ನೀನೇ ಬೇಕು... ಬಾಯ್‌ಫ್ರೆಂಡ್‌ನ ತಬ್ಬಿಕೊಂಡು ಬರ್ತ್‌ಡೇ ವಿಶ್ ಮಾಡಿದ ಹೃತಿಕ್ ರೋಷನ್‌ ಮಾಜಿ ಪತ್ನಿ

First Published | Dec 19, 2023, 7:07 PM IST

ಬಾಲಿವುಡ್‌ನ ಗ್ರೀಕ್ ಗಾಡ್‌, ಮೋಸ್ಟ್‌ ಹ್ಯಾಂಡಸಮ್‌ ಎಂದೆಲ್ಲಾ ಫೇಮಸ್ ಆಗಿರುವ ಹೃತಿಕ್ ರೋಷನ್ ಹಾಗೂ ಪತ್ನಿ ಸುಸ್ಸಾನೆ ಖಾನ್ ವಿಚ್ಛೇದನ ಪಡೆದು 9 ವರ್ಷಗಳೇ ಕಳೆದಿದ್ದು, ಇಬ್ಬರೂ ಬೇರೆ ಬೇರೆ ದಾರಿ ಹಿಡಿದಿದ್ದಾರೆ. ಈಗ ಹೃತಿಕ್ ಪತ್ನಿ 48 ವರ್ಷದ ಸುಸ್ಸಾನೇ ಖಾನ್ ತನ್ನ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ಯುವ ಪ್ರೇಮಿಯಂತೆ ಮುದ್ದಾಗಿ ವಿಶ್ ಮಾಡಿದ್ದು ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಬಾಲಿವುಡ್‌ನ ಗ್ರೀಕ್ ಗಾಡ್‌, ಮೋಸ್ಟ್‌ ಹ್ಯಾಂಡಸಮ್‌ ಎಂದೆಲ್ಲಾ ಫೇಮಸ್ ಆಗಿರುವ ಹೃತಿಕ್ ರೋಷನ್ ಹಾಗೂ ಪತ್ನಿ ಸುಸ್ಸಾನೆ ಖಾನ್ ವಿಚ್ಛೇದನ ಪಡೆದು 9 ವರ್ಷಗಳೇ ಕಳೆದಿದ್ದು, ಇಬ್ಬರೂ ಬೇರೆ ಬೇರೆ ದಾರಿ ಹಿಡಿದಿದ್ದಾರೆ. 

ಮಕ್ಕಳಿಗಾಗಿ ಕೆಲವೊಮ್ಮೆ ಜೊತೆಯಾಗಿ ಸುತ್ತುವ ಈ ಜೋಡಿ ಮರು ಮದುವೆ ಆಗಿಲ್ಲದಿದ್ದರೂ ಇಬ್ಬರೂ ಬೇರೆಯದೇ ಪ್ರೇಮ ಸಂಬಂಧಗಳನ್ನು  ಹೊಂದಿದ್ದು, ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.  

Latest Videos


ಈಗ ಹೃತಿಕ್ ಪತ್ನಿ 48 ವರ್ಷದ ಸುಸ್ಸಾನೇ ಖಾನ್ ತನ್ನ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ಯುವ ಪ್ರೇಮಿಯಂತೆ ಮುದ್ದಾಗಿ ವಿಶ್ ಮಾಡಿದ್ದು ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಸುಸ್ಸಾನೇ ಖಾನ್ ತನ್ನ ಬಾಯ್‌ಫ್ರೆಂಡ್,  ನಟ ಆರ್ಸ್ಲಾನ್ ಗೋನಿಯ 37ನೇ ಹುಟ್ಟುಹಬ್ಬಕ್ಕೆ ಇನ್ಟಾಗ್ರಾಮ್‌ನಲ್ಲಿ ವಿಶ್ ಮಾಡಿದ್ದಾರೆ.  ಹ್ಯಾಪಿ ಹ್ಯಾಪಿಯೆಸ್ಟ್ ಬರ್ತ್‌ಡೇ ಮೈ ಲವ್, ನೀನು ನನಗೆ ಸಿಕ್ಕಿದ ಶ್ರೇಷ್ಠವಾದ ಉಡುಗೊರೆ. ನೀನು ನಾನು ಎಂದೂ ಊಹಿಸಿದ್ದಕ್ಕಿಂತಲೂ ಹೆಚ್ಚು ಖುಷಿಯಾಗಿ ನನ್ನನ್ನರಿಸಿದ್ದೀಯಾ.. 

ನೀನು ನನ್ನನ್ನು ಮತ್ತಷ್ಟು ಒಳ್ಳೆಯ ವ್ಯಕ್ತಿಯಾಗಿ ಪರಿವರ್ತಿಸಿದ್ದೀಯಾ.. ನನ್ನ ಪ್ರೀತಿಯೇ... ನಮ್ಮ ಆತ್ಮದಲ್ಲಿರುವ ಪ್ರತಿಯೊಂದು ಕೋಶದಿಂದಲೂ ನಾವು ಈ ಜೀವನವನ್ನು ಎಂಜಾಯ್ ಮಾಡಬೇಕು. ಬೇಬೀ ನಾವು ಈಗಷ್ಟೇ ಪ್ರಾರಂಭಿಸಿದ್ದೇವೆ.. ನಾನು ನಿನ್ನನ್ನು ಪ್ರೀತಿಸುತ್ತೇನೆ.. 

