ಹೀಗೆ ಆಗ್ತಿದ್ಯಾ? ಬ್ರೇಕ್ ಅಪ್ ಮಾಡಿಕೊಳ್ಳುವುದೇ ಬೆಸ್ಟ್ ನೋಡಿ!

First Published | Dec 30, 2022, 5:56 PM IST

ದೀರ್ಘಕಾಲದವರೆಗೆ ರಿಲೇಷನ್ಶಿಪ್‌ನಲ್ಲಿದ್ದ ನಂತರ, ಈ ಸಂಬಂಧವು ಹೆಚ್ಚು ಕಾಲ ಉಳಿಯೋದಿಲ್ಲ ಎಂದು ನೀವು ಇದ್ದಕ್ಕಿದ್ದಂತೆ ಅನಿಸಲು ಆರಂಭಿಸಿದರೆ, ಆವಾಗ ನೀವು ಅಲರ್ಟ್ ಆಗಿರಬೇಕು. ರಿಲೇಷನ್ ಮುರಿದುಬೀಳುವ ಹಂತಕ್ಕೆ ಬಂದಾಗ ನಾವು ಅದರ ಅಂತ್ಯದ ಚಿಹ್ನೆಗಳನ್ನು ನೋಡಲು ಪ್ರಾರಂಭಿಸುತ್ತೇವೆ, ಹೃದಯ ಮತ್ತು ಮನಸ್ಸು ಇನ್ನು ಮುಂದೆ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಾಗ, ರಿಲೇಷನ್‌ಶಿಪ್ ಮುರಿದುಬೀಳುತ್ತೆ.

ಒಂದು ಸಂಬಂಧ ಕೊನೆಗೊಂಡರೆ ಪ್ರಪಂಚವೇ ಮುಗಿದು ಹೋಯಿತು ಎಂದು ಅಂದುಕೊಳ್ಳೋದು ಯಾಕೆ? ನೀವು ಯಾರೊಂದಿಗಾದರೂ ದೀರ್ಘಕಾಲದವರೊಂದಿಗೆ ಇದ್ದೀರೆಂಬ ಕಾರಣಕ್ಕಾಗಿ, ನಿಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ (Love), ಅನ್ಯೋನ್ಯತೆ (Closeness) ಇಲ್ಲದೇ ಇದ್ದರೂ ನೀವು ಅವರೊಂದಿಗೆ ವಾಸಿಸೋದನ್ನು ಮುಂದುವರಿಸಬೇಕೆಂದೇನೂ ಇಲ್ಲ. ಕೆಲವೊಮ್ಮೆ ಸಂಬಂಧ ಯಾವ ಹಂತಕ್ಕೆ ಬಂದು ನಿಲ್ಲುತ್ತೆ ಎಂದರೆ, ಅವರ ಜೊತೆ ಇನ್ನು ಬಾಳಲು ಸಾಧ್ಯವೇ ಇಲ್ಲ ಎಂದು ಮನಸ್ಸು ಮತ್ತು ಹೃದಯ ಜೋರಾಗಿ ಹೇಳುತ್ತೆ.ನಿಮಗೂ ಹಾಗೆ ಅನಿಸಿದರೆ, ನಿಮ್ಮ ಸಂಬಂಧದಲ್ಲಿ ಇಂತಹ ಚಿಹ್ನೆಗಳು ಕಾಣಿಸಿಕೊಂಡರೆ, ಅಂತಹ ಸಂದರ್ಭದಲ್ಲಿ ಸಂಬಂಧದಿಂದ ಹೊರ ಬರೋದೆ ಬೆಸ್ಟ್. 

ರಿಲೇಷನ್‌ಶಿಪ್ (Relationship) ಎಕ್ಸ್ಪರ್ಟ್ ಇದರ ಬಗ್ಗೆ ಕೆಲವು ಸುಳಿವುಗಳನ್ನು ಇಲ್ಲಿ ಹೇಳಿದ್ದಾರೆ, ಅದು ನಿಮಗೆ ಸಹಾಯ ಮಾಡುತ್ತೆ. ಸಂಬಂಧ ಕೊನೆಗೊಳ್ಳಲಿದೆ ಎಂದು ನೀವು ಸ್ವತಃ ಅರ್ಥಮಾಡಿಕೊಳ್ಳಬಹುದಾದ ಚಿಹ್ನೆಗಳನ್ನು ನೋಡೋಣ, ಇವುಗಳನ್ನು ಅರ್ಥ ಮಾಡಿಕೊಂಡು ಆ ಸಂಬಂಧದಲ್ಲಿ ಮುಂದುವರಿಯೋದು ಬೇಕೇ? ಬೇಡವೇ? ಅನ್ನೋದನ್ನು ನೀವೇ ಚೆಕ್ ಮಾಡಿ. 
 

