ಈಗಿನ ಕಾಲದಲ್ಲೂ ಕನ್ಯತ್ವ ಪರೀಕ್ಷೆ ಬೇಕಾ? ಮದ್ವೆ ಅಂದ್ರೆ ಹೇಗಿರಬೇಕು?

Published : Jul 01, 2023, 06:13 PM IST

ಮದುವೆ ಅನ್ನೋದು ಗಂಡು -ಹೆಣ್ಣಿನ ಜೀವನದ ಪ್ರಮುಖ ಭಾಗ ಹೌದು. ಆದರೆ ಮದುವೆ ಹೆಸರಿನಲ್ಲಿ ನಡೆಯುವ ಸಂಪ್ರದಾಯಗಳು ತಪ್ಪು ಎಂದು ಅನಿಸುತ್ತೆ. ಅದು ಇಂದು ಬದಲಾಗಬೇಕಿತ್ತು. ಆದರೆ ಆಚರಣೆ ಅದ್ಧೂರಿಯಾಗ್ತಾ ಬಂದಿದೆ, ಸಂಪ್ರದಾಯಗಳು ಹಾಗೆ ಮುಂದುವರೆದಿದೆ.   

PREV
18
ಈಗಿನ ಕಾಲದಲ್ಲೂ ಕನ್ಯತ್ವ ಪರೀಕ್ಷೆ ಬೇಕಾ? ಮದ್ವೆ ಅಂದ್ರೆ ಹೇಗಿರಬೇಕು?

ಮದುವೆಗೆ ಸಂಬಂಧಿಸಿದಂತೆ ಭಾರತೀಯ ಸಮಾಜದಲ್ಲಿ ನಡೆಯುತ್ತಿರುವ ಅನೇಕ ಸಂಪ್ರದಾಯಗಳು (wedidng tradition)ಈಗ ಕೊನೆಗೊಳ್ಳಬೇಕಿತ್ತು. ಆದರೆ ಜನರ ಆಲೋಚನೆ ಎಂದಿಗೂ ಈ ಸಂಪ್ರದಾಯಗಳನ್ನು ಕೊನೆಗೊಳ್ಳಲು ಬಿಡಲಿಲ್ಲ. ಮತ್ತು ಜನರು ಮುಂದುವರೆದಂತೆ, ಮದುವೆಗೆ ಸಂಬಂಧಿಸಿದ ನಿಯಮಗಳು ಮತ್ತು ಸಂಪ್ರದಾಯಗಳು ಸಹ ಹೆಚ್ಚುತ್ತಿವೆ. 

28

ಇಂದಿಗೂ, ಭಾರತದಲ್ಲಿ ಮದುವೆಗಳನ್ನು ಪೋಷಕರ ಒಪ್ಪಿಗೆಯೊಂದಿಗೆ ಮಾಡಲಾಗುತ್ತದೆ, ಜನರು ಅರೇಂಜ್ ಮ್ಯಾರೇಜ್‌ಗೆ (arrange marriage) ಹೆಚ್ಚಿನ ಆದ್ಯತೆ ನೀಡುತ್ತಾರೆ. ಇಂದಿಗೂ ಲವ್ ಮ್ಯಾರೇಜ್ ನ್ನ ಬೆಸ್ಟ್ ಅಂತ ಹೇಳೋದೆ ಇಲ್ಲ. ಅಷ್ಟೇ ಅಲ್ಲ, ಇಂದಿಗೂ ಹಲವು ಮನೆಗಳಲ್ಲಿ  ಸೊಸೆ ಎಂದರೆ ಮನೆಯಲ್ಲಿ ಕೆಲಸ ಮಾಡೋದಕ್ಕೆ ಸೀಮಿತವಾಗಿದ್ದಾಳೆ, ಮನೆಯ ಸೊಸೆ ಎಷ್ಟೇ ವಿದ್ಯಾವಂತಳಾಗಿದ್ದರೂ ಮತ್ತು ಕೆಲಸ ಮಾಡಿದರೂ, ಆಕೆ ಮನೆಯ ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದು ಯಾವಾಗ ಬದಲಾಗುತ್ತೋ ಗೊತ್ತಿಲ್ಲ.

