ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ಬಾಯ್‌ಫ್ರೆಂಡ್ ಎನ್ನಲಾದ, ಮಹಾರಾಷ್ಟ್ರದ ಮಾಜಿ ಸಿಎಂ ಮೊಮ್ಮಗ ಶಿಖರ್ ಪಹರಿಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಎದುರಾಗಿದೆ. 'ದಲಿತ' ಎಂದು ಕಮೆಂಟ್ ಮಾಡಿದ ನೆಟ್ಟಿಗನಿಗೆ ಶಿಖರ್ ನೀಡಿದ ಖಡಕ್ ಉತ್ತರವು ಇದೀಗ ವೈರಲ್ ಆಗಿದೆ.
ಜಾತಿ ಜಾತಿ ಎಂದು ಹಿಂದೂಗಳು ಬಡಿದಾಡಿಕೊಳ್ಳುವುದು ನಿಲ್ಲುವುದೇ ಇಲ್ಲವೇನೋ ಎನ್ನಿಸುತ್ತದೆ. ಜಾತಿ ನಿಂದನೆ ಎನ್ನುವುದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಜಾತಿಯ ಬಗ್ಗೆ ಮಾತನಾಡುತ್ತಾ ವಿಕೃತ ಸಂತೋಷ ಅನುಭವಿಸುವ ಮನಸ್ಥಿತಿಗಳು ಒಂದೆಡೆ ಇದ್ದರೆ, ಜಾತಿಯ ಹೆಸರಿನಲ್ಲಿಯೇ ರಾಜಕಾರಣ ಮಾಡುವ ರಾಜಕಾರಣಿಗಳಿಗೂ ಇದೇ ಬೇಕು. ಎಂದಿಗೂ ಹಿಂದೂ ಸಮುದಾಯ ಒಂದಾಗಲು ಅವರು ಬಿಡುವುದೇ ಇಲ್ಲ. ಬಿಟ್ಟರೆ ಅವರ ಬೇಳೆ ಬೇಯುವುದಿಲ್ಲ. ಇದೇ ಕಾರಣಕ್ಕೆ ಹಿಂದೂಗಳು ಹಿಂದೆಯೇ ಉಳಿದಿರುವುದು!
26
ಸಿಎಂ ಮೊಮ್ಮಗನಿಗೂ ಜಾತಿ ನಿಂದನೆ
ಇದೀಗ, ಮುಖ್ಯಮಂತ್ರಿ ಮೊಮ್ಮಗನಿಗೂ ಜಾತಿ ನಿಂದನೆ ಆಗಿರುವ ಶಾಕಿಂಗ್ ಘಟನೆ ನಡೆದಿದೆ. ಇದು ಕೆಲ ತಿಂಗಳ ಹಿಂದೆ ಆಗಿರುವ ಘಟನೆಯಾಗಿದ್ದು, ಇದೀಗ ಅದು ವೈರಲ್ ಆಗಿದೆ. ಅಷ್ಟಕ್ಕೂ ಇವರು ಮಾಜಿ ಸಿಎಂ ಅಂದರೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹರಿಯಾ ಕುರಿತ ಜಾತಿ ನಿಂದನೆಯಾಗಿದೆ.
36
ಡೇಟಿಂಗ್ ವದಂತಿ
ಅಂದಹಾಗೆ, ಶಿಖರ್ ಪಹರಿಯಾ ಅವರು ಕೆಲವು ವರ್ಷಗಳಿಂದ ಸಕತ್ ಸದ್ದು ಮಾಡುತ್ತಿರುವುದಕ್ಕೆ ಕಾರಣ, ಬಾಲಿವುಡ್ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್. ಇವರಿಬ್ಬರೂ ಸಂಬಂಧದಲ್ಲಿ ಇದ್ದಾರೆ ಎನ್ನುವುದಕ್ಕೆ ಬಹಳ ಸಾಕ್ಷಿ ಸಿಕ್ಕಿವೆ.ಇವರಿಬ್ಬರೂ ಆಗಾಗ್ಗೆ ತಿರುಪತಿಗೆ ಹೋಗಿ ಬರುತ್ತಾರೆ, ಪೂಜೆ ಮಾಡಿಸುತ್ತಾರೆ. ಕೆಲ ತಿಂಗಳ ಹಿಂದೆ ಜಾಹ್ನವಿ ಅವರ ಬೆರಳಿನಲ್ಲಿ ವಜ್ರದ ಉಂಗುರ ಎಲ್ಲರ ಕಣ್ಣು ಕುಕ್ಕಿಸಿತ್ತು. ಶಿಖರ್ ಪಹರಿಯಾ ಜೊತೆ ಗುಟ್ಟಾಗಿ ಎಂಗೇಜ್ಮೆಂಟ್ ಆಯ್ತಾ ಎಂದು ಕಮೆಂಟ್ಗಳ ಸುರಿಮಳೆಯಾಗಿತ್ತು.
