ಮೊದಲ ಚಾಟಿಂಗ್‌ನಲ್ಲೇ ಹುಡುಗಿಯನ್ನು ಇಂಪ್ರೆಸ್ ಮಾಡೋ ಮಾರ್ಗಗಳಿವು

Published : Oct 21, 2022, 05:52 PM IST

ಮೊದಲ ಬಾರಿಗೆ ಆನ್ ಲೈನ್ ನಲ್ಲಿ ಹುಡುಗಿಯೊಂದಿಗೆ ಚಾಟ್ ಮಾಡುವುದು ಎಂದರೆ ಅವಳೊಂದಿಗೆ ಮೊದಲ ಡೇಟಿಂಗ್ ಗೆ ಹೋದಂತೆ. ಚಾಟ್ ಮಾಡುವಾಗ ನೀವು ಎಲ್ಲಿಯೂ ಎಲ್ಲೆ ಮೀರದಂತೆ ತುಂಬಾನೆ ಹುಷಾರಾಗಿರಬೇಕು. ನೀವು ನಿಜವಾಗಿಯೂ ಉತ್ತಮ ಇಂಪ್ರೆಶನ್ ಮೂಡಿಸಲು ಇದೊಂದು ಬೆಸ್ಟ್ ಸಮಯ ಅನ್ನೋದನ್ನು ತಿಳಿಯಿರಿ. ಹಾಗಿದ್ರೆ ಬನ್ನಿ ಕೇವಲ ಮೆಸೇಜ್ ಮಾಡೋ ಮೂಲಕ ಹುಡುಗಿಯನ್ನು ಇಂಪ್ರೆಸ್ ಮಾಡೋದು ಹೇಗೆ ಅನ್ನೋದನ್ನು ತಿಳಿಯಿರಿ. 

PREV
110
ಮೊದಲ ಚಾಟಿಂಗ್‌ನಲ್ಲೇ ಹುಡುಗಿಯನ್ನು ಇಂಪ್ರೆಸ್ ಮಾಡೋ ಮಾರ್ಗಗಳಿವು

ಫಸ್ಟ್ ಟೈಮ್ ಡೇಟ್ ಮಾಡುವಾಗ ನೀವು ಸ್ವಲ್ಪ ಉದ್ವಿಗ್ನತೆ ಮತ್ತು ಆತಂಕವನ್ನು ಅನುಭವಿಸುವುದು ತುಂಬಾನೆ ಸಾಮಾನ್ಯವಾಗಿದೆ. ಕೆಲವೊಮ್ಮೆ ನಿಮ್ಮ ಮಾತುಗಳಿಂದ ಅವರು ಚಾಟ್ ಮಾಡೋದನ್ನೆ ಬಿಡಬಹುದು ಅಥವಾ ಬ್ಲಾಕ್ ಮಾಡಲೂ ಬಹುದು. ಆದ್ದರಿಂದ ಚಾಟ್ ಮಾಡುವಾಗ ನೀವು ತುಂಬಾನೆ ಹುಷಾರಾಗಿರೋದು ಮುಖ್ಯ. 
 

210

ಉತ್ತಮ ಚಾಟಿಂಗ್ ಪ್ರಾರಂಭಿಸಲು ಮತ್ತು ಅದನ್ನು ಮುಂದುವರಿಸಲು ಕೀಲಿಕೈ ಯಾವುದು ಎಂದು ನಿಮಗೆ ತಿಳಿದಿದೆಯೇ? ಚಾಟ್ ನಲ್ಲಿ ನೀವು ಹುಡುಗಿಯ ಮೇಲೆ ಹೇಗೆ ಪ್ರಭಾವ ಬೀರುತ್ತೀರಿ? ಅನ್ನೋದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವಿಲ್ಲಿ ನೀಡುತ್ತೇವೆ, ಇದರಿಂದ ನೀವು ಚಾಟ್ ಸಮಯದಲ್ಲಿ ಹುಡುಗಿಯನ್ನು ಖಂಡಿತವಾಗಿಯೂ ಇಂಪ್ರೆಸ್ (impress girl) ಮಾಡಬಹುದು.