38

ಭಾರತೀಯ ಪುರುಷರು ತಮ್ಮ ಆಲೋಚನೆಗಳು ಮತ್ತು ಮನೋಭಾವವನ್ನು ಬದಲಾಯಿಸಿದರೆ, ದೇಶದಲ್ಲಿ ಮದುವೆಯ ಹಳೆಯ ಸಂಪ್ರದಾಯಗಳು ಕೊನೆಗೊಳ್ಳಬಹುದು. ನೀವು ವಿದ್ಯಾವಂತರಾಗಿದ್ರೆ, ಹೆಣ್ಣಿನ ಬಗ್ಗೆ ಗೌರವ ಇದ್ರೆ, ಮದುವೆ ಆಗೋ ಮುನ್ನ ನೀವು ಅಂದ್ರೆ ಪುರುಷರು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸೋದು ಉತ್ತಮ. 
 

48

ಯಾರೋ ಹೇಳಿದಕ್ಕಾಗಿ ಮದುವೆಯಾಗಬೇಡಿ
ಮದುವೆಯಾಗೋದು ದೊಡ್ಡ ಜವಾಬ್ದಾರಿ. ಮದುವೆಗೆ ಸಂಬಂಧಿಸಿದ ತಪ್ಪು ನಿರ್ಧಾರವು ನಿಮ್ಮ ಜೀವನವನ್ನು ಹಾಳುಮಾಡಬಹುದು. ಹಾಗಾಗಿ, ಸಮಾಜ ಮತ್ತು ಕುಟುಂಬ ಏನು ಹೇಳುತ್ತೆ ಎಂದು ಹೆದರಿ ಮದುವೆಯಾಗೋದು ಬೇಡ. ಈ ನಿರ್ಧಾರದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ.  ಮತ್ತೊಂದು ಜೀವನವು ನಿಮ್ಮ ಜೀವನದ ಒಂದು ಭಾಗವಾಗುತ್ತೆ, ಅವರು ನಿಮ್ಮ ಮೇಲೆ ಅವಲಂಬಿತವಾಗಿರುತ್ತಾರೆ. ನಿಮ್ಮ ಪ್ರೀತಿ, ವಿಶ್ವಾಸ ಬೇಕು. ಆದ್ದರಿಂದ ಈ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳೋದು ಉತ್ತಮ..

58

ವರದಕ್ಷಿಣೆಗೆ ನೋ ಎನ್ನಿ
ಹುಡುಗಿ ಎಷ್ಟೇ ವಿದ್ಯಾವಂತಳಾಗಿರಲಿ ಮತ್ತು ಉದ್ಯೋಗದಲ್ಲಿದ್ದರೂ, ಮದುವೆಗಾಗಿ ಹುಡುಗಿಯ ಕುಟುಂಬ ಸದಸ್ಯರು ಹುಡುಗರಿಗೆ ವರದಕ್ಷಿಣೆ (dowry) ನೀಡಬೇಕಾಗುತ್ತದೆ ಅನ್ನೋ ನಿಯಮ ಇನ್ನೂ ಇದೆ. ಮದುವೆ ನಂತರ ಸೊಸೆ ಅಷ್ಟು ವರದಕ್ಷಿಣೆ ಕೊಟ್ಟಿದ್ದಾಳೆ, ನಮಗೆ ಇನ್ನೂ ಬೇಕು, ಎಂದು ಹಿಂಸಿಸುವ ಅದೆಷ್ಟೊ ಜನರಿದ್ದಾರೆ. ವರದಕ್ಷಿಣೆ ಹಿಂಸೆಯಿಂದ ಸಾವನ್ನಪ್ಪಿದವರೂ ಇದ್ದಾರೆ. ಹಾಗಾಗಿ ನೀವು ಮದುವೆಯಾಗೋ ಮುನ್ನ ವರದಕ್ಷಿಣೆ ಬಗ್ಗೆ ಮಾತನಾಡದಂತೆ ನಿಮ್ಮ ಪೋಷಕರಿಗೆ ತಿಳಿಸಬೇಕು. 