ಅಂದಹಾಗೆ, ಸುಮಾರು ಏಳೆಂಟು ವರ್ಷಗಳ ಹಿಂದೆ, ಜಾಹ್ನವಿ ಮತ್ತು ಶಿಖರ್ ಸಂಬಂಧದ ವಿಷಯವು ಮುನ್ನೆಲೆಗೆ ಬಂದಿತ್ತು. ಅವರ ಫೋಟೋ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ನಟಿಯನ್ನು ಚುಂಬಿಸುತ್ತಿರುವುದು ಕಂಡುಬಂದಿತ್ತು. ಇವರಿಬ್ಬರ ನಡುವೆ ನಂತರದಲ್ಲಿ ಏನೋ ಬ್ರೇಕಪ್ ಆಗಿ ಪುನಃ ಈಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಇವರು ಉದ್ಯಮಿಯಾಗಿದ್ದಾರೆ. ಇಂತಿಪ್ಪ ಶಿಖರ್ ಅವರಿಗೆ ಜಾತಿ ನಿಂದನೆ ಮಾತು ಕೇಳಿಬಂದಿದೆ.
56
ಜಾತಿ ನಿಂದನೆ
ಜಾಹ್ನವಿ ಜೊತೆ ಶಿಖರ್ ಅವರು ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಶಿಖರ್ ಅವರಿಗೆ, ಅದೇನೇ ಇರಲಿ, ನೀನೊಬ್ಬ ದಲಿತ ಎಂದು ಹಾಸ್ಯದ ಎಮೋಜಿ ಹಾಕಿ ನೆಟ್ಟಿಗನೊಬ್ಬ ಕಮೆಂಟ್ ಮಾಡಿದ್ದಾರೆ. ಕ್ಯಾಂಡಿಬಾಬೇ ಎನ್ನುವ ಇನ್ಸ್ಟಾಗ್ರಾಮ್ನಿಂದ ಈ ಮೆಸೇಜ್ ಬಂದಿದೆ. ಆದರೆ, ಇದಕ್ಕೆ ಶಿಖರ್ ಅವರು ತಿರುಗೇಟು ನೀಡುವ ಮೂಲಕ, ದಲಿತ ಎಂದಿರುವವರ ಕೆನ್ನೆಗೆ ಬಾರಿಸಿದ್ದಾರೆ.
66
ಶಿಖರ್ ತಿರುಗೇಟು
'ಇಂದಿಗೂ ನಿಮ್ಮಂತಹ ಜನರು ಸಂಕುಚಿತ ಮತ್ತು ಹಿಂದುಳಿದ ಮನಸ್ಥಿತಿಯನ್ನು ಹೊಂದಿರುವುದು ನಿಜಕ್ಕೂ ನಿರಾಶಾದಾಯಕವಾಗಿದೆ. ದೀಪಾವಳಿಯು ಬೆಳಕು ಮತ್ತು ಏಕತೆಯ ಹಬ್ಬವಾಗಿದ್ದು, ಇದು ನಿಮ್ಮ ಕಲ್ಪನೆಗೂ ಮೀರಿದ್ದು. ಭಾರತದ ಶಕ್ತಿ ಯಾವಾಗಲೂ ಅದರ ವೈವಿಧ್ಯತೆಯಲ್ಲಿದೆ. ನೀವು ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಬಹುಶಃ ಅಜ್ಞಾನವನ್ನು ಹರಡುವ ಬದಲು ನೀವು ನಿಮ್ಮನ್ನು ಶಿಕ್ಷಣದ ಮಾರ್ಗದಲ್ಲಿ ಕೊಂಡೊಯ್ಯಬೇಕು. ನೀವು ಅತ್ತ ಗಮನಹರಿಸಬೇಕಿದೆ. ಏಕೆಂದರೆ ಈಗ ಅಸ್ಪೃಶ್ಯ ಎಂದರೆ ಅದು ನಿಮ್ಮ ಆಲೋಚನಾ ಮಟ್ಟ' ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.