ನನಗೆ ಬೇಕಾಗಿರುವುದು ನೀನು ಮಾತ್ರ ಎಂದು ಬರೆದು ಸುಸ್ಸಾನೇ ಖಾನ್ ತನ್ನ ಇನಿಯನಿಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ. ಸುಸ್ಸಾನೇ ಪೋಸ್ಟ್ ಗೆ ಗೆಳೆಯ  ಆರ್ಸ್ಲಾನ್ ಗೋನಿ ಪ್ರತಿಕ್ರಿಯಿಸಿದ್ದು ಧನ್ಯವಾದ ನನ್ನ ಪ್ರೀತಿಯೇ ಎಂದು ಕಾಮೆಂಟ್ ಮಾಡಿದ್ದಾರೆ.

ಸುಸ್ಸಾನೇ ಖಾನ್ ಹಾಗೂ ಅರ್ಸ್ಲಾನ್ ಗೋನಿ ಹಲವು ಪಾರ್ಟಿಗಳಲ್ಲಿ ಯಾವುದೇ ಅಂಜಿಕೆ ಇಲ್ಲದೇ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ಮುಗಿದ ಸುಸ್ಸಾನೇ ಹುಟ್ಟುಹಬ್ಬಕ್ಕೂ ಅರ್ಸ್ಲಾನ್ ಗೋನಿ ಮುದ್ದಾಗಿ ವಿಶ್ ಮಾಡಿದ್ದರು.

ನಾನು ನಿನ್ನ ಜೊತೆ ಇಲ್ಲದಿರುವುದಕ್ಕೆ ಬೇಸರವಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಹಾಗೂ ವಿಶ್ವದ ಖುಷಿಯೆಲ್ಲವೂ ನಿನಗೆ ಸಿಗಲಿ ಎಂದು ಶುಭ ಹಾರೈಸಿದ್ದರು. 

ಬೆಂಗಳೂರು ಮೂಲದ ಸುಸ್ಸಾನೇ ಖಾನ್ ಹಾಗೂ ಹೃತಿಕ್ ರೋಷನ್ ಅವರು 2000ನೇ ಇಸವಿಯಲ್ಲಿ ಪ್ರೀತಿಸಿ  ಮದುವೆಯಾಗಿದ್ದರು. ಫ್ಯಾಷನ್ ಡಿಸೈನರ್ ಹಾಗೂ ಇಂಟಿರಿಯರ್ ಡಿಸೈನರ್ ಆಗಿರುವ ಸುಸ್ಸಾನೇ ಖಾನ್ ಉದ್ಯಮಿಯೂ ಹೌದು.

 ಆದರೆ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 2014ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು. ಹ್ರೇಹಾನ್, ಹ್ರಿದಾನ್ ಎಂಬ ಇಬ್ಬರು ಮಕ್ಕಳನ್ನು ಹೊಂದಿರುವ ಈ ಜೋಡಿ ಮಕ್ಕಳ ಕಾರಣಕ್ಕೆ ದಾಂಪತ್ಯದಿಂದ ದೂರಾದರು ಆಗಾಗ ಮಕ್ಕಳಿಗಾಗಿ ಜೊತೆಯಾಗಿ ಓಡಾಡುತ್ತಿರುತ್ತಾರೆ. 

ಇತ್ತ ಸುಸ್ಸಾನೇ ಬಾಯ್‌ಫ್ರೆಂಡ್  ಅರ್ಸ್ಲಾನ್ ಗೋನಿ ಕೂಡ ಓರ್ವ ನಟನಾಗಿದ್ದು, 2022 ತಾನವ್ ಎಂಬ ವೆಬ್‌ಸಿರೀಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದರು. ಇದಕ್ಕೂ ಮೊದಲು 2021ರಲ್ಲಿ ಮೈ ಹೀರೋ ಬೊಲ್ ರಹಾ ಹು , ಅದಕ್ಕೂ ಮೊದಲು 2017ರಲ್ಲಿ ಜಿಯಾ ಔರ್ ಜಿಯಾ ಸಿನಿಮಾದಲ್ಲೂ ನಟಿಸಿದ್ದರು.

ಇತ್ತ ಸುಸ್ಸಾನೇ ಪತಿ ಹೃತಿಕ್ ರೋಷನ್‌ ಮಾಡೆಲ್ ನಟಿ ಸಬಾ ಅಜಾದ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ವಿಚಿತ್ರ ಎಂದರೆ ಹೃತಿಕ್ ರೋಷನ್ ಜೊತೆ ಡೇಟಿಂಗ್‌ನಲ್ಲಿರುವ ನಟಿ ಸಬಾ ಅಜಾದ್‌ ಸುಸ್ಸಾನೇ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಸುಸ್ಸಾನೇ ಬಾಯ್‌ಫ್ರೆಂಡ್ ಆರ್ಸ್ಲಾನ್ ಗೋನಿಗೆ ವಿಶ್ ಮಾಡಿದ್ದಾಳೆ. ಆದರೆ ಇವರ ಈ  ಮಿಡ್ಲೇಜ್ ಪ್ರೇಮಕ್ಕೆ ನೆಟ್ಟಿಗರು ಮಾತ್ರ ಚಿತ್ರವಿಚಿತ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ನಿಮ್ಮ ಪ್ರೇಮವನ್ನು ಇಲ್ಲಿ ಪ್ರದರ್ಶಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ನೀವು ಇದೇ ಮಾತನ್ನು ಕೆಲ ವರ್ಷಗಳ ಹಿಂದೆ ಹೃತಿಕ್‌ಗೂ ಹೇಳಿದ್ದೀರಿ ಎಂದು ಚೇಡಿಸಿದ್ದಾರೆ. 

click me!