ವಿದೇಶಗಳಲ್ಲಿ ಪುರುಷರು 30 ದಾಟದೆ ಮದ್ವೇನೆ ಆಗಲ್ಲ… ಆದ್ರೆ ಭಾರತದಲ್ಲಿ ಮಾತ್ರ ಇಷ್ಟು ಬೇಗ…ಯಾಕೆ?

Published : Jul 31, 2025, 03:56 PM ISTUpdated : Jul 31, 2025, 04:17 PM IST

ಪ್ರತಿಯೊಂದು ದೇಶಗಳಲ್ಲೂ ಮದುವೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆದರೆ ವಿದೇಶದಲ್ಲಿ ಪುರುಷರು 35ರ ನಂತರ ಮದುವೆಯಾದರೆ, ಭಾರತದಲ್ಲಿ ಮಾತ್ರ 25 ಕಳೆಯುತ್ತಿದ್ದಂತೆ ಮದುವೆಯಾಗ್ತಾರೆ. 

PREV
19

ದೇಶ -ವಿದೇಶಗಳಲ್ಲಿ ಮದುವೆ ಬಗೆಗಿನ ಆಲೋಚನೆಗಳು ವಿಭಿನ್ನವಾಗಿರುತ್ತೆ. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ 18 ಮತ್ತು ಗಂಡು ಮಕ್ಕಳಿಗೆ ಮದುವೆ ವಯಸ್ಸು (Marriage age) 21 ಅಂತ ಇದೆ. ನಮ್ಮಲ್ಲಿ ಪುರುಷರು ಸಾಮಾನ್ಯವಾಗಿ 28 ವರ್ಷ ವಯಸ್ಸಾಗೋದಕ್ಕೆ ಮುಂಚೆಯೇ ಮದುವೆಯಾಗುತ್ತಾರೆ. ಆದರೆ ವಿದೇಶಗಳಲ್ಲಿ ಪುರುಷರ ಮದುವೆ ವಯಸ್ಸು ಎಷ್ಟಿದೆ ಗೊತ್ತಾ?

29

ದಕ್ಷಿಣ ಕೊರಿಯಾ : ಇಲ್ಲಿ ಪುರುಷರು ಮದುವೆಯಾಗುವ ಸಾಮಾನ್ಯ ವಯಸ್ಸು 37. ಇಲ್ಲಿನ ಜನರು ಕರಿಯರ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಡೇಟಿಂಗ್ (Dating) ಬಗ್ಗೆ ನಂತರ ತಲೆ ಕೆಡಿಸಿಕೊಳ್ಳುತ್ತಾರೆ.

39

ಸ್ಪೈನ್ : ಸ್ಪೈನ್ ದೇಶದಲ್ಲಿ ಪುರುಷರು 35ರ ನಂತರವೇ ಮದುವೆಯಾಗುವ ಬಗ್ಗೆ ಯೋಚನೆ ಮಾಡುತ್ತಾರೆ. ಇದಕ್ಕೆ ಕಾರಣ ಆರ್ಥಿಕ ಅಭದ್ರತೆ, ಹಾಗೂ ಲಿವ್ ಇನ್ ರಿಲೇಶನ್ ಶಿಪ್ (live in relationship) ಟ್ರೆಂಡ್.

49

ಐರ್ ಲ್ಯಾಂಡ್ : ಈ ದೇಶದಲ್ಲೂ ಸಹ ಪುರುಷರು 35 ರ ನಂತರವಷ್ಟೇ ಮದುವೆ ಬಗ್ಗೆ ಯೋಚನೆ ಮಾಡುತ್ತಾರೆ. ಇವರು ತಮ್ಮ ಪರ್ಸನಲ್ ಫ್ರೀಡಂ (personal freedom) ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ. ಹಾಗಾಗಿಯೇ ತಡವಾಗಿ ಮದುವೆಯಾಗುತ್ತಾರೆ.

59

ಸ್ವೀಡನ್ : ಸ್ವೀಡನ್ ದೇಶದ ಪುರುಷರು ಬೇಗನೇ ಮದುವೆಯಾಗೋದಕ್ಕಿಂತ, ಲಿವ್ ಇನ್ ರಿಲೇಶನ್ ಶಿಪ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡೋದರಿಂದ ಇಲ್ಲಿನ ಪುರುಷರು ಮದುವೆಯಾಗುವ ಸಾಮಾನ್ಯ ವಯಸ್ಸು 35 ಆಗಿದೆ.

69

ಆಷ್ಟ್ರೇಲಿಯಾ : ಆಷ್ಟ್ರೇಲಿಯಾದ ಪುರುಷರು ಸಾಮಾನ್ಯವಾಗಿ 34ರ ನಂತರ ಮದುವೆಯಾಗಲು ಬಯಸುತ್ತಾರೆ. ಇದಕ್ಕೆ ಕಾರಣ ಕರಿಯರ್ ಕಡೆಗೆ ಗಮನ ಹಾಗೂ ಆರ್ಥಿಕ ಸ್ವಾತಂತ್ರ್ಯ.

79

ಜರ್ಮನಿ : ಜರ್ಮನಿಯಲ್ಲೂ ಪುರುಷರು 34ರ ನಂತ್ರ ಮದುವೆಯಾಗಲು ಮನಸು ಮಾಡುತ್ತಾರೆ. ಯಾಕಂದ್ರೆ ತಡವಾಗಿ ಮದುವೆಯಾಗೋದು (late marriage trend) ಹಾಗೂ ಮಕ್ಕಳನ್ನು ಮಾಡಿಕೊಳ್ಳದೇ ಇರೋದು ಇಲ್ಲಿನ ಟ್ರೆಂಡ್ ಆಗಿದೆ.

89

ಫಿನ್ ಲ್ಯಾಂಡ್ : ವಿಳಂಬಿತ ಕುಟುಂಬ ಯೋಜನಾ ನಿಯಮಗಳ ಕಾರಣದಿಂದಾಗಿ ಫಿನ್ ಲ್ಯಾಂಡ್ ಪುರುಷರು 34ರ ನಂತರ ಮದುವೆಯಾಗುತ್ತಾರೆ.

99

ಭಾರತ : ಭಾರತದಲ್ಲಿ ಪುರುಷರ ಮದುವೆ ಸರಾಸರಿ ವಯಸ್ಸು 27. ಅದಕ್ಕಿಂತ ಮುಂಚೆಯೇ ಮದುವೆಯಾಗಲು ತಯಾರಿರುತ್ತಾರೆ ಪುರುಷರು. ಇದಕ್ಕೆ ಕಾರಣ ಕುಟುಂಬದ ಒತ್ತಡ (family pressure) ಹಾಗೂ ಭಾರತದಲ್ಲಿನ ಅರ್ಲಿ ಮ್ಯಾರೇಜ್ ಸಂಸ್ಕೃತಿಯಿಂದಾಗಿ ಪುರುಷರು ಬೇಗನೆ ಮದುವೆಯಾಗುತ್ತಾರೆ.

Read more Photos on
click me!

Recommended Stories