಾತ್ರ ಲಿಂಕ್ ಮಾಡುವುದು ಸರಿಯಲ್ಲ. ಕಾಮಸೂತ್ರದಲ್ಲಿ, ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸಲು ಅನೇಕ ಸಲಹೆಗಳಿವೆ. ಇಂದು ನಾವು ನಿಮಗೆ ಅಂತಹ 5 ಸಲಹೆಗಳನ್ನು ಹೇಳುತ್ತಿದ್ದೇವೆ, ಇದು ಸಂಗಾತಿ ಜೊತೆ ಉತ್ತಮ ಬಾಂಧವ್ಯ ಹೊಂದಲು ಸಹಾಯ ಮಾಡುತ್ತದೆ.
ನಿಧಾನವಾಗಿ ಕಿಸ್ ಮಾಡಿ
ಲೈಂಗಿಕ ಕ್ರಿಯೆಗೆ ಮೊದಲು ನಿಮ್ಮ ಸಂಗಾತಿಯನ್ನು ಚುಂಬಿಸುವುದು (kiss your partner) ಮುಖ್ಯ. ಚುಂಬನದ ಸಮಯದಲ್ಲಿ ತಾಳ್ಮೆಯಿಂದಿರಿ. ಇದನ್ನು ಮಾಡುವುದರಿಂದ, ಸಂಗಾತಿಯು ಈ ಸಂಬಂಧದ ಆಳವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ವೇಗವಾಗಿ ಚುಂಬಿಸಲು ನಿಮ್ಮನ್ನು ಪ್ರಚೋದಿಸುತ್ತಾರೆ. ಆದರೆ ನೀವು ಲೈಂಗಿಕ ಕ್ರಿಯೆ ನಡೆಸಲು ಆತುರಪಡಬೇಕಾಗಿಲ್ಲ. ಹೆಚ್ಚಿನ ಹೊಸ ದಂಪತಿಗಳು ಇಲ್ಲಿ ತಪ್ಪುಗಳನ್ನು ಮಾಡುತ್ತಾರೆ. ನೇರವಾಗಿ ಸೆಕ್ಸ್ ಮಾಡಿದರೆ, ಅದರಿಂದ ಆರ್ಗಸಂ ಸಿಗೋದಿಲ್ಲ. ಅದರ ಬದಲಾಗಿ ಮೊದಲಿಗೆ ಕಿಸ್ ನಿಂದ ಆರಂಭಿಸಿ, ನಂತರ ಸೆಕ್ಸ್ ಮಾಡಿ.
ಮಹಿಳೆಯರು ಸಹ ರೊಮ್ಯಾನ್ಸ್ ಆರಂಭಿಸಬಹುದು
ಲೈಂಗಿಕ ಕ್ರಿಯೆ (physical relationship)ನಡೆಸುವಾಗ ಮಹಿಳೆಯರು ನಾಚಿಕೆಪಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಸೆಕ್ಸ್ ಮಾಡೋವಾಗ ಪುರುಷರೇ ಡಾಮಿನೇಟ್ ಮಾಡ್ತಾರೆ. ಆದರೆ ಲೈಂಗಿಕತೆಯು ಇಬ್ಬರು ವ್ಯಕ್ತಿಗಳ ಕ್ರಿಯೆಯಾಗಿದೆ. ನೀವಿಬ್ಬರೂ ಕಾಲಕಾಲಕ್ಕೆ ಸಂಬಂಧವನ್ನು ಮುನ್ನಡೆಸಬೇಕು, ಅದು ಇಬ್ಬರ ಜವಾಬ್ದಾರಿ. ಮಹಿಳೆಯರು ತಮ್ಮ ಲೈಂಗಿಕ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಬೇಕು.
ಮಹಿಳೆಯರು ಲೈಂಗಿಕ ಶಿಕ್ಷಣ ಪಡೆಯಬೇಕು
ವಾತ್ಸಾಯನದ ಪ್ರಕಾರ, ಎಲ್ಲಾ ಮಹಿಳೆಯರು ಮದುವೆಗೆ ಮೊದಲು ಮತ್ತು ಮದುವೆ ನಂತರ ಗಂಡನ ಅನುಮತಿಯೊಂದಿಗೆ ಕಾಮಶಾಸ್ತ್ರ ಶಿಕ್ಷಣವನ್ನು (Sex education) ತೆಗೆದು ಕೊಳ್ಳಬೇಕು. ಇದು ವೈವಾಹಿಕ ಜೀವನದಲ್ಲಿ (married life) ಸ್ಥಿರತೆಯನ್ನು ಕಾಪಾಡುತ್ತದೆ ಮತ್ತು ಪತಿ ಇತರ ಮಹಿಳೆಯರತ್ತ ಆಕರ್ಷಿತನಾಗುವುದಿಲ್ಲ.
ಪ್ರತಿಯೊಬ್ಬ ಮಹಿಳೆಯರು ಲೈಂಗಿಕ ಚಟುವಟಿಕೆಯ ಜ್ಞಾನ ಹೊಂದಿರುವುದು ಅವಶ್ಯಕ, ಇದರಿಂದ ಅವರು ಸೆಕ್ಸ್ ಬಗ್ಗೆ ಉತ್ತಮ ಅಂಶಗಳನ್ನು ತಿಳಿಯುತ್ತಾರೆ ಮತ್ತು ಗಂಡನನ್ನು ತಮ್ಮ ಪ್ರೀತಿಯ ಬಲೆಯಲ್ಲಿ ಹೇಗೆ ಬಂಧಿಸಬಹುದು ಅನ್ನೋದನ್ನು ಸಹ ತಿಳಿಯುತ್ತಾರೆ. ಅದೇ ಸಮಯದಲ್ಲಿ, ಆಚಾರ್ಯ ವಾತ್ಸಾಯನ (Vatsayana) ಮಹಿಳೆಯರು ತಮ್ಮ ಸ್ನೇಹಿತರು, ವಿಶ್ವಾಸಾರ್ಹ ಸಂಬಂಧಿಗಳ ಜೊತೆ ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿ
ಪುರುಷರು ಮತ್ತು ಮಹಿಳೆಯರು, ಒಟ್ಟಿಗೆ ಆರೋಗ್ಯಕರ ಜೀವನಶೈಲಿಯನ್ನು ನಡೆಸಿದರೆ ಮಾತ್ರ, ಉತ್ತಮ ದಾಂಪತ್ಯ ಜೀವನ ನಡೆಸಲು ಸಾಧ್ಯ ಎಂದು ಕಾಮಸೂತ್ರ ಹೇಳುತ್ತದೆ. ಜೀವನಶೈಲಿ ಸೋಮಾರಿತನ, ಜಡತ್ವ, ಒಬ್ಬರಿಗೊಬ್ಬರು ವಿಷಕಾರುತ್ತಿದ್ದರೆ, ಇಬ್ಬರ ನಡುವೆ ಜಗಳ ಆರಂಭವಾಗುತ್ತೆ. ಇಬ್ಬರೂ ಸಂಗಾತಿಗಳು ಪರಸ್ಪರರ ಜೀವನದಲ್ಲಿ ಆರೋಗ್ಯಕರ ಜೀವನಶೈಲಿ (healthy lifestyle) ಪಾಲಿಸಬೇಕು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು, ಪ್ರೀತಿ ಮಾಡಬೇಕು.