ಈ ಕಿಸ್ಸಲೀ ಏನೋ ಇದೆ... ಏನಿದೆ ಅನ್ನೋದನ್ನು ನೀವೇ ತಿಳಿದುಕೊಳ್ಳಿ...

First Published Jan 4, 2021, 7:42 PM IST

ಸ್ನೇಹ, ಪ್ರೀತಿ, ಸಂಬಂಧ ಏನೇ ಇರಬಹುದು, ತಾಯಿ ಮಗುವಿನ ಸಂಬಂಧವೇ ಇರಬಹುದು ಎಲ್ಲಾ ಸಂಬಂಧದಲ್ಲೂ ಮುತ್ತು ಅಥವಾ ಕಿಸ್ ಸಂಬಂಧ ಬೆಸೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಜೊತೆ ಜೊತೆಗೆ ಇಬ್ಬರ ಬಾಂದವ್ಯ ಕೂಡ ವೃದ್ಧಿಯಾಗುತ್ತದೆ. 

ಹೆಚ್ಚಾಗಿ ಪ್ರೇಮಿಗಳು ಪರಸ್ಪರ ಕಿಸ್ ಮಾಡುವ ಮೂಲಕ ಪ್ರೀತಿ ಹಂಚುತ್ತಾರೆ. ಕಿಸ್‌ ಮಾಡುವುದು ಎಂದರೆ ಸಂಗಾತಿಗೆ ಅವರ ಬಗ್ಗೆ ಏನು ಫೀಲ್‌ ಮಾಡುತ್ತೀರಿ ಅನ್ನೋದನ್ನು ಸುಲಭವಾಗಿ ಹೇಳುವ ವಿಧಾನ. ಆದುದರಿಂದ ಸಂಗಾತಿಗೆ ಕಿಸ್‌ ಮಾಡಿ ಅವರಿಗೆ ಮನಸ್ಸಿನ ಭಾವನೆಯನ್ನು ತಿಳಿ ಹೇಳಲು ಕಿಸ್ ಮಾಡಬಹುದು. ಈ ಕಿಸ್ ಗೆ ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯರನ್ನು ಉತ್ತರಾಮವಾಗಿಡುತ್ತದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ...
undefined
ಸಂತೋಷಕರ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ.ಚುಂಬನವು ಮೆದುಳಿಗೆ ರಾಸಾಯನಿಕಗಳನ್ನು ಬಿಡುಗಡೆ ಮಾಡಲು ಪ್ರಚೋದಿಸುತ್ತದೆ, ಲವ್‌ ಹಾರ್ಮೋನ್‌ ಆಕ್ಟೀವ್‌ ಆಗುತ್ತವೆ. ವೈವಾಹಿಕ ಜೀವನದಲ್ಲಿ ಮಿಲನಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕಿಸ್‌ ಮಾಡುವುದರಿಂದ ಇಬ್ಬರ ನಡುವೆ ಸೆಕ್ಸ್‌ ಇಚ್ಛೆ ಜಾಗೃತವಾಗುತ್ತದೆ.
undefined
ಕಿಸ್ ಮಾಡಿದಾಗ ಹೊರ ಬರುವ ರಾಸಾಯನಿಕಗಳು ಆಕ್ಸಿಟೋಸಿನ್, ಡೋಪಮೈನ್ ಮತ್ತು ಸೆರೊಟೋನಿನ್ ಗಳನ್ನು ಒಳಗೊಂಡಿರುತ್ತವೆ, ಇದು ಭಾವಾತಿರೇಕವನ್ನು ಉಂಟುಮಾಡುತ್ತದೆ ಮತ್ತು ಪ್ರೀತಿ ಮತ್ತು ಬಾಂಧವ್ಯದ ಭಾವನೆಗಳನ್ನು ಉತ್ತೇಜಿಸುತ್ತದೆ. ಇದು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡುತ್ತದೆ.
undefined
ಇತರ ವ್ಯಕ್ತಿಯೊಂದಿಗೆ ಸಂಬಂಧ ಹೆಚ್ಚಲು ಸಹಾಯ ಮಾಡುತ್ತದೆಆಕ್ಸಿಟೋಸಿನ್ ಸಂಬಂಧ ಬೆಸೆಯುವ ರಾಸಾಯನಿಕವಾಗಿದೆ. ಚುಂಬಿಸಿದಾಗ ಬಿಡುಗಡೆಯಾದ ಆಕ್ಸಿಟೋಸಿನ್ ಪ್ರೀತಿ ಮತ್ತು ಮೋಹದ ಭಾವನೆಗಳನ್ನು ಉಂಟುಮಾಡುತ್ತದೆ. ಸಂಗಾತಿಗೆ ಚುಂಬಿಸುವುದು ಸಂಬಂಧದ ತೃಪ್ತಿಯನ್ನು ಸುಧಾರಿಸಬಹುದು ಮತ್ತು ದೀರ್ಘಾವಧಿಯ ಸಂಬಂಧಗಳಲ್ಲಿ ವಿಶೇಷವಾಗಿ ಪ್ರಮುಖವಾಗಿ ಬಾಂಧವ್ಯ ಬೆಳೆಯಲು ಸಹಾಯ ಮಾಡುತ್ತದೆ.
undefined
ಟೆನ್ಶನ್ ದೂರವಾಗುತ್ತದೆಗುಡ್‌ ಕಿಸ್‌ ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಯಾವಾಗಲೂ ಕಿಸ್‌ ಮಾಡುವುದರಿಂದ ನಿಮ್ಮ ಚಿಂತೆ ಎಲ್ಲ ದೂರವಾಗಿ ನೀವು ಸದಾಕಾಲ ನಗುತ್ತಿರಲು ಸಹಾಯ ಮಾಡುತ್ತದೆ.
