ಇಂದು ನಾವು ಚಾಣಕ್ಯ ನೀತಿಯ 5 ಅಮೂಲ್ಯ ವಿಷಯಗಳನ್ನು ತಿಳಿದುಕೊಳ್ಳೋಣ. ಹೆಚ್ಚು ಕಡಿಮೆ ನೀವು ಅದನ್ನು ಅಳವಡಿಸಿಕೊಂಡರೆ ಜನರು ನಿಮ್ಮ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ. ಏನಂತ ಗೊತ್ತಾ, ಇವನಿಗೆ ಇಷ್ಟೊಂದು ಯಶಸ್ಸು ಹೇಗೆ ಸಿಕ್ತು?.
ಪ್ರತಿಯೊಬ್ಬರೂ ಬಯಸುವುದು ಯಶಸ್ಸನ್ನೇ..ಆದರೆ ಅದನ್ನು ಸಾಧಿಸುವ ನಿಜವಾದ ಮಾರ್ಗ ಯಾವುದು ಎಂದು ಬಹಳ ಕಡಿಮೆ ಜನರಿಗೆ ಮಾತ್ರ ಗೊತ್ತು. ಆಚಾರ್ಯ ಚಾಣಕ್ಯನು ತನ್ನ ಅನುಭವ ಮತ್ತು ಬುದ್ಧಿವಂತಿಕೆಯಿಂದ ಕೆಲವು ಜೀವನ ನೀತಿಗಳನ್ನು ಹೇಳಿದ್ದಾನೆ. ಅದನ್ನು ಮೌನವಾಗಿ ಅಳವಡಿಸಿಕೊಂಡರೆ ವ್ಯಕ್ತಿಯು ತನ್ನ ಭವಿಷ್ಯವನ್ನೇ ಬದಲಾಯಿಸಿಕೊಳ್ಳಬಹುದು. ಈ ನೀತಿಗಳು ನಿಮ್ಮನ್ನು ಕಷ್ಟದ ಸಮಯದಲ್ಲಿ ಕೈ ಹಿಡಿಯುವುದಲ್ಲದೆ, ಇತರರಿಗಿಂತ ಒಂದು ಹೆಜ್ಜೆ ಮುಂದೆ ಇಡಲು ಸಹಾಯ ಮಾಡುತ್ತವೆ. ಚಾಣಕ್ಯನ ಮಾತುಗಳು ಪ್ರಸ್ತುತ ಸಮಯದಲ್ಲೂ ಸಂಪೂರ್ಣವಾಗಿ ಅನ್ವಯವಾಗುತ್ತವೆ. ಇಂದು ನಾವು ಚಾಣಕ್ಯ ನೀತಿಯ 5 ಅಮೂಲ್ಯ ವಿಷಯಗಳನ್ನು ತಿಳಿದುಕೊಳ್ಳೋಣ. ಹೆಚ್ಚು ಕಡಿಮೆ ನೀವು ಅದನ್ನು ಅಳವಡಿಸಿಕೊಂಡರೆ ಜನರು ನಿಮ್ಮ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ. ಏನಂತ ಗೊತ್ತಾ, ಇವನಿಗೆ ಇಷ್ಟೊಂದು ಯಶಸ್ಸು ಹೇಗೆ ಸಿಕ್ತು?.
26
ಮೊದಲನೆಯ ನೀತಿ: ಕಡಿಮೆ ಮಾತನಾಡಿ, ಹೆಚ್ಚು ಯೋಚಿಸಿ
ಚಾಣಕ್ಯನ ಪ್ರಕಾರ, ಹೆಚ್ಚು ಮಾತನಾಡುವುದು ವ್ಯಕ್ತಿಯ ದೌರ್ಬಲ್ಯವನ್ನು ರಿವೀಲ್ ಮಾಡುತ್ತದೆ. ಎಲ್ಲವನ್ನೂ ಯೋಚಿಸಿದ ನಂತರ ಮಾತನಾಡುವವನೇ ಬುದ್ಧಿವಂತ. ನೀವು ಕಡಿಮೆ ಮಾತನಾಡಿ. ಮುಖ್ಯವಾದ ವಿಷಯಗಳ ಬಗ್ಗೆ ಮಾತ್ರ ಮಾತನಾಡಿದರೆ, ಜನರು ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಈ ಅಭ್ಯಾಸವು ನಿಮ್ಮನ್ನು ಶಾಂತ ಮತ್ತು ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ.
