ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರ ಬಹುಮುಖ್ಯ. ಮಕ್ಕಳೊಂದಿಗೆ ಸ್ನೇಹ ಬೆಳೆಸುವುದು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು, ಮತ್ತು ಅವರ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು ಪ್ರಮುಖ ಅಂಶಗಳು. ಆಧ್ಯಾತ್ಮಿಕತೆ, ಸಾಂಸ್ಕೃತಿಕ ಅರಿವು ಮತ್ತು ಸ್ನೇಹಿತರ ಪ್ರಭಾವದ ಬಗ್ಗೆಯೂ ಗಮನ ಹರಿಸಬೇಕು.
5. ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುತ್ತಾರೆ ಎಂಬುದನ್ನು ಪೂರ್ತಿಯಾಗಿ ಒಪ್ಪಿಕೊಳ್ಳಿ. ಅವರ ಅಭಿವ್ಯಕ್ತಿಯ ಶೈಲಿಯನ್ನು ಅರ್ಥಮಾಡಿಕೊಳ್ಳಿ.
611
6. ಯೋಗ ಮತ್ತು ಧ್ಯಾನವು ಮಕ್ಕಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ಅತ್ಯವಶ್ಯಕ.
711
7. ನಿಮ್ಮ ಹದಿಹರೆ ಮಕ್ಕಳನ್ನು, ನಿಂದಿಸದೇ- ಅವಮಾನಿಸದೇ, ಪ್ರೀತಿಯಿಂದ ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ.
811
8. ತಮ್ಮ ಬದ್ದತೆಗಳನ್ನು ನಿಭಾಯಿಸುವ ತಾಯಿ-ತಂದೆಯರನ್ನು ಮಕ್ಕಳು ಸಮರ್ಥರೆಂದು ಭಾವಿಸುತ್ತಾರೆ.
911
9. ಮಕ್ಕಳಿಗೆ ಆಧ್ಯಾತ್ಮಿಕತೆಯನ್ನು ಪರಿಚಯಿಸಿ. ಅವರ ಅಂತಃಪ್ರಜ್ಞೆಯ ಶೋಧನೆಗೆ ಪ್ರೇರೇಪಿಸಿ.
1011
10. ಪ್ರತಿಯೊಂದು ಮಗುವು, ಬೇರೆ-ಬೇರೆ ಸಂಸ್ಕೃತಿಗಳ ಸ್ವಲ್ಪ ಮಟ್ಟದ ಅರಿವನ್ನು ಪಡೆದುಕೊಂಡರೆ, ಈ ಜಗತ್ತು ಇನ್ನಷ್ಟು ಸುಂದರವಾಗುತ್ತದೆ
1111
11. ನಿಮ್ಮ ಮಕ್ಕಳ ಸ್ನೇಹಿತರಿಗೆ, ನೀವು ಒಳ್ಳೆಯ ಹಿರಿಯರಾಗಿ. ನಿಮ್ಮ ಮಕ್ಕಳ ಸ್ನೇಹಿತರು, ನಿಮಗಿಂತಲೂ ಹೆಚ್ಚಿನ ಪ್ರಭಾವವನ್ನು, ನಿಮ್ಮ ಮಕ್ಕಳ ಮೇಲೆ ಬೀರುತ್ತಾರೆ. ಅವರ ಒಳಿತನ್ನು ಗಮನಿಸಿ. ಅವರು ನಿಮ್ಮ ಮಾತು ಕೇಳುವಂತಾದರೆ, ನಿಮ್ಮ ಮಕ್ಕಳು ನಿಮ್ಮ ಮಾತನ್ನು ಕೇಳುತ್ತಾರೆ.