Published : Aug 01, 2025, 01:39 PM ISTUpdated : Aug 01, 2025, 02:11 PM IST
ನ್ಯಾಷನಲ್ ಗರ್ಲ್‌ಫ್ರೆಂಡ್ ಡೇ ಪ್ರತಿ ವರ್ಷ ಆಗಸ್ಟ್ 1 ರಂದು ಆಚರಿಸಲಾಗುತ್ತದೆ. ನೀವು ನಿಮ್ಮ ಗೆಳತಿಯನ್ನ ಮೆಚ್ಚಿಸೋಕೆ ಸರ್ಕಸ್ ಮಾಡ್ತಿದ್ರೆ ಹೀಗೆಲ್ಲಾ ಸರ್‌ಪ್ರೈಸ್ ಕೊಡ್ಬೋದು ನೋಡಿ..
ಪ್ರತಿ ವರ್ಷ ಆಗಸ್ಟ್ 1 ರಂದು ನ್ಯಾಷನಲ್ ಗರ್ಲ್‌ಫ್ರೆಂಡ್ ಡೇ ಆಚರಿಸಲಾಗುತ್ತದೆ. ಈ ಸಂಬಂಧ ಒಂದು ರೀತಿ ವಿಶೇಷವಾಗಿದೆ. ಸಸ್ಯಗಳಿಗೆ ನೀರು ಮತ್ತು ಶ್ವಾಸಕೋಶಗಳಿಗೆ ಗಾಳಿ ಅಗತ್ಯವಿರುವಂತೆ, ಆರೋಗ್ಯಕರ ಸಂಬಂಧಕ್ಕೆ ಸಮಯ, ವಾತ್ಸಲ್ಯ ಮತ್ತು ಭಾವನೆಗಳು ಬೇಕೇ ಬೇಕು.
27
ಆಚರಣೆಗೆ ಸೀಮಿತವಲ್ಲ
ಈ ದಿನ ಕೇವಲ ಆಚರಣೆಗೆ ಸೀಮಿತವಲ್ಲ, ಗೆಳತಿ ಕೇವಲ ಸಂಗಾತಿಯಲ್ಲ. ಆಕೆ ಸ್ನೇಹಿತೆ, ಮಾರ್ಗದರ್ಶಕಿ ಮತ್ತು ದೊಡ್ಡ ಸಪೋರ್ಟ್ ಎಂದು ನೆನಪಿಸುವ ಅವಕಾಶ. ಅಂದಹಾಗೆ ನಿಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನೀವು ಬಯಸಿದರೆ ಈ 5 ರೀತಿಯಲ್ಲಿ ನಿಮ್ಮ ಸಂಗಾತಿಗೆ ನ್ಯಾಷನಲ್ ಗರ್ಲ್‌ಫ್ರೆಂಡ್ ಡೇಯಂದು ಸರ್‌ಪ್ರೈಸ್ ಕೊಡ್ಬೋದು.
37
ವಿಶೇಷ ಧನ್ಯವಾದ ಹೇಳಿ
ಈ ಬ್ಯುಸಿ ಜೀವನದಲ್ಲಿ ನಾವು ಧನ್ಯವಾದ ಹೇಳಲು ಮರೆಯುತ್ತೇವೆ. ಆದ್ದರಿಂದ ಈ ದಿನ ಹೂವುಗಳು ಅಥವಾ ಏನಾದರೂ ಬರೆದು ಕೊಡುವ ಮೂಲಕ ನೀವು ಹೃದಯಪೂರ್ವಕವಾಗಿ ಧನ್ಯವಾದ ಹೇಳಿ.
47
ನೀವೇ ಮಾಡಿದ ಗಿಫ್ಟ್ ನೀಡಿ
ಸಾಮಾನ್ಯವಾಗಿ ವಿಶೇಷ ಕ್ಷಣದಂದು ಅಥವಾ ದಿನದಂದು ನಿಮ್ಮ ಕೈಯಾರೆ ಮಾಡಿದ ಉಡುಗೊರೆ ಕೊಟ್ಟರೆ ಆಕೆ ಎಂದಿಗೂ ಮರೆಯಲ್ಲ. ಆದ್ದರಿಂದ ಕೈಯಿಂದ ಮಾಡಿದ ಕಾರ್ಡ್, ಫೋಟೋ, ಪುಸ್ತಕ ಅಥವಾ ಉಡುಗೊರೆಯನ್ನು ನೀಡೋಕೆ ಟ್ರೈ ಮಾಡಿ.
57
ನೆಚ್ಚಿನ ಖಾದ್ಯ ಮಾಡಿ
ನಿಮಗೆ ಅಡುಗೆ ಗೊತ್ತಿದ್ದರೆ ಏನಾದರೂ ವಿಶೇಷವಾದ ಅಡುಗೆ ಮಾಡಿ. ಇಲ್ಲದಿದ್ದರೆ ಹೊರಗಿನಿಂದ ಫುಡ್ ಆರ್ಡರ್ ಮಾಡಿ ಮತ್ತು ಅದನ್ನು ರೋಮ್ಯಾಂಟಿಕ್ ರೀತಿಯಲ್ಲಿ ಬಡಿಸಿ.
67
ಇಡೀ ದಿನ ಒಟ್ಟಿಗೆ ಕಳೆಯಿರಿ
ನಿಮ್ಮ ಬ್ಯುಸಿ ಜೀವನದ ನಡುವೆಯೂ ನಿಮ್ಮ ಗೆಳತಿಗಾಗಿ ಒಂದು ದಿನ ಮೀಸಲಿಡಿ. ಸಿನಿಮಾ ನೋಡಿ, ಹೊರಗೆ ಹೋಗಿ ಅಥವಾ ಹಳೆಯ ನೆನಪುಗಳನ್ನು ಮೆಲುಕು ಹಾಕಿ.
77
ಕೇಕ್ ಕಟ್ ಅಥವಾ ಸೆಲೆಬ್ರೇಷನ್
ಒಂದು ಸಣ್ಣ ಸರ್‌ಪ್ರೈಸ್ ಆ ದಿನವನ್ನು ವಿಶೇಷವಾಗಿಸುತ್ತದೆ. ಹಾಗಾಗಿ ಕೇಕ್ ಕಟ್ ಮಾಡಿಸೋದು ಒಂದು ಬೆಸ್ಟ್ ವೇ ಎಂದೇ ಹೇಳ್ಬೋದು.