ಗಂಡನ ಸ್ವಭಾವದಲ್ಲಿ ಬದಲಾವಣೆಗಳಾದರೆ ಈ ಸಲಹೆಗಳು ಪಾಲಿಸಿ

First Published | Oct 24, 2021, 4:07 PM IST

ಕೆಲವೊಮ್ಮೆ ವೈವಾಹಿಕ ಜೀವನದಲ್ಲೂ (married life) ಅನೇಕ ಬದಲಾವಣೆಗಳು ಉಂಟಾಗುತ್ತವೆ. ಕೆಲವು ಬದಲಾವಣೆಗಳು ಸಂಬಂಧಕ್ಕೆ ಒಳ್ಳೆಯದು, ಆದರೆ ಕೆಲವು ಬದಲಾವಣೆಗಳು ಕುಟುಂಬದ ವಾತಾವರಣವನ್ನು ಹಾಳುಮಾಡುತ್ತದೆ. ಸಮಯ ಮತ್ತು ಜವಾಬ್ದಾರಿಗಳ ಕೊರತೆಯಿಂದಾಗಿ ಪತಿಯ ಸ್ವರೂಪದಲ್ಲಿ ಬದಲಾವಣೆ ಉಂಟಾದಾಗ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂಬಂಧಕ್ಕೆ ಮತ್ತೊಮ್ಮೆ ಸಿಹಿಯನ್ನು ಸೇರಿಸುವುದು ಹೆಂಡತಿಯ ಜವಾಬ್ದಾರಿಯಾಗಿದೆ.

ಕೆಲವೊಮ್ಮೆ ಗಂಡನ ವರ್ತನೆ ಬದಲಾವಣೆ (changinbehaviour)  ಆಗುತ್ತಿರುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ಪತ್ನಿ ಮಾತ್ರ ಗಂಡನೊಂದಿಗೆ ಹೊಂದಾಣಿಕೆ ಮಾಡಿ ಮತ್ತೆ ಸರಿದಾರಿಗೆ ತರಬಹುದು. ಹೆಂಡತಿಯರು ಸಂಬಂಧಗಳ ರೈಲನ್ನು ಮತ್ತೆ ಹಳಿಗೆ ತರಬಹುದು. ಅದಕ್ಕಾಗಿ ಏನು ಮಾಡಬೇಕು? ಸಂಬಂಧ ಸುಧಾರಿಸುವುದು ಹೇಗೆ ನೋಡೋಣ.

ಗಂಡನೊಂದಿಗೆ ಸಹಕರಿಸಿ: ಪತಿಯ ನಡವಳಿಕೆ (behaviour of husband)ಬದಲಾಗಲು ಪ್ರಾರಂಭಿಸಿದಾಗ, ಮೊದಲು ಸ್ವಲ್ಪ ಸಮಯದವರೆಗೆ ಅವರೊಂದಿಗೆ ಸಹಕರಿಸಿ. ಎಲ್ಲಾ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಬೇಡಿ. ಪತಿಯ ಕೆಲವು ನಿರ್ಧಾರಗಳಲ್ಲಿ ಅವರನ್ನು ಬೆಂಬಲಿಸಿ.  ಪತಿಗೆ ಬಿಡುವಿನ ವೇಳೆಯಲ್ಲಿ ಸಮಯ ನೀಡಿ ಮತ್ತು ಅವರೊಂದಿಗೆ ಚರ್ಚಿಸಿ. ಹೀಗೆ ಮಾಡುವುದರಿಂದ ಸ್ವಭಾವ ಬದಲಾಗುತ್ತದೆ.

Tap to resize

ಈ ಸಮಯದಲ್ಲಿ ಯಾವುದೇ ದೊಡ್ಡ ಬೇಡಿಕೆ (demand) ಇಡಬೇಡಿ: ಪತಿಯ ಸ್ವಭಾವ ಬದಲಾಗಲು ಪ್ರಾರಂಭಿಸಿದಾಗ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಈ ಸಮಯದಲ್ಲಿ ಪತಿಯಿಂದ ಯಾವುದೇ ದೊಡ್ಡ ಬೇಡಿಕೆಗಳನ್ನು ಇಡದಿರಲು ಪ್ರಯತ್ನಿಸಿ. ಸಣ್ಣ ಪುಟ್ಟ ಕೆಲಸಗಳಲ್ಲಿ ಪತಿಯ ಬೆಂಬಲ ಪಡೆಯಿರಿ.  ಗಂಡನನ್ನು ಅಸಮಾಧಾನಗೊಳಿಸುವ ವಿಷಯಗಳಿಂದ ಅವರ ಗಮನವನ್ನು ಬೇರೆಡೆಗೆ ತಿರುಗಿಸಿ.

