ಈ ಪುಟ್ಟ ಪುಟ್ಟ ವಿಷ್ಯಗಳಿಗೆ ಖುಷಿಯಾಗಿ, ಪಾಸಿಟಿವ್ ವೈಬ್ಸ್ ನಿಮ್ಮೊಳಗೆ ಮೂಡುತ್ತೆ

First Published May 8, 2021, 2:19 PM IST

ಇತ್ತೀಚಿಗೆ ಜನರ ಮನಸಲ್ಲಿ ಒಂದು ರೀತಿಯ ಭಯ ಆವರಿಸಿದೆ. ಕೊರೋನಾ ಪ್ರಕರಣಗಳ ಏರಿಕೆ, ಸಾವು ಎಲ್ಲವನ್ನೂ ನೋಡಿ ನೋಡಿ... ಸುತ್ತಲೂ ಕಣ್ತೆರೆದು ನೋಡಲು ಭಯವಾಗುತ್ತಿದೆ. ಆದರೆ ಈ ಕಷ್ಟಗಳನ್ನು ದೂರ ಮಾಡಿ ಹೊರ ಬರಬೇಕು ಎಂದರೆ ನಾವು ಸಂತೋಷವಾಗಿರಲೇಬೇಕು. ಇದರಿಂದ ಮಾತ್ರ ನಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆದರೆ ಜೀವನ ಸಂತೋಷದಿಂದ ಕೂಡಿರಬೇಕಾದರೆ ದೊಡ್ಡ ದೊಡ್ಡ ಸಂತೋಷಕ್ಕೆ ಕಾದು ಕುಳಿತು ಕೊಳ್ಳಬೇಕಾಗಿಲ್ಲ. ಯಾಕೆಂದರೆ ಆ ದೊಡ್ಡ ಸಂತೋಷಕ್ಕೆ ಕಾದು ಕೂತರೆ ಸಣ್ಣ ಸಣ್ಣ ಸಂತೋಷಗಳು ಮರೆಯಾಗುತ್ತವೆ. ಅದಕ್ಕಾಗಿ ಜೀವನದಲ್ಲಿ ಸಣ್ಣ ಸಣ್ಣ ಖುಷಿಯನ್ನು ಎಂಜಾಯ್ ಮಾಡಲು ಕಲಿಯಬೇಕು. ಹೀಗೆ ಮಾಡಿದರೆ ಆದಷ್ಟು ಬೇಗ ಈ ಜಗತ್ತು ಚೇತರಿಸಿಕೊಳ್ಳಿದೆ.

ಪ್ರಥಮ ಬಾರಿ ಲವ್ ಆಗೋದು, ಆ ನೋಟ, ಹೊಟ್ಟೆಯಲ್ಲಿ ಚಿಟ್ಟೆ ಹಾರಿದಂತಾಗುವುದು.... ಮಧುರ ಅನುಭವ ನೀಡುತ್ತದೆ. ನಿಮ್ಮ ಮೊದಲ ಪ್ರೀತಿಯ ಅನುಭವವನ್ನು ನೆನಪಿಸಿಕೊಳ್ಳಿ...
undefined
ಮನೆಯಲ್ಲಿರುವ ಸಾಕು ಪ್ರಾಣಿಗಳ ಜೊತೆಗೆ ಆಟವಾಡಿ... ಇದು ಅದ್ಭುತ ಅನುಭವ ನೀಡುತ್ತದೆ.
undefined
ಮುಖದ ಮೇಲೆ ನಗು ತರಿಸುವಂತಹ ಬಾಲ್ಯದ ಆ ಮಧುರ ನೆನಪುಗಳು ಕಣ್ಣೆದುರು ತನ್ನಿ...
undefined
ಟಿವಿ, ಮೊಬೈಲ್‌, ಫ್ರೆಂಡ್ಸ್‌, ಕೆಲಸ ಎಲ್ಲಾ ಬಿಟ್ಟು ನಿಮಗಾಗಿ ಸಮಯ ಮೀಸಲಿಟ್ಟು ರಿಲ್ಯಾಕ್ಸ್‌ ಆಗಿ. ನಿಮಗೆ ಏನು ಇಷ್ಟವಿದೆಯೋ ಅದನ್ನು ಟ್ರೈ ಮಾಡಿ.
undefined
ನಿಮ್ಮನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಯೊಬ್ಬರು ಇದ್ದಾರೆ ಎನ್ನುವ ಆ ಒಂದು ಸತ್ಯ ಜೀವನದಲ್ಲಿ ಎಲ್ಲವನ್ನೂ ಗೆಲ್ಲುವಂತಹ ಶಕ್ತಿ ನೀಡುತ್ತದೆ.
undefined
ನಮ್ಮಲ್ಲಿರುವ ಒಂದು ವಿಶೇಷ ಟ್ಯಾಲೆಂಟ್ ಅನ್ನು ಜನರಿಗೆ ತೋರಿಸುವುದು. ನಾಲಿಗೆಯನ್ನು ಟ್ವಿಸ್ಟ್ ಮಾಡುವುದು, ಪಿಯಾನೋ ಭಾರಿಸುವುದು, ಮ್ಯಾಜಿಕ್ ಮಾಡುವುದು ಇತ್ಯಾದಿ.
undefined
ಜೋರಾಗಿ ಮಳೆಬರುತ್ತಿರುವಾಗ ಹಾಡು ಕೇಳುತ್ತಾ, ಬಿಸಿ ಬಿಸಿ ಚಹಾ ಸಿಪ್ ಮಾಡುತ್ತಾ, ಪಕೋಡ ಸವಿಯುವುದು .
undefined
ನೀವು ಪ್ರಸ್ತುತವಾಗಿ ಹೇಗೆ ಫೀಲ್ ಆಗುತ್ತೀರಿ ಅದೇ ಹಾಡನ್ನು ಕೇಳುತ್ತ ಮೈ ಮರೆಯುವುದು.
undefined
ಮರಕ್ಕೆ ಹತ್ತಿ ಎತ್ತರದ ಕೊಂಬೆಯಲ್ಲಿ ಕುಳಿತು ಆಕಾಶಕ್ಕೆ ಏರಿದಷ್ಟು ಖುಷಿ ಪಡುವುದು.
undefined
ಲೈಫ್ ಸ್ಟೈಲ್‌ನಲ್ಲಿ ಸಣ್ಣ ಬದಲಾವಣೆ ಮಾಡುವುದು, ಮುಂದೆ ಅದನ್ನೇ ಇತರರು ಫಾಲೋ ಮಾಡೋವಾಗ ಉಂಟಾಗುವ ಖುಷಿ.
undefined
click me!