Tap to resize

ಆ ಸಂಬಂಧವೇ ಬೇಡ

ನೀವು ನಿಜವಾಗಿಯೂ ಸಂತೋಷವಾಗಿದ್ದೀರಾ (Happy) ಎಂದು ಕಂಡುಹಿಡಿಯಿರಿ! ನೀವು ತಪ್ಪಾದ ವ್ಯಕ್ತಿಯೊಂದಿಗೆ ಇದ್ದಾಗ, ನಿಮ್ಮ ಮನಸಿಗೆ ಅನುಭವ ಆಗುತ್ತದೆ. ಅವರೊಂದಿಗೆ ನಿಮಗೆ ಇರಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಬಂದರೆ, ಅಂತಹ ರಿಲೇಶನ್ ಶಿಪ್ ನಿಂದ ದೂರ ಉಳಿಯೋದೆ ಉತ್ತಮ

ಸಂಬಂಧದಲ್ಲಿ ಇದ್ದಾಗ ಇಬ್ಬರ ನಡುವೆ ಹಲವು ಮಿಸ್ ಅಂಡರ್ ಸ್ಟ್ಯಾಂಡಿಂಗ್(Misunderstanding), ವ್ಯತ್ಯಾಸಗಳು ಬರುತ್ತವೆ, ಹೋಗುತ್ತವೆ. ಆದರೆ ಅದೇ ವ್ಯತ್ಯಾಸಗಳು ನಿಮ್ಮಿಬ್ಬರ ಮಧ್ಯೆ ಅಂತರ ನಿರ್ಮಿಸುತ್ತಾ ಹೋದಂತೆ, ಆ ಸಂಬಂಧ ಹೆಚ್ಚು ಕಾಲ ಉಳಿಯೋದಿಲ್ಲ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

ನಿಮ್ಮ ಬೆಳವಣಿಗೆಗೆ(Development) ಅವರು ಸಹಾಯ ಮಾಡೋದಿಲ್ಲ.

ತಜ್ಞರ ಪ್ರಕಾರ ನಿಜವಾದ ಪ್ರೀತಿ ನಿಸ್ವಾರ್ಥವಾಗಿರಬೇಕು. ಸಂಗಾತಿ ನಿಮ್ಮ ಬೆಳವಣಿಗೆಗೆ ಸಹಾಯ ಮಾಡಬಹುದೇ ಎಂದು ತಿಳಿಯಿರಿ. ಉತ್ತಮ ಸಂಗಾತಿ ನಿಮ್ಮ ಬೆಳವಣಿಗೆಯನ್ನು ನಿಮಗೆ ಅಗತ್ಯವಿರುವುದಕ್ಕಿಂತ ಹೆಚ್ಚಾಗಿ ಪ್ರೋತ್ಸಾಹಿಸುತ್ತಾನೆ. ಅವರು ನಿಮ್ಮೊಳಗಿನ ಶ್ರೇಷ್ಠತೆಯನ್ನು ನಂಬುತ್ತಾರೆ ಮತ್ತು ನಿಮ್ಮನ್ನು ಬೆಂಬಲಿಸುತ್ತಾರೆ. ಆದರೆ ವ್ಯಕ್ತಿಯೂ ಯಾವಾಗಲೂ ತನ್ನ ಬೆಳವಣಿಗೆ ಬಗ್ಗೆ ಗಮನ ಹರಿಸುತ್ತಿದ್ದು, ನಿಮ್ಮ ಬೆಳವಣಿಗೆಯನ್ನು ತುಳಿತ, ತನ್ನದಕ್ಕೆ ಮಾತ್ರ ಆದ್ಯತೆ ನೀಡಿದರೆ, ಅಂತಹ ಸಂಬಂಧದಿಂದ ಹೊರ ಬರೋದು ಉತ್ತಮ ಎಂದು ತಿಳಿದುಕೊಳ್ಳಬೇಕು.

