Eye Reading: ಕಣ್ಣುಗಳ ಮೂಲಕ ಮನಸ್ಸಿನ ರಹಸ್ಯ ತಿಳಿಯೋದು ಹೀಗೆ?

Suvarna News   | Asianet News
Published : Oct 20, 2021, 08:06 PM IST

ಕಣ್ಣುಗಳು (Eyes) ಆತ್ಮಕ್ಕೆ ಕಿಟಕಿ ಇದು ನಿಜವಾದ ಮಾತು. ಕಣ್ಣು ಗುಡ್ಡೆಗಳ ಪ್ರತಿಯೊಂದೂ ಚಲನೆಗೂ ಒಂದು ಅರ್ಥವಿದೆ.  ಏನನ್ನಾದರೂ ಯೋಚಿಸುತ್ತಿರುವಾಗ ಅವುಗಳು ಚಲಿಸುತ್ತವೆ, ಹಿಂದಿನ ಕ್ಷಣವನ್ನು ನೆನಪಿಸುತ್ತವೆ. ಆದರೆ ಎದುರಿಗಿದ್ದವರು ಏನು ಯೋಚಿಸುತ್ತಿದ್ದಾರೆ ಎಂದು ನಿಮಗೆ ಹೇಗೆ ಗೊತ್ತು? 

PREV
110
Eye Reading: ಕಣ್ಣುಗಳ ಮೂಲಕ ಮನಸ್ಸಿನ ರಹಸ್ಯ ತಿಳಿಯೋದು ಹೀಗೆ?

ಕಣ್ಣಿನ ಚಲನೆಯಿಂದಲೂ ಎದುರಿದ್ದವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಯಾರ ಮನಸ್ಸಿನಲ್ಲಿ (Mind) ಏನಿದೆ ಎಂದು ತಿಳಿಯಲು  ಅವರ ಕಣ್ಣಿನ ಚಲನೆಯನ್ನು ಹೇಗೆ ಓದಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್ . ನೀವು ಇನ್ನು ಮುಂದೆ ಸುಲಭವಾಗಿ ಐ ರೀಡಿಂಗ್ (Eye Reading) ಮಾಡಬಹುದು. 

210

ಯಾರೊಂದಿಗಾದರೂ ಮಾತನಾಡುವಾಗ, ಅವರು ನಿಜ ಕೇಳುತ್ತಾರೋ ಇಲ್ಲವೋ  ಮತ್ತು ನೀವು ಹೇಳುತ್ತಿರುವ ವಿಷಯದ ಬಗ್ಗೆ ಅವರಿಗೆ ಆಸಕ್ತಿ (interest) ಇದೆಯಾ ಎಂಬುದನ್ನ ಅವರ ಕಣ್ಣನ್ನು ನೋಡಿ ಹೇಳಬಹುದು. ವಯಸ್ಸಾದಾಗ ಕಣ್ಣುಗಳು ಆಳವಾದ ವಿಷಯಗಳನ್ನು ಸಂವಹನ (Communicate) ಮಾಡುತ್ತವೆ.
 

310

ಎಡಗಣ್ಣಿನ ಚಲನೆ (movement of eyes to left)
ಯಾರೊಂದಿಗಾದರೂ ಮಾತನಾಡುವಾಗ ಮತ್ತು ವ್ಯಕ್ತಿಯ ಕಣ್ಣುಗಳು ಮೇಲಿನಿಂದ ಎಡಕ್ಕೆ ಚಲಿಸಿದಾಗ, ನೀವು ಏನು ಹೇಳುತ್ತಿದ್ದೀರಿ ಎಂಬುದನ್ನು ಅವರು ದೃಶ್ಯೀಕರಿಸುತ್ತಿದ್ದಾರೆ ಎಂದರ್ಥ. ಅಂದರೆ ಆ ವಿಚಾರವನ್ನು ಅವರು ವಿಷ್ಯೂಲೈಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಥ.
 

410

ಮೇಲಿನಿಂದ ಕಣ್ಣಿನ ಚಲನೆ
ಕಣ್ಣಿನ ಚಲನೆಯು ಮೇಲಿನಿಂದ ಬಲ ಭಾಗಕ್ಕೆ ತಿರುಗಿದರೆ ನೀವು ಯಾರನ್ನಾದರೂ ಅವರ ಹಳೆಯ ಘಟನೆಯನ್ನ (old memories) ನೆನಪಿಸಿಕೊಂಡು ಹೇಳಲು ಕೇಳಿದರೆ, ಅವರು ಪ್ರಸಂಗವನ್ನು ನೆನಪಿಸಲು ಹೀಗೆ ಮಾಡುತ್ತಾರೆ. ಅವರು ಹಾಗೆ ಮಾಡಿದಾಗ, ಅವರ ಬಲ ಕಣ್ಣುಗಳು ಮೇಲಕ್ಕೆ ತಿರುಗುತ್ತವೆ.
 