36
ಎರಡನೇಯ ನೀತಿ: ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ
ಚಾಣಕ್ಯನು ತನ್ನ ಯೋಜನೆಗಳು ಮತ್ತು ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಹೇಳುತ್ತಾನೆ. ತಮ್ಮ ರಹಸ್ಯಗಳನ್ನು ಇತರರಿಗೆ ಹೇಳುವ ಜನರು ಹೆಚ್ಚಾಗಿ ಮೋಸ ಹೋಗುತ್ತಾರೆ. ನೀವು ನಿಮ್ಮ ನಿರ್ಧಾರಗಳು ಮತ್ತು ಗುರಿಗಳನ್ನು ಸದ್ದಿಲ್ಲದೆ ಕಂಪ್ಲೀಟ್ ಮಾಡಿದ್ರೆ ನಿಮ್ಮ ಯಶಸ್ಸು ಎಲ್ಲರಿಗೂ ಗೋಚರಿಸುತ್ತದೆ.
46
ಮೂರನೇಯ ನೀತಿ: ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ
ಸಮಯವನ್ನು ಗೌರವಿಸುವ ವ್ಯಕ್ತಿ ಜೀವನದಲ್ಲಿ ಮುಂದೆ ಸಾಗುತ್ತಾನೆ. ಚಾಣಕ್ಯ ನೀತಿಯಲ್ಲಿ ಸಮಯವೇ ದೊಡ್ಡ ಸಂಪತ್ತು ಎಂದು ಹೇಳಲಾಗಿದೆ. ನೀವು ಸಮಯವನ್ನು ಸರಿಯಾಗಿ ಬಳಸಿದರೆ, ನೀವು ಇತರರಿಗಿಂತ ಹಲವು ಹೆಜ್ಜೆ ಮುಂದೆ ಹೋಗಬಹುದು. ಯಶಸ್ವಿ ಜನರು ಎಂದಿಗೂ ಸಮಯವನ್ನು ವ್ಯರ್ಥ ಮಾಡುವುದಿಲ್ಲ.
56
ನಾಲ್ಕನೇಯ ನೀತಿ: ಕೆಟ್ಟ ಸಹವಾಸದಿಂದ ದೂರವಿರಿ
ಕೆಟ್ಟ ಜನರ ಸಹವಾಸವು ವ್ಯಕ್ತಿಯನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ ಎಂದು ಚಾಣಕ್ಯ ನಂಬಿದ್ದರು. ತಪ್ಪು ಜನರಿಂದ ದೂರವಿದ್ದರೆ, ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಸ್ಥಿರತೆ ಉಳಿಯುತ್ತದೆ. ಸರಿಯಾದ ಸಹವಾಸವು ವ್ಯಕ್ತಿಯ ಆಲೋಚನಾ ವಿಧಾನ ಮತ್ತು ಕಾರ್ಯಗಳೆರಡನ್ನೂ ಸುಧಾರಿಸುತ್ತದೆ.
66
ಐದನೇಯ ನೀತಿ: ನಿಮ್ಮ ಮೇಲೆ ನಂಬಿಕೆ ಇಡಿ.
ಚಾಣಕ್ಯ ನೀತಿ ಹೇಳುವಂತೆ ಆತ್ಮವಿಶ್ವಾಸವೇ ಯಶಸ್ಸಿನ ಕೀಲಿಕೈ. ನೀವು ನಿಮ್ಮ ಮೇಲೆ ನಂಬಿಕೆ ಇಟ್ಟರೆ, ಯಾವುದೇ ಕಷ್ಟವು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಇತರರು ಏನು ಹೇಳುತ್ತಾರೆಂದು ಭಯಪಡುವ ಬದಲು, ನಿಮ್ಮ ನಿರ್ಧಾರಗಳಲ್ಲಿ ದೃಢವಾಗಿರಿ. ಈ ಅಭ್ಯಾಸವು ನಿಮ್ಮನ್ನು ಒಳಗಿನಿಂದ ಬಲಶಾಲಿಯಾಗಿ ಮತ್ತು ಹೊರಗಿನಿಂದ ಪ್ರಭಾವಶಾಲಿಯಾಗಿ ಮಾಡುತ್ತದೆ.