undefined
2016ರ ಒಂದು ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಂತೆ, ತಮ್ಮ ದೇಹಗೋಚರತೆಯ ಬಗ್ಗೆ ಅಸಮಾಧಾನ ಹೊಂದಿದ್ದ ಸ್ಪರ್ಧಿಗಳು ಹೆಚ್ಚಿನ ಕಾರ್ಟಿಸೋಲ್ ಮಟ್ಟವನ್ನು ಹೊಂದಿದ್ದರು. ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಪ್ರತಿ ಬಾರಿ ಚುಂಬಿಸಿದಾಗಲೂ ಕಾರ್ಟಿಸೋಲ್ ನಲ್ಲಿ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
undefined
ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.ಕಾರ್ಟಿಸೋಲ್ ಬಗ್ಗೆ ಹೇಳುವುದಾದರೆ, ಕಿಸ್ ಕಾರ್ಟಿಸೋಲ್ ಮಟ್ಟ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಚುಂಬನ ಮತ್ತು ಇತರ ವಾತ್ಸಲ್ಯದ ಸಂವಹನ, ತಬ್ಬಿಕೊಳ್ಳುವುದು ಮತ್ತು "ಐ ಲವ್ ಯು" ಎಂದು ಹೇಳುವುದು, ಒತ್ತಡ ನಿರ್ವಹಣೆಗೆ ಸಂಬಂಧಿಸಿದ ದೈಹಿಕ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ.
undefined
ಆತಂಕವನ್ನು ಕಡಿಮೆ ಮಾಡುತ್ತದೆಒತ್ತಡ ನಿರ್ವಹಣೆ, ಆತಂಕವನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತೀರಿ ಎಂಬುದನ್ನು ಒಳಗೊಳ್ಳುತ್ತದೆ. ವ್ಯಕ್ತಿಯನ್ನು ಸಮಾಧಾನಪಡಿಸಲು ಕಿಸ್ ಮತ್ತು ಹಗ್ ಯಾವುದು ಮಾಡಿದರೂ ಸರಿಯೇ ಆಕ್ಸಿಟೋಸಿನ್ ಉದ್ವೇಗವನ್ನು ಕಡಿಮೆ ಮಾಡುತ್ತದೆ ಮತ್ತು ಆರಾಮ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.
undefined
ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಎಕ್ಸ್‌ಪರ್ಟ್‌ಗಳು ಹೇಳುವಂತೆ ಕಿಸ್‌ ಮಾಡಿದರೆ ಹೃದಯದ ಆರೋಗ್ಯ ಉತ್ತಮವಾಗುತ್ತದೆ. ಅಲ್ಲದೆ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳು ನಿಷ್ಕ್ರಿಯಗೊಂಡಾಗ, ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ರಕ್ತದೊತ್ತಡವು ತಕ್ಷಣ ಕಡಿಮೆಯಾಗುತ್ತದೆ.
undefined
ಫೇಷಿಯಲ್ ಎಕ್ಸರ್ ಸೈಜ್ :ಕಿಸ್‌ ಮಾಡುವುದರಿಂದ ನಿಮ್ಮ ಫೇಶಿಯಲ್‌ ಮಸಲ್ಸ್‌‌ಗಳಿಗೆ ಎಕ್ಸರ್‌ಸೈಜ್‌ ಸಿಕ್ಕಿದಂತಾಗುತ್ತದೆ. ಕಿಸ್‌ ಮಾಡುವಾಗ 34 ಪೇಶಿಯಲ್‌ ಮಸಲ್ಸ್‌ ಮತ್ತು ಭಂಗಿಗಳ ಮಸಲ್ಸ್‌ಗೆ ಎಕ್ಸರ್‌ಸೈಜ್‌ ದೊರೆಯುತ್ತದೆ
undefined
ಇದು ಸೆಳೆತವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆರಕ್ತನಾಳಗಳ ದುರ್ಬಲತೆ ಮತ್ತು ಹೆಚ್ಚಿದ ರಕ್ತ ಸಂಚಾರದ ಪರಿಣಾಮವು ಸೆಳೆತಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೆಟ್ಟ ಸಮಯದಲ್ಲಿ ಸಂಗಾತಿಯ ತುಟಿ ಗೆ ತುಟಿ ಸೇರಿಸಿ ಸ್ಮೂಚ್ ಮಾಡಿದರೆ ದೇಹದ ದುರ್ಬಲತೆ ಮತ್ತು ಸೆಳೆತ ಕಡಿಮೆಯಾಗುತ್ತದೆ.
undefined
click me!