310

ಚಾಟ್ ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡುವುದು ಹೇಗೆ? 
ಅವರೇ ಮಾತನಾಡಲಿ
ಚಾಟ್ ಸಮಯದಲ್ಲಿ ಹುಡುಗಿಯನ್ನು ಹೀಯಾಳಿಸುವುದು ಅಥವಾ ಅವರು ಏನನ್ನಾದರೂ ಹೇಳಲು ಬಂದರೆ ತಡೆಯುವುದರಿಂದ, ಸಂಗಾತಿ ತನ್ನ ಮಾತನ್ನು ಉಳಿಸಿಕೊಳ್ಳಲು ಹಿಂಜರಿಯುವಂತೆ ಮಾಡುತ್ತದೆ. ಅದನ್ನು ಮಾಡ ಬೇಡಿ. ಬದಲಾಗಿ, ಅವರಿಗೆ ಸಂಪೂರ್ಣವಾಗಿ ಮಾತನಾಡಲು ಅವಕಾಶ ನೀಡಿ, ನೀವು ಸುಮ್ಮನೆ ಅವರು ಹೇಳೋದನ್ನು ತಾಳ್ಮೆಯಿಂದ ಕೇಳಿ. 

410

ನೀವು ಕೇವಲ ನಿಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೆ, ನಿಮಗೆ ಆಕೆಯ ಮೇಲೆ ಯಾವುದೇ ಆಸಕ್ತಿ ಇಲ್ಲವೇನೋ ಎಂದು ಅವರು ಭಾವಿಸುವ ಚಾನ್ಸ್ ಇದೆ. ಆರಂಭದಲ್ಲಿ ಅವರಿಗೆ ಮನಸ್ಸು ಬಿಚ್ಚಿ ಮಾತನಾಡಲು ನೀವು ಅವರಿಗೆ ಅವಕಾಶ ನೀಡದಿದ್ದರೆ, ಅವರು ತನ್ನನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಾಗೋದಿಲ್ಲ

510

ಎಂಟರ್ಟೇನ್ಮೆಂಟ್ ವಿಷಯಗಳ ಬಗ್ಗೆ ಮಾತನಾಡಿ
ಹುಡುಗಿಯೊಂದಿಗೆ ಚಾಟ್ ಮಾಡುವಾಗ, ಏನು ಮಾತನಾಡೋದು ಎಂದು ಯೋಚಿಸುತ್ತಿದ್ದರೆ, ಮಾತನಾಡಲು ಬೆಸ್ಟ್ ವಿಷಯ ಅಂದರೆ ಎಂಟರ್ ಟೇನ್ ಮೆಂಟ್. ನೀವು ಅವಳ ನೆಚ್ಚಿನ ಟಿವಿ ಶೋಗಳು ಅಥವಾ ಮೋಜಿನ ಮನರಂಜನಾ (entertainment) ವಿಷಯಗಳ ಬಗ್ಗೆ ಮಾತನಾಡಬಹುದು, ಅದು ಅವಳನ್ನು ಉತ್ತೇಜಿಸುತ್ತದೆ.
 

610

ಅವಳು ಸಾಹಸಿಯೇ, ರಾಕ್ ಕ್ಲೈಂಬಿಂಗ್ (rock climbing) ಅಥವಾ ಬಂಗೀ ಜಂಪಿಂಗ್ ಇಷ್ಟಪಡುತ್ತಾರೆಯೇ ಅಥವಾ  ತನ್ನ ವೀಕೆಂಡ್ ನ್ನು ಹಾಸಿಗೆಯಲ್ಲಿ ಕಳೆಯಲು ಇಷ್ಟಪಡುತ್ತಾಳೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸಿ. ಅವಳು ಪ್ರಯಾಣಿಸಲು ಇಷ್ಟಪಡುತ್ತಿದ್ದರೆ, ನೀವು ಹೋದ ಎಲ್ಲಾ ಸ್ಥಳಗಳ ಬಗ್ಗೆ ಮಾತನಾಡಬೇಡಿ, ಬದಲಿಗೆ ಅವರು ಹೋದ ಸ್ಥಳಗಳ ಬಗ್ಗೆ ಅವರಿಗೆ ಮಾತನಾಡಲು ಬಿಡಿ.