ಕುಟುಂಬ ವಿವಾದಗಳನ್ನು (family problem) ತಪ್ಪಿಸಿ: ಕುಟುಂಬಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಿ. ಪ್ರತಿದಿನ ಸಂಜೆ ಗಂಡನ ಮುಂದೆ ನಿಮ್ಮ ದುಃಖದ ಪೆಟ್ಟಿಗೆಯನ್ನು ತೆರೆಯಬೇಡಿ. ಅವರು ಒಂದಲ್ಲ ಒಂದು ನೆಪವೊಡ್ಡಿ ಮನೆಯ ಹೊರಗೆ ಹೆಚ್ಚು ಸಮಯ ಕಳೆಯುತ್ತಾರೆ, ಅಥವಾ ಸ್ವಭಾವತಃ ಸಿಡುಕುತ್ತಾರೆ. ಇದರಿಂದ ಸಂಬಂಧ ಹದಗೆಡುತ್ತದೆ.

ಸಂಬಂಧದಲ್ಲಿ ಸ್ಪೇಸ್ (space in relationship) ನೀಡುವುದು ಸಹ ಮುಖ್ಯವಾಗಿದೆ: ಗಂಡ ಹೆಂಡತಿಗಾಗಿ ಮತ್ತು ಹೆಂಡತಿ ಗಂಡನಿಗಾಗಿ ಅತಿಯಾದ ಕಾಳಜಿ ಹೊಂದಿರುವುದು ಪರಸ್ಪರ ಕಿರಿಕಿರಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಸಂಬಂಧದಲ್ಲಿ ಸ್ಪೇಸ್ ನೀಡುವುದು ಕೂಡ ಮುಖ್ಯ. ಇದರಿಂದ ಸಂಬಂಧ ಉತ್ತಮ ರೀತಿಯಲ್ಲಿ ಮುಂದುವರೆಯಲು ಸಹಾಯವಾಗುತ್ತೆ.

ಸಿಡುಕಬೇಡಿ (do not get angry) : ಗಂಡ ಹೆಂಡತಿ ನಡುವೆ ಜಗಳ ನಡೆದಾಗ ಸಿಡುಕಲು ಹೋಗಬೇಡಿ, ಬದಲಾಗಿ ತಾಳ್ಮೆಯಿಂದ ಅವರ ಮಾತನ್ನು ಕೇಳಿ. ಸಮಾಧಾನದಿಂದ  ಅವರ ಪ್ರಶ್ನೆಗಳಿಗೆ ಉತ್ತರಿಸಿ. ನೀವು ಸಿಡುಕುದರೆ ಕಲಹ ಮತ್ತಷ್ಟು ಹೆಚ್ಚಾಗುತ್ತದೆ, ಇದರಿಂದ ಸಂಬಂಧದಲ್ಲಿ ಬಿರುಕು ಬಿಡುತ್ತದೆ. ಆದುದರಿಂದ ಸಿಡುಕದೆ ತಾಳ್ಮೆಯಿಂದ ವ್ಯವಹರಿಸಿ.

ಸಮಸ್ಯೆ ಜೊತೆಯಾಗಿ ಪರಿಹರಿಸಿ (solve the problem together): ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಇಬ್ಬರು ಜೊತೆಯಾಗಿ ಸೇರಿ ಅದನ್ನು ಪರಿಹರಿಸಲು ಪ್ರಯತ್ನಿಸಿ, ಒಬ್ಬರೇ ಅದನ್ನು ಪರಿಹರಿಸಲು ಯೋಚಿಸಿದರೆ ಮತ್ತೊಬ್ಬರಿಗೆ ಅದು ಇಷ್ಟವಾಗದೇ ಇದ್ದರೆ ಮತ್ತೆ ಮನಸ್ತಾಪ ಉಂಟಾಗಬಹುದು , ಆದುದರಿಂದ ಜೊತೆಯಾಗಿ ಸಮಸ್ಯೆ ಬಗೆಹರಿಸಿ.

Latest Videos

click me!