ಈ ಸಂಬಂಧದಿಂದ ಹೊರ ಬನ್ನಿ ಎಂದು ನಿಮ್ಮವರು ಹೇಳಿದ್ರೆ

ಯಾರೋ ಒಬ್ರು ಬಂದು ನೀವು ಈ ಸಂಬಂಧದಿಂದ ಹೊರ ಬನ್ನಿ ಅಂದ್ರೆ ನೀವು ಸಂಬಂಧ ಮುರಿಯಬೇಕು ಎಂದು ಈ ಮಾತಿನ ಅರ್ಥ ಅಲ್ಲ, ಬೇರೆಯವರು ಹೇಳಿದ್ದನ್ನು ಕೇಳಿ ನೀವು ಜೀವನ (Life) ಮಾಡಬೇಕಾಗಿಲ್ಲ ನಿಜ. ಆದರೆ ಈ ಮಾತನ್ನು ನಿಮ್ಮವರು, ನಿಮ್ಮನ್ನು ತುಂಬಾ ಪ್ರೀತಿ ಮಾಡುವ ನಿಮ್ಮ ಸ್ವಂತ ಜನರು ಹೇಳಿದ್ರೆ, ನೀವದನ್ನು ಕೇಳೋದೇ ಉತ್ತಮ. ಯಾಕೆಂದರೆ ಕೆಲವೊಂದು ವಿಷಯಗಳು ಹೊರಗಿದ್ದವರ ಕಣ್ಣಿಗೆ ಬೇಗನೆ ಕಾಣಿಸಿಕೊಳ್ಳುತ್ತದೆ, ಜೊತೆಗೆ ನಿಮ್ಮನ್ನು ಪ್ರೀತಿಸುವವರು ನೀವು ಯಾವ ಪರಿಸ್ಥಿತಿಯಲ್ಲಿದ್ದೀರಿ ಅನ್ನೋದನ್ನು ತಿಳಿದಿರುತ್ತಾರೆ. ಹಾಗಾಗಿ ಅಂತಹ ಸಂಬಂಧದಿಂದ ದೂರ ಉಳಿದು ಬಿಡುವುದೇ ಉತ್ತಮ. 
 

ಒಳ್ಳೆಯದಕ್ಕಿಂತ ಕೆಟ್ಟದ್ದೇ (Bad) ಆಗುತ್ತಿದ್ದರೆ

ಈ ಸಂಬಂಧದಿಂದ ಒಳ್ಳೆದಕ್ಕಿಂತ ಹಾನಿಯು ದೊಡ್ಡದಾಗಿದೆಯೇ ಎಂದು ಕಂಡುಹಿಡಿಯಿರಿ. ಆಗ ಏನು ಮಾಡಬೇಕೆಂದು ನಿಮಗೆ ತಿಳಿಯುತ್ತೆ. ನಿಮ್ಮಷ್ಟಕ್ಕೆ ನೀವೇ ಮಾತನಾಡಿಕೊಳ್ಳಿ. ನಿಮ್ಮ ನಿರ್ಧಾರ ನಿಮ್ಮದೇ ಆಗಿರಲಿ. ಯಾವುದು ಒಳ್ಳೆಯದು? ಯಾವುದು ಕೆಟ್ಟದ್ದು ಅನ್ನೋದು ನಿಮಗೆ ತಿಳಿದೇ ಇರುತ್ತದೆ, ಹಾಗಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳೋದು ಉತ್ತಮ. 

ಸಂಬಂಧವು ಅನಿವಾರ್ಯತೆ ಆಗಿದ್ಯಾ ಎಂದು ಯೋಚಿಸಿ?

ಕೆಲವೊಮ್ಮೆ, ನಾವು ಸಂಬಂಧಗಳನ್ನು ಹಿಡಿದಿಟ್ಟುಕೊಳ್ಳುತ್ತೇವೆ ಯಾಕಂದ್ರೆ ಅವು ಅಭ್ಯಾಸವಾಗಿರುತ್ತವೆ, ನಾವು ಏಕಾಂಗಿಯಾಗಿರಲು ಬಯಸೋದಿಲ್ಲ, ಅದು ಒಳ್ಳೆಯದಲ್ಲ, ವಿಶೇಷವಾಗಿ ಪ್ರೀತಿ ಇಲ್ಲದಿದ್ದರೆ ಈ ರೀತಿಯಾಗಿರೋದು ಒಳ್ಳೆಯದೇ ಅಲ್ಲ.. ಹಾಗಾಗಿ ಯಾವುದೇ ರಿಲೇಷನ್‌ಶಿಪ್ ಉಳಿಸೊಕೊಳ್ಳೊಬೇಕೋ, ಇಲ್ಲವೋ ಎಂಬುದು ನಿಮ್ಮದೇ ನಿರ್ಧಾರವಾಗಿರಲಿ.  
 

Latest Videos

click me!