ಉದ್ದಿನ ಬೇಳೆ , ಒಣ ಖರ್ಜೂರದಲ್ಲೂ ಅಡಗಿದೆ ಲೈಂಗಿಕಾಸಕ್ತಿ ಹೆಚ್ಚಿಸುವ ಶಕ್ತಿ

First Published | Sep 15, 2021, 5:07 PM IST

ಇಂದಿನ ಜಗತ್ತಿನಲ್ಲಿ, ಜನರು ಸಂಗಾತಿಯನ್ನು ತೃಪ್ತಿಪಡಿಸಲು ಮತ್ತು ಹೆಚ್ಚು ಕಾಲ ಹಾಸಿಗೆ ಮೇಲೆ ವಿಜೃಂಭಿಸಲು ವಿವಿಧ ಔಷಧಿಗಳನ್ನು ಬಳಸುತ್ತಾರೆ. ಇದು ಅವರು ತಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವಂತೆ ಮಾಡುತ್ತದೆ, ಆದರೆ ಈ ಔಷಧಿಗಳು ತುಂಬಾ ಸುರಕ್ಷಿತವಾಗಿಲ್ಲ. ಔಷಧಿಗಳ ಸಹಾಯವಿಲ್ಲದೆ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಬಹುದು.  ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಇದು ಸಾಧ್ಯ. ನಿಮ್ಮ ಲೈಂಗಿಕಾಶಕ್ತಿಯನ್ನು ಹೆಚ್ಚಿಸುವ ಅನೇಕ ಮನೆಮದ್ದುಗಳು ಮನೆಯಲ್ಲಿಯೇ ಇವೆ... ಅವುಗಳ ಬಗ್ಗೆ ತಿಳಿಯಿರಿ... 

ಕಾಮಾಸಕ್ತಿ ಹೆಚ್ಚಿಸಲು ಇತರ ಔಷಧಿಗಳನ್ನು ಟ್ರೈ ಮಾಡಬೇಡಿ. ಹೊರಗಡೆ ಮಾರುಕಟ್ಟೆಗಳಲ್ಲಿ ಅನೇಕ ಅಡ್ಡ ಪರಿಣಾಮಗಳನ್ನು ಬೀರುವ ವಿವಿಧ ಔಷಧಿಗಳನ್ನು ನೀಡುತ್ತವೆ. ಲೈಂಗಿಕಾಸಕ್ತಿಯನ್ನು ಹೆಚ್ಚಿಸಲು ನೀವು ಅಳವಡಿಸಿಕೊಳ್ಳಬಹುದಾದ ಕೆಲವು ಮನೆಮದ್ದುಗಳ ಮಾಹಿತಿ ಇಲ್ಲಿದೆ. 

ಅಶ್ವಗಂಧ  
ಅಶ್ವಗಂಧ ಬಹಳ ಶಕ್ತಿಶಾಲಿ ಔಷಧಿ. ಇದು ಬಹಳ ಹಳೆಯ ರಾಸಾಯನಿಕ ಔಷಧ ಎಂದು ಹೇಳಲಾಗುತ್ತದೆ. ಅಶ್ವಗಂಧವು ನಿಮ್ಮ ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತದೆ. ನೀವು ಅದನ್ನು ಸೇವಿಸಬೇಕು. ಇದರಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಬೆಳಿಗ್ಗೆ ಮತ್ತು ಸಂಜೆ ಹಾಲಿನೊಂದಿಗೆ ಅಶ್ವಗಂಧ ಪುಡಿಯನ್ನು ಬೆರೆಸಿದರೆ ಪ್ರಯೋಜನಕಾರಿ.
 

Tap to resize

ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆ
ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಹ ಸೇವಿಸಬೇಕು. ಇದರಿಂದ ಲೈಂಗಿಕಾಸಕ್ತಿ ಹೆಚ್ಚುತ್ತದೆ. ಪ್ರತಿದಿನ ಎರಡರಿಂದ ಮೂರು ಎಸಳು ಬೆಳ್ಳುಳ್ಳಿ ತಿಂದರೆ ನಿಮಗೆ ಸಾಕಷ್ಟು ಲಾಭವಾಗುತ್ತದೆ. ಈರುಳ್ಳಿ ತಿನ್ನುವುದರಿಂದ ಲೈಂಗಿಕ ಶಕ್ತಿಯೂ ಹೆಚ್ಚುತ್ತದೆ.  ಈರುಳ್ಳಿಯನ್ನು ಸಲಾಡ್‌ಗಳಲ್ಲಿ ಸೇವಿಸಬಹುದು. 

ಉದ್ದಿನ ಬೇಳೆ
ಲೈಂಗಿಕಾಸಕ್ತಿಯನ್ನು ಹೆಚ್ಚಿಸಲು ಉದ್ದಿನ ಬೇಳೆಯನ್ನು ಸಹ ಸೇವಿಸಬೇಕು. ಅರ್ಧ ಚಮಚ ಉದ್ದಿನ ಬೇಳೆಯನ್ನು ಒಂದು ಬೀನ್ಸ್ ಜೊತೆಗೆ ರುಬ್ಬಿತಿಂದರೆ ಸಾಕಷ್ಟು ಲಾಭವಾಗುತ್ತದೆ. ಇದರಿಂದ ಲೈಂಗಿಕಾಸಕ್ತಿ ಹೆಚ್ಚುತ್ತದೆ. ಉತ್ತಮ ರೋಮಾಂಚಕ ಲೈಂಗಿಕ ಜೀವನ ನಿಮ್ಮದಾಗುತ್ತದೆ. 

ಒಣ ಖರ್ಜೂರ ಸೇವನೆ
ಒಣ ಖರ್ಜೂರ ಸೇವಿಸಬೇಕು. ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನಿಮಗೆ ಅನಿಸಿದರೆ ಆಗ ಒಣ ಖರ್ಜೂರ ಸೇವಿಸಲು ಪ್ರಾರಂಭಿಸಬೇಕು.

ಇದರಿಂದ  ಸಾಕಷ್ಟು ಸಹಾಯವಾಗಲಿದೆ. ಒಣ ಖರ್ಜೂರ ಹಾಲಿನಲ್ಲಿ ಕುದಿಸಿ ರಾತ್ರಿ ತಿನ್ನುವುದರಿಂದ ಲೈಂಗಿಕ ಬಯಕೆ ಮತ್ತು ಲೈಂಗಿಕ ಶಕ್ತಿ ಹೆಚ್ಚುತ್ತದೆ.  ಪ್ರತಿದಿನ 100 ಗ್ರಾಂ ಒಣ ಖರ್ಜೂರ  ತಿನ್ನಿ. 

ನೆಲ್ಲಿಕಾಯಿ ಸೇವನೆ 
ಲೈಂಗಿಕಾಸಕ್ತಿಯನ್ನು ಹೆಚ್ಚಿಸಲು ನೆಲ್ಲಿಕಾಯಿ ಸಹ ಸೇವಿಸಬೇಕು. ಆಮ್ಲಾ ತುಂಬಾ ಆರೋಗ್ಯವಾದ ಔಷಧೀಯ ಆಹಾರ. ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸಬಹುದು. ಆಮ್ಲಾ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿಂದರೆ ಲೈಂಗಿಕ ಜೀವನವು ಉತ್ತಮವಾಗಿರುತ್ತದೆ.

Latest Videos

click me!