710

ತಾಳ್ಮೆಯಿಂದಿರಿ 
ನಿಮ್ಮ ಮೊದಲ ಚಾಟ್ ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡುವ ಬೆಸ್ಟ್ ವೆಪನ್ ಎಂದರೆ ತಾಳ್ಮೆ. ನಿಮ್ಮ ಬಗ್ಗೆ ಅವರಿಗೆ ಹೇಳೋದು, ಮನಸ್ಸಿನ ಮಾತನಾಡೋದು ಮುಖ್ಯವಿರಬಹುದು. ಆದರೆ ಅದಕ್ಕೂ ಮುಖ್ಯವಾಗಿ ಅವರನ್ನು ಮಾತನಾಡಲು ಬಿಟ್ಟು, ನೀವು ತಾಳ್ಮೆಯಿಂದ (patiance) ಅದನ್ನು ಆಲಿಸುವುದು ಮುಖ್ಯ. ಇದರಿಂದ ಹುಡುಗಿಯರು ಹೆಚ್ಚು ಇಂಪ್ರೆಸ್ ಆಗ್ತಾರೆ.

810

ಹೆಚ್ಚು ಬಡಾಯಿ ಕೊಚ್ಚಿಕೊಳ್ಳಬೇಡಿ 
ಚಾಟ್ ನ ಆರಂಭದಲ್ಲಿ ಹೆಚ್ಚಿನ ಪುರುಷರು ಮಾಡುವ ದೊಡ್ಡ ತಪ್ಪು ಎಂದರೆ ತಮ್ಮ ಬಗ್ಗೆ ಸುಳ್ಳು ಹೇಳುವುದು, ಇದರಿಂದ ಮುಂದೆ ಸಮಸ್ಯೆ ಗ್ಯಾರಂಟಿ. ಈ ಒಂದು ಸಣ್ಣ ಸುಳ್ಳು ನಂತರದ ವರ್ಷಗಳಲ್ಲಿ ದೊಡ್ಡ ಸಮಸ್ಯೆಗಳಾಗಿ ಬದಲಾಗಬಹುದು.ಆದ್ದರಿಂದ ಪ್ರಾಮಾಣಿಕ ಮಾರ್ಗವನ್ನು ಆರಿಸಿಕೊಳ್ಳಿ.ಸಂಬಂಧ ಮುಂದುವರೆಯಲು ನಿಮ್ಮ ಬಗ್ಗೆ ಕೊಚ್ಚಿಕೊಳ್ಳೋದನ್ನು ಬಿಡಬೇಕು.

910

ವಿಭಿನ್ನವಾಗಿ ಏನನ್ನಾದರೂ ಪ್ರಯತ್ನಿಸಿ
ವಾಸ್ತವವಾಗಿ, ನಿಮ್ಮನ್ನು ನೀವು ಡಿಫರೆಂಟ್ ಎಂದು ಸಾಬೀತುಪಡಿಸಲು ಇದು ಅವಕಾಶವಾಗಿದೆ. ಅದರ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಹೆಚ್ಚಿನ ಜನರು ತಮ್ಮ ವೃತ್ತಿಜೀವನ, ಆಕಾಂಕ್ಷೆಗಳು ಮತ್ತು ಅವರ ಆಸ್ತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವಳು ಕೇಳಲು ಆಸಕ್ತಿ ಹೊಂದಿರುವ ವಿಷಯಗಳ ಬಗ್ಗೆ ನೀವು ಮಾತನಾಡಿದರೆ ಉತ್ತಮ. 

1010

ಬಹುಶಃ ನೀವು ಬಿಜಿನೆಸ್ ಪ್ರಾರಂಭಿಸುವ ಬಗ್ಗೆ ಕೆಲವು ಕ್ರಿಯೇಟಿವ್ ಆಲೋಚನೆಗಳನ್ನು (creative thinking) ಹೊಂದಿರಬಹುದು ಅಥವಾ ಸಮಾಜದ ಬಗ್ಗೆ ನಿಮ್ಮ ಸಂವೇದನಾಶೀಲತೆಯನ್ನು ತೋರಿಸುವ ಆಲೋಚನೆಯನ್ನು ಹೊಂದಿರಬಹುದು. ಒಟ್ಟಲ್ಲಿ ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಲು ಪ್ರಯತ್ನಿಸಿ, ಇದರಿಂದ ನಿಮ್ಮ ಹುಡುಗಿ ಇಂಪ್ರೆಸ್ ಆಗೋದು ಗ್ಯಾರಂಟಿ.

Read more Photos on
click me!

Recommended Stories