510

ಮಧ್ಯದಲ್ಲಿ ಎಡಕ್ಕೆ ಚಲಿಸುತ್ತದೆ.
ಮೊದಲು ಕೇಳಿಸದ ಶಬ್ದಗಳನ್ನು ಗುರುತಿಸಲು ಪ್ರಯತ್ನಿಸಿದಾಗ, ಕಣ್ಣುಗಳು ಎಡಭಾಗದ ಕಡೆಗೆ ತಿರುಗುತ್ತವೆ. ಇದನ್ನೂ ಶ್ರವಣೇಂದ್ರಿಯ ನಿರ್ಮಾಣ ಎಂದೂ ಕರೆಯುತ್ತಾರೆ, ಇದು  ಕಣ್ಣುಗಳು ಚಲಿಸುವ ದಿಕ್ಕಾಗಿದೆ.  
 

610

ಕಣ್ಣಿನ ಚಲನೆಯು ಬಲಕ್ಕೆ ಮಧ್ಯದಲ್ಲಿ ಇರುವಾಗ,  ಸ್ವಲ್ಪ ಶಬ್ದವನ್ನು (sound)  ನೆನಪಿಸಿಕೊಳ್ಳುತ್ತಿದ್ದೀರಿ ಎಂದರ್ಥ.  ಮೊದಲು ಕೇಳಿದ ಧ್ವನಿಯನ್ನು ನೆನಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀರಾ ಎಂದು ಅರ್ಥ. ನಿಮ್ಮ ಜೊತೆ ಇರುವ ವ್ಯಕ್ತಿಯು ತಮ್ಮ ಹಿಂದೆ ಕೇಳಿದ ಧ್ವನಿ ಅಥವಾ ಧ್ವನಿಯ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಅರ್ಥ.

710

ಕಣ್ಣುಗಳು ಎಡ ಭಾಗಕ್ಕೆ ಚಲಿಸುವುದು
ಯಾರನ್ನಾದರೂ ಒಂದು ನಿರ್ದಿಷ್ಟ ರುಚಿಯನ್ನು (taste)  ನೆನಪಿಸಲು ಹೇಳಿದಾಗ, ಅವರ ಕಣ್ಣುಗಳನ್ನು ಎಡಭಾಗಕ್ಕೆ ತಗ್ಗಿಸುತ್ತಾರೆ. ಅದರ ಅರ್ಥ ಅವರಿಗೆ ಯಾವುದೋ ಒಂದರ ರುಚಿ ಲಭಿಸಿದೆ ಎಂದು.

810

ಕಣ್ಣುಗಳು ಬಲಭಾಗಕ್ಕೆ ಚಲಿಸುವುದು
ಹಿಂದಿನ ಅನುಭವವನ್ನು (old experience)  ನೆನಪಿಸಿಕೊಂಡರೆ ನಿಮ್ಮ ಕಣ್ಣುಗಳು ಆದರೆ ಬಲಭಾಗಕ್ಕೆ ಚಲಿಸುತ್ತವೆ. ನಿಮಗೆ ಸಂತೋಷದ ಕ್ಷಣಗಳು ನೆನಪಾದಾಗ ಕಣ್ಣುಗಳು ಈ ರೀತಿ ಚಲಿಸುತ್ತದೆ.

910

ನೇರವಾಗಿ ನೋಡಿದಾಗ (look stright)
ನಿಮ್ಮೊಂದಿಗೆ ಇರುವವರು ನೆರವಾಗಿ ನಿಮ್ಮನ್ನ ನೋಡಿದರೆ ಆಲೋಚನೆಯಲ್ಲಿ ನಿರತರಾಗಿದ್ದಾರೆ, ಮಾಹಿತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ, ಕೇಂದ್ರೀಕರಿಸುತ್ತಾರೆ ಮತ್ತು ನಿಮ್ಮ ಮೆಮೊರಿ ಪ್ಯಾನಲ್ ಅನ್ನು ವೇಗವಾಗಿ ತಲುಪಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥ.

1010

ಬೇರೆಲ್ಲೋ ನೋಡಿದರೆ (look at other side)
ನೀವು ಮಾತನಾಡುವಾಗ ವ್ಯಕ್ತಿಯು ಬೇರೆಲ್ಲೋ ನೋಡಿದರೆ, ಬೇರೆನೋ ಕೆಲಸದ ಕಡೆಗೆ ಗಮನ ಹರಿಸಿದರೆ ಅದರ ಅರ್ಥ ಅವರಿಗೆ ನಿಮ್ಮ ಮಾತನ್ನು ಕೇಳಲು ಯಾವುದೇ ಆಸಕ್ತಿ ಇಲ್ಲ ಎಂದು. ಅವರ ಜೊತೆ ಮಾತು ಮುಂದುವರೆಸುವುದು ವ್ಯರ್ಥ ಪ್ರಯತ್ನವಾಗುತ್ತದೆ. 

click me!

Recommended Stories