68

ಕನ್ಯತ್ವ ಪರೀಕ್ಷೆ ಬೇಡ
ಇಂದಿಗೂ, ಮದುವೆ ಹುಡುಗಿಯ ವರ್ಜಿನಿಟಿ (virginity test) ಹಲವರಿಗೆ ಮುಖ್ಯವಾಗಿದೆ. ಮದುವೆಯ ನಂತರ, ಹುಡುಗಿ ಕನ್ಯೆಯಲ್ಲ ಎಂದು ಕಂಡುಬಂದರೆ, ಅವಳನ್ನು ಅವಳ ಅತ್ತೆ-ಮಾವ ಮತ್ತು ಸಮಾಜವು ಹಿಂಸಿಸಲು ಪ್ರಾರಂಭಿಸುತ್ತದೆ. ಮದುವೆಯಾಗುತ್ತಿರುವ ಹುಡುಗ ಚಾರಿತ್ರ್ಯ ಹೀನನಾದರೂ ಪರವಾಗಿಲ್ಲ, ಸೊಸೆ ಮಾತ್ರ ಕನೆಯಾಗಿರಬೇಕು ಎಂದು ಯೋಚಿಸೋದು ಸಣ್ಣತನ. ಇತ್ತೀಚಿನ ದಿನಗಳಲ್ಲಿ ಸ್ಪೊರ್ಟ್ಸ್, ಸೈಕಲಿಂಗ್ ನಿಂದಲೂ ಕನ್ಯತ್ವ ನಷ್ಟವಾಗುತ್ತೆ. ಹಾಗಾಗಿ ಮದುವೆಗೆ ಮುನ್ಯ ಕನ್ಯತ್ವ ಪರೀಕ್ಷೆಯಂತಹ ಸಂಪ್ರದಾಯವನ್ನು ಮುರಿದುಬಿಡಿ.

78

ಮದುವೆ ಖರ್ಚು -ವೆಚ್ಚ
ಮದುವೆಯ ಸಮಯದಲ್ಲಿ, ಎಲ್ಲಾ ವೆಚ್ಚಗಳನ್ನು (wedding expensses) ಹುಡುಗಿಯ ಪೋಷಕರು ಭರಿಸಬೇಕು ಅನ್ನೋದು ಹುಡುಗನ ಮನೆಯ ವಾದ. ಇದು ಸರಿಯೇ?  ಹುಡುಗಿ ಮನೆಯವರಿಗೆ ಹುಡುಗಿಯನ್ನು ಬೇರೊಂದು ಮನೆಗೆ ಕಳುಹಿಸುವ ನೋವು ಇರುತ್ತೆ. ಅದರ ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ, ಮದುವೆಗಾಗಿ ಸಾಲನೂ ಮಾಡಬೇಕು. ಅದರ ಬದಲಾಗಿ ಎರಡೂ ಮನೆಯವರು ಕೂತು ಮಾತನಾಡಿ ಸಮವಾಗಿ ಖರ್ಚು ಮಾಡಿ. ಮದುವೆ ಇಬ್ಬರದ್ದೂ ಅಲ್ವಾ?

88

ಸರ್ ನೇಮ್ ಬದಲಾವಣೆ ಯಾಕೆ? 
ಮದುವೆಯ ನಂತರ ತನ್ನ ಸರ್ ನೇಮ್ ಬದಲಾಯಿಸಲು ಹುಡುಗಿಯ ಮೇಲೆ ಒತ್ತಡ ಹೇರುವುದು ಸರಿಯೇ? ಅವಳು ಹುಟ್ಟಿದಾಗಿನಿಂದಲೂ ಬಂದಿರುವ ಹೆಸರನ್ನು, ನೀವು ಒಂದೇ ಬಾರಿಗೆ ಬದಲಾಯಿಸಲು ಪ್ರಯತ್ನಿಸುತ್ತೀರಿ. ಹುಡುಗಿ ತನ್ನ ಉಪನಾಮದೊಂದಿಗೆ ನಿಮ್ಮ ಕುಟುಂಬದ ಭಾಗವಾಗ. ಉಪನಾವಾಗಬಾರದು ಅಂತ ಏನಾದ್ರೂ ಇದೆಯೇ? ಇಲ್ಲಾ ಅಲ್ವಾ? ಹೆಸರು, ಸರ್ ನೇಮ್ ಬದಲಾವಣೆಗೆ ಪತ್ನಿಯಾಗುವವಳಿಗೆ ಒತ್ತಡ ಹೇರಬೇಡಿ.

Read more Photos on
click me!